ಸನಾತನ ಸಂಸ್ಥೆಯ ತೇಜೋವಧೆ ಮಾಡಿದ ಪ್ರಕರಣದಲ್ಲಿ ದೈನಿಕ ಲೋಕಮತ ಪತ್ರಿಕೆಯ ಸಂಪಾದಕರು, ಮಾಲೀಕರು, ಪ್ರಕಾಶಕರು ಹಾಗೂ ಮುದ್ರಕರ ವಿರುದ್ಧ ಸನಾತನ ಸಂಸ್ಥೆ ಮಾನನಷ್ಟ ಪರಿಹಾರಕ್ಕಾಗಿ ದಿವಾಣಿ ಮೊಕದ್ದಮೆ ದಾಖಲು

ರಾಮನಾಥಿ (ಗೋವಾ) : ಸನಾತನ ಸಂಸ್ಥೆಯ ಧರ್ಮಪ್ರಸಾರದಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿ ಹಾಗೂ ಸಂಸ್ಧೆಯ ಬಗ್ಗೆ ಸಮಾಜದಲ್ಲಿರುವ ಹೆಸರು ಲೌಕಿಕ ಮಾಹಿತಿಯಿರುವಾಗಲೂ ಸಂಸ್ಥೆಯನ್ನು ಅಪಮಾನಿಸುವ ಉದ್ದೇಶದಿಂದ ದೈನಿಕ ಲೋಕಮತದ ಸಂಪಾದಕ ರಾಜೂ ನಾಯಕ ಇವರು ಸನಾತನದವರನ್ನು ಏನು ಮಾಡಬೇಕು? ಎಂಬ ಶೀರ್ಷಿಕೆಯಡಿಯಲ್ಲಿ ಸಂಸ್ಥೆಯ ವಿರುದ್ಧ ಮಾನಹಾನಿಕರವಾದಂತಹ ಸಂಪಾದಕೀಯವನ್ನು ಪಣಜಿ ಗೋವಾದಿಂದ ಪ್ರಕಾಶಿಸಲ್ಪಡುವ ದೈನಿಕ ಲೋಕಮತದ ಗೋವಾ ಆವೃತ್ತಿಯ ೩ ಜೂನ್ ೨೦೧೬ರ ಸಂಚಿಕೆಯಲ್ಲಿ ಮುದ್ರಿಸಿ ಸಂಸ್ಥೆಯನ್ನು ಅಪಮಾನಿಸಿತು.
ಇದರಿಂದ ಸನಾತನ ಸಂಸ್ಥೆಗೆ ಅಪಾರ ಹಾನಿಯಾಗಿದೆ. ಹಾಗಾಗಿ ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥರಾದ ಶ್ರೀ. ವೀರೇಂದ್ರ ಮರಾಠೆಯವರು ಗೌರವಾನ್ವಿತ ಕಾನೂನು ಸಲಹೆಗಾರರಾದ ಶ್ರೀ. ರಾಮದಾಸ ಕೇಸರಕರ ಮೂಲಕ ಈ ದೈನಿಕದ ಸಂಪಾದಕರು, ಮಾಲೀಕರು, ಮುದ್ರಕರು ಮತ್ತು ಪ್ರಕಾಶಕರಿಗೆ ೧೪.೭.೨೦೧೬ರಂದು ಕಾನೂನುರೀತ್ಯಾ ನೋಟೀಸ್ ಕಳಿಸಿ ೧೦ ಕೋಟಿ ರೂ. ಗಳ ಮಾನಹಾನಿಯನ್ನು ತುಂಬಿಸುವಂತೆ ಬೇಡಿಕೆಯನ್ನಿಟ್ಟಿತ್ತು. ಆದರೆ ಅವರು ಸಂಸ್ಥೆಯ ಕಾನೂನುರೀತ್ಯಾ ಬೇಡಿಕೆಯನ್ನು ಪೂರ್ತಿಗೊಳಿಸಲಿಲ್ಲ. ಆದುದರಿಂದ ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥರಾದ ಶ್ರೀ.ವೀರೇಂದ್ರ ಮರಾಠೆಯವರು ಹಿಂದುತ್ವನಿಷ್ಠ ನ್ಯಾಯವಾದಿಗಳಾದ ಶ್ರೀ. ಗಜಾನನ ನಾಯಿಕ್, ಶ್ರೀ. ನಾಗೇಶ ತಾಕಭಾತೆ, ಕು. ದೀಪಾ ತಿವಾಡಿ, ಮತ್ತು ಶ್ರೀ. ರಾಮದಾಸ ಕೇಸರಕರ ಮೂಲಕ ದೈನಿಕ ಲೋಕಮತದ ಸಂಪಾದಕ ರಾಜೂ ನಾಯಕ್, ಮಾಲೀಕ ಲೋಕಮತ ಮೀಡಿಯಾದ ಪ್ರಾ.ಲಿ. ಮುದ್ರಕ ಮತ್ತು ಪ್ರಕಾಶಕ ಬಾಲಾಜಿ ಮುಳೆ ವಿರುದ್ಧ ಮಾನನಷ್ಟ ಪರಿಹಾರವೆಂದು ೧೦ ಕೋಟಿ ರೂ. ಗಳ ದಿವಾಣಿ ಮೊಕದ್ದಮೆಯನ್ನು ಫೋಂಡಾ, ಗೋವಾ ದಲ್ಲಿನ ದಿವಾಣಿ ನ್ಯಾಯಾಧೀಶ (ವರಿಷ್ಠ ಸ್ತರ) ಇವರ ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ತೇಜೋವಧೆ ಮಾಡಿದ ಪ್ರಕರಣದಲ್ಲಿ ದೈನಿಕ ಲೋಕಮತ ಪತ್ರಿಕೆಯ ಸಂಪಾದಕರು, ಮಾಲೀಕರು, ಪ್ರಕಾಶಕರು ಹಾಗೂ ಮುದ್ರಕರ ವಿರುದ್ಧ ಸನಾತನ ಸಂಸ್ಥೆ ಮಾನನಷ್ಟ ಪರಿಹಾರಕ್ಕಾಗಿ ದಿವಾಣಿ ಮೊಕದ್ದಮೆ ದಾಖಲು