ದೇವಿಯ ಉಡಿ ತುಂಬುವುದು !

ದೇವಿಯ ಉಡಿ ತುಂಬುವುದರ ಮಹತ್ವವೇನು ?
ದೇವಿಪೂಜೆಯಲ್ಲಿ ದೇವಿಗೆ ಸೀರೆ ಮತ್ತು ಖಣ (ರವಿಕೆ ಬಟ್ಟೆ)ವನ್ನು ಅರ್ಪಿಸಿ ಅಂದರೆ ದೇವಿಯ ಉಡಿಯನ್ನು ತುಂಬಿಸುವುದಿರುತ್ತದೆ.
ಉಡಿ ತುಂಬುವ ಯೋಗ್ಯ ಪದ್ಧತಿ
. ದೇವಿಗೆ ಅರ್ಪಿಸುವ ಸೀರೆ ನೂಲಿನಿಂದ ನೇಯ್ದ ಅಥವಾ ರೇಷ್ಮೆಯದ್ದಾಗಿರಬೇಕು.

. ಎರಡೂ ಕೈಗಳ ಬೊಗಸೆಯಲ್ಲಿ ಸೀರೆ, ಅದರ ಮೇಲೆ ಖಣ,ತೆಂಗಿನಕಾಯಿ (ತೆಂಗಿನಕಾಯಿಯ ಜುಟ್ಟು ದೇವಿಯ ಕಡೆಗೆ ಬರುವಂತೆ) ಮತ್ತು ಸ್ವಲ್ಪ ಅಕ್ಕಿಯನ್ನು ಇಟ್ಟು, ನಮ್ಮ ಕೈಗಳ ಬೊಗಸೆಯನ್ನು ಎದೆಯ ಎದುರಿಗೆ ಹಿಡಿದುಕೊಂಡು ದೇವಿಯ ಎದುರು ನಿಲ್ಲಬೇಕು.
 . ದೇವಿಯಿಂದ ನಮಗೆ ಚೈತನ್ಯವು ಸಿಗಲಿ ಮತ್ತು ನಮ್ಮ ಆಧ್ಯಾತ್ಮಿಕ ಉನ್ನತಿಯು ಶೀಘ್ರವಾಗಿ ಆಗಲಿ ಎಂದು ಭಾವಪೂರ್ಣವಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡಬೇಕು.
. ಸೀರೆ, ಖಣ, ತೆಂಗಿನಕಾಯಿಯನ್ನು ದೇವಿಯ ಚರಣಗಳಲ್ಲಿ ಅರ್ಪಿಸಬೇಕು.
. ಅನಂತರ ದೇವಿಗೆ ಅರ್ಪಿಸಿದ ಬಟ್ಟೆಗಳನ್ನು ಅವಳ ಪ್ರಸಾದವೆಂದು ಧರಿಸಬೇಕು ಮತ್ತು ತೆಂಗಿನ ಕಾಯಿಯನ್ನು ಪ್ರಸಾದವೆಂದು ಸ್ವೀಕರಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಿಯ ಉಡಿ ತುಂಬುವುದು !