ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ೭ ನೇ ಸ್ಥಾನದಲ್ಲಿ ಭಾರತ !

ದೇಶದ ಅರ್ಧದಷ್ಟು ಜನರು ಅರೆಹೊಟ್ಟೆಯಲ್ಲಿ ಜೀವಿಸುತ್ತಿರುವ ದೇಶವು
ಜಗತ್ತಿನ ೭ ನೇ ಶ್ರೀಮಂತ ದೇಶವೆಂದು ಪರಿಗಣಿಸಲಾಗುತ್ತಿದ್ದರೆ, ಅದು ಮರೀಚಿಕೆಯೇ ಆಗಿದೆ !
ಇದರ ಅರ್ಥ ಭಾರತದಲ್ಲಿ ಶ್ರೀಮಂತರಲ್ಲಿ ಅಧಿಕಾಧಿಕ ಹಣವಿದ್ದು ಅವರದ್ದೇ ಶ್ರೀಮಂತಿಕೆ ವೃದ್ಧಿಯಾಗುತ್ತಿದೆ !
ನವ ದೆಹಲಿ : ನ್ಯೂ ವರ್ಲ್ಡ್ ವೆಲ್ಥ್ ಈ ಸಂಸ್ಥೆಯು ವೈಯಕ್ತಿಕ ಸಂಪತ್ತಿನ ಆಧಾರದಲ್ಲಿ ಶ್ರೀಮಂತ ದೇಶಗಳ ವರದಿಯನ್ನು ಘೋಷಿಸಿದೆ. ಇದರಲ್ಲಿ ಭಾರತವು ೭ ನೇ ಸ್ಥಾನದಲ್ಲಿದೆ. ಭಾರತದಲ್ಲಿ ವೈಯಕ್ತಿಕ ಸಂಪತ್ತು ೫ ಸಾವಿರದ ೬೦೦ ಅಬ್ಜ ಡಾಲರ್‌ನಷ್ಟು ಆಗಿದೆ. ಜೂನ್ ತಿಂಗಳಲ್ಲಿ ಜಗತ್ತಿನಾದ್ಯಂತ ದೇಶಗಳ ಸಂಪತ್ತನ್ನು ಅಭ್ಯಾಸ ಮಾಡಲಾಗಿದೆ. ಅದರ ಆಧಾರದಲ್ಲಿ ಜಗತ್ತಿನಾದ್ಯಂತದ ಶ್ರೀಮಂತ ದೇಶಗಳ ಈ ಪಟ್ಟಿಯನ್ನು ಘೋಷಿಸ ಲಾಗಿದೆ. ಇದಕ್ಕೆ ವೈಯಕ್ತಿಕ ಸಂಪತ್ತನ್ನು ಆಧಾರವೆಂದು ಒಪ್ಪಿಕೊಳ್ಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಗತ್ತಿನ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ೭ ನೇ ಸ್ಥಾನದಲ್ಲಿ ಭಾರತ !