ಶ್ರಾದ್ಧಕರ್ಮದಲ್ಲಿನ ಕೆಲವು ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ,

ಶ್ರಾದ್ಧದಲ್ಲಿ ಜನಿವಾರವನ್ನು ಬಲಗಡೆಯ ಹೆಗಲಿನ ಮೇಲೆ (ಅಪಸವ್ಯ) ಏಕೆ ಹಾಕಿಕೊಳ್ಳಬೇಕು ?
‘ಬಲಗಡೆಯ ಹೆಗಲ ಮೇಲೆ ಜನಿವಾರವನ್ನು ಹಾಕಿಕೊಳ್ಳುವುದೆಂದರೆ (ಅಪಸವ್ಯ) ಪಿತೃಋಣದಿಂದ ಮುಕ್ತರಾಗಲು ಪಿತೃಗಳ ಜವಾಬ್ದಾರಿಯನ್ನು ವಹಿಸಿಕೊಂಡು ಅವರಿಗಾಗಿ ಮಾಡಿದ ಕರ್ತವ್ಯ ಪಾಲನೆಯ ನಿದರ್ಶಕವಾಗಿದೆ. ಜೀವದ ಬಲನಾಡಿಯು ಅವನ ಕರ್ತವ್ಯದ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ವ್ಯಕ್ತಿಯ ಬಲನಾಡಿಯು ಕರ್ತವ್ಯ ದಕ್ಷವಾಗಿದ್ದು ಜೀವವನ್ನು ಕರ್ಮವನ್ನು ಮಾಡಲು ಉದ್ಯುಕ್ತಗೊಳಿಸುತ್ತದೆ ಅಥವಾ ಪ್ರತ್ಯಕ್ಷ ಕರ್ಮವನ್ನು ಮಾಡಲು ಪ್ರವೃತ್ತಗೊಳಿಸುತ್ತದೆ. ಆದುದರಿಂದ ಮಂತ್ರದಿಂದ ಯುಕ್ತ ಸಂಪನ್ನವಾಗಿರುವ ಜನಿವಾರವನ್ನು ಬಲಗಡೆಯ ಹೆಗಲ ಮೇಲೆ ಹಾಕಿಕೊಳ್ಳುವುದರಿಂದ ಬಲನಾಡಿಯು ಕಾರ್ಯನಿರತವಾಗಿ ಜೀವಕ್ಕೆ ವಿಧಿ ಮಾಡಲು ಬೇಕಾಗುವ ಬಲವನ್ನು ಪೂರೈಸುತ್ತದೆ ಮತ್ತು ವಿಧಿಯನ್ನು ನಿರ್ವಿಘ್ನವಾಗಿ ಮಾಡಿಸಿಕೊಂಡು ಪೂರ್ಣಫಲಪ್ರಾಪ್ತಿಯನ್ನು ಮಾಡಿಕೊಡುತ್ತದೆ. ತದ್ವಿರುದ್ಧ ಎಡನಾಡಿಯು ತಟಸ್ಥವಾಗಿದೆ. ಅದು ಕರ್ಮವನ್ನು ಮಾಡುವಾಗ ಜೀವವನ್ನು ಬಾಹ್ಯ ಮತ್ತು ಆಂತರಿಕ ಯಾವುದೇ ಕರ್ಮದಲ್ಲಿ ವಿಚಲಿತವಾಗದಂತೆ ಶಕ್ತಿಯನ್ನು ಪೂರೈಸುತ್ತದೆ; ಆದರೆ ಪ್ರತ್ಯಕ್ಷ ಕರ್ಮದಲ್ಲಿ ಭಾಗಿಯಾಗುವುದಿಲ್ಲ. ಆದುದರಿಂದ ಪ್ರತ್ಯಕ್ಷ ವಿಧಿಕರ್ಮವನ್ನು ಮಾಡುವಾಗ ಜನಿವಾರವನ್ನು ಬಲಗಡೆಯ ಹೆಗಲ ಮೇಲೆ ಹಾಕಿಕೊಂಡು (ಅಪಸವ್ಯ) ಬಲನಾಡಿಯನ್ನು ಕಾರ್ಯನಿರತಗೊಳಿಸಿ ಜೀವವು ಆ ಕರ್ಮವನ್ನು ಪೂರ್ಣತ್ವಕ್ಕೆ ಕೊಂಡೊಯ್ಯಬೇಕು. ಕರ್ಮವು ಮುಗಿದ ನಂತರ ಜನಿವಾರವನ್ನು ಎಡಗಡೆಯ ಹೆಗಲ ಮೇಲೆ ಹಾಕಿಕೊಳ್ಳಬೇಕು’.
- ಓರ್ವ ವಿದ್ವಾಂಸ (ಪೂ. (ಸೌ.) ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೭.೨೦೦೫, ಮಧ್ಯಾಹ್ನ ೨.೩೩)

ಶ್ರಾದ್ಧದಲ್ಲಿ ಅರ್ಘ್ಯವನ್ನು ಕೊಡುವಾಗ ಜನಿವಾರವನ್ನು ಎಡಹೆಗಲ ಮೇಲೆ (ಸವ್ಯ)
ಮತ್ತು ತಿಲೋದಕವನ್ನು ಅರ್ಪಿಸುವಾಗ ಬಲಹೆಗಲ ಮೇಲೆ (ಅಪಸವ್ಯ) ಏಕೆ ಹಾಕಿಕೊಳ್ಳಬೇಕು ?
ಓರ್ವ ವಿದ್ವಾಂಸ : ಮಂತ್ರೋಚ್ಚಾರದಿಂದ ತುಂಬಿದ ಜನಿವಾರದ ಸ್ಪರ್ಶದಿಂದ ವಿಧಿಕರ್ಮಗಳಲ್ಲಿ ಆಯಾ ಪ್ರಕ್ರಿಯೆಗೆ ಆವಶ್ಯಕವಾಗಿರುವ ನಾಡಿಯು ಜಾಗೃತವಾಗುತ್ತದೆ. ಬಲಗಡೆಯ ಹೆಗಲ ಮೇಲೆ ಜನಿವಾರವನ್ನು ಹಾಕಿಕೊಳ್ಳುವುದರಿಂದ ಸೂರ್ಯನಾಡಿಯು ಕಾರ್ಯನಿರತವಾಗಿ ಪಿತೃಗಳ ಆಸಕ್ತಿದರ್ಶಕ ಲಹರಿಗಳನ್ನು ವಿಘಟನೆಗೊಳಿಸಲು ಪೂರಕವಾಗಿರುವ ರಜೋಗುಣದ ಸಹಾಯವು ಸಿಗುತ್ತದೆ. ಜನಿವಾರವನ್ನು ಎಡಗಡೆಯ ಹೆಗಲ ಮೇಲೆ ಹಾಕಿಕೊಂಡು ದೇವತೆಗಳನ್ನು ಆವಾಹನೆ ಮಾಡುವುದರಿಂದ ಜೀವದ ಎಡನಾಡಿಯು ಕಾರ್ಯನಿರತವಾಗಿ ದೇವತೆಗಳ ಕಾರ್ಯನಿರತ ತಾರಕ (ಆಶೀರ್ವಾದರೂಪೀ) ಲಹರಿಗಳ ಬಲ ಪ್ರಾಪ್ತವಾಗುತ್ತದೆ. ಅಂದರೆ ಸವ್ಯದಿಂದ ದೇವತೆಗಳ ಕೃಪೆಯನ್ನು ಸಂಪಾದಿಸಿ ಅಪಸವ್ಯದಿಂದ ಮಾರಕ ಲಹರಿಗಳ ಸಹಾಯದಿಂದ ಪಿತೃಗಳಿಗೆ ಸಂಬಂಧಿಸಿದ ಕರ್ಮವನ್ನು ಮಾಡುವುದಿರುತ್ತದೆ. ಎಡನಾಡಿಯು ದೇಹದ ರಜೋಗುಣವನ್ನು ನಿಯಂತ್ರಿಸಿದರೆ ಬಲನಾಡಿಯು ದೇಹದ ರಜೋಗುಣವನ್ನು ಕಾರ್ಯನಿರತಗೊಳಿಸುತ್ತದೆ. ದೇವತೆಗಳ ವಿಧಿಯನ್ನು ಸವ್ಯದಿಂದ ಮತ್ತು ಪಿತೃಗಳ ವಿಧಿಯನ್ನು ಅಪಸವ್ಯದಿಂದ ಮಾಡುವುದಿರುತ್ತದೆ. - ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧಕರ್ಮದಲ್ಲಿನ ಕೆಲವು ಕೃತಿಗಳ ಹಿಂದಿನ ಅಧ್ಯಾತ್ಮಶಾಸ್ತ್ರ,