ಮಸೀದಿಯಲ್ಲಿ ಮಕ್ಕಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುವ ಬಗ್ಗೆ ವಿಚಾರಣೆಗೆಂದು ತೆರಳಿದ್ದ ಮಂಗಳೂರಿನ ಪತ್ರಕರ್ತರಿಗೆ ಮತಾಂಧರಿಂದ ಥಳಿತ !

ಕಾಂಗ್ರೆಸ್ಸಿನ ರಾಜ್ಯದಲ್ಲಿ ಮತಾಂಧರ ಉದ್ಧಟತನ !
ಮತಾಂಧರಿಂದ ಪೆಟ್ಟುತಿನ್ನುವ ಪತ್ರಕರ್ತರು ಈ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ
ಅಥವಾ ಅವರ ವಿರುದ್ಧ ಆಂದೋಲನ ಮಾಡುವುದಿಲ್ಲ; ಆದರೆ ಹಿಂದೂಗಳಿಂದ ತಪ್ಪಾಗಿ ಏನಾದರೂ
ಇಂತಹ ಘಟನೆಗಳಾದರೆ ದೇಶದಲ್ಲಿನ ಎಲ್ಲ ಪತ್ರಕರ್ತರು ಆಕಾಶಪಾತಾಳ ಒಂದು ಮಾಡುತ್ತಿದ್ದರು !
ಮಂಗಳೂರು : ಇಲ್ಲಿಂದ ಸುಮಾರು ೨೦ ಕಿ.ಮೀ. ದೂರದಲ್ಲಿರುವ ಸುರಾಲಪಾಡಿಯ ಜುಮ್ಮಾ ಮಸೀದಿಯಲ್ಲಿ ಸಣ್ಣ ಮಕ್ಕಳನ್ನು ಮಳೆಯಲ್ಲಿ ನಿಲ್ಲಿಸುವ ಘಟನೆ ಪದೇಪದೇ ನಡೆಯುತ್ತಿದೆಯೆಂದು ಕೆಲವು ಪಾಲಕರು ಪತ್ರಕರ್ತರಲ್ಲಿ ದೂರು ನೀಡಿದ್ದರು. ಈ ದೂರಿನ ವಿಷಯದಲ್ಲಿ ಮಾಹಿತಿ ಪಡೆಯಲು ಮಸೀದಿಗೆ ತೆರಳಿದ್ದ ಮಂಗಳೂರಿನ ೩ ವಾರ್ತಾವಾಹಿನಿಗಳ ೪ ಪತ್ರಕರ್ತರಿಗೆ ಸುಮಾರು ೩೦೦ ಮತಾಂಧರು ಒಟ್ಟಾಗಿ ಹೊಡೆದಿದ್ದಾರೆ. ಪತ್ರಕರ್ತರು ಅವರು ಬಂದ ಉದ್ದೇಶವನ್ನು ಹೇಳಲು ಪ್ರಯತ್ನಿಸಿದರು; ಆದರೆ ಮತಾಂಧರು ಅವರ ಮಾತನ್ನು ಕೇಳದೆ ಧ್ವನಿವರ್ಧಕದ ಮೂಲಕ ‘ತಮ್ಮ ಧರ್ಮವನ್ನು ಅವಮಾನಿಸಲು ಕೆಲವು ಜನರು ಮಸೀದಿಗೆ ನುಸುಳಿದ್ದಾರೆ, ಆದ್ದರಿಂದ ಎಲ್ಲರೂ ಬರಬೇಕು’, ಎಂದು ಘೋಷಣೆ ಕೂಗಿದರು.

ಕೆಲವೇ ಕ್ಷಣದಲ್ಲಿ ಸುಮಾರು ೩೦೦ ಮತಾಂಧರು ಅಲ್ಲಿ ಸೇರಿದರು. ಅವರು ಆ ಪತ್ರಕರ್ತರ ಮೈಕ್ ಕಸಿದುಕೊಂಡರು. ಕ್ಯಾಮೆರಾವನ್ನು ಪುಡಿ ಮಾಡಿದರು. ಪತ್ರಕರ್ತರನ್ನು ಹೊರಗೆ ತಳ್ಳುವಾಗ ಅವರಿಗೆ ಹೊಡೆದರು. ಪೊಲೀಸರು ಘಟನೆಯ ಸ್ಥಳಕ್ಕೆ ಬಂದ ನಂತರವೇ ಪತ್ರಕರ್ತರು ಮತಾಂಧರ ಹಿಡಿತದಿಂದ ಬಿಡುಗಡೆಯಾದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಸೀದಿಯಲ್ಲಿ ಮಕ್ಕಳೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುವ ಬಗ್ಗೆ ವಿಚಾರಣೆಗೆಂದು ತೆರಳಿದ್ದ ಮಂಗಳೂರಿನ ಪತ್ರಕರ್ತರಿಗೆ ಮತಾಂಧರಿಂದ ಥಳಿತ !