ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತಮಹೋತ್ಸವ ವರ್ಷದ ನಿಮಿತ್ತ .....

ಸನಾತನ ಸಂಸ್ಥೆಯ ಕಾರ್ಯಕ್ಕೆ ಈಶ್ವರ ಏನನ್ನೂ ಕಡಿಮೆ ಮಾಡಲಾರನು,
ಎಂಬ ಪ.ಪೂ. ಡಾಕ್ಟರರ ವಾಕ್ಯದ ಅನುಭೂತಿಯನ್ನು ಸಾಧಕರು ಪಡೆದುಕೊಳ್ಳುವುದು !
ಪರಾತ್ಪರ ಗುರು ಡಾ. ಆಠವಲೆ
(ಪೂ.) ಶ್ರೀ. ಪೃಥ್ವಿರಾಜ ಹಜಾರೆ
೧೯೯೩ ರಲ್ಲಿ ಈಶ್ವರನ ಕೃಪೆಯಿಂದ ನಾನು ಸಂಸ್ಥೆಯ ಸಂಪರ್ಕಕ್ಕೆ ಬಂದೆನು. ಕಳೆದ ೨೩ ವರ್ಷದಲ್ಲಿ ಸಂಸ್ಥೆಯ ಕಾರ್ಯವನ್ನು ಸಮೀಪದಿಂದ ನೋಡುವ ಮತ್ತು ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶವು ನನಗೆ ಲಭಿಸಿತು. ಈ ೨೩ ವರ್ಷಗಳಲ್ಲಿ ಸಂಸ್ಥೆಯ ಕಾರ್ಯವು ಅನೇಕ ಪಟ್ಟುಗಳಲ್ಲಿ ಹೆಚ್ಚಾಯಿತು. ಆಶ್ರಮದ ನಿರ್ಮಿತಿಯಾಯಿತು, ಆಶ್ರಮದಲ್ಲಿ ಪೂರ್ಣವೇಳೆ ಸಾಧಕರ ಸಂಖ್ಯೆಯು ಹೆಚ್ಚಾಗುತ್ತಾ ಹೋಯಿತು ಮತ್ತು ಕಳೆದ ೫ ವರ್ಷಗಳಲ್ಲಿ ಅಖಿಲ ಭಾರತೀಯ ಹಿಂದೂ ಅಧಿವೇಶನಗಳಂತಹ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೆಲ್ಲವನ್ನು ಮಾಡುತ್ತಿರುವಾಗ ಯಾವಾಗಾದರೂ ಆರ್ಥಿಕ ಅಡಚಣೆ ನಿರ್ಮಾಣ ವಾಯಿತು, ಎಂಬುದು ಎಂದಿಗೂ ಆಗಲಿಲ್ಲ, ಎಂಬ ವಿಚಾರವು ಮನಸ್ಸಿನಲ್ಲಿ ನಡೆಯುತ್ತಿರುವಾಗ ಒಂದು ಪ್ರಸಂಗವು ನೆನಪಾಯಿತು.

೧೯೯೩ ರಲ್ಲಿ ಗುರುಪೂರ್ಣಿಮೆಯಿತ್ತು. ಗೋವಾದಲ್ಲಿನ ಶ್ರೀ ರಾಮನಾಥ ದೇವಸ್ಥಾನ ಕಾರ್ಯಕ್ರಮದ ಸ್ಥಳವಾಗಿತ್ತು. ಮೂರು ದಿನ ಗಳ ಕಾರ್ಯಕ್ರಮವಿತ್ತು. ಪ.ಪೂ. ಡಾಕ್ಟರರ ಗುರು ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾರವರ) ಗುರುಪೂರ್ಣಿಮೆ !
ಇದು ಸಂಸ್ಥೆಯು ಆಯೋಜಿಸಿದ ಮೊದಲನೇ ದೊಡ್ಡ ಕಾರ್ಯಕ್ರಮವಾಗಿತ್ತು. ಬಜೆಟ್ ನಿರ್ಧರಿಸಲಾಯಿತು. ಅದರ ಆಯೋಜನೆಯಾಯಿತು ಮತ್ತು ಕಾರ್ಯಕ್ರಮವೂ ಜರುಗಿತು. ಮೂರನೇ ದಿನ ದಂದು ಮರಳಿ ಹೋಗುವಾಗ ಪ.ಪೂ. ಬಾಬಾರವರು, ‘ಈ ರೀತಿಯ ಗುರುಪೂರ್ಣಿಮೆ ಇದರ ಮೊದಲು ಆಗಲಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ’, ಎಂದು ಹೇಳಿದರು. ಗುರುಪೂರ್ಣಿಮೆ ಅತ್ಯುತ್ತಮವಾಗಿದ್ದರ ಬಗೆಗಿನ ಪಾವತಿಯನ್ನು ಪ.ಪೂ. ಬಾಬಾರವರು ನೀಡಿದರು.
ಮೊದಲು ಪ.ಪೂ. ಡಾಕ್ಟರರು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡಲಿಕ್ಕಾಗಿ ಸ್ವತಃ ಅಭ್ಯಾಸವರ್ಗವನ್ನು ತೆಗೆದುಕೊಳ್ಳುತ್ತಿದ್ದರು. ವರ್ಷ ೧೯೯೩ ರ ಗುರುಪೂರ್ಣಿಮೆಯ ನಂತರ ಗೋವಾದಲ್ಲಿನ ಅಭ್ಯಾಸವರ್ಗದಲ್ಲಿ ಗುರುಪೂರ್ಣಿಮೆಯ ಕಾರ್ಯಕ್ರಮದ ಜಮಾಖರ್ಚಿನ ವರದಿಯನ್ನು ಎಲ್ಲರ ಮುಂದೆ ಹೇಳಿದರು. ಜಮೆಯಾದ ಮೊತ್ತದಿಂದ ಖರ್ಚಅನ್ನು ಕಳೆದಾಗ ಕೇವಲ ೨೧ ರೂಪಾಯಿಗಳಷ್ಟು ಉಳಿದಿದ್ದವು. ಆಗ ಪ.ಪೂ. ಡಾಕ್ಟರರು, ನೀವು ನಿಮ್ಮ ಸಾಧನೆಯೆಂದು ಈ ರೀತಿಯ ಎಷ್ಟೋ ದೊಡ್ಡ ಕಾರ್ಯಕ್ರಮಗಳ ಮತ್ತು ಉಪಕ್ರಮಗಳ ಆಯೋಜನೆಯನ್ನು ಪ್ರಾಮಾಣಿಕವಾಗಿ ಮಾಡಿದರೆ ಈಶ್ವರನು ನಿಮಗೆ ಎಂದಿಗೂ ಯಾವುದನ್ನೂ ಕಡಿಮೆ ಮಾಡಲಾರನು ಮತ್ತು ಅದಕ್ಕಿಂತ ಹೆಚ್ಚು ಸಹ ನೀಡಲಾರನು, ಎಂದು ಹೇಳಿದರು. (ಪ್ರಾರಂಭದಿಂದ ಈವರೆಗೆ ಸನಾತನ ಸಂಸ್ಥೆಯ ಬ್ಯಾಂಕ್‌ನ ಖಾತೆಯು ಈಶ್ವರನಲ್ಲಿ ಇರುವುದರಿಂದ ಸನಾತನಕ್ಕೆ ಎಂದಿಗೂ ಯಾವುದೂ ಕಡಿಮೆಯಾಗಲಿಲ್ಲ. - (ಪರಾತ್ಪರ ಗುರು) ಡಾ. ಆಠವಲೆ.) ಪ.ಪೂ. ಡಾಕ್ಟರರ ಈ ಶಬ್ದಗಳ ಅನುಭೂತಿಯನ್ನು ನಾವೆಲ್ಲ ಸಾಧಕರು ಪ್ರತಿಯೊಂದು ಕಾರ್ಯಕ್ರಮದ ಮತ್ತು ಉಪಕ್ರಮದ ಸಮಯದಲ್ಲಿ ಪಡೆಯುತ್ತಿದ್ದೇವೆ. ಗುರುದೇವರ ವಿಷಯದಲ್ಲಿ ಈ ಶಬ್ದಗಳು ಪ್ರತೀಸಲ ನೆನಪಾಗುತ್ತದೆ ಮತ್ತು ಗುರುದೇವರ ಬಗ್ಗೆ ಕೃತಜ್ಞತೆಯೆನಿಸುತ್ತದೆ. - (ಪೂ.) ಶ್ರೀ. ಪೃಥ್ವಿರಾಜ ಹಜಾರೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತಮಹೋತ್ಸವ ವರ್ಷದ ನಿಮಿತ್ತ .....