ಕೇಂದ್ರಸರಕಾರವು ಅಲ್ಪಸಂಖ್ಯಾತರಿಗಾಗಿ ೬, ೫೦೦ ಕೋಟಿ ಹಣ ವೆಚ್ಚ ಮಾಡಿ ಸದ್ಭಾವನಾ ಮಂಟಪವನ್ನು ನಿರ್ಮಿಸಲಿದೆ !

ಹಿಂದೂಗಳ ತೆರಿಗೆಯ ಹಣವನ್ನು ಮುಸಲ್ಮಾನರಿಗಾಗಿ ವೆಚ್ಚ ಮಾಡುವ ಎಲ್ಲ ಪಕ್ಷಗಳ ಸರಕಾರ !
ಕಾಂಗ್ರೆಸ್ಸಿನ ರಾಜ್ಯದಲ್ಲಿ ಏನು ನಡೆದಿದೆಯೋ, ಅದೇ ಈಗಲೂ ನಡೆದಿದೆ !
ನವ ದೆಹಲಿ : ಇಡೀ ದೇಶದಲ್ಲಿ ಧಾರ್ಮಿಕ ಸದ್ಭಾವನೆ ನಿರ್ಮಾಣಕ್ಕಾಗಿ ಕೇಂದ್ರಸರಕಾರದ ವತಿಯಿಂದ ಪ್ರತಿಯೊಂದು ರಾಜ್ಯದಲ್ಲಿ ಸದ್ಭಾವನಾ ಮಂಟಪವನ್ನು ನಿರ್ಮಿಸಲಿದ್ದಾರೆ. ಈ ವಿಶೇಷ ಯೋಜನೆ ಯನ್ನು ಅಲ್ಪಸಂಖ್ಯಾತರಿಗಾಗಿ ಇದ್ದು, ಇದಕ್ಕಾಗಿ ಅಂದಾಜು ೬, ೫೦೦ ಕೋಟಿಗಳಷ್ಟು ಮೊತ್ತ ವೆಚ್ಚವಾಗ ಲಿದೆ. (ಕೇವಲ ಅಲ್ಪಸಂಖ್ಯಾತರಿಗಾಗಿ ಯೋಜನೆಯು ಪ್ರಾರಂಭಿಸಿದರೆ ಅದರ ಹೆಸರು ಸದ್ಭಾವನಾ ಹೇಗಾಗು ವುದು ? ಈ ರೀತಿಯಿಂದ ಬಹುಸಂಖ್ಯಾತ ಹಿಂದೂಗಳಲ್ಲಿ ದ್ವೇಷ ಭಾವನೆಯೇ ನಿರ್ಮಾಣವಾಗುವುದು ! ಸರಕಾರಕ್ಕೆ ಯೋಜನೆಯನ್ನು ಪ್ರಾರಂಭಿಸುವುದಿದ್ದರೆ, ಸರ್ವಧರ್ಮ ದವರನ್ನು ಸಮಾನತೆಯಿಂದ ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿದರೆ ಮಾತ್ರ ಸದ್ಭಾವನೆ ನಿರ್ಮಾಣವಾಗುವುದು ! - ಸಂಪಾದಕರು)
ಈ ಕೇಂದ್ರದಲ್ಲಿ ಅಲ್ಪಸಂಖ್ಯಾತರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಲಾಗುವುದು. ಹಾಗೆಯೇ ಅಲ್ಲಿ ಸಲಹೆ, ದೂರು ನಿವಾರಣೆ ಕೇಂದ್ರವೂ ಇರಲಿದೆ. ಅಲ್ಪಸಂಖ್ಯಾತರು ವಿವಾಹ ಸಮಾರಂಭ ಮತ್ತು ಇತರ ಮಹತ್ವದ ಕಾರ್ಯಗಳಿಗಾಗಿ ಈ ಸಭಾಗೃಹವನ್ನು ಉಪಯೋಗಿಸಬಹುದು. ಈ ಯೋಜನೆಯನ್ನು ಈ ಹಿಂದಿನ ಸರಕಾರವೂ ಮಂಡಿಸಿತ್ತು. ಈಗಿನ ಸರಕಾರವು ಈ ಯೋಜನೆಗೆ ಮಾನ್ಯ ಪ್ರಧಾನಮಂತ್ರಿ ಜನವಿಕಾಸ ಯೋಜನೆಯೆಂದು ಹೆಸರನ್ನು ನೀಡಿದೆ. ಈ ಯೋಜನೆಯಡಿಯಲ್ಲಿ ಸದ್ಭಾವನಾ ಮಂಟಪವನ್ನು ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಯ ಕಾರ್ಯವು ಕೇಂದ್ರೀಯ ಅಲ್ಪಸಂಖ್ಯಾತ ಸಚಿವಾಲಯದ ಉಸ್ತುವಾರಿ ಯಲ್ಲಿ ನಡೆಯಲಿದೆ. ಈ ಯೋಜನೆಯಲ್ಲಿ ಇಲ್ಲಿಯ ವರೆಗೆ ರಾಜ್ಯಗಳ ಮೇಲೆ ಹೆಚ್ಚಿನ ಜವಾಬ್ದಾರಿಗಳಿದ್ದವು; ಆದರೆ ಇನ್ನು ಮುಂದೆ ಕೇಂದ್ರ ಸರಕಾರವೇ ಸಂಪೂರ್ಣ ಜವಾಬ್ದಾರಿಯನ್ನು ಹೊರಲಿದೆ.
ಇನ್ನೊಂದೆಡೆ ಕಾಶ್ಮೀರದಲ್ಲಿ ಲೇಹ, ಜಮ್ಮೂ ಮತ್ತು ಕಾರ್ಗಿಲನಲ್ಲಿ ಸ್ಥಳೀಯ ಯುವಕರಿಗಾಗಿ ಉದ್ಯೋಗಾವಕಾಶ ಒದಗಿಸುವ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಇದರಿಂದ ಕಾಶ್ಮೀರದ ಯುವಕರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಒದಗಲಿದೆಯೆನ್ನುವ ವಿಶ್ವಾಸವನ್ನು ಕೇಂದ್ರೀಯ ಅಲ್ಪ ಸಂಖ್ಯಾತ ಮಂತ್ರಿಗಳಾದ ಮುಕ್ತಾರ ಅಬ್ಬಾಸ ನಕ್ವಿ ತಿಳಿಸಿದ್ದಾರೆ. (ಹಗಲುಗನಸಿನಲ್ಲಿ ರಮಿಸುವ ಕೇಂದ್ರ ಅಲ್ಪಸಂಖ್ಯಾತ ಮಂತ್ರಿಗಳು ! ಇಲ್ಲಿಯವರೆಗೆ ಕಾಶ್ಮೀರಿ ಜನತೆಗಾಗಿ ನೀರಿನಂತೆ ಹಣವನ್ನು ವೆಚ್ಚ ಮಾಡಿಯೂ ಅಲ್ಲಿಯ ರಾಷ್ಟ್ರದ್ರೋಹಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಇದರಿಂದ ಅವರನ್ನು ಓಲೈಸುವುದರ ಬದಲಾಗಿ ಅವರಿಗೆ ಪಾಠ ಕಲಿಸುವುದು ಅಧಿಕ ಅವಶ್ಯಕ ವಿದೆ - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೇಂದ್ರಸರಕಾರವು ಅಲ್ಪಸಂಖ್ಯಾತರಿಗಾಗಿ ೬, ೫೦೦ ಕೋಟಿ ಹಣ ವೆಚ್ಚ ಮಾಡಿ ಸದ್ಭಾವನಾ ಮಂಟಪವನ್ನು ನಿರ್ಮಿಸಲಿದೆ !