ಶ್ರೀರಾಮ ಸೇನೆಯ ಅಧ್ಯಕ್ಷ ಹಾಗೂ ಪ್ರಖರ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ್‌ರವರ ಮೇಲಿದ್ದ ಗೋವಾ ಪ್ರವೇಶ ನಿಷೇಧ ಜನವರಿ ೧೫ ರ ವರೆಗೆ ವಿಸ್ತಾರ

ಶ್ರೀ. ಪ್ರಮೋದ ಮುತಾಲಿಕ್
ಜಾತ್ಯತೀತ ಸರಕಾರವೆಂದು ತೋರಿಸಲು ಗೋವಾ ಸರಕಾರ ಕ್ರೈಸ್ತರಿಗಾಗಿ ತಲೆಬಾಗುವ ನಿರ್ಣಯ ತೆಗೆದುಕೊಳ್ಳುವಂತೆಯೇ ಹಿಂದೂಗಳಿಗಾಗಿ ಪ್ರಮೋದ ಮುತಾಲಿಕ್ ಮೇಲಿನ ನಿರ್ಬಂಧ ಏಕೆ ತೆಗೆಯುವುದಿಲ್ಲ ? 
  • ಪೊಲೀಸ್ ವರದಿಗನುಸಾರ ನಿಷೇಧದಲ್ಲಿ ವಿಸ್ತಾರ
  • ಪ್ರಮೋದ ಮುತಾಲಿಕ್ ಮೇಲಿನ ನಿಷೇಧಕ್ಕೆ ಮೂರನೇ ವರ್ಷ
ಪಣಜಿ : ಶ್ರೀರಾಮ ಸೇನೆಯ ಅಧ್ಯಕ್ಷ ಹಾಗೂ ಪ್ರಖರ ಹಿಂದುತ್ವನಿಷ್ಠರಾದ ಶ್ರೀ. ಪ್ರಮೋದ ಮುತಾಲಿಕ್ ಮತ್ತು ಅವರ ಸಹಕಾರಿಗಳ ಮೇಲೆ ಗೋವಾ ಪ್ರವೇಶ ನಿಷೇಧವನ್ನು ಗೋವಾದ ಭಾಜಪ ಸರಕಾರವು ಜನವರಿ ೧೫ ರ ವರೆಗೆ ವಿಸ್ತರಿಸಿದೆ. ರಾಜ್ಯದ ಎರಡೂ ಜಿಲ್ಲೆಗಳ ಪೊಲೀಸ್ ಅಧೀಕ್ಷಕರ ವರದಿಗನುಸಾರ ಈ ಪ್ರವೇಶ ನಿಷೇಧ ಹೆಚ್ಚಿಸಲಾಗಿದೆ. ಪ್ರಖರ ಹಿಂದುತ್ವನಿಷ್ಠ ಮುತಾಲಿಕ್‌ರವರ ಮೇಲಿನ ನಿರ್ಬಂಧಕ್ಕೆ ಈಗ ಮೂರನೇ ವರ್ಷ ನಡೆಯುತ್ತಿದೆ.
ಪ್ರಖರ ಹಿಂದುತ್ವನಿಷ್ಠ ಶ್ರೀ. ಪ್ರಮೋದ ಮುತಾಲಿಕ್ ಮತ್ತು ಅವರ ಸಹಕಾರಿಗಳ ಮೇಲೆ ೨೦೧೪ ರ ಆಗಸ್ಟ್ ೧೯ ರಂದು ಮೊದಲಬಾರಿ ೬ ತಿಂಗಳಿನ ವರೆಗೆ ಗೋವಾ ಪ್ರವೇಶ ನಿಷೇಧ ಹೇರಲಾಗಿತ್ತು ಮತ್ತು ಅದರ ನಂತರ ಪ್ರತಿ ೬ ತಿಂಗಳಲ್ಲಿ ಈ ನಿರ್ಬಂಧದ ಅವಧಿಯನ್ನು ಹೆಚ್ಚಿಸಲಾಯಿತು.
೨೦೧೬ ರ ಆಗಸ್ಟ್ ೧೯ ರಂದು ಶ್ರೀ. ಮುತಾಲಿಕ್‌ರವರ ಮೇಲಿನ ನಿರ್ಬಂಧಕ್ಕೆ ೨ ವರ್ಷ ಪೂರ್ಣವಾಯಿತು. ಶ್ರೀ. ಮುತಾಲಿಕ್‌ರವರ  ಮೇಲಿರುವ ನಿಷೇಧ ಸೆಪ್ಟೆಂಬರ್ ೧೫ ರಂದು ಮುಗಿಯಿತು. ಗೃಹ ಇಲಾಖೆಯ ಅಪರ ಕಾರ್ಯದರ್ಶಿ ರೋಹನ್ ಕಾಸಕರ್‌ರವರು ಹೊಸದಾಗಿ ಆದೇಶ ನೀಡುತ್ತಾ ಶ್ರೀ. ಮತಾಲಿಕ್‌ರವರ  ಪ್ರವೇಶ ನಿರ್ಬಂಧವನ್ನು ೨೦೧೭ ರ ಜನವರಿ ೧೫ ರ ವರೆಗೆ ಹೆಚ್ಚಿಸಿದ್ದಾರೆ. ಕ್ರಿಮಿನಲ್ ದಂಡ ಸಂಹಿತೆ ಕಾನೂನು ೧೯೭೫ ರ ೧೪೪ ಕಲಂ ಉಪಯೋಗಿಸಿ ರಾಜ್ಯ ಸರಕಾರವು ಈ ನಿರ್ಬಂಧವನ್ನು ೪ ತಿಂಗಳಿಗಾಗಿ ಹೆಚ್ಚಿಸಿದೆ. ಉತ್ತರ ಮತ್ತು ದಕ್ಷಿಣ ಗೋವಾದ ಪೊಲೀಸ್ ಅಧೀಕ್ಷಕರು ಶ್ರೀ. ಮುತಾಲಿಕ್‌ರವರ ಮೇಲಿನ ನಿರ್ಬಂಧದ ಅವಧಿಯನ್ನು ಹೆಚ್ಚಿಸಬೇಕಾಗಿದೆ, ಎಂಬ ವರದಿಯನ್ನು ನೀಡಿದ ನಂತರ ಸರಕಾರವು ಈ ನಿರ್ಣಯವನ್ನು ತೆಗೆದುಕೊಂಡಿದೆ. ನಿರ್ಬಂಧ ತೆಗೆದರೆ ರಾಜ್ಯದಲ್ಲಿ ಕೋಮುದ್ವೇಷ ನಿರ್ಮಾಣವಾಗಬಹುದು ಹಾಗೂ ಕೋಮು ಸೌಹಾರ್ದತೆ ಹದಗೆಡಬಹುದು, ರಾಜ್ಯದ ಜನರ ಮನಸ್ಸಿನಲ್ಲಿ ಭಯ ನಿರ್ಮಾಣವಾಗ ಬಹುದು, ಎಂದು ಸರಕಾರವು ಆದೇಶದಲ್ಲಿ ಹೇಳಿದೆ. (ರಾಜ್ಯಕ್ಕೆ ತಾಲಿಬಾನ್ ಮುಖ್ಯಸ್ಥ ಬಂದು ಹೋಗಬಹುದು, ಭಯೋತ್ಪಾದಕ ಯಾಸಿನ್ ಭಟ್ಕಳ್ ವಾಸ್ತವ್ಯ ಮಾಡಿ ಹೋದರೆ ಸರಿ; ಆದರೆ ನಿರಪರಾಧಿ ಮತ್ತು ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ್‌ರವರ ಬಗ್ಗೆ ಮಾತ್ರ ಗೋವಾ ಸರಕಾರಕ್ಕೆ ಕಾಮಾಲೆಯಾಗಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀರಾಮ ಸೇನೆಯ ಅಧ್ಯಕ್ಷ ಹಾಗೂ ಪ್ರಖರ ಹಿಂದುತ್ವನಿಷ್ಠ ಪ್ರಮೋದ ಮುತಾಲಿಕ್‌ರವರ ಮೇಲಿದ್ದ ಗೋವಾ ಪ್ರವೇಶ ನಿಷೇಧ ಜನವರಿ ೧೫ ರ ವರೆಗೆ ವಿಸ್ತಾರ