ಪೂ. (ಸೌ.) ಅಂಜಲಿ ಗಾಡಗೀಳ ಮತ್ತು ಪೂ. ಡಾ. ಉಲಗನಾಥನ್ ಇವರು ಮುಕಾಂಬಿಕಾದೇವಿಯ ದರ್ಶನ ಪಡೆಯುವ ಘಟನೆಯ ಬಗ್ಗೆ ಕು. ಮಧುರಾ ಭೋಸಲೆಯವರು ಮಾಡಿದ ಸೂಕ-ಪರೀಕ್ಷಣೆ

ಮಹರ್ಷಿಗಳ ಆದೇಶಕ್ಕನುಸಾರ ೧೭..೨೦೧೬ ರಂದು ಪೂ. ಸೌ. ಅಂಜಲಿ ಗಾಡಗೀಳ ಮತ್ತು ಪೂ. ಡಾ. ಉಲಗನಾಥನ್ ಇವರು ಸಾಯಂಕಾಲ ೬.೩೦ ರ ನಂತರ ಕೊಲ್ಲೂರಿನ ಮುಕಾಂಬಿಕಾದೇವಿಯ ದರ್ಶನ ಪಡೆದರು. ಈ ಘಟನೆಯನ್ನು ಸನಾತನದ ರಾಮನಾಥಿ ಆಶ್ರಮದಿಂದ ಕು. ಮಧುರಾ ಭೋಸಲೆಯವರು ಮಾಡಿದ ಸೂಕ-ಪರೀಕ್ಷಣೆಯನ್ನು ಇಲ್ಲಿ ಕೊಡುತ್ತಿದ್ದೇವೆ.

. ಪೂ. (ಸೌ.) ಅಂಜಲಿ ಗಾಡಗೀಳರು ಮುಕಾಂಬಿಕಾ ದೇವಿಯ ದರ್ಶನ ಪಡೆದ ನಂತರ ಆದ ಸೂಕಪ್ರಕ್ರಿಯೆ ಮತ್ತು ದರ್ಶನದಿಂದ ಪ.ಪೂ. ಡಾಕ್ಟರ್, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಮೇಲಾದ ಸೂಕ ಪರಿಣಾಮ : .ಪೂ. ಡಾಕ್ಟರರನ್ನು ಪ್ರತಿನಿಧಿಸುವ ಹಾಗೂ ಮುಕಾಂಬಿಕಾದೇವಿಯ ಪ್ರತ್ಯಕ್ಷ ದರ್ಶನ ಪಡೆಯುವ ಪೂ.(ಸೌ.) ಅಂಜಲಿ ಗಾಡಗೀಳರಿಗೆ ಮುಕಾಂಬಿಕಾದೇವಿಯ ದೇವಸ್ಥಾನದಲ್ಲಿ ಕಾರ್ಯ
ನಿರತವಿರುವ ಪಾರ್ವತಿದೇವಿಯ ಸೃಜನ ಮತ್ತು ಸ್ಥಿತಿಜನ್ಯ ಶಕ್ತಿಯ ಸ್ಪಂದನ ಹಾಗೂ ಕೃಪಾಶೀರ್ವಾದ ಸಿಕ್ಕಿರುವುದು ಅರಿವಾಯಿತು. ಪೂ. ಅಂಜಲಿ ಗಾಡಗೀಳರಿಗೆ ಸಿಕ್ಕಿದ ದೈವೀ ಶಕ್ತಿಯು ಪ.ಪೂ. ಡಾಕ್ಟರರಲ್ಲಿ ಸಂಕ್ರಮಿತವಾಯಿತು. .ಪೂ. ಡಾಕ್ಟರರಿಂದ ಅವರ ಪ್ರತಿರೂಪವಾಗಿ ರುವ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಗೆ ಈ ದೈವೀ ಶಕ್ತಿಯ ಪ್ರವಾಹವು ದ್ವಿಗುಣವಾಗಿ ಪ್ರವಹಿಸಿತು ಹಾಗೂ ಜಗತ್ತಿನಾದ್ಯಂತದ ಎಲ್ಲ ಸಾತ್ತ್ವಿಕ ಜೀವಗಳ ವರೆಗೆ ಚೈತನ್ಯ ಶಕ್ತಿಯಧಾರೆ ತಲುಪಿರುವುದು ಅರಿವಾಯಿತು.
. ಅಂಬಿಕಾ ಮತ್ತು ಮುಕಾಂಬಿಕಾ ದೇವಿಯರ ಕಾರ್ಯದಲ್ಲಿ ವ್ಯತ್ಯಾಸ : ಅಂಬಿಕಾದೇವಿಯ ಶಕ್ತಿಯು ಪ್ರಕಟ ಸ್ವರೂಪದಲ್ಲಿದ್ದು ಅದು ಅವತಾರಿ ಕಾರ್ಯಕ್ಕೆ ಪ್ರತ್ಯಕ್ಷ ಸಹಾಯ ಮಾಡುತ್ತಿರುತ್ತದೆ ಹಾಗೂ ಮುಕಾಂಬಿಕಾದೇವಿಯ ಶಕ್ತಿಯು ಅಪ್ರಕಟ ಸ್ವರೂಪದಲ್ಲಿದ್ದು ಅದರಿಂದ ಅವತಾರಿ ಕಾರ್ಯಕ್ಕೆ ಪರೋಕ್ಷವಾಗಿ ಬೆಂಬಲವಿರುತ್ತದೆ.
. ಮುಕಾಂಬಿಕಾದೇವಿಯು ಆದಿ ಶಂಕರಾಚಾರ್ಯರ ನಂತರ ಸನಾತನ ಸಂಸ್ಥೆಗೆ ಧರ್ಮಸಂಸ್ಥಾಪನೆಯ ಕಾರ್ಯ ಮಾಡಲು ಆಶೀರ್ವಾದ ನೀಡುವುದು : ಆದಿ ಶಂಕರಾಚಾರ್ಯರ ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಮುಕಾಂಬಿಕಾದೇವಿಯ ಪ್ರತ್ಯಕ್ಷ ಆಶೀರ್ವಾದವಿತ್ತು. ಅದೇ ಆಶೀರ್ವಾದವನ್ನು ಅವಳು ಸನಾತನ ಸಂಸ್ಥೆಗೆ ನೀಡಿರು ವುದು ಅರಿವಾಯಿತು. ಮುಕಾಂಬಿಕಾದೇವಿ ಪಾರ್ವತಿಯ ಪ್ರತಿಸ್ವರೂಪ ವಾಗಿದ್ದು ಅವಳು ಶಿವನ ಧಾರಣಾಶಕ್ತಿ ಆಗಿದ್ದಾಳೆ. ಶಿವತತ್ತ್ವ ಧಾರಣೆ ಮಾಡಲು ಮುಕಾಂಬಿಕಾದೇವಿಯ ಉಪಾಸನೆ ಮಾಡುವುದು ಆವಶ್ಯಕವಾಗಿದೆ.
. ಮುಕಾಂಬಿಕಾದೇವಿ ನೀಡಿದ ಕೃಪಾಶೀರ್ವಾದದ ಘಟಕಗಳು
೪ ಅ. ತಾರಕ ಶಕ್ತಿ : ಮುಂಬರುವ ಆಪತ್ಕಾಲದಲ್ಲಿ ಈ ಶಕ್ತಿಯ ಬಲದಲ್ಲಿ ಶಿವನ ಲಯಕಾರಿ ರೂಪದ ಪ್ರಭಾವದಿಂದ ಸಾತ್ತ್ವಿಕ ಜೀವಗಳ ರಕ್ಷಣೆಯಾಗಲಿದೆ.
೪ ಆ. ಮಾರಕ ಶಕ್ತಿ : ಈ ಶಕ್ತಿಯ ಬಲದಿಂದ ಸಾತ್ತ್ವಿಕ ಜೀವಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಂದರೆ ಕೊಡುವ ರಜ-ತಮ ಪ್ರಧಾನ ಘಟಕಗಳ ಉಚ್ಛಾಟನೆ ಮಾಡಲು ಶಿವನ ಮಾರಕ ಶಕ್ತಿ ಕಾರ್ಯನಿರತವಾಗಲಿದೆ.
. ಮಹರ್ಷಿಗಳು ಸಾಧಕರಿಗೆ ತಾರಕ ಮತ್ತು ಮಾರಕ ಸ್ವರೂಪದ ಶಕ್ತಿಯ ಕವಚ-ಕುಂಡಲವನ್ನೇ ಅನುಗ್ರಹಿಸಿರುವುದು : ಮಹರ್ಷಿಗಳು ಪೂ. (ಸೌ.) ಅಂಜಲಿ ಗಾಡಗೀಳರಿಗೆ ಮೂಕಾಂಬಿಕಾದೇವಿಯ ದರ್ಶನ ಪಡೆಯಲು ಹೇಳಿ ಸಾತ್ತ್ವಿಕ ಜೀವಗಳಿಗೆ ಒಂದು ರೀತಿ ತಾರಕಮಾರಕ ರೂಪದಲ್ಲಿ ಶಕ್ತಿಯ ಕವಚ-ಕುಂಡಲವನ್ನು ಪ್ರದಾನಿಸುವುದು. ಮುಂಬರುವ ಭೀಕರ ಆಪತ್ಕಾಲದಲ್ಲಿ ಮುಕಾಂಬಿಕಾದೇವಿಯು ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸುವ ಜೀವಗಳನ್ನು ಹೇಗೆ ರಕ್ಷಿಸುವಳು, ಎಂಬುದರ ಅನುಭೂತಿ ಬರುವುದು.’
- ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೂ. (ಸೌ.) ಅಂಜಲಿ ಗಾಡಗೀಳ ಮತ್ತು ಪೂ. ಡಾ. ಉಲಗನಾಥನ್ ಇವರು ಮುಕಾಂಬಿಕಾದೇವಿಯ ದರ್ಶನ ಪಡೆಯುವ ಘಟನೆಯ ಬಗ್ಗೆ ಕು. ಮಧುರಾ ಭೋಸಲೆಯವರು ಮಾಡಿದ ಸೂಕ-ಪರೀಕ್ಷಣೆ