ಚೈತನ್ಯವೇ ಪ್ರಭಾವಿ ಪ್ರಸಾರಕಾರ್ಯ ಮಾಡುತ್ತದೆ, ಎಂಬುದರ ಆದರ್ಶವಿರುವ ಸನಾತನದ ಚೈತನ್ಯಮಯ ಸಂತರಾದ ಸದ್ಗುರು (ಸೌ.) ಅಂಜಲಿ ಗಾಡಗೀಳ !

ಸದ್ಗುರು (ಸೌ.) ಅಂಜಲಿ ಗಾಡಗೀಳ
೧. ಒಂದು ಸುಪ್ರಸಿದ್ಧ ಸೀರೆಯ ಮಳಿಗೆಯ
ಮಾಲಕರು ನೀಡಿದ ಅಪೂರ್ವ ಪ್ರೋತ್ಸಾಹ !
೧ ಅ. ಭೇಟಿಗಾಗಿ ಸಮಯವನ್ನು ನಿರ್ಧರಿಸಿದ್ದರೂ ಸಾಧಕರನ್ನು ಭೇಟಿಯಾಗದ ಅಂಗಡಿಯ ಮಾಲಕರು ಸದ್ಗುರು (ಸೌ.) ಗಾಡಗೀಳ ಕಾಕೂರವರು ಅಂಗಡಿಗೆ ಖರೀದಿಗಾಗಿ ಹೋದಾಗ ಸಹಜವಾಗಿಯೇ ಭೇಟಿಯಾಗುವುದು: ೧೮.೬.೨೦೧೬ ರಂದು ನಾಡಿಪಟ್ಟಿ ವಾಚನದ ಮೊದಲು ನಮಗೆ ಸ್ವಲ್ಪ ಬಿಡುವು ಇತ್ತು. ಆಗ ಸದ್ಗುರು (ಸೌ.) ಗಾಡಗೀಳ ಕಾಕೂರವರು ನಮ್ಮನ್ನು ದಕ್ಷಿಣದ ಶೈಲಿಯ ಸೀರೆಗಳನ್ನು ನೋಡಲೆಂದು ಅಂಗಡಿಗೆ ಕರೆದುಕೊಂಡು ಹೋದರು. ಆಗ ಅವರು, ನಿಮಗೂ ಇಲ್ಲಿನ ಸೀರೆಗಳ ಪ್ರಕಾರ ಮತ್ತು ಬಣ್ಣ ಹೇಗಿರುತ್ತವೆಯೆಂದು, ಕಲಿಯಲು ಸಿಕ್ಕಿತು, ಎಂದರು.
ಖರೀದಿ ಮಾಡಿ ನಾವು ಹೊರಡುವಷ್ಟರಲ್ಲಿ ಆ ಅಂಗಡಿಯ ಮಾಲಕರು ಅಲ್ಲಿಗೆ ಬಂದರು. ಈ ಅಂಗಡಿಯ ಮಾಲಕರು ಸದ್ಗುರು (ಸೌ.) ಕಾಕೂರವರನ್ನು ಭೇಟಿಯಾಗುವುದೆಂದರೆ ಒಂದು ಅನುಭೂತಿಯೇ ಆಗಿತ್ತು; ಏಕೆಂದರೆ, ಪ್ರತಿವರ್ಷ ಚೆನೈಯ ಪ್ರಸಾರ ಸಾಧಕರು ಅವರನ್ನು ಭೇಟಿಯಾಗಲು ಪೂರ್ವ ನಿಯೋಜನೆ ಮಾಡಿ ಹೋದಾಗಲೂ ಅವರ ಭೇಟಿಯಾಗುತ್ತಿರಲಿಲ್ಲ. ಇಂದು ಮಾತ್ರ ಯಾವುದೇ ನಿಯೋಜನೆ ಇಲ್ಲದಿದ್ದರೂ ಸದ್ಗುರು (ಸೌ.) ಕಾಕೂರವರನ್ನು ಸಹಜವಾಗಿ ಭೇಟಿಯಾದರು. ಆದ್ದರಿಂದ ಇದು ದೇವರ ನಿಯೋಜನೆಯೇ ಆಗಿದೆ ಎಂದು ಅನಿಸಿತು.
೧ ಆ. ಅಂಗಡಿಯ ಮಾಲಕರು ನಾವು ಖರೀದಿಸಿದ ಬಟ್ಟೆಗಳ ದರ ವನ್ನೂ ಕಡಿಮೆಗೊಳಿಸಿ ಅದನ್ನು ಎಲ್ಲಿಗೆ ಬೇಕೋ ಅಲ್ಲಿಗೆ ಪಾರ್ಸೆಲ್ ಮಾಡಿ ಕಳುಹಿಸುತ್ತೇವೆಂದು ಹೇಳುವುದು ಮತ್ತು ನಮ್ಮೆಲ್ಲರ ನಿವಾಸದ  ವ್ಯವಸ್ಥೆ ಮಾಡುವುದು : ಈ ಅಂಗಡಿಯು ೭ ಮಾಳಿಗೆಯ ಕಟ್ಟಡವಾಗಿದೆ. ಇದರಲ್ಲಿ ೭೫೦ ಕಾರ್ಮಿಕರಿದ್ದಾರೆ. ಸದ್ಗುರು (ಸೌ.) ಕಾಕೂರವರೊಂದಿಗೆ ಮಾತನಾಡಿದ ನಂತರ ಅಂಗಡಿಯ ಮಾಲಕರು ನಾವು ಖರೀದಿಸಿದ ಬಟ್ಟೆಗಳ ಬೆಲೆಯನ್ನು ಕಡಿಮೆಗೊಳಿಸಿದರು. ಬಟ್ಟೆಗಳನ್ನು ಎಲ್ಲಿಗೆ ಕಳುಹಿಸಬೇಕೆಂದು ವಿಚಾರಿಸಿದರು ಹಾಗೂ ನಾವು ಪಾರ್ಸೆಲ್ ಮಾಡಿ ಕಳುಹಿಸುತ್ತೇವೆಂದು ಸ್ವತಃ ಹೇಳಿದರು. ಅವರು ಸ್ವತಃ ನಮಗೆ ತಿರುಪತಿ ಬಾಲಾಜಿಗೆ ಉಡಿಸುವ ಬಟ್ಟೆಗಳನ್ನು ತೋರಿಸಿದರು. ನಂತರ ಅವರು ನೀವು ಎಷ್ಟು ದಿನ ಇರುತ್ತೀರಿ ?
ಎಂದು ಸದ್ಗುರು (ಸೌ.) ಕಾಕೂರವರಲ್ಲಿ ವಿಚಾರಿಸಿದರು ಹಾಗೂ ನಾನು ನಿಮ್ಮೆಲ್ಲರಿಗೂ ನಿವಾಸದ ವ್ಯವಸ್ಥೆಯನ್ನು ಮಾಡುತ್ತೇನೆ, ಎಂದು ಸಹ ಹೇಳಿದರು.
೧ ಇ. ಮರುದಿನ ಎಲ್ಲರೂ ಕುಂಭಕೋಣಂಗೆ ಹೋಗುತ್ತೇವೆಂದು ತಿಳಿದಾಗ ಅಂಗಡಿಯ ಮಾಲಕರು ಅಲ್ಲಿನ ಹೊಟೇಲ್‌ನಲ್ಲಿ ಸಾಧಕರಿಗೆ ನಿವಾಸಕ್ಕಾಗಿ ಕೋಣೆಗಳ ವ್ಯವಸ್ಥೆ  ಮಾಡುವುದು : ನಾವು ಮರುದಿನ ಕುಂಭ ಕೋಣಂಗೆ ಹೋಗುತ್ತೇವೆಯೆಂದು ಅವರಿಗೆ ತಿಳಿಯಿತು. ಆಗ ಅಲ್ಲಿನ ಒಂದು ಹೊಟೇಲ್‌ಗೆ ದೂರವಾಣಿ ಕರೆ ಮಾಡಿ ನಮಗಾಗಿ ೨ ಕೋಣೆಗಳನ್ನು ಮೀಸಲಾಗಿಸಲು ಹೇಳಿದರು. ಇನ್ನು ಕೆಲವೇ ದಿನಗಳಲ್ಲಿ ನಾವು ಕುಂಭಕೋಣಂನಲ್ಲಿ ನಮ್ಮದೇ ಹೊಟೇಲ್ ನಿರ್ಮಾಣ ಮಾಡುತ್ತೇವೆ, ಆಗ ನೀವು ಅಲ್ಲಿಯೇ ಬಂದು ನಿಲ್ಲಬಹುದು, ಎಂದು ಸಹ ಅವರು ಹೇಳಿದರು.
೧ ಈ. ಸದ್ಗುರು (ಸೌ.) ಗಾಡಗೀಳ ಕಾಕೂರವರಿಗೆ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಉಡುಗೊರೆಯಾಗಿ ಕೊಡುವುದು : ಆ ಮಾಲಕರು ಸದ್ಗುರು (ಸೌ.) ಕಾಕೂವರಿಗೆ ರೇಷ್ಮೆಯ ವಸ್ತ್ರದಲ್ಲಿ ಗಣಪತಿಯ ಚಿತ್ರವಿರುವ ಫೊಟೋಫ್ರೇಮ್ ಉಡುಗೊರೆಯಾಗಿ ನೀಡಿದರು ಮತ್ತು ಶ್ರೀವಿಷ್ಣುವಿನ ಚಿತ್ರವಿರುವ ಫ್ರೇಮ್ ಕೊಡುತ್ತೇನೆ, ಎಂದು ಹೇಳಿದರು. ಸದ್ಗುರು (ಸೌ.) ಕಾಕೂರವರು ಅವರಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕಾಗಿ ಸಾತ್ತ್ವಿಕ ನಕ್ಷೆಯಿರುವ ಸೀರೆಗಳ ಛಾಯಾಚಿತ್ರವನ್ನು ಕೇಳಿದಾಗ ಅವರು ಆನಂದದಿಂದ ನೀಡಿದರು.
೨. ಆಭರಣಗಳ ಅಂಗಡಿಯವರು ಸಾತ್ತ್ವಿಕ ನಕ್ಷೆಯಿರುವ ಆಭರಣಗಳ ಛಾಯಾಚಿತ್ರವನ್ನು ಕೊಡಲು ಮೊದಲು ನಿರಾಕರಿಸಿ ನಂತರ ಒಪ್ಪಿಕೊಳ್ಳುವುದು : ೨ ದಿನಗಳ ಮೊದಲು ನಾವು ಒಂದು ಆಭರಣಗಳ ಅಂಗಡಿಯಲ್ಲಿ ಮಹರ್ಷಿ ಅಧ್ಯಾತ್ಮ ವಿದ್ಯಾಲಯಕ್ಕಾಗಿ ಸಾತ್ತ್ವಿಕ ನಕ್ಷೆಯಿರುವ ಆಭರಣಗಳ ಛಾಯಾಚಿತ್ರಗಳನ್ನು ಕೇಳಿದೆವು. ಆಗ ಆ ಅಂಗಡಿಯವರು ಮೊದಲು ನಿರಾಕರಿಸಿದರು. ಹೊರಗೆ ಸ್ಪರ್ಧೆ ನಡೆಯುತ್ತಿರುವುದರಿಂದ ನಾವು ಅದನ್ನು ಕೊಡಲು ಸಾಧ್ಯವಿಲ್ಲ, ಎಂದು ಹೇಳಿದರು; ಆದರೆ ನಂತರ ಅವರಲ್ಲಿ ಪರಿವರ್ತನೆಯಾಗಿರುವುದು ಅರಿವಾಯಿತು. ಅವರು ನಮಗೆ ಅಂತಹ ಛಾಯಾಚಿತ್ರಗಳನ್ನು ಕೊಡಲು ಒಪ್ಪಿದರು. ಸದ್ಗುರು ಕಾಕೂರವರ ಚೈತನ್ಯದಿಂದಾಗಿಯೇ ಅವರಲ್ಲಿ ಬದಲಾವಣೆಯಾಗಿರುವುದು ಅರಿವಾಯಿತು.
ಸದ್ಗುರು (ಸೌ.) ಗಾಡಗೀಳ ಕಾಕೂರವರ ಚೈತನ್ಯದಿಂದ ಸಮಾಜದಲ್ಲಿನ ಜಿಜ್ಞಾಸುಗಳು ತಾವಾಗಿಯೇ ಸನಾತನದ ಕಾರ್ಯದೊಂದಿಗೆ ಜೋಡಿಸಲ್ಪಡುತ್ತಿದ್ದಾರೆ, ಎಂಬುದರ ಪ್ರತ್ಯಕ್ಷ ಅನುಭೂತಿ ಪಡೆಯಲು ನಮಗೆ ಸಾಧ್ಯವಾಯಿತು. - ಶ್ರೀ. ವಿನೀತ ದೇಸಾಯಿ, ಚೆನೈ, ತಮಿಳುನಾಡು. (೧೭.೭.೨೦೧೬)
(ಕೇವಲ  ಸದ್ಗುರು (ಸೌ.) ಅಂಜಲಿ ಗಾಡಗೀಳಕಾಕೂರವರ ಅಸ್ತಿತ್ವದಿಂದ ಈ ಮೇಲಿನ ಘಟನೆಗಳು ನಡೆದವು. ಪ್ರತಿದಿನ ಅವರಲ್ಲಿ ಹೆಚ್ಚುತ್ತಿರುವ ಚೈತನ್ಯವೇ ಕಾರ್ಯನಿರತವಾಗಿ ಸಮಾಜದಲ್ಲಿರುವ ಇಂತಹ ವ್ಯಕ್ತಿಗಳನ್ನು ಹಿಂದೂ ರಾಷ್ಟ್ರ ಅಂದರೆ ಸನಾತನ ಧರ್ಮರಾಜ್ಯ ಸ್ಥಾಪನೆಯ ಕಾರ್ಯದಲ್ಲಿ ಆಕರ್ಷಿಸಿ ಹಾಗೂ ಭಾಗವಹಿಸಿಕೊಳ್ಳುತ್ತಿರುವುದು ಅರಿವಾಗುತ್ತದೆ. ಅವರ ಈ ಚೈತನ್ಯಸ್ವರೂಪದಲ್ಲಿನ ಕಾರ್ಯದ ಪ್ರಭಾವದಿಂದ ಸದ್ಗುರು (ಸೌ.) ಗಾಡಗೀಳ ಕಾಕೂರವರು ಶೀಘ್ರದಲ್ಲಿಯೇ ಸದ್ಗುರು ಪದವಿಗೆ ತಲುಪುವರು, ಎಂದು ಅನಿಸುತ್ತಿತ್ತು ಹಾಗೂ ೨೪.೭.೨೦೧೬ ರಂದು ಆ ಶುಭಗಳಿಗೆ ಕೂಡಿ ಬಂತು. ಸದ್ಗುರು ಪದವಿಯನ್ನು ಪ್ರಾಪ್ತಿ ಮಾಡಿಕೊಂಡ ಸದ್ಗುರು (ಸೌ.) ಗಾಡಗೀಳ ಕಾಕೂರವರ ಚರಣಗಳಲ್ಲಿ ಕೋಟಿ ಕೋಟಿ ಪ್ರಣಾಮಗಳು ! - ಸಂಕಲನಕಾರರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚೈತನ್ಯವೇ ಪ್ರಭಾವಿ ಪ್ರಸಾರಕಾರ್ಯ ಮಾಡುತ್ತದೆ, ಎಂಬುದರ ಆದರ್ಶವಿರುವ ಸನಾತನದ ಚೈತನ್ಯಮಯ ಸಂತರಾದ ಸದ್ಗುರು (ಸೌ.) ಅಂಜಲಿ ಗಾಡಗೀಳ !