ಸ್ವಾಮಿ ವರದಾನಂದ ಭಾರತಿಯವರ ಜಯಂತಿಯ ನಿಮಿತ್ತ... ಭಾದ್ರಪದ ಶುಕ್ಲ ಪಕ್ಷ ಚತುರ್ದಶಿ (೧೫.೯.೨೦೧೬)

ಸ್ವಾಮಿ ವರದಾನಂದ ಭಾರತಿಯವರ ವಿಚಾರಧನ !
ಸ್ವಾಮಿ ವರದಾನಂದ ಭಾರತಿಯವರ ಪೂರ್ವಾಶ್ರಮದ ಹೆಸರು ಅನಂತ ದಾಮೋದರ ಆಠವಲೆ ಎಂದಾಗಿತ್ತು. ೧೯೯೧ ರಲ್ಲಿ ಅವರು ಸಂನ್ಯಾಸಾಶ್ರಮ ಸ್ವೀಕರಿಸಿ ಸ್ವಾಮಿ ವರದಾನಂದ ಭಾರತಿ ಎಂಬ ಹೆಸರನ್ನು ಧಾರಣೆ ಮಾಡಿ ದರು. ರಾಷ್ಟ್ರ, ಧರ್ಮ, ಅಧ್ಯಾತ್ಮ ಮುಂತಾದ ವಿಷಯಗಳಲ್ಲಿ ಅವರು ವಿಫುಲವಾದ ಲೇಖನಗಳನ್ನು ಬರೆದಿದ್ದಾರೆ.
ಸೆಪ್ಟೆಂಬರ್ ೧೫ ರಂದು ಇರುವ ಅವರ ಜಯಂತಿಯ ನಿಮಿತ್ತ ಮರಾಠಿ ಸಾಪ್ತಾಹಿಕ ಪಂಢರಿ ಪ್ರಹಾರದ ಸ್ವಾಮಿ ವರದಾನಂದ ಭಾರತಿ ವಿಶೇಷಾಂಕದ (ಸಂಪಾದಕರು : ಭಾಗವತಾಚಾರ್ಯ ಶ್ರೀ. ವಾ.ನಾ. ಉತ್ಪಾತ, ಏಪ್ರಿಲ್ ೧೯೯೧) ಮತ್ತು ‘ಹಿಂದೂ ಧರ್ಮ ಸಮಜುನ್ ಘ್ಯಾ’ (ಹಿಂದೂ ಧರ್ಮ ಅರಿತುಕೊಳ್ಳಿ) ಸ್ವಸ್ತಿಶ್ರೀ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕದ ವಿವಿಧ ವಿಷಯಗಳಲ್ಲಿನ ಆಯ್ದ ವಿಚಾರಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಧರ್ಮಾಚರಣೆ ಇಷ್ಟ (ಅಪೇಕ್ಷಿತ) ಮತ್ತು ಕರ್ತವ್ಯವಾಗಿದೆ !
ಮನುಷ್ಯರು ಒಂದು ಪ್ರಶ್ನೆಯನ್ನು ಯಾವಾಗಲೂ ಕೇಳುತ್ತಾರೆ, ‘ಆ ವ್ಯಕ್ತಿಯ ವರ್ತನೆ ಸರಿ ಇಲ್ಲ, ದೇವಧರ್ಮವೇನೂ ಮಾಡುವುದಿಲ್ಲ, ಕುಲಧರ್ಮ-ಕುಲಾಚಾರ ಪಾಲಿಸುವುದಿಲ್ಲ, ಭ್ರಷ್ಟನಾಗಿದ್ದಾನೆ ಆದರೂ ಅವನು ಆರಾಮವಾಗಿದ್ದಾನೆ. ನಾವು ಎಲ್ಲವನ್ನೂ ಪಾಲಿಸುತ್ತೇವೆ. ಹಾಗಿದ್ದರೆ ನಾವೇಕೆ ದುಃಖದಲ್ಲಿದ್ದೇವೆ ? ಈ ಪ್ರಶ್ನೆಯನ್ನು ಪ್ರಾಚೀನ ಕಾಲ ದಿಂದಲೂ ಕೇಳುತ್ತಿದ್ದರು. ಮಹಾಭಾರತದಲ್ಲಿ ದ್ರೌಪದಿಯು ಧರ್ಮರಾಜನಿಗೆ ಕೇಳುತ್ತಾಳೆ, ಕೌರವರು ಅಧರ್ಮಿಗಳಾಗಿದ್ದಾರೆ. ಆದರೂ ಸುಖ ಭೋಗಿಸು ತ್ತಿದ್ದಾರೆ, ನೀವು ಮಾತ್ರ ಧರ್ಮಾಚರಣೆ ಮಾಡಿ ದುಃಖ ಭೋಗಿಸುತ್ತಿದ್ದೀರಿ. ಧರ್ಮಾಚರಣೆಗೆ ಇದೇ ಫಲವೇ ? ಅದಕ್ಕೆ ಧರ್ಮರಾಜನು, ‘ನಾನು ವ್ಯಾಪಾರವೆಂದು ಧರ್ಮಾಚರಣೆ ಮಾಡುವುದಿಲ್ಲ. ಇಷ್ಟ ಮತ್ತು ಕರ್ತವ್ಯ ವೆಂದು ಧರ್ಮಾಚರಣೆ ಮಾಡುತ್ತೇನೆ’ ಎನ್ನುತ್ತಾನೆ. ಕೆಲವರ ಆರೋಗ್ಯ ಚೆನ್ನಾಗಿರುತ್ತದೆ. ಅವರು ಎಷ್ಟೇ ಕುಪಥ್ಯ ಮಾಡಿದರೂ ಅವರಿಗೇನೂ ಆಗುವುದಿಲ್ಲ. ಅವರು ಗಟ್ಟಿಮುಟ್ಟಾಗಿರುತ್ತಾರೆ. ಕೆಲವರ ಆರೋಗ್ಯ ಇಷ್ಟು ಸೂಕವಾಗಿರುತ್ತದೆಯೆಂದರೆ ಅವರಿಗೆ ಸ್ವಲ್ಪ ಅಪಥ್ಯವಾದರೂ ಅನಾರೋಗ್ಯಕ್ಕೊಳಗಾಗುತ್ತಾರೆ. ಹಾಗಾದರೆ, ‘ವೈದ್ಯರೇ ಇದೇನು ಅನ್ಯಾಯ ? ಅವನ ವರ್ತನೆ ಇಷ್ಟು ಕೆಟ್ಟದಾಗಿದ್ದರೂ ಅವನ ಆರೋಗ್ಯ ಚೆನ್ನಾಗಿದೆ ಮತ್ತು ನಾವು ಇಷ್ಟು ಪಥ್ಯ ಪಾಲಿಸಿದರೂ ನಮ್ಮ ಆರೋಗ್ಯ ಹೀಗಿದೆ ಎಂದು ಹೇಳುವಿರಾ ? ಪಾಪ ಮಾಡಿ ಆರಾಮವಾಗಿರುವ ವಿಷಯದಲ್ಲಿಯೂ ಹೀಗೆಯೇ ಹೇಳಬಹುದು. ಕೆಲವರಿಗೆ ಪಾಪದ ಫಲ ಕೂಡಲೇ ದೊರೆತರೆ ಕೆಲವರಿಗೆ ಅವರ ಪುಣ್ಯದಿಂದಾಗಿ ಪ್ರತಿಕಾರ ಕ್ಷಮತೆ ಇರುವುದರಿಂದ ಪಾಪದ ಫಲವನ್ನು ತಡವಾಗಿ ಭೋಗಿಸಬೇಕಾಗುತ್ತದೆ. ಸಣ್ಣವನಿರುವಾಗ ದೇಹಕ್ಕಾದ ಪೆಟ್ಟು ಆ ಸಮಯದಲ್ಲಿ ತೊಂದರೆ ಕೊಡುವುದಿಲ್ಲ, ಆದರೆ ವಯಸ್ಸಾದ ನಂತರ ನೋವು ಉದ್ಭವಿಸುತ್ತದೆ. ನಾಯಿ ಕಚ್ಚಿದ ನಂತರ ಹೆಚ್ಚಾಗಿ ೧೦-೧೫ ವರ್ಷಗಳ ನಂತರ ರೊಗ ಉದ್ಭವಿಸುತ್ತದೆ. ಮಣ್ಣಿನ ಕಲ್ಲು ಸುತ್ತಿಗೆಯಿಂದ ಬೇಗನೆ ಪುಡಿಯಾಗುತ್ತದೆ. ಪಾದೆ ಕಲ್ಲು ತುಂಬ ಸಮಯದ ನಂತರ ಒಡೆಯುತ್ತದೆ. ಅದೇ ರೀತಿ ಪಾಪದ ಪರಿಣಾಮವು ಕೆಲವರು ಕೂಡಲೇ ಮತ್ತು ಕೆಲವರು ಕಾಲಾಂತರದಲ್ಲಿ ಭೋಗಿಸಬೇಕಾಗುತ್ತದೆ. ನ್ಯಾಯದ ಸುತ್ತಿಗೆ ಎರಡನ್ನೂ ಒಡೆಯುತ್ತದೆ !
ಈಶ್ವರನ ಅಸ್ತಿತ್ವ : ಸಂತರ ವಾಕ್ಯದ ಮೇಲೆ ವಿಶ್ವಾಸವಿಡಿ !
ಪೃಥ್ವಿ ತಟ್ಟೆಯಂತೆ ದುಂಡಗಿದೆ ಎಂದು ತಿಳಿಯುತ್ತದೆ. ಆದರೆ ಪೃಥ್ವಿ ಚೆಂಡಿನಂತೆ ಗೋಲಾಕಾರವಾಗಿದೆ ಎಂಬುದು ಅನುಭವಕ್ಕೆ ಬರುವುದಿಲ್ಲ. ಅಲ್ಲದೇ ಕಟ್ಟಡವನ್ನು ಕಟ್ಟಲು ಬಿಡಿಸುವ ನಕಾಶೆಯನ್ನೂ ಪೃಥ್ವಿ ಸಮತಟ್ಟಾಗಿದೆ ಎಂದು ತಿಳಿದುಕೊಂಡೇ ಬಿಡಿಸುತ್ತಾರೆ. ಪೃಥ್ವಿಯ ತಳಭಾಗ ವಕ್ರವಾಗಿದೆ ಎಂದು ತಿಳಿದರೆ ಲಂಬಕೋನ ತಯಾರಾಗುವುದೇ ಇಲ್ಲ. ದೊಡ್ಡ ದೊಡ್ಡ ಅಭಿಯಂತರರಿಗೂ ಉಪಯೊಗಕ್ಕೆ ಬಾರದ ಪೃಥ್ವಿ ಗೋಲಾಕಾರವಾಗಿದೆ ಎಂಬ ಜ್ಞಾನವನ್ನು ಎಂಟನೇ ವಯಸ್ಸಿನ ಮಕ್ಕಳಿಗೆ ಕಲಿಸುತ್ತಾರೆ. ಅದೇಕೆ ? ಅನುಭವವಿಲ್ಲದಿದ್ದರೂ ವಿಜ್ಞಾನಿಗಳ ಮೇಲೆ ಭರವಸೆ ಯನ್ನಿಟ್ಟು ಒಪ್ಪುವ ಪ್ರಮೇಯ ಬರುತ್ತದೆಯಲ್ಲ !
ಹೀಗಿರುವಾಗ ನಮಗೆ ಸ್ವತಃ ಈಶ್ವರನ ಬಗ್ಗೆ ಅನುಭವ ವಿಲ್ಲದಿದ್ದರೂ ಅವನ ಅನುಭವ ಬಂದಿರುವ ಸಂತರ ಮೇಲೆ ವಿಶ್ವಾಸವನ್ನಿಟ್ಟು ಈಶ್ವರನಿದ್ದಾನೆ ಎಂದು ಏಕೆ ಒಪ್ಪಬಾರದು ?
ಡಾರ್ವಿನ್ ಮತ್ತು ಹಿಂದೂಗಳ ಶಾಸ್ತ್ರ !
ಡಾರ್ವಿನ್ ಉತ್ಕ್ರಾಂತಿವಾದದ ಸಿದ್ಧಾಂತ ಹೀಗೆನ್ನುತ್ತದೆ, ವಿಶ್ವವು ಒಂದರಿಂದ ಇನ್ನೊಂದು ಈ ಕ್ರಮದಲ್ಲಿ ಉತ್ಕ್ರಾಂತವಾಗುತ್ತಾ ಹೋಯಿತು. ಮಂಗನಿಂದ ಮಾನವನ ವಿಕಾಸವಾಯಿತು. ಹಾಗಿ ದ್ದರೆ, ಜಗತ್ತಿನಲ್ಲಿ ಮಂಗಗಳು ಏಕೆ ಉಳಿದವು ? ಎಲ್ಲವೂ ಏಕೆ ಮನುಷ್ಯರಾಗಲಿಲ್ಲ ? ಎಂದು ನಾನು ಕೇಳುತ್ತೇನೆ.ನಮ್ಮ ಶಾಸ್ತ್ರ ಹೀಗೆ ಹೇಳುತ್ತದೆ, ಈಶ್ವರನು ಈ ಜಗತ್ತು, ಅದರಲ್ಲಿನ ವಸ್ತು, ಪ್ರಾಣಿ ಹೀಗೆ ಒಂದರನಂತರ ಒಂದನ್ನು ನಿರ್ಮಿಸಿದನು. ಹಾಗಾಗಿ ಮೊದಲ ನಿರ್ಮಿತಿ ಉಳಿದು ಇನ್ನೊಂದರ ನಿರ್ಮಿತಿಯಾಯಿತು. ಆದರೂ ಈಶ್ವರನಿಗೆ ಸಮಾಧಾನ ಸಿಗಲಿಲ್ಲ; ಅವನು ಬ್ರಹ್ಮಾವಲೋಕಧೀಷಣ (ಬ್ರಹ್ಮನ ಕಡೆಗೆ ನೋಡುವವನು, ಅವನನ್ನು ಅರಿಯುವವನು, ಕಾರ್ಯದ ಹಿಂದಿನ ಕಾರಣ ಹುಡುಕುವವನು) ಮನುಷ್ಯರನ್ನು ನಿರ್ಮಿಸಿದನು. ಆಮೇಲೆ ನಿರ್ಮಾಪಕ ನಿಗೆ ಸಂತೋಷವಾಯಿತು; ಆದರೆ ಮನುಷ್ಯನನ್ನು ನಿರ್ಮಿಸಿದ ಈಶ್ವರನ ಉದ್ದೇಶವು ಸಫಲವಾಗಲಿಲ್ಲ. ಅವನು ಬ್ರಹ್ಮನ ಕಡೆಗೆ ನೋಡುವ ಬದಲು ಭೋಗದ ಕಡೆಗೆ ನೋಡತೊಡಗಿದನು !
ಮನುಷ್ಯನು ಅಧೋಗತಿಯತ್ತ ಹೋಗುತ್ತಿದ್ದಾನೆ !
ಮಾನವನು ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುತ್ತಿದ್ದಾನೆ ಎಂದು ವಿಜ್ಞಾನಿಗಳು ಹೇಳುತ್ತಾರೆ; ಆದರೆ ನಮ್ಮ ಶಾಸ್ತ್ರಕ್ಕನುಸಾರ ಮಾನವನು ಉತ್ತರೋತ್ತರ ಅಧೋಗತಿಗೆ ಹೋಗುತ್ತಿದ್ದಾನೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯವಂತರಿದ್ದರು. ಧಾರ್ಮಿಕವಾಗಿ ವರ್ತಿಸುತ್ತಿದ್ದರು. ಹಾಗಾಗಿ ರಾಜನಿರ ಲಿಲ್ಲ, ಕಾನೂನುಗಳಿರಲಿಲ್ಲ, ಶಿಕ್ಷೆಗಳಿರಲಿಲ್ಲ; ಆದರೆ ಸೃಷ್ಟಿಯಲ್ಲಿರುವುದು ಹಾಗೆಯೇ ಇರುವುದಿಲ್ಲ ಎಂಬ ನಿಯಮವಿದೆ. ಸತ್ಯಯುಗದಲ್ಲಿ ಎಲ್ಲವೂ ಇತ್ತು. ಬಹಳ ಸಂಪನ್ನತೆಯಿತ್ತು, ಅದರ ಮೇಲೆ ನಿಯಂತ್ರಣವಿರಲಿಲ್ಲ. ಶರೀರ ದಪ್ಪಗಾಯಿತು. ವಿಕೃತಿ ನಿರ್ಮಾಣವಾಯಿತು, ದಣಿವು ಆರಂಭವಾಯಿತು. ಆಲಸ್ಯ ನಿರ್ಮಾಣವಾಯಿತು. ಅದರಿಂದಾಗಿ ಸಂಗ್ರಹಮಾಡಲಾರಂಭಿಸಿದರು. ಅದರಿಂದ ಲೋಭ ನಿರ್ಮಾಣವಾಯಿತು. ಅದರಿಂದ ಇತರ ವಿಕೃತಿಗಳು ಉದ್ಭವಿಸಿ ದವು ಮತ್ತು ಮಾನವನು ಅರ್ಧಪತನದತ್ತ ಸಾಗಿದನು. ಒಂದು ರೋಗದಿಂದ ಇನ್ನೊಂದು ರೋಗ ನಿರ್ಮಾಣ ವಾದಂತೆ ಒಂದು ವಿಕೃತಿಯಿಂದ ಇನ್ನೊಂದು ವಿಕೃತಿ ನಿರ್ಮಾಣವಾಯಿತು. ಹಾಗಾಗಿ ಮಾನವನು ಉತ್ತರೋತ್ತರ ಅಧೋಗತಿಯತ್ತ ಸಾಗುತ್ತಿದ್ದಾನೆ ಎಂಬುದು ಕಟುಸತ್ಯವಾಗಿದೆ.
ಸ್ವಾತಂತ್ರ್ಯಾ ನಂತರವೂ ಆಂಗ್ಲರ ಗುಲಾಮರಾಗಿ ಉಳಿದ ಭಾರತೀಯರು !
ಸ್ವರಾಜ್ಯ ದೊರೆಯುವ ಮೊದಲು ನಾವೆಷ್ಟು ಆಂಗ್ಲರ ಗುಲಾಮರಾಗಿದ್ದೆವೋ ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ನಾವು ಈಗ ಆಂಗ್ಲರ ಗುಲಾಮರಾಗಿ ದ್ದೇವೆ. ನಮ್ಮ ಸಭ್ಯತೆ ಆಂಗ್ಲ ಸಭ್ಯತೆಯಾಗಿದೆ. ನಮ್ಮ ವಿಚಾರಧಾರೆ ಆಂಗ್ಲರ ವಿಚಾರಧಾರೆಯಾಗಿದೆ. ನಿರ್ಣಯ ತೆಗೆದುಕೊಳ್ಳುವ ನಮ್ಮ ಪದ್ಧತಿ ಆಂಗ್ಲರ ಪದ್ಧತಿಯಾಗಿದೆ.
ಧರ್ಮವನ್ನು ಉಲ್ಲಂಘಿಸಿದರೆ ಏನಾಗುತ್ತದೆ ?
ಧರ್ಮವಿದ್ದರೇ ರಾಷ್ಟ್ರವು ಸುಖ ಮತ್ತು ಶಾಂತ ವಾಗಿರುತ್ತದೆ. ಸಂಘರ್ಷರಹಿತ, ಶಾಂತ ಮತ್ತು ಸಮಾಧಾನದ ಜೀವನಕ್ಕಾಗಿ ಧರ್ಮ ಆವಶ್ಯಕವಾಗಿದೆ. ಧರ್ಮವು ಆಚಾರದ ವಿಷಯವಾಗಿದೆ. ಬಾಹ್ಯ ವಿಷಯಗಳಿಂದ ಧರ್ಮವು ನಿರ್ಧರಿಸಲ್ಪಡುವುದಿಲ್ಲ. ಧರ್ಮ ಉಲ್ಲಂಘಿಸಿದರೆ ಏನಾಗುತ್ತದೆ ? ಎಂದು ಜನರು ಹೇಳುತ್ತಾರೆ. ಆರೋಗ್ಯದ ನಿಯಮ ಉಲ್ಲಂಘಿಸಿದರೆ ಶರೀರಕ್ಕಾಗುವುದೇ ಧರ್ಮವನ್ನು ಉಲ್ಲಂಘಿಸಿದಾಗ ಸಮಾಜಕ್ಕಾಗುತ್ತದೆ. ಆರೋಗ್ಯದ ನಿಯಮಗಳನ್ನು ಉಲ್ಲಂಘಿಸಿದರೆ ಶರೀರದಲ್ಲಿ ರೋಗಗಳುಂಟಾಗುತ್ತವೆ. ಧರ್ಮ ಉಲ್ಲಂಘಿಸಿದರೆ ಸಮಾಜ ದಲ್ಲಿ ಭ್ರಷ್ಟಾಚಾರ, ಅನೀತಿ, ಅಪರಾಧ ಇತ್ಯಾದಿ ರೋಗಗಳ ನಿರ್ಮಾಣವಾಗುತ್ತದೆ.
ಪಾಶ್ಚಾತ್ಯ ಶಿಕ್ಷಣಪದ್ಧತಿಯಿಂದಾದ ಹಾನಿ !
ಶಿಕ್ಷಣದಲ್ಲಿ ಬದಲಾಗಬೇಕು ಎಂದು ಎಲ್ಲರೂ ಹೇಳುತ್ತಾರೆ; ಆದರೆ ೧೧, ೧೨ ನೇ ತರಗತಿಯನ್ನು ಮಹಾವಿದ್ಯಾಲಯಕ್ಕೆ ಜೋಡಿಸಬೇಕೇ, ಶಾಲೆಗೆ ಜೋಡಿಸಬೇಕೇ ಎಂದಷ್ಟೇ ಬದಲಾವಣೆಯಾಗುತ್ತದೆ. ನಮಗೆ ಸಮೃದ್ಧ ಶೈಕ್ಷಣಿಕ ಸೊತ್ತು ದೊರೆತಿದೆ. ಆದರೆ ನಾವು ಅದನ್ನು ಸ್ವೀಕರಿಸುವುದಿಲ್ಲ. ನಾಣ್ಯಗಳನ್ನು ಹೂತಿಟ್ಟ ಜಾಗದಲ್ಲಿ ಕುಳಿತು ಭಿಕ್ಷೆ ಬೇಡುವವರಂತೆ ನಾವು ಕೇವಲ ಭಿಕ್ಷಾಪಾತ್ರೆಗಳಾಗಿದ್ದೇವೆ. ಹಿಂದಿನ ಕಾಲದ ಶಿಕ್ಷಣ ಪದ್ಧತಿಯಲ್ಲಿ ಸುಶ್ರುತರಂತಹ ಶಸ್ತ್ರ ಚಿಕಿತ್ಸಜ್ಞರು ನಿರ್ಮಾಣವಾದರು.ಮೀನಾಕ್ಷಿ ಮಂದಿರ, ಅಬೂ ಪರ್ವತದ ಮೇಲಿನ ಭಿಲವಾಡಾ ದೇವಸ್ಥಾನ ಕಟ್ಟುವ ಕುಶಲಕರ್ಮಿಗಳು ನಿರ್ಮಾಣರಾದರು. ಅತ್ಯಂತ ನಯವಾದ ಬಟ್ಟೆಗಳನ್ನು ನಿರ್ಮಿಸುವ ನೇಕಾರರು ನಿರ್ಮಾಣವಾದರು. ಆ ಶಿಕ್ಷಣ ಪದ್ಧತಿಯ ಬಗ್ಗೆ ಅಂತರ್ಮುಖರಾಗಿ ವಿಚಾರ ಮಾಡುತ್ತೇವೋ ಇಲ್ಲವೋ ? ಇಂದು ಒಬ್ಬ ಅಭಿಯಂತರ ಅಥವಾ ಡಾಕ್ಟರರನ್ನು ನಿರ್ಮಿಸಲು ಸರಕಾರಕ್ಕೆ ಲಕ್ಷಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಇದೇ ಶಿಕ್ಷಣ ಪರಂಪರಾಗತ ಪದ್ಧತಿಯಿಂದ ಉಚಿತವಾಗಿ ಸಿಗುತ್ತಿತ್ತು. ಆದರೆ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಿಂದಾಗಿ ನಾವು ನಮ್ಮ ಒಳ್ಳೆಯ ಶಿಕ್ಷಣ ಪದ್ಧತಿಯನ್ನು ನಾಶಗೊಳಿಸಿದೆವು. ಆಧುನಿಕ ಶಿಕ್ಷಣ ಪಡೆದ ಒಬ್ಬ ವಿದ್ಯಾರ್ಥಿಯಾದರೂ ಮೀನಾಕ್ಷಿಯಂತಹ ದೇವಸ್ಥಾನವನ್ನು ಕಟ್ಟಿದ್ದಾನೆಯೇ ? ಹೀಗೆ ಪ್ರತಿಯೊಂದು ಶಾಸ್ತ್ರದ ಬಗ್ಗೆ ಹೇಳಬಹುದು; ಹಾಗಾಗಿ ಪ್ರಾಚೀನ ಶಿಕ್ಷಣಪದ್ಧತಿಯನ್ನಾಧರಿಸಿದ ಶಿಕ್ಷಣ ವ್ಯವಸ್ಥೆ ನಿರ್ಮಾಣವಾಗಬೇಕು.
ಸಂಸ್ಕೃತದಲ್ಲಿ ಬೀಗ ಎಂಬರ್ಥದ ಶಬ್ದವಿಲ್ಲ !
ಈ ದೇಶದಲ್ಲಿ ಪ್ರಾಚೀನ ಕಾಲದಲ್ಲಿ ಜನರು ಪ್ರಾಮಾಣಿಕರಾಗಿದ್ದರು. ಚೀನಾದಿಂದ ಬಂದ ಪ್ರವಾಸಿ ಗನು ಹೀಗೆ ಬರೆದಿದ್ದಾನೆ, ಜನರು ಮನೆಗಳಿಗೆ ಬೀಗ ಹಾಕುವುದಿಲ್ಲ, ರಘುರಾಜನ ನಗರದಲ್ಲಿ ಕುಬೇರನು ಸುವರ್ಣಮುದ್ರೆಗಳ ಮಳೆ ಸುರಿಸಿದರೂ ಯಾರೂ ಒಂದು ನಾಣ್ಯಗಳನ್ನೂ ಎತ್ತಿಕೊಳ್ಳುವುದಿಲ್ಲ.ಲಕ್ಷಗಟ್ಟಲೆ ಶಬ್ದಗಳಿರುವ ಸಂಸ್ಕೃತ ಭಾಷೆಯಲ್ಲಿ ಬೀಗ ಎಂಬ ಶಬ್ದವೇ ಇಲ್ಲ. ಇದರ ಅರ್ಥ ಕಳ್ಳತನ ಆಗುತ್ತಿರಲಿಲ್ಲ ಹಾಗಾಗಿ ಬೀಗದ ಸಂಸ್ಕೃತಿ ಇರಲಿಲ್ಲ. ಸಂಸ್ಕೃತಿ ಉಚ್ಚವಾಗಿತ್ತು ಎಂಬುದಕ್ಕೆ ಇನ್ನೇನು ದಾಖಲೆ ಬೇಕು ?
ರಾಮರಾಜ್ಯ ಏಕೆ ಬೇಕು ?
ರಾಮರಾಜ್ಯದಲ್ಲಿ ಜನಮತಕ್ಕೆ ಇದ್ದಷ್ಟು ಬೆಲೆ ಪ್ರಜಾರಾಜ್ಯ (ಪ್ರಜಾತಂತ್ರ)ದಲ್ಲಿದೆಯೇ ? ಒಬ್ಬ ಸಾಮಾನ್ಯ ಅಗಸನ ಅಪವಾದಕ್ಕಾಗಿ ಪ್ರಾಣಕ್ಕಿಂತ ಪ್ರಿಯಳಾಗಿದ್ದ ಪತ್ನಿಯನ್ನು ತ್ಯಜಿಸಿದನು; ಆದರೆ ಇಂದಿನ ಪ್ರಜಾಪ್ರಭುತ್ವದಲ್ಲಿ ಭ್ರಷ್ಟಾಚಾರದ ಬಗ್ಗೆ ಆಯೋಗವನ್ನು ನೇಮಿಸಿ ಭ್ರಷ್ಟಾಚಾರ ಸಿದ್ಧವಾದರೂ ರಾಜಕಾರಣಿಗಳು ಕುರ್ಚಿಯ ತ್ಯಾಗ ಮಾಡುವುದಿಲ್ಲ. ಇದು ರಾಮರಾಜ್ಯ ಹಾಗೂ ಪ್ರಜಾರಾಜ್ಯದ ನಡುವಿನ ವ್ಯತ್ಯಾಸವಾಗಿದೆ.
ಈಶ್ವರನ ದಾಖಲೆ ಕೇಳುವವರು ಮೊದಲು ವಿಜ್ಞಾನದ ದಾಖಲೆ ನೀಡಲಿ !
ಈಶ್ವರನ ದಾಖಲೆ ಕೇಳುತ್ತೀರಿ ? ಹಾಗಿದ್ದರೆ ವಿಜ್ಞಾನದ ದಾಖಲೆ ನೀಡಿ, ಗುರುತ್ವಾಕರ್ಷಣೆ ಇದ್ದರೆ ಮರ ಏಕೆ ಮೇಲಿನ ದಿಕ್ಕಿನಲ್ಲಿ ಬೆಳೆಯುತ್ತದೆ ? ಉಷ್ಣತೆಯು ಪ್ರಸರಣ ಮಾಡುತ್ತದೆ ಮತ್ತು ಶೀತಲತೆ ಆಕುಂಚನ ಮಾಡುತ್ತದೆ, ಹಾಗಿದ್ದರೆ ಶೂನ್ಯ ತಾಪಮಾನ ದಲ್ಲಿ ನೀರು ಏಕೆ ಪ್ರಸರಣಗೊಳ್ಳುತ್ತದೆ ? ಗಣಿತ ದಲ್ಲಿ ವಜಾವಜಾ = + ಹೇಗಾಗುತ್ತದೆ ? ಬಿಂದುವಿಗೆ ಉದ, ಅಗಲ, ಎತ್ತರ, ದಪ್ಪತನ ಇಲ್ಲದಿದ್ದರೆ ಅದನ್ನು ಕಾಗದದ ಮೇಲೆ ಹೇಗೆ ಬಿಡಿಸುತ್ತಾರೆ ? ಇದೆಲ್ಲವನ್ನು ವಿಜ್ಞಾನಿಗಳು ಹೇಳುತ್ತಾರೆ ಹಾಗಾಗಿ ನಾವು ವಿಶ್ವಾವಿಡುತ್ತೇವೆ. ಹಾಗಿದ್ದರೆ ಈಶ್ವರನ ಬಗ್ಗೆ ಸಂತರು, ಆಚಾರ್ಯರು ಹೇಳುವುದರ ಮೇಲೆ ವಿಶ್ವಾಸವಿಟ್ಟರೆ ಏನು
 ತಪ್ಪಾಗುತ್ತದೆ ? - ಸ್ವಾಮಿ ವರದಾನಂದ ಭಾರತಿ

ಈ ರಾಷ್ಟ್ರ ಹಿಂದೂ
ರಾಷ್ಟ್ರವಾಗಿತ್ತು ಮತ್ತು ಆಗಿದೆ !
ಧರ್ಮ ಮತ್ತು ರಾಷ್ಟ್ರ ಬೇರೆ ಬೇರೆ ಅಲ್ಲ. ನಮ್ಮ ಧರ್ಮಪುರುಷರೆಲ್ಲ ರಾಷ್ಟ್ರಪುರುಷರಾಗಿದ್ದಾರೆ ಮತ್ತು ರಾಷ್ಟ್ರಪುರುಷರೂ ಧರ್ಮವನ್ನು ಪಾಲಿಸು
ವವರಾಗಿದ್ದರು. ದೇವರ ಕಾಲುಗಳನ್ನು ತೊಳೆಯು ವಾಗಲೂ ಈ ರಾಷ್ಟ್ರಕ್ಕೆ ಬಲ ಪ್ರಾಪ್ತವಾಗಲಿ, ಎಂದು ನಾವು ಮಂತ್ರವನ್ನು ಹೇಳುತ್ತೇವೆ. ಮಂತ್ರಪುಷ್ಪಾಂಜಲಿಯಲ್ಲಿಯೂ ಸಮುದ್ರದ ತನಕ ಒಂದು ರಾಷ್ಟ್ರವಾಗಲಿ ಎಂದೇ ಪ್ರಾರ್ಥಿಸುತ್ತೇವೆ. ಧರ್ಮದ ಎಲ್ಲ ಮಂತ್ರಗಳು ರಾಷ್ಟ್ರಕಲ್ಯಾಣಕ್ಕೇ ಸಂಬಂಧಿಸಿವೆ. ಧರ್ಮ ಮತ್ತು ರಾಷ್ಟ್ರ ಹಿಂದೆಯೂ ಎಂದಿಗೂ ಬೇರೆಯಾಗಿರಲಿಲ್ಲ, ಇಂದಿಗೂ ಇಲ್ಲ. ಕೇವಲ ರಾಜ್ಯಾಡಳಿತ ಬೇರೆಯಾಗಿರಬಹುದು. ರಾಜ್ಯಾಡಳಿತ ಬೇರೆ ಮತ್ತು ರಾಷ್ಟ್ರ ಬೇರೆಯಾಗಿದೆ. ರಾಜ್ಯಾಡಳಿತ ಕೆಲವೊಮ್ಮೆ ಮುಸಲ್ಮಾನರದ್ದಾಗಿತ್ತು ಮತ್ತು ಕೆಲವೊಮ್ಮೆ ಕ್ರೈಸ್ತರದ್ದಾಗಿತ್ತು; ಆದರೆ ಈ ರಾಷ್ಟ್ರ ಮಾತ್ರ ಹಿಂದೂ ರಾಷ್ಟ್ರವೇ ಆಗಿತ್ತು ಮತ್ತು ಆಗಿದೆ. - ಸ್ವಾಮಿ ವರದಾನಂದ ಭಾರತಿ.
ಇಂತಹ ಅಮೂಲ್ಯ ವಿಚಾರಧನವನ್ನು
ನೀಡಿದ ಸ್ವಾಮಿ ವರದಾನಂದ ಭಾರತಿಯವರಿಗೆ ಕೋಟಿ ಕೋಟಿ ಪ್ರಣಾಮಗಳು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸ್ವಾಮಿ ವರದಾನಂದ ಭಾರತಿಯವರ ಜಯಂತಿಯ ನಿಮಿತ್ತ... ಭಾದ್ರಪದ ಶುಕ್ಲ ಪಕ್ಷ ಚತುರ್ದಶಿ (೧೫.೯.೨೦೧೬)