ಪಾಕ್‌ಪುರಸ್ಕೃತ ಉಗ್ರರಿಗಿಂತ ದೇಶಕ್ಕೆ ಇಸ್ಲಾಮಿಕ್ ಸ್ಟೇಟ್‌ನಿಂದ ಹೆಚ್ಚು ಅಪಾಯ ! - ಎನ್‌ಐಎ

ಭಾರತದ ಮುಸಲ್ಮಾನರು ಇಸ್ಲಾಮಿಕ್ ಸ್ಟೇಟ್‌ನತ್ತ ಹೊರಳುವುದಿಲ್ಲ,
ಎಂದು ಹೇಳುವ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಇದಕ್ಕೇನು ಹೇಳುವರು ?
ಐಸಿಸ್‌ನ ಬೆಂಬಲಿಗರಿಗೆ ಬುದ್ಧಿವಾದ ಹೇಳಿ ಅವರನ್ನು ಬಿಟ್ಟು ಬಿಡುವ ಸರಕಾರ,
ಪೊಲೀಸ್ ಮತ್ತು ಆಡಳಿತದವರಿಗೆ ಈ ವಿಷಯದಲ್ಲಿ ಏನು ಹೇಳಲಿಕ್ಕಿದೆ ?
ನವ ದೆಹಲಿ : ಇಸ್ಲಾಮಿಕ್ ಸ್ಟೇಟ್ ಕೇವಲ ೧೮ ತಿಂಗಳ ಹಿಂದೆ ಭಾರತದಲ್ಲಿ ಜನರನ್ನು ಸೇರಿಸಿಕೊಳ್ಳಲು ಆಂಭಿಸಿದರೂ ಅದರ ಜಾಲದಲ್ಲಿ ಸಿಲುಕಿದ ಮತಾಂಧರ ಸಂಖ್ಯೆಯನ್ನು ನೋಡಿದಾಗ ದೇಶದ ಭದ್ರತೆಗೆ ಪಾಕ್‌ಪುರಸ್ಕೃತ ಉಗ್ರರಿಗಿಂತ ಐಸಿಸ್ ಹೆಚ್ಚು ಅಪಾಯ ಕಾರಿ ಆಗಿದೆಯೆಂಬ ಅಭಿಪ್ರಾಯವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಉಪಮಹಾನಿರೀಕ್ಷಕ ಆಲೋಕ ಮಿತ್ತಲ್ ಒಂದು ಆಂಗ್ಲ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ವ್ಯಕ್ತಪಡಿಸಿದರು.
೧. ಮಿತ್ತಲ್ ಇವರು ನೀಡಿದ ಮಾಹಿತಿಗನುಸಾರ ಇಷ್ಟರವರೆಗೆ ಐಸಿಸ್‌ನ ೪೦ ಕ್ಕಿಂತ ಹೆಚ್ಚು ಸದಸ್ಯರನ್ನು ಮತ್ತು ಬೆಂಬಲಿಗರನ್ನು ಬಂಧಿಸಲಾಗಿದ್ದು ಅವರ ೮ ಅಡ್ಡೆಗಳನ್ನು ನಾಶಗೊಳಿಸಲಾಗಿದೆ. ಅವರ ವಿರುದ್ಧ ೮ ಅಪರಾಧಗಳನ್ನು ದಾಖಲಿಸಲಾಗಿದ್ದು ೬ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆರೋಪಪತ್ರವನ್ನು ದಾಖಲಿಸ ಲಾಗಿದೆ. ಉಳಿದ ೨ ಪ್ರಕರಣಗಳಲ್ಲಿ ತನಿಖೆ ಮುಂದು ವರಿದಿದೆ.
೨. ದೇಶದಾದ್ಯಂತದ ಐಸಿಸ್‌ನ ಸದಸ್ಯರು ಮತ್ತು ಬೆಂಬಲಿಗರ ನಿಜವಾದ ಸಂಖ್ಯೆಯನ್ನು ಹೇಳಲು ಎನ್‌ಐಎ ನಿರಾಕರಿಸಿದರೂ ಈ ಸಂಖ್ಯೆ ೭-೮ ಸಾವಿರ ದಷ್ಟಿರಬಹುದೆಂಬ ಅನುಮಾನವಿದೆ. ಅದರಲ್ಲಿ ಸುಮಾರು ೫೦ ಜನರು ಐಸಿಸ್‌ನಲ್ಲಿ ಸೇರ್ಪಡೆಯಾಗಲು ಇರಾಕ್ ಮತ್ತು ಸಿರಿಯಾಗೆ ಹೋಗಿದ್ದಾರೆ.
೩. ರಾಷ್ಟ್ರೀಯ ತನಿಖಾ ದಳದ ಎಲ್ಲಕ್ಕಿಂತ ದೊಡ್ಡ ಯಶಸ್ಸೆಂದರೆ, ಇತ್ತೀಚೆಗಷ್ಟೇ ಮುಂಬಯಿ ಸಹಿತ ದೇಶದ ಇತರ ಭಾಗಗಳಿಂದ ಒಂದೇ ಸಲ ೧೮ ಜನ ಸಂಶಯಿತರನ್ನು ಬಂಧಿಸಲಾಯಿತು. ಅವರಿಂದ ಸಿಕ್ಕಿದ ಮಾಹಿತಿಗನುಸಾರ ಐಸಿಸ್ ದೇಶದ ಎಲ್ಲ ರಾಜ್ಯಗಳಿಂದ ಸದಸ್ಯರನ್ನು ಮತ್ತು ಸಮರ್ಥಕರನ್ನು ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
೪. ಈ ಸೇರ್ಪಡೆಯ ಹಿಂದೆ ಭಟ್ಕಳ ಮೂಲದ ಹಾಗೂ ಸದ್ಯ ದೇಶದ ಹೊರಗಿರುವ ಶಫಿ ಅರಮಾರ ಮತ್ತು ಅವನಿಗೆ ಸಹಾಯ ಮಾಡುವ ಮುಂಬಯಿ-ಮಲವಾಣಿಯ ಅಯ್ಯಾಝ ಸುಲ್ತಾನ ಇವರಿದ್ದಾರೆ. ಶಫಿ ಅರಮಾರನಿಗೆ ಮಹಾರಾಷ್ಟ್ರದ ಕಾರ್ಯವನ್ನು ವಹಿಸಿಕೊಡಲಾಗಿದೆ. ಅವನು ಪರಭಣಿಯಲ್ಲಿ ಮುಖ್ಯ ಉಗ್ರರ ಸಂಪರ್ಕದಲ್ಲಿದ್ದನು.
೫. ಮಹಾರಾಷ್ಟ್ರದ ಕಲ್ಯಾಣದ ಅರೀಬ ಮಜೀದ ಸಿರಿಯಾಗೆ ಹೋಗಿ ಐಸಿಸ್‌ನಲ್ಲಿ ಸೇರಿಕೊಂಡಿದ್ದನು. ಅವನು ನಂತರ ಭಾರತಕ್ಕೆ ಬಂದನು. ಅವನನ್ನು ಬಂಧಿಸಿದ ನಂತರ ರಾಷ್ಟ್ರೀಯ ತನಿಖಾ ದಳವು ನಿಜವಾಗಿಯೂ ಕಾರ್ಯನಿರತವಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕ್‌ಪುರಸ್ಕೃತ ಉಗ್ರರಿಗಿಂತ ದೇಶಕ್ಕೆ ಇಸ್ಲಾಮಿಕ್ ಸ್ಟೇಟ್‌ನಿಂದ ಹೆಚ್ಚು ಅಪಾಯ ! - ಎನ್‌ಐಎ