ಸನಾತನವು ಧರ್ಮಪ್ರಸಾರಕ್ಕಾಗಿ ತಯಾರಿಸಿದ ಗೂಡುದೀಪದಲ್ಲಿ ಥರ್ಮಾಕೋಲ್ ಉಪಯೋಗಿಸುವುದರ ಹಿಂದಿನ ಉದ್ದೇಶವನ್ನು ಗಮನಿಸಿರಿ !

ಶ್ರೀಗಣೇಶೋತ್ಸವದಲ್ಲಿ ಶ್ರೀ ಗಣೇಶನ ಸಾತ್ತ್ವಿಕತೆ ಸಿಗಬೇಕೆಂದು ಗಣೇಶನ ಮೂರ್ತಿಯ ಸುತ್ತಲೂ ಥರ್ಮಾಕೋಲ್‌ನಿಂದ ಅಲಂಕಾರ ಮಾಡದೆ ನೈಸರ್ಗಿಕ ವಸ್ತುಗಳಿಂದ ಉದಾ. ಎಲೆ, ಹೂವುಗಳಿಂದ ಅಲಂಕಾರ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಇದರಿಂದ ಸನಾತನವು ದೀಪಾವಳಿಗಾಗಿ ಗೂಡುದೀಪವನ್ನು ಥರ್ಮಾಕೋಲ್‌ನಿಂದ ಹೇಗೆ ತಯಾರಿಸಿತು ಎಂದು ಕೆಲವರು ಕೇಳುತ್ತಾರೆ. ಅದರ ಉತ್ತರ ಮುಂದಿನಂತಿದೆ. ಕೃತಿಗಿಂತ ಆ ಕೃತಿಯ ಉದ್ದೇಶವು ಮಹತ್ವದ್ದಾಗಿರುತ್ತದೆ, ಈ ತತ್ತ್ವಕ್ಕನುಸಾರ ಸನಾತನವು ಗೂಡುದೀಪವನ್ನು ಶೋಭೆಗಾಗಿ ತಯಾರಿಸದೆ ಧರ್ಮಪ್ರಸಾರಕ್ಕಾಗಿ ತಯಾರಿಸಿದೆ.
ಆದ್ದರಿಂದಲೇ ಅದರ ಮೇಲಿನ ಲೇಖನ ಧರ್ಮಜಾಗೃತಿಗೆ ಸಂಬಂಧಿಸಿದೆ. ಧರ್ಮಜಾಗೃತಿಯ ಉದ್ದೇಶ ಸಹಜವಾಗಿ ಸಾಧ್ಯವಾಗಬೇಕೆಂದು ಅದರಲ್ಲಿ ಥರ್ಮಾಕೋಲ್‌ನ ಚೌಕಟ್ಟನ್ನು ಉಪಯೋಗಿಸಲಾಗಿದೆ ಹಾಗೂ ಅದರ ಮೇಲೆ ಪ್ರಸಾರದ ಪ್ರಬೋಧನಾತ್ಮಕ ಲೇಖನವನ್ನು ಅಂಟಿಸಲಾಗಿದೆ. ಅಂದರೆ ಥರ್ಮಾಕೋಲನ್ನು ಆಕರ್ಷಕವಾಗಿ ಕಾಣಿಸಬೇಕೆಂದಲ್ಲ, ಧರ್ಮಪ್ರಸಾರದ ಮಾಧ್ಯಮ ವೆಂದು ಉಪಯೋಗಿಸಿದೆ. ಗೂಡುದೀಪದ ಥರ್ಮಾಕೋಲ್ ಚೌಕಟ್ಟು ಸಾತ್ತ್ವಿಕ ಬರವಣಿಗೆಯಿಂದ ಮುಚ್ಚಿರುವುದರಿಂದ ಅದರಿಂದ ಸಾತ್ತ್ವಿಕತೆ ಪ್ರಕ್ಷೇಪಣೆಯಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನವು ಧರ್ಮಪ್ರಸಾರಕ್ಕಾಗಿ ತಯಾರಿಸಿದ ಗೂಡುದೀಪದಲ್ಲಿ ಥರ್ಮಾಕೋಲ್ ಉಪಯೋಗಿಸುವುದರ ಹಿಂದಿನ ಉದ್ದೇಶವನ್ನು ಗಮನಿಸಿರಿ !