ಸುಸಂಸ್ಕಾರವನ್ನು ನೀಡುವ ಬೋಧಕಥೆ !

ಅಧ್ಯಾತ್ಮದಲ್ಲಿ ಮೊದಲ ಪಾಠ : ಅಹಂಕಾರ ಬೇಡ !
ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ನಮ್ಮ ಸಂಪೂರ್ಣ ಗಮನ ಗುರಿಯ ಮೇಲಿದ್ದರೆ ಮಾತ್ರ ಹೇಗೆ ಯಶಸ್ವಿಯಾಗುವೆವು ಎಂಬುದು ತಿಳಿಯುತ್ತದೆ.
೧. ಶೂರಸೇನನೆಂಬ ರಾಜನಿಗೆ ಅಧ್ಯಾತ್ಮವನ್ನು ಕಲಿಯಬೇಕಿನಿಸಿತು, ಆಗ ರಾಜನು ಆತ್ಮಾನಂದ ಮಹಾರಾಜರನ್ನು ಅರಮನೆಗೆ ಕರೆತರಲು ಪ್ರಧಾನಿಗೆ ಹೇಳಿದನು; ಆದರೆ ಮಹಾರಾಜರು ರಾಜನಿಗೆ ಕಲಿಯಲಿಕ್ಕೆ ಗುಡಿಸಲಿಗೆ ಬರಲು ಹೇಳುವುದು : ‘ಶೂರಸೇನನೆಂಬ ರಾಜನಿದ್ದನು. ಅವನು ತನ್ನ ರಾಜ್ಯವನ್ನು ತುಂಬಾ ವಿಸ್ತರಿಸಿದನು. ಅವನ ಪ್ರಜೆಗಳೂ ಸುಖವಾಗಿದ್ದರು. ರಾಜನಿಗೆ ತನ್ನ ಶೌರ್ಯ, ರಾಜ, ಐಶ್ವರ್ಯ ಮತ್ತು ಸಾಮರ್ಥ್ಯ ಇತ್ಯಾದಿ ವಿಷಯಗಳ ಬಗ್ಗೆ ಅಭಿಮಾನವಿತ್ತು. ಅವನಿಗೆ ಅಧ್ಯಾತ್ಮ ಕಲಿಯಬೇಕೆನಿಸಿತು. ಆಗ ಶೂರಸೇನನು ತನ್ನ ಪ್ರಧಾನಿಯನ್ನು ಕರೆದು ರಾಜ್ಯದ ಸರ್ವಶ್ರೇಷ್ಠರಾದ ಅಧ್ಯಾತ್ಮದ ಅಧಿಕಾರಿ ಗುರುಗಳ ಮಾನಸನ್ಮಾನವನ್ನು ಮಾಡಲು ಮತ್ತು ಅಧ್ಯಾತ್ಮವನ್ನು ಕಲಿಸಲು ಅವರನ್ನು ಪ್ರತಿದಿನ ಅರಮನೆಗೆ ಕರೆದುಕೊಂಡು ಬರಲು ಹೇಳಿದನು.

ಪ್ರಧಾನಿ : ನಮ್ಮ ರಾಜಧಾನಿಯ ಸಮೀಪ ದಲ್ಲಿಯೇ ಅರಣ್ಯದಲ್ಲಿ ಒಂದು ಗುಡಿಸಿಲಿನಲ್ಲಿ ಆತ್ಮಾನಂದ ಮಹಾರಾಜರು ಇರುತ್ತಾರೆ. ಅವರಿಗೆ ಸಾಕ್ಷಾತ್ಕಾರವಾಗಿದೆ; ಆದರೆ ಅವರು ಅರಮನೆಗೆ ಬರಬಹುದು ಎಂದೆನಿಸುವುದಿಲ್ಲ .
ಶೂರಸೇನ ರಾಜ : ನೀನು ರಥವನ್ನು ತೆಗೆದು ಕೊಂಡು ಹೋಗು. ಅವರ ಮಾನಸನ್ಮಾನ ಮಾಡು ಮತ್ತು ಹೇಗಾದರೂ ಮಾಡಿ ಅವರನ್ನು ಕರೆದುಕೊಂಡು ಬಾ.
ಪ್ರಧಾನಿಯು ಆತ್ಮಾನಂದ ಮಹಾರಾಜರ ಕಡೆಗೆ ಹೋದನು. ಅವರನ್ನು ನಮಸ್ಕರಿಸಿ ರಾಜನ ಸಂದೇಶವನ್ನು ಕೊಟ್ಟನು.
ಆತ್ಮಾನಂದ ಮಹಾರಾಜರು : ಪ್ರಧಾನಿಯೇ ಇದು ನೋಡು, ನನಗೆ ಅರಮನೆಯ ಆವಶ್ಯಕತೆ ಇಲ್ಲ. ರಾಜನಿಗೆ ಅಧ್ಯಾತ್ಮ ಕಲಿಯಲಿಕ್ಕಿದೆ, ಹಾಗಾಗಿ ಆವಶ್ಯಕತೆ ರಾಜನಿಗಿದೆ. ಅವನಿಗೆ ನಿಜವಾಗಿ ತಳಮಳ ಇದ್ದರೆ, ಅವನನ್ನು ನನ್ನ ಗುಡಿಸಲಿಗೆ ಬರಲು ಹೇಳು.
೨. ರಾಜನು ಅಧ್ಯಾತ್ಮವನ್ನು ಕಲಿಯಲು ಆತ್ಮಾನಂದರ ಗುಡಿಸಲಿಗೆ ಹೋಗುವುದು ಮತ್ತು ನಾಲ್ಕೂವರೆ ಅಡಿ ಎತ್ತರದ ಬಾಗಿಲಿನಿಂದ ತಲೆಬಾಗಿ ಹೋಗಿ ಆತ್ಮಾನಂದರ ದರ್ಶನ ಪಡೆಯುವುದು : ಪ್ರಧಾನಿಯು ರಾಜನಿಗೆ ಆ ರೀತಿ ತಿಳಿಸಿದನು. ಕೊನೆಯಲ್ಲಿ ರಾಜನು ಅಧ್ಯಾತ್ಮವನ್ನು ಕಲಿಯಲು ಆತ್ಮಾನಂದರ ಗುಡಿಸಲಿಗೆ ಬರಲು ಸಿದ್ಧನಾದನು. ರಾಜನು ಗುಡಿಸಲಿಗೆ ಬಂದನು, ಆಗ ಗುಡಿಸಲಿನ ಒಂದು ಬದಿಯ ಕೋಣೆಯಲ್ಲಿ ಆತ್ಮಾನಂದ ಮಹಾರಾಜರು ಕುಳಿತಿದ್ದರು. ರಾಜನು, ಪ್ರಧಾನಿಯೊಂದಿಗೆ ‘ನಾನು ಬಂದಿರುವೆನು’, ಎಂದು ಮಹಾರಾಜರಿಗೆ ಸಂದೇಶ ವನ್ನು ಕಳುಹಿಸಿದನು. ‘ಮಹಾರಾಜರು ಅವನನ್ನು ಸ್ವಾಗತಿಸಲು ಹೊರಗೆ ಬರುವರು’ ಎಂದು ರಾಜನಿಗೆ ಅನಿಸಿತು. ಆತ್ಮಾನಂದ ಮಹಾರಾಜರು ಪ್ರಧಾನಿಗೆ ಹೇಳಿದರು, ‘‘ರಾಜನನ್ನು ಕರೆದುಕೊಂಡು ತಾವು ನನ್ನ ಕೋಣೆಗೆ ಬನ್ನಿರಿ.’’ ಕೋಣೆಯ ಬಾಗಿಲು ಕೇವಲ ನಾಲ್ಕೂವರೆ ಅಡಿ ಎತ್ತರವಾಗಿತ್ತು. ರಾಜ ಮತ್ತು ಪ್ರಧಾನಿ ಇವರಿಗೆ ತಲೆಬಾಗಿ ಕೋಣೆಯಲ್ಲಿ ಬರಬೇಕಾಯಿತು. ಆತ್ಮಾನಂದ ಮಹಾರಾಜರು ಎದ್ದು ನಿಂತು ಇಬ್ಬರನ್ನೂ ಸ್ವಾಗತಿಸಿದರು. ಅವರಿಗೆ ತಿನ್ನಲು ಸವಿಯಾದ ಹಣ್ಣುಗಳನ್ನು ಕೊಟ್ಟರು ನಂತರ ಹೆಚ್ಚು ಸಮಯ ಮಾತನಾಡದೇ ಅಧ್ಯಾತ್ಮ ವನ್ನು ಕಲಿಸಲು ಆರಂಭಿಸಿದರು.
೩. ಶೂರಸೇನ ರಾಜನು ಆತ್ಮಾನಂದ ಮಹಾರಾಜರನ್ನು ಕೇಳಿದ ಪ್ರಶ್ನೆಗೆ ‘ಅಧ್ಯಾತ್ಮದಲ್ಲಿನ ಮೊದಲ ಪಾಠದಲ್ಲಿ ನೀನು ಉತ್ತೀರ್ಣನಾಗಿರುವೆ,’ ಎಂದು ಮಹಾರಾಜರು ಉತ್ತರಕೊಟ್ಟು ಅರಮನೆಗೆ ಬರಲು ಒಪ್ಪಿಕೊಳ್ಳುವುದು : ಶೂರಸೇನ ರಾಜನು ಪ್ರಸನ್ನ ನಾದನು. ಹೋಗುವಾಗ ಅವನು ಆತ್ಮಾನಂದ ಮಹಾರಾಜರನ್ನು ನಮ್ರತೆಯಿಂದ ಕೇಳಿದನು, ‘‘ಮಹಾರಾಜರೇ, ನಾನು ರಾಜ್ಯಾಡಳಿತವನ್ನು ನೋಡು ವುದರಲ್ಲಿ ವ್ಯಸ್ತನಾಗಿರುತ್ತೇನೆ. ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಅತ್ಯಂತ ಗೌರವವಿದೆ. ತಮ್ಮ ಬರು-ಹೋಗುವ ಎಲ್ಲ ವ್ಯವಸ್ಥೆಯನ್ನು ಸನ್ಮಾನಪೂರ್ವಕವಾಗಿ ಮಾಡಲು ನಾನು ಪ್ರಧಾನಿಗೆ ಹೇಳಿದ್ದೆನು. ಹೀಗಿರುವಾಗ ತಾವು ನನಗೆ ಇಲ್ಲಿ ಏಕೆ ಕರೆದಿರಿ ? ’’
ಆಗ ಆತ್ಮಾನಂದ ಮಹಾರಾಜರೆಂದರು, ‘‘ನೀನು ‘ನಾನು ರಾಜನಾಗಿದ್ದೇನೆ’, ಎಂಬ ಅಹಂಕಾರವನ್ನು ತ್ಯಜಿಸಿ ಗುಡಿಸಲಿಗೆ ಬಂದಿರುವೆ ಮತ್ತು ಗುಡಿಸಿಲಿಗೆ ಬಂದನಂತರವೂ ನಾಲ್ಕೂವರೆ ಅಡಿ ಎತ್ತರದ ಬಾಗಿಲಿನಿಂದ ತಲೆಬಾಗಿ ನನ್ನ ಕಡೆಗೆ ಬಂದಿರುವೆ, ಇದೇ ನಿನ್ನ ಅಧ್ಯಾತ್ಮದ ಮೊದಲ ಪಾಠವಾಗಿತ್ತು. ನೀನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ. ನಾಳೆಯಿಂದ ನಿನ್ನ ಸಮಯಕ್ಕನುಸಾರ ನಾನು ನಿನ್ನ ಅರಮನೆಗೆ ಬರುತ್ತೇನೆ.’’ (ಆಧಾರ : ‘ಇಸ್ಕಾನ ವಾಙ್ಮಯ’ ೧೯.೨.೨೦೧೩)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆ !