ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಮಹಿಳೆಯರನ್ನು ಬಲಶಾಲಿಗಳನ್ನಾಗಿಸುವ ಬಗ್ಗೆ ಹಾಳು ಹರಟೆ ಹೊಡೆಯುವ ಸಾಮ್ಯವಾದಿಗಳು !
ದೆಹಲಿಯ ‘ಜೆಎನ್‌ಯು’ನಲ್ಲಿ ಇಂಡಿಯಾ ಸ್ಟುಡೆಂಟ್ಸ್ ಅಸೋಸಿ ಯೇಶನ್ ಈ ಸಾಮ್ಯವಾದಿ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತ ನಾದ ಅನಮೋಲ ರತನ್ ಎಂಬವನು ವಿಶ್ವವಿದ್ಯಾಲಯದಲ್ಲಿ ಕಲಿಯು ತ್ತಿರುವ ಓರ್ವ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಮಾಡಿದನು. ಅವಳಿಗೆ ಪಾನೀಯದಲ್ಲಿ ಗುಂಗಿನ ಔಷಧಿಯನ್ನು ಕುಡಿಸಲಾಗಿತ್ತು.
೨. ಗೋಮಾಂಸ ಭಕ್ಷಣೆಯನ್ನು ಬೆಂಬಲಿಸುವವರು ಈಗ ಸುಮ್ಮನೇಕೆ ?
ಪತಂಜಲಿಯ ಉತ್ಪಾದನೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡು ವಾಗ ದಾರೂಲ್ ಉಲೂಮನ್ ಮುಫ್ತಿಯವರ ಖಂಡಪೀಠವು ಒಂದು ಫತ್ವಾ ಪ್ರಸಿದ್ಧಗೊಳಿಸಿದ್ದು ಅದರಲ್ಲಿ, ಮುಸಲ್ಮಾನರು ಗೋಮೂತ್ರವನ್ನು ಉಪಯೋಗಿಸಿದ ಯಾವುದೇ ಉತ್ಪಾದನೆಗಳನ್ನು ಬಳಸಕೂಡದು, ಎಂದು ಹೇಳಲಾಗಿದೆ.


೩. ಹಿಂದೂಗಳೇ, ದೇವಸ್ಥಾನಗಳ ಸರಕಾರೀಕರಣದ ದುಷ್ಪರಿಣಾಮವನ್ನು ಅರಿತುಕೊಳ್ಳಿರಿ !
ಮಹಾರಾಷ್ಟ್ರದ ಕುಲದೇವಿ ತುಳಜಾಭವಾನಿ ದೇವಿಗೆ ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ಬೆಲೆಬಾಳುವ ವಸ್ತು ಮತ್ತು ನಗದು ಹಣವನ್ನು ದೇವಸ್ಥಾನ ಸಂಸ್ಥಾನವು ಅಪಹರಿಸಿದ್ದು ಇದರಲ್ಲಿ ೩೯ ಕಿಲೋ ಚಿನ್ನ ಮತ್ತು ೬೦೮ ಕಿಲೋ ಬೆಳ್ಳಿಯನ್ನು ಲೂಟಿ ಮಾಡಲಾಗಿದೆ, ಎಂದು ‘ಸಿಐಡಿ’ಯ ವರದಿಯಲ್ಲಿ ಬಹಿರಂಗಪಡಿಸಲಾಗಿದೆ.
೪. ‘ಘರವಾಪ್ಸಿ’ಯ ವಿರುದ್ಧ ಆಕಾಶ-ಪಾತಾಳವನ್ನು ಒಂದು ಮಾಡುವವರು ಈಗ ಸುಮ್ಮನೇಕೆ ?
ಉತ್ತರಪ್ರದೇಶದ ಬಕ್ಸರ್‌ನಲ್ಲಿರುವ ಚೌಂಗಾಯಿ ಊರಿನ ೫೦೦ ದಲಿತರು ಹಿಂದೂ ಧರ್ಮವನ್ನು ತ್ಯಜಿಸಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಅವರಿಗೆ ಆಮಿಷಗಳನ್ನು ತೋರಿಸಿ ಮತಾಂತರಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇತರ ೫೦೦ ದಲಿತರಿಗೂ ಮತಾಂತರವಾಗಲು ಒತ್ತಾಯಿಸಲಾಗುತ್ತಿದೆ.
೫. ‘ಆಮ್ ಆದ್ಮಿ’ಯೆಂಬ ಸುಂದರ ಹೆಸರಿನಲ್ಲಿ ಜನತೆಯ ಹಣದ ದುಂದುವೆಚ್ಚ !
ದೆಹಲಿಯ ‘ಆಮ್ ಆದ್ಮಿ’ ಪಕ್ಷದ ಸರಕಾರವು ಸರಕಾರಿ ಕಾರ್ಯದ ಮಾಹಿತಿ ನೀಡಲು ಮಾಡಿದ ಜಾಹೀರಾತುಗಳಿಗಾಗಿ ೫೨೬ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು ದೂರಚಿತ್ರವಾಹಿನಿಗಳ ಜಾಹೀರಾತು ಗಳಿಗೆ ಜನತೆಯ ಹಣದ ದುಂದುವೆಚ್ಚ ಮಾಡಲಾಗಿದೆ, ಎಂಬ ಮಾಹಿತಿ ‘ಕಾಗ್’ ವರದಿಯ ಮೂಲಕ ಬಹಿರಂಗವಾಗಿದೆ.

೬. ಮಳೆ ಬರಿಸಲು ಹೋಮ-ಹವನ ಮಾಡುವಂತಹ ಅಭಿನಂದನೀಯ ನಿರ್ಣಯ !
ಆಂಧ್ರಪ್ರದೇಶ ರಾಜ್ಯದ ಶ್ರೀಕಾಕುಲಮ್ ಜಿಲ್ಲೆಯಲ್ಲಿ ತುಂಬಾ ದಿನಗಳಿಂದ ಮಳೆಯಾಗದಿರುವುದರಿಂದ ನೀರಿನ ಸಂಕಟ ನಿರ್ಮಾಣ ವಾಗಿದೆ. ಆದುದರಿಂದ ಆಂಧ್ರಪ್ರದೇಶ ಸರಕಾರದ ಧಾರ್ಮಿಕದತ್ತಿ ಇಲಾಖೆಯು ರಾಜ್ಯದ ಶಿವ ಮಂದಿರಗಳಲ್ಲಿ ವರುಣ-ಜಪ, ವರುಣ-ಸೂಕ್ತ, ಪಾರಾಯಣ ಮತ್ತು ರುದ್ರ ಯಜ್ಞವನ್ನು ಮಾಡಲು ನಿರ್ಧರಿಸಿದೆ.
೭. ‘ಜಿಹಾದಿ ಉಗ್ರರಿಗೆ ಗುಂಡಿಕ್ಕಿ’, ಎಂದು ಮುಲಾಯಂ ಸಿಂಗ್ ಎಂದಾದರೂ ಹೇಳುವರೇ ?
ಬಾಬ್ರಿಯನ್ನು ಉಳಿಸುವುದಕ್ಕೆಂದೇ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು. ಮಸೀದಿಯನ್ನು ಉಳಿಸಲು ಏನೂ ಮಾಡದಿದ್ದರೆ ಮುಸಲ್ಮಾನರಿಗೆ ದೇಶದ ಮೇಲಿನ ವಿಶ್ವಾಸ ಹಾರಿ ಹೋಗುತ್ತಿತ್ತು, ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಒಪ್ಪಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !