ಬಾಬರಿ ಉಳಿಸಲು ಕರಸೇವಕರನ್ನು ಕೊಂದೆವು ! - (ಮುಲ್ಲಾ) ಮುಲಾಯಂ ಸಿಂಗ್ ಯಾದವ್ ಸ್ವೀಕೃತಿ

  • ಕಾಶ್ಮೀರ ಕಾಪಾಡಲು ದೇಶದ್ರೋಹಿ ಮುಸಲ್ಮಾನ ಗಲಭೆಖೋರರನ್ನು ಕೊಲ್ಲಿ, ಎಂದು (ಮುಲ್ಲಾ) ಮುಲಾಯಂ ಸಿಂಗ್ ಎಂದೂ ಹೇಳುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
  • ಮುಲಾಯಂ ಸಿಂಗ್‌ರವರು ದೇಶವನ್ನು ಕಾಪಾಡಲು ಬಂಧಿತ ಉಗ್ರರಿಗೆ ಗಲ್ಲು ಶಿಕ್ಷೆ ವಿಧಿಸಿ, 
  • ಎಂದು ಯಾವತ್ತೂ ಹೇಳುವುದಿಲ್ಲ !
  • ಮನುಷ್ಯನಿಗಿಂತ ಗೋವು ಮುಖ್ಯವೇ, ಎಂದು ಹೇಳುತ್ತಾ ದಾದ್ರಿ ಪ್ರಕರಣದಲ್ಲಿ ಎದೆ ಬಡಿದುಕೊಳ್ಳುವವರು ಮಾತ್ರ ಈಗ ಕರಸೇವಕರ ಪ್ರಾಣಕ್ಕಿಂತ ಬಾಬ್ರಿ ಮಸೀದಿ ದೊಡ್ಡದಾಗಿತ್ತೇ ?, ಎಂದು ಏಕೆ ಹೇಳುವುದಿಲ್ಲ?
ಲಕಣಪುರಿ : ಬಾಬ್ರಿ ಉಳಿಸಲು ಕರಸೇವಕರನ್ನು ಗುಂಡಿಕ್ಕಲು ಆದೇಶ ನೀಡಲಾಯಿತು. ಮಸೀದಿಯನ್ನು ಉಳಿಸಲು ಯಾವುದೇ ಕ್ರಮ ಕೈಗೊಳ್ಳದಿರುತ್ತಿದ್ದರೆ, ಮುಸಲ್ಮಾನರಿಗೆ ದೇಶದ ಮೇಲಿರುವ ವಿಶ್ವಾಸ ಹೋಗಿಬಿಡುತ್ತಿತ್ತು. (ಮುಲಾಯಂ ಸಿಂಗ್‌ರವರು ಯಾರಿಗಾಗಿ ಕರಸೇವಕರನ್ನು ಕೊಲ್ಲಿಸಿದರೋ, ಅವರು ದೇಶದ ಮೇಲೆ ವಿಶ್ವಾಸ ತೋರಿಸಿದ ಒಂದು ಪುರಾವೆಯನ್ನಾದರೂ ನೀಡುವರೇ ? ಮುಲಾಯಂ ಸಿಂಗ್ ಕೊಲೆಯಾದ ಕರಸೇವಕರ ಕುಟುಂಬದವರ ಮೇಲೆ ಬಂದ ವಿಪತ್ತಿನ ಹೊಣೆ ಹೋರುವರೇ ? - ಸಂಪಾದಕರು)
ಆದ್ದರಿಂದ ಎಷ್ಟೇ ಜನ ಬಲಿಯಾದರೂ, ಪರವಾಗಿಲ್ಲ; ಆದರೆ ಮಸೀದಿಯನ್ನು ಮಾತ್ರ ಉಳಿಸಬೇಕು, ಎಂಬ ನಿಲುವಿತ್ತು. ಈ ಗುಂಡು ಹಾರಾಟದಲ್ಲಿ ೧೬ ಜನರು ಮೃತಪಟ್ಟರು; ಆದರೆ ದೇಶದ ಐಕ್ಯತೆಗಾಗಿ ೩೦ ಜನರ ಬಲಿ ಕೊಟ್ಟರೂ, ನಮಗೇನೂ ಪರವಾಗಿಲ್ಲ, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷರಾದ (ಮುಲ್ಲಾ) ಮುಲಾಯಂ ಸಿಂಗ್ ಹೇಳಿದ್ದಾರೆ. (ಪಾಕ್, ಬಾಂಗ್ಲಾದೇಶ ಮುಂತಾದ ಇಸ್ಲಾಮೀ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ದೇಶದ ಮೇಲೆ ಅವಿಶ್ವಾಸ ಮೂಡದಿರಲಿ, ಎಂಬುದಕ್ಕಾಗಿ ಮತಾಂಧರನ್ನು ಕೊಲ್ಲುವುದಿಲ್ಲ, ಎಂಬುದನ್ನು (ಮುಲ್ಲಾ) ಮುಲಾಯಂ ಸಿಂಗ್‌ರಿಗೆ ತಿಳಿದಿದೆಯೇ? - ಸಂಪಾದಕರು)
ಆಗ ನನ್ನನ್ನು ಕೊಲೆಗಡುಕನೆಂದು ನಿಂದಿಸಿದರು; ಆದರೆ ನಾನು ಅದನ್ನು ಲೆಕ್ಕಿಸಲಿಲ್ಲ, ಎಂದು ಸಹ ಅವರು ಹೇಳಿದರು. (ಮೋದಿಯವರನ್ನು ಗುಜರಾತ್ ಗಲಭೆಯಲ್ಲಿ ಕೊಲೆಗಡುಕರೆಂದು ಹೇಳುವವರು ಇದರ ಮೇಲೆ ಗಮನ ಹರಿಸುವರೇ? - ಸಂಪಾದಕರು) ಬಢತೆ ಗಯೇ ಸಾಹಸಿಕ್ ಕದಮ್ ಎಂಬ ಯಾದವ್‌ರವರ ಜೀವನದ ಮೇಲಾಧಾರಿತ ಪುಸ್ತಕದ ಪ್ರಕಾಶನದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಗುಂಡು ಹಾರಿಸುವ ಆದೇಶವನ್ನು ನೀಡಿ ನಾವು ಮುಸಲ್ಮಾನರು ದೇಶದಿಂದ ಸ್ಥಳಾಂತರಗೊಳ್ಳುವುದನ್ನು ತಡೆದೆವು, ಎಂದು ಸಹ ಅವರು ಹೇಳಿದರು. (ಮುಸಲ್ಮಾನರನ್ನು ದೇಶದಿಂದ ಸ್ಥಳಾಂತರಗೊಳ್ಳುವುದನ್ನು ತಡೆದೆ ಎಂದು ಬೀಗುವ ಮುಲಾಯಂ ಸಿಂಗ್‌ರವರು ಕಾಶ್ಮೀರದಲ್ಲಿ ದೇಶದ್ರೋಹಿ ಮುಸಲ್ಮಾನರಿಂದ ನಿರಾಶ್ರಿತರಾಗುತ್ತಿರುವ ಹಿಂದೂಗಳಿಗಾಗಿ ಏನು ಮಾಡಿದರು ಎಂಬುದನ್ನು ಹೇಳಲಿ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಬರಿ ಉಳಿಸಲು ಕರಸೇವಕರನ್ನು ಕೊಂದೆವು ! - (ಮುಲ್ಲಾ) ಮುಲಾಯಂ ಸಿಂಗ್ ಯಾದವ್ ಸ್ವೀಕೃತಿ