ಹಜ್ ಯಾತ್ರೆಯಲ್ಲಿ ಮೃತಪಟ್ಟ ಮುಸಲ್ಮಾನರ ಸಂಬಂಧಿಕರಿಗೆ ೧೦ ಲಕ್ಷ ಮತ್ತು ಹುತಾತ್ಮ ಸೈನಿಕರ ಸಂಬಂಧಿಕರಿಗೆ ಕೇವಲ ೨ ಲಕ್ಷ ರೂ.ಗಳ ಧನ ಸಹಾಯ !

  ಮಮತಾ ಬ್ಯಾನರ್ಜಿಯವರ ಪಕ್ಷವನ್ನು ಅಧಿಕಾರಕ್ಕೇರಿಸುವ ಬಂಗಾಲದ ಹಿಂದೂಗಳಿಗೆ
ಇದು ಲಜ್ಜಾಸ್ಪದವಾಗಿದೆ. ಬಂಗಾಲದಲ್ಲಿ ನಿದ್ರಿತ ಜನ್ಮಹಿಂದೂಗಳು ಎಚ್ಚರಗೊಂಡ ದಿನವೇ ಸುದಿನ !
ಕೊಲಕಾತಾ : ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಉರಿಯ ಮುಖ್ಯ  ಸೇನಾನೆಲೆಯ ಮೇಲಾದ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ೨ ಸೈನಿಕರ ಕುಟುಂಬದವರಿಗೆ ತಲಾ ೨ ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ. ಇದರಿಂದ ಅವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯ ಸುರಿಮಳೆಯಾಗುತ್ತಿದೆ.
೨೦೧೧ ರಲ್ಲಿ ದಕ್ಷಿಣ ಮತ್ತು ೨೪ ಪರಗಣಾ ಜಿಲ್ಲೆಯ ಕಳ್ಳಭಟ್ಟಿ ಸರಾಯಿಗೆ ಬಲಿಯಾದ ೧೫೦ ಜನರ ಕುಟುಂಬದವರಿಗೆ ಮಮತಾ ಬ್ಯಾನರ್ಜಿಯವರು ತಲಾ ೨ ಲಕ್ಷ ರೂಪಾಯಿಗಳ ಸಹಾಯವನ್ನು ನೀಡಿದ್ದರು ಮತ್ತು ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ಸಮಯದಲ್ಲಾದ ಅಪಘಾತದಲ್ಲಿ ಮೃತಪಟ್ಟ ಹಜ್ ಯಾತ್ರಿಕರ ಕುಟುಂಬದವರಿಗೆ ತಲಾ ೧೦ ಲಕ್ಷ ರೂಪಾಯಿಗಳ ಸಹಾಯವನ್ನು ನೀಡಿದ್ದರು. ಇದರರ್ಥ ಭಾರತದ ಗಡಿಯಲ್ಲಿ ಹುತಾತ್ಮರಾದ ವೀರ ಸೈನಿಕರನ್ನು ಕಳ್ಳಭಟ್ಟಿ ಸರಾಯಿ ಕುಡುಕರೊಂದಿಗೆ ತುಲನೆ ಮಾಡಿ ಹುತಾತ್ಮರನ್ನಷ್ಟೇ ಅಲ್ಲ, ದೇಶವನ್ನೇ ಅವಮಾನಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಉರಿಯ ಆಕ್ರಮಣದಲ್ಲಿ ೧೮ ಸೈನಿಕರು ಹುತಾತ್ಮರಾಗಿದ್ದರು. ಅದರಲ್ಲಿ ಇಬ್ಬರು ಬಂಗಾಲ ದವರಾಗಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಜ್ ಯಾತ್ರೆಯಲ್ಲಿ ಮೃತಪಟ್ಟ ಮುಸಲ್ಮಾನರ ಸಂಬಂಧಿಕರಿಗೆ ೧೦ ಲಕ್ಷ ಮತ್ತು ಹುತಾತ್ಮ ಸೈನಿಕರ ಸಂಬಂಧಿಕರಿಗೆ ಕೇವಲ ೨ ಲಕ್ಷ ರೂ.ಗಳ ಧನ ಸಹಾಯ !