ಕಾ. ಗೋವಿಂದ ಪಾನ್ಸರೆ ಹತ್ಯೆಯ ಪ್ರಕರಣ ! ಇದರ ತನಿಖೆಗೆ ವಿಶೇಷ ತನಿಖಾ ದಳ ರಚನೆ !

ಪೊಲೀಸರು ಥಳಿಸಿದ ಬಗ್ಗೆ ಸನಾತನದ ಸಾಧಕರಾದ ಡಾ. ವೀರೇಂದ್ರಸಿಂಹ ತಾವಡೆಯವರಿಂದ ನ್ಯಾಯಾಧೀಶರಲ್ಲಿ ದೂರು
ಕೊಲ್ಲಾಪುರ : ಕಾ. ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳವು (ಎಸ್‌ಐಟಿ) ಸನಾತನದ ಸಾಧಕ ಡಾ. ವೀರೇಂದ್ರಸಿಂಹ ತಾವಡೆ ಯವರನ್ನು ಯೆರವಡಾದ ಕಾರಾಗೃಹದಿಂದ ವಶಪಡಿಸಿ ಕೊಂಡು ಸೆಪ್ಟೆಂಬರ್ ೩ ರಂದು ಕೊಲ್ಲಾಪುರದಲ್ಲಿ ೭ ನೇ ಸಹದಿವಾಣಿ ನ್ಯಾಯಾಧೀಶ (ಕನಿಷ್ಠ ಸ್ತರ) ಶ್ರೀಮತಿ ವಿ.ವಿ. ಪಾಟೀಲ್ ಎದುರು ಹಾಜರು ಪಡಿಸಿದರು. ಎರಡೂ ಕಡೆಯ ಯುಕ್ತಿವಾದವನ್ನು ಆಲಿಸಿದ ನ್ಯಾಯಾಧೀಶರು ಡಾ. ವೀರೇಂದ್ರಸಿಂಹ ತಾವಡೆಯವರಿಗೆ ೫ ದಿನಗಳ ಪೊಲೀಸ್ ಕಸ್ಟಡಿಯನ್ನು ನೀಡಿ ಸೆಪ್ಟೆಂಬರ್ ೮ ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿಡುವ ಆದೇಶ ನೀಡಿದರು.
ಡಾ. ವೀರೇಂದ್ರಸಿಂಹ ಪರವಾಗಿ ನ್ಯಾಯವಾದಿ ಸಮೀರ ಪಟವರ್ಧನ ಮತ್ತು ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರರರು ವಾದ ಮಂಡಿಸಿದರು. ಪೊಲೀಸರು ವಿವಿಧ ಕಾರಣ ನೀಡಿ ೧೪ ದಿನಗಳ ಪೊಲೀಸ್ ಕಸ್ಟಡಿ ಕೇಳಿದ್ದರು. ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ಡಾ. ತಾವಡೆಯವರು, ಪೊಲೀಸರು ವಿಚಾರಣೆ ಮಾಡುವಾಗ ತಮಗೆ ಥಳಿಸಿದ ಬಗ್ಗೆ ನ್ಯಾಯಾಧೀಶರಲ್ಲಿ ದೂರನ್ನು ದಾಖಲಿಸಿದರು. ಸನಾತನದ ಸಾಧಕ ಡಾ. ವೀರೇಂದ್ರಸಿಂಹ ತಾವಡೆ ಯವರನ್ನು ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಡಾ. ನರೇಂದ್ರ ದಾಭೋಲಕರ್ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ವಿಭಾಗವು ಸಂಶಯಿತರೆಂದು ಜೂನ್ ೧೦ ರಂದು ಬಂಧಿಸಿದ್ದಾರೆ. ಕೇಂದ್ರೀಯ ತನಿಖಾ ದಳದ ಕಸ್ಟಡಿ ಮುಗಿದ ನಂತರ ಡಾ. ತಾವಡೆಯವರು ಕಳೆದ ೨ ತಿಂಗಳಿನಿಂದ ಪುಣೆಯ ಯೆರವಡಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಅವರನ್ನು ಸೆಪ್ಟೆಂಬರ್ ೨ ರಂದು ಕಾ. ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಕೊಲ್ಹಾಪುರದ ವಿಶೇಷ ತನಿಖಾ ದಳ (ಎಸ್‌ಐಟಿ)ವು ವಶಕ್ಕೆ ತೆಗೆದುಕೊಂಡು ಕೊಲ್ಹಾಪುರಕ್ಕೆ ತಂದಿತು.
ಸೆಪ್ಟೆಂಬರ್ ೨ ರಂದು ರಾತ್ರಿ ಅವರ ವೈದ್ಯಕೀಯ ಪರೀಕ್ಷೆ ಮಾಡಲಾಯಿತು. ನಂತರ ಅವರನ್ನು ಪೊಲೀಸ್ ಮುಖ್ಯಾಲಯದಲ್ಲಿಡಲಾಗಿತ್ತು. ಡಾ. ತಾವಡೆಯವ ರನ್ನು ಸೆಪ್ಟೆಂಬರ್ ೩ ರಂದು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ನ್ಯಾಯಾಲಯವು ಮೇಲಿನ ನಿರ್ಣಯವನ್ನು ನೀಡಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾ. ಗೋವಿಂದ ಪಾನ್ಸರೆ ಹತ್ಯೆಯ ಪ್ರಕರಣ ! ಇದರ ತನಿಖೆಗೆ ವಿಶೇಷ ತನಿಖಾ ದಳ ರಚನೆ !