ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಯನ್ನು ಮಾಡಿರಿ !

ಸಾಧಕರಿಗೆ ಸೂಚನೆ
೧. ಸದ್ಯ ಅನೇಕ ಸಾಧಕರಿಗೆ ಅನಿಷ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (ಈ ವರ್ಷ೧೭ ರಿಂದ ೩೦ ಸೆಪ್ಟೆಂಬರ್ ೨೦೧೬ ಈ ಕಾಲಾವಧಿ ಯಲ್ಲಿ) ಈ ತೊಂದರೆಯು ಹೆಚ್ಚಾಗುತ್ತಿರುವುದರಿಂದ ಈ ಕಾಲಾವಧಿಯಲ್ಲಿ ಪ್ರತಿದಿನ ಶ್ರೀ ಗುರುದೇವ ದತ್ತ ಈ ದತ್ತ ಜಪವನ್ನು ಕನಿಷ್ಠ ೧ ಗಂಟೆ ಮಾಡಬೇಕು.
ಅ. ಯಾವ ಸಾಧಕರು ಉಪಾಯ ಮಾಡುತ್ತಾರೆ, ಅವರು ತಮ್ಮ ಉಪಾಯದ ನಾಮಜಪದ ಜೊತೆಗೆ ದತ್ತಜಪವನ್ನೂ ಕನಿಷ್ಠ ೧ ಗಂಟೆ ಮಾಡಬೇಕು. ದತ್ತ ಜಪ ಮಾಡುವಾಗ ಕೈಯ ಐದೂ ಬೆರಳುಗಳ ತುದಿ ಗಳನ್ನು ಜೋಡಿಸಿ ಅನಾಹತಚಕ್ರ ಮತ್ತು ಮಣಿಪೂರ ಚಕ್ರಗಳಲ್ಲಿ ನ್ಯಾಸ ಮಾಡಬೇಕು.
ಆ. ಯಾವ ಸಾಧಕರು ಉಪಾಯವನ್ನು ಮಾಡು ವುದಿಲ್ಲ, ಅವರು ವೈಯಕ್ತಿಕ ಕೆಲಸಗಳು, ಸ್ನಾನ, ಸ್ವಚ್ಛತೆ - ಮುಂತಾದ ಸೇವೆಗಳನ್ನು ಮಾಡುವಾಗ ದತ್ತಜಪವನ್ನು ಕನಿಷ್ಠ ೧ ಗಂಟೆಯಾಗುವಂತೆ ಗಮನಿಸಬೇಕು; ಆದರೆ ತೊಂದರೆಯಾಗುತ್ತಿದ್ದರೆ ಅವರೂ ದತ್ತಜಪವನ್ನು ಕುಳಿತು ಮತ್ತು ಮುದ್ರೆ ಮಾಡಿ ಮಾಡಬೇಕು.
೨. ಪಿತೃಪಕ್ಷದ ಕಾಲಾವಧಿಯಲ್ಲಿ ಪೂರ್ವಜರಿಂದಾಗುವ ತೊಂದರೆಯಿಂದ ರಕ್ಷಣೆಯಾಗಲು ನಡುನಡುವೆ ದತ್ತಗುರುಗಳಿಗೆ ಪ್ರಾರ್ಥನೆ ಮಾಡಬೇಕು.
೩. ಪಿತೃಪಕ್ಷದಲ್ಲಿ ಸಾಧಕರಿಗೆ ಸಾಧ್ಯವಾದರೆ, ಶ್ರಾದ್ಧವಿಧಿಯನ್ನು ಅಗತ್ಯವಾಗಿ ಮಾಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಯನ್ನು ಮಾಡಿರಿ !