ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ನಿರಪರಾಧಿ ಸಾಧಕರಿಗೆ ನೀಡಿದ ಅಮಾನವೀಯ ಹಿಂಸೆ !

೨೦೦೯ ರಲ್ಲಿ ಮಡಗಾವ್‌ನ ಒಂದು ವಾಹನದಲ್ಲಿ ಸ್ಫೋಟವಾದ ಬಳಿಕ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತರಾದರು. ಹೀಗಿರುವಾಗಲೂ ಸನಾತನ ಸಂಸ್ಥೆಯ ತೇಜೋವಧೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ಸಿನ ಕೈಗೊಂಬೆಯಾಗಿದ್ದ ಪೊಲೀಸರು ಯಾವುದೇ ಮುನ್ಸೂಚನೆ ನೀಡದೇ ಸಾಧಕರನ್ನು ಬಂಧಿಸಿ, ಸುಳ್ಳು ಸಾಕ್ಷಿದಾರರನ್ನು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದರು. ಇಷ್ಟೇ ಅಲ್ಲದೇ ಸಾಧಕರಿಗೆ ನೀಡಿದ ಅಸಹನೀಯವಾದ ಶಾರೀರಿಕ ಮತ್ತು ಮಾನಸಿಕ ತೊಂದರೆಯ ವಿವರಗಳನ್ನು ಇಲ್ಲಿ ನೀಡುತ್ತಿದ್ದೇವೆ. (ಈ ವಿಷಯದ ಸವಿಸ್ತಾರವಾದ ಲೇಖನ ಮಾಲೆಯನ್ನು ಹಿಂದೆ ಸನಾತನ ಪ್ರಭಾತದಲ್ಲಿ ಪ್ರಕಟಿಸಲಾಗಿದೆ.)

೪ ವರ್ಷ ಕಾರಾಗೃಹದಲ್ಲಿ ಶಾರೀರಿಕ ಮತ್ತು ಮಾನಸಿಕವಾಗಿ ಅಸಹನೀಯ ತೊಂದರೆಯನ್ನು ಸಹಿಸಿದ ಬಳಿಕ ಕೊನೆಗೂ ನ್ಯಾಯಾಲಯವು ಈ ಸಾಧಕರನ್ನು ದಿನಾಂಕ ೩೧.೧೨.೨೦೧೩ ರಂದು ನಿರಪರಾಧಿಗಳೆಂದು ಬಿಡುಗಡೆಗೊಳಿಸಿತು.

೧. ಸಾಧಕರನ್ನು ಅನ್ಯಾಯಕರವಾಗಿ ಬಂಧಿಸಿರುವುದು !

೧ ಅ. ಶ್ರೀ. ಪ್ರಶಾಂತ ಜುವೇಕರ್
೧ ಅ ೧. ಸಾಧಕನಿಗೆ ಬಂಧಿಸಿರುವ ಉದ್ದೇಶವನ್ನು ತಿಳಿಸದೇ ಹೊಡೆ ಯುವ ಪೊಲೀಸರು ! : ನಾನು ರೈಲಿನಿಂದ ಭುಸಾವಳ್ ರೈಲು ನಿಲ್ದಾಣದಲ್ಲಿ ಇಳಿಯುತ್ತಿರುವಾಗ ನನ್ನ ಅಕ್ಕಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗಳಲ್ಲಿ ಒಬ್ಬನು ಆಕಸ್ಮಿವಾಗಿ ನನ್ನ ಕೈಗಳಿಗೆ ಬೇಡಿ ಹಾಕಿದನು. ಅವರು ತಾವಾಗಿಯೇ ಏನನ್ನೂ ಹೇಳುತ್ತಿರಲಿಲ್ಲ. ಆದರೆ ಅವರು ನನಗೆ ಹೊಡೆಯುತ್ತಾ, ‘ನಿಮಗೆ ಬಹಳ ಸೊಕ್ಕು ಇದೆ, ನೀವು ಸನಾತನದವರು ನಿಮ್ಮನ್ನು ಏನೆಂದು ತಿಳಿದುಕೊಂಡಿದ್ದೀರಿ ? ಎಂದು ಕೇಳಿದರು. ಆ ಸಮಯದಲ್ಲಿ ನನಗೆ ನಾನು ದೊಡ್ಡ ಭಯೋತ್ಪಾದಕನಾಗಿರುವಂತೆ ಭಾಸವಾಯಿತು.
೧ ಅ ೨. ಸಾಧಕನನ್ನು ಧುಳೆಗೆ ಕರೆದೊಯ್ಯುವಾಗ ವಾಹನದಲ್ಲಿ ಪ್ರಶ್ನೆಗಳನ್ನು ಕೇಳುತ್ತ ಹೊಡೆಯುವುದು : ಅವರು ನನ್ನನ್ನು ಒಂದು ವಾಹನದಲ್ಲಿ ಕೂರಿಸಿದರು. ನಾವು ಜಳಗಾವ್ ಬಿಟ್ಟು ಧುಳೆಯೆಡೆಗೆ ಹೊರಟೆವು. ವಾಹನದಲ್ಲಿ ನನಗೆ ಅನೇಕ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ನಾನು ಅವರಿಗೆ ನಿಜ ವಿಷಯವನ್ನು ಹೇಳುತ್ತಿದ್ದೆನು. ಆದರೆ ಅದು ಅವರಿಗೆ ಅಪೇಕ್ಷಿತವಿರುವ ಮಾಹಿತಿಯಾಗಿರದ ಕಾರಣ, ಅವರು ನನಗೆ ವಾಹನದಲ್ಲಿಯೇ ಹೊಡೆಯತೊಡಗಿದರು. ಸ್ವಲ್ಪ ಸಮಯದ ನಂತರ ಅವರು ನನ್ನ ಕಣ್ಣಿಗೆ ಕಪ್ಪು ಪಟ್ಟಿಯನ್ನು ಕಟ್ಟಿದರು. ನನ್ನ ಕಣ್ಣುಗಳ ಪಟ್ಟಿಯನ್ನು ತೆಗೆದಾಗ ನಾನು ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ನಾಸಿಕ್ ಕಛೇರಿಯ ಎದುರಿಗೆ ನಿಂತಿದ್ದೆನು.
೧ ಅ ೩. ಸಾಧಕನನ್ನು ನಾಸಿಕ್‌ಗೆ ಕರೆದೊಯ್ದು ಸುಳ್ಳು ಆರೋಪದಲ್ಲಿ ೪ ದಿನಗಳ ಪೊಲೀಸ್ ಕಸ್ಟಡಿಯಲ್ಲಿಡುವುದು : ನಾಸಿಕ್‌ಗೆ ಹೋದ ಬಳಿಕ ನಾನು ನನ್ನ ತಂದೆಯವರನ್ನು ನೋಡಿದೆನು. ನಾಸಿಕ್ ನ್ಯಾಯಾಲಯದಲ್ಲಿ ಸುಳ್ಳು ಆರೋಪದಡಿಯಲ್ಲಿ ನನ್ನನ್ನು ೪ ದಿನಗಳ ಪೊಲೀಸ್ ಕಸ್ಟಡಿಯಲ್ಲಿಡ ಲಾಯಿತು ಮತ್ತು ತಡರಾತ್ರಿ ನನ್ನನ್ನು ಮುಂಬಯಿಯ ಭಯೋತ್ಪಾದಕ ನಿಗ್ರಹ ದಳದ ಕಛೇರಿಗೆ ಕರೆದೊಯ್ಯಲಾಯಿತು.
೨. ಅಪರಾಧವನ್ನು ಒಪ್ಪಿಕೊಳ್ಳಬೇಕೆಂದು ಪೊಲೀಸರು ಅತ್ಯಂತ ಕ್ರೂರತೆಯಿಂದ ನೀಡಿದ ಹಿಂಸೆ !

೨ ಅ. ಶ್ರೀ. ಪ್ರಶಾಂತ ಜುವೇಕರ್

೨ ಅ ೧. ಅವರು ಹೊಡೆಯುತ್ತಿದ್ದಾಗ ನನಗೆ ಜ್ವರವಿದ್ದ ಕಾರಣ ತಲೆ ಸುತ್ತು ಬರುವುದು ಮತ್ತು ನಿಶ್ಯಕ್ತಿಯಾದಾಗ ‘ಜೈ ಶ್ರೀರಾಮ’ ಎಂದು ಹೇಳುವುದು : ಒಮ್ಮೆ ಅವರು ನನಗೆ ಹೊಡೆಯತೊಡಗಿದರು. ನಾನು ಅವರಲ್ಲಿ, ಏಕೆ ಹೊಡೆಯುತ್ತೀರಿ ? ಎಂದು ಕೇಳಿದಾಗ ಅವರು, ‘ನೀನು ಹಾಗೆ ಸುಲಭವಾಗಿ ಏನನ್ನೂ ಹೇಳುವುದಿಲ್ಲ’ ಎಂದು ಹೇಳಿದರು. ನನಗೆ ಮೊದಲೇ ಜ್ವರ ಇದ್ದುದರಿಂದ ಅವರು ಹೊಡೆಯತೊಡಗಿದಾಗ ತಲೆ ಸುತ್ತಿದಂತಾಗಿ ಕಣ್ಣುಕತ್ತಲೆ ಬಂದಂತಾಯಿತು. ನಾನು ಜೋರಾಗಿ ‘ಜೈ ಶ್ರೀರಾಮ’ ಎಂದು ಹೇಳುತ್ತಿದ್ದೆನು ಹಾಗೂ ಬಳಿಕ ನರಳು ತ್ತಿದ್ದೆನು.
೨ ಅ ೨. ಮುಖವನ್ನು ಕಪ್ಪು ಬಟ್ಟೆ ಯಿಂದ ಮುಚ್ಚುವುದು : ನಾನು ಕಿಟಕಿಯಿಂದ ಹೊರಗೆ ನೋಡುತ್ತಿರುವುದು ಅವರ ಗಮನಕ್ಕೆ ಬಂದಿತು. ಆದ್ದರಿಂದ ಅವರು ನನ್ನ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿದರು.
೨ ಆ. ಶ್ರೀ. ವಿನಯ ತಳೇಕರ
ಗೋವಾ ಪೊಲೀಸರು ನಮಗೆ ಬಹಳಷ್ಟು ಶಾರೀರಿಕ ತೊಂದರೆಯನ್ನು ನೀಡಿ ದರು. ಕೆಲವು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ರವರು ನಮಗೆ ಬಹಳ ಹೊಡೆದರು.
೨ ಆ ೧. ಮಾತನಾಡಲು ಅಸಾಧ್ಯವಾಗುವ ವರೆಗೆ ಎರಡೂ ಕಿವಿಗೆ ಹೊಡೆಯುವುದು : ಒಬ್ಬನು ನಮ್ಮ ಎರಡೂ ಕಿವಿಗಳಿಗೆ ಒಂದೇಸಮನೆ ೧೦ ರಿಂದ ೨೦ ಸಲ ಹೊಡೆಯುತ್ತಿದ್ದನು. ಕಿವಿಯ ಮೇಲೆ ಹೊಡೆದಿದ್ದರಿಂದ ಕಣ್ಣುಕತ್ತಲೆ ಬರುತ್ತಿತ್ತು. ಆ ಸಮಯದಲ್ಲಿ ಏನೂ ಕಾಣಿಸುತ್ತಿರಲಿಲ್ಲ ಮತ್ತು ಏನೂ ಕೇಳಿಸುತ್ತಿರಲಿಲ್ಲ. ಅವರು, ಏನಾದರೂ ಕೇಳಿಸುತ್ತಿದೆಯೇ ? ಎಂದು ಕೇಳುತ್ತಿದ್ದರು. ‘ಹೌದು’ ಎಂದರೆ ಪುನಃ ಹೊಡೆಯುತ್ತಿದ್ದರು. ಏನೂ ಮಾತನಾಡಲು ಅಸಾಧ್ಯವೆನಿಸುವ ಸ್ಥಿತಿಯಾಗುವ ವರೆಗೆ ಹೊಡೆಯುತ್ತಿದ್ದರು.
೨ ಆ ೨. ಅವರು ನಮಗೆ ಮಂಡಿಯೂರಿ ನಿಲ್ಲಲು ಹೇಳುತ್ತಿದ್ದರು. ೨೦ ರಿಂದ ೩೦ ನಿಮಿಷಗಳಷ್ಟು ಸಮಯ ನನಗೆ ತಲೆಕೆಳಗೆ ಮಾಡಿ ನೇತು ಹಾಕುತ್ತಿದ್ದರು.
೨ ಆ ೩. ಅಪರಾಧವನ್ನು ಒಪ್ಪಿಕೊಳ್ಳದಿದ್ದರೆ ಸುಳ್ಳು ಆಪಾದನೆಯಲ್ಲಿ ಕೊಲ್ಲುವುದಾಗಿ ಮತ್ತು ಸಂಬಂಧಿಕರಿಗೆ ತೊಂದರೆ ಕೊಡುವುದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಬೆದರಿಕೆ ಹಾಕುವುದು : ಗೋವಾದ ಒಬ್ಬ ಜಿಲ್ಲಾ ಪೊಲೀಸ್ ಅಧೀಕ್ಷಕ ನನಗೆ ‘ನೀನು ಅಪರಾಧವನ್ನು ಮಾಡಿರುವುದಾಗಿ ಒಪ್ಪಿಕೊಳ್ಳದೇ ಇದ್ದಲ್ಲಿ ನಿನ್ನನ್ನು ಎನ್‌ಕೌಂಟರ್ ಮಾಡುತ್ತೇನೆ’ ಎಂದು ಹೇಳಿದನು. ಒಂದು ರಾತ್ರಿ ನನ್ನನ್ನು ಪಣಜಿಯ ಪೊಲೀಸ್ ಕೇಂದ್ರ ಕಛೇರಿಗೆ ಕರೆದುಕೊಂಡು ಹೋದರು. ನನ್ನನ್ನು ವಾತಾನುಕೂಲ ಕೊಠಡಿಗೆ ಕರೆದೊಯ್ದು ಒಬ್ಬ ಸ್ಥಳೀಯ ಶಾಸಕನ ಹೆಸರು ಹೇಳುವಂತೆ ಹೇಳಿದನು. ಆ ಸಮಯದಲ್ಲಿ ಅವನು, ‘ನೀನು ಆ ಶಾಸಕನ ಹೆಸರನ್ನು ಹೇಳಿದರೆ, ನಿನ್ನನ್ನು ಬಿಡುತ್ತೇನೆ’ ಎಂದು ಹೇಳಿದನು. ಅಲ್ಲಿಯೂ ನನಗೆ ಬಹಳ ಶಾರೀರಿಕ ಮತ್ತು ಮಾನಸಿಕ ತೊಂದರೆಯನ್ನು ನೀಡಿದರು.
೨ ಆ ೪. ನಮ್ಮ ಕಾಲುಗಳನ್ನು ಅಗಲಿಸಿ ಎರಡೂ ತೊಡೆಗಳ ಮೇಲೆ ಇಬ್ಬರು ಪೊಲೀಸ್ ಅಧಿಕಾರಿಗಳು ನಿಲ್ಲುತ್ತಿದ್ದರು.
೨ ಆ ೫. ಎರಡೂ ಕೈಗಳನ್ನು ಮೇಲೆ ಮಾಡಿ ೨೦ ನಿಮಿಷಗಳ ವರೆಗೆ ನಿಲ್ಲಲು ಹೇಳುತ್ತಿದ್ದರು ಮತ್ತು ನಂತರ ಹೀಗೇಕೆ ಮಾಡಿದಿರಿ, ಎಂದು ಕೇಳುತ್ತಿದ್ದರು.
೨ ಆ ೬. ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಬೂಟಿನಿಂದ ಹೊಟ್ಟೆ, ಬೆನ್ನು ಮತ್ತು ಎದೆಗೆ ತುಂಬ ಒದೆಯುವುದು : ಒಬ್ಬ ಪೊಲೀಸ್ ಒಮ್ಮೆ ಮದ್ಯಪಾನ ಮಾಡಿ ಬಂದಿದ್ದನು ಮತ್ತು ಅವನು ‘ಇನ್ನಷ್ಟು ಜನರ ಹೆಸರು ಹೇಳು’ ಎಂದು ಒತ್ತಾಯಪಡಿಸುತ್ತಿದ್ದನು. ನಾನು ಅವನಿಗೆ, ನನಗೆ ಏನೂ ಗೊತ್ತಿಲ್ಲದಿರುವಾಗ ಯಾರ ಹೆಸರು ಹೇಳಲಿ ? ಎಂದು ಕೇಳಿದಾಗ ಅವನು ನನ್ನನ್ನು ಶೌಚಾಲಯಕ್ಕೆ ಕರೆದೊಯ್ದನು ಮತ್ತು ಅಲ್ಲಿ ನನಗೆ ಅವನು ತನ್ನ ಬೂಟಿನಿಂದ ಹೊಟ್ಟೆ, ಎದೆ ಮತ್ತು ಬೆನ್ನಿಗೆ ಒದ್ದನು.
೨ ಆ ೭. ಪಿಸ್ತೂಲಿನಿಂದ ಹೊಡೆಯುವುದಾಗಿ ಮತ್ತು ಬೂಟು ಧರಿಸಿದ ಕಾಲಿನಿಂದ ಮೂಗಿಗೆ ಒದೆಯುವುದಾಗಿ ಬೆದರಿಸುವ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು : ಪುಣೆ ಮತ್ತು ರಾಜಸ್ಥಾನದ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಬಂದಿದ್ದರು. ಅದರಲ್ಲಿ ಪುಣೆಯ ಒಬ್ಬ ಅಧಿಕಾರಿಗಳು ಪಿಸ್ತೂಲು ತೆಗೆದು ನನ್ನ ಎದೆಗೆ ಗುರಿಯಿಟ್ಟನು ಮತ್ತು ನನಗೆ, ‘ನಾವು ಹಿಂದೂ ಭಯೋತ್ಪಾದಕರಾಗಿದ್ದೇವೆ ಮತ್ತು ನಾವು ಪರಸ್ಪರರನ್ನು ಗುರುತಿಸುತ್ತೇವೆ ಎಂದು ಎಲ್ಲರಿಗೂ ಹೇಳು’ ಎಂದು ಹೇಳಿದರು. ರಾಜಸ್ಥಾನದ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಅಧಿಕಾರಿ ನನ್ನನ್ನು ನೆಲದಲ್ಲಿ ಕುಳ್ಳಿರಿಸಿ ತಾನು ಖುರ್ಚಿಯ ಮೇಲೆ ಕುಳಿತುಕೊಂಡು ನನ್ನ ಮೂಗಿನ ಮೇಲೆ ಬೂಟು ಕಾಲನ್ನು ಇಟ್ಟು ‘ಈಗ ಮಾತನಾಡುತ್ತೀಯೋ ? ಅಥವಾ ಮೂಗಿಗೆ ಒದೆಯಲೋ ? ಎಂದು ಕೇಳುತ್ತಿದ್ದನು.
೨ ಈ. ಶ್ರೀ. ವಿನಾಯಕ ಪಾಟೀಲ್
೨ ಇ ೧. ರಾತ್ರಿ ೨ ಗಂಟೆಯವರೆಗೆ ಪ್ರಶ್ನೆಗಳನ್ನು ಕೇಳಿ ಶಾರೀರಿಕ ಮತ್ತು ಮಾನಸಿಕ ತೊಂದರೆ ಕೊಡುವುದು : ನನ್ನನ್ನು ೫೦ ದಿನ ಪೊಲೀಸ್ ಕಸ್ಟಡಿಯಲ್ಲಿಟ್ಟಿದ್ದರು. ಆ ಸಮಯದಲ್ಲಿ ನನಗೆ ಬಸ್ಕಿ ತೆಗೆಯುವುದು, ಬೂಟಿನಿಂದ ಒದೆಯುವುದು ಹೀಗೆ ಅನೇಕ ರೀತಿಯಲ್ಲಿ ಶಾರೀರಿಕ ಮತ್ತು ಮಾನಸಿಕ ತೊಂದರೆ ಕೊಡುತ್ತಿದ್ದರು. ಅವರು ನನಗೆ ರಾತ್ರಿ ೨ ಗಂಟೆಯವರೆಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು ಮತ್ತು ಏನೂ ಹೇಳದಿದ್ದರೆ ಹೊಡೆಯುತ್ತಿದ್ದರು.
೨ ಈ ೨. ಕೇವಲ ಒಳ ಉಡುಪಿನಲ್ಲಿ ನೆಲದಲ್ಲಿ ಮಲಗಿಸುವುದು ಮತ್ತು ಬೆಳಗ್ಗೆ ಬೇಗ ವಿಚಾರಣೆಗೆ ಕರೆದೊಯ್ಯುವುದು : ನನ್ನನ್ನು ಮೂರು ಜನ ಪೊಲೀಸರು ಕಸ್ಟಗಳಿಗೆ ತಿರುಗಾಡಿಸಿದರು. ಆ ಸಮಯದಲ್ಲಿ ಅವರು ನನ್ನನ್ನು ಎಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ ? ಏನು ಮಾಡುತ್ತಿದ್ದಾರೆ? ಎಂದು ತಿಳಿಯುತ್ತಿರಲಿಲ್ಲ. ನಮಗೆ ಶೌಚಾಲಯದ ಪಕ್ಕದಲ್ಲಿಯೇ ಮಲಗಲು ಹೇಳುತ್ತಿದ್ದರು. ರಾತ್ರಿಯೆಲ್ಲ ನೆಲದ ಮೇಲೆ ಕೇವಲ ಒಳ ಉಡುಪಿನಲ್ಲಿಯೇ ಮಲಗಿಸುತ್ತಿದ್ದರು ಮತ್ತು ಬೆಳಗ್ಗೆ ಬೇಗ ವಿಚಾರಣೆಗಾಗಿ ಕರೆದೊಯ್ಯುತ್ತಿದ್ದರು. ಇದರಿಂದ ನಾನು ಮಾನಸಿಕ ಸಮತೋಲನ ಕಳೆದುಕೊಂಡು ನನಗೆ ನಿರಾಶೆ ಬರತೊಡಗಿತು. ಈ ೫೦ ದಿನಗಳ ಕಾಲಾವಧಿಯಲ್ಲಿ ಇದೇ ರೀತಿ ನಡೆಯುತ್ತಿತ್ತು.
೩. ಮಾನಸಿಕ ಸಮತೋಲನ ಕಳೆದುಕೊಳ್ಳುವಂತೆ ಮಾಡುವ ಪೊಲೀಸರು
ಅಪರಾಧವನ್ನು ಒಪ್ಪಿಕೊಳ್ಳದಿದ್ದರೆ ಕುಟುಂಬದವರಿಗೆ ತೊಂದರೆ ನೀಡುವುದಾಗಿ ಬೆದರಿಕೆಯೊಡ್ಡುವುದು : ಪೊಲೀಸರು ನನಗೆ ‘ನಿನ್ನ ಕುಟುಂಬಕ್ಕೆ ತೊಂದರೆ ನೀಡುತ್ತೇವೆ. ಸಹೋದರನನ್ನು ನೌಕರಿಯಿಂದ ತೆಗೆಯುತ್ತೇವೆ ಎನ್ನುವ ಬೆದರಿಕೆಯನ್ನು ಹಾಕಿದರು. ನನ್ನನ್ನೂ ೪೦ ರಿಂದ ೫೦ ದಿನಗಳ ವರೆಗೆ ಪೊಲೀಸ್ ಕಸ್ಟಡಿಯಲ್ಲಿಟ್ಟಿದ್ದರು. ಬಳಿಕ ನನ್ನನ್ನು ನ್ಯಾಯಾಲಯದ ಬಂಧನದಲ್ಲಿಡಲಾಯಿತು. ಆ ಸಮಯದಲ್ಲಿ ನನಗೆ ಹೊರಗಿರುವಾಗಲೇ ‘ಈಗ ಒಳಗೆ ಹೋದ ಬಳಿಕ ಏನಾಗುವುದು ?’ ಎನ್ನುವ ಭಯ ನಿರ್ಮಾಣವಾಗುತ್ತಿತ್ತು. ಅಲ್ಲಿಯ ಅಧಿಕಾರಿಯು ಧರಿಸಿದ ಅಂಗಿಯ ಎಲ್ಲ ಗುಂಡಿಗಳು ತೆರೆದಿದ್ದವು. ಅವನನ್ನು ನೋಡಿಯೇ ನನಗೆ ಭಯವಾಯಿತು. - ಶ್ರೀ. ದಿಲೀಪ ಮಾಣಗಾಂವಕರ
೪. ಹಳ್ಳಿಯ ಗೂಂಡಾಗಳಂತೆ ಬೈಯ್ಯುವ ಪೊಲೀಸರು !
ಪೊಲೀಸರು ವಿಚಾರಣೆಗಾಗಿ ಸಾಧಕರನ್ನು ಠಾಣೆಗೆ ಪದೇಪದೇ ಕರೆಸುವುದು ಮತ್ತು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸಾಧಕರು ನಮ್ರತೆಯಿಂದ ಉತ್ತರಿಸಿದರೂ ಅವರಿಗೆ ಬೈಯ್ದು ಹೆದರಿಸುವುದು : ನಾನು ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾಧಕರು ನಮ್ರತೆಯಿಂದ ಮಾತನಾಡುತ್ತಿದ್ದರು. ಆದರೂ ಅಧಿಕಾರಿ ವರ್ಗದವರು ಸಾಧಕರೊಂದಿಗೆ ಬೈಯ್ದು ಮಾತನಾಡುತ್ತಿದ್ದರು. ಈಗ ಬಂಧಿಸಲ್ಪಟ್ಟಿರುವವನು ನಿಮ್ಮ ಸಾಧಕನಾಗಿದ್ದಾನೆ. ಅವನೇ ಸ್ಪೋಟಗೊಳಿಸಿದ್ದಾನೆ. ನಿಮ್ಮ ಮನೆಗಳಲ್ಲಿಯೂ ಬಾಂಬ್ ತಯಾರಿಸಿಟ್ಟಿರಬಹುದು. ಯಾವಾಗ ಸ್ಪೋಟಗೊಳಿಸುತ್ತೀರಿ ಎಂಬುದನ್ನು ನಮಗೆ ಮೊದಲೇ ತಿಳಿಸಿದರೆ ನಮಗೆ ಮುಂದಿನ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ಹೇಳಿ ಪೊಲೀಸರು ನಮಗೆ ಹೆದರಿಸುತ್ತಿದ್ದರು.
೫. ಸಾಧಕನಿಗೆ ಹಾಡಿಗೆ ತಕ್ಕಂತೆ ಕುಣಿಯಲು ಹೇಳುವ ವಿಕೃತ ಮಾನಸಿಕತೆಯ ಪೊಲೀಸ್ !
ಪೊಲೀಸ್ ನಿರೀಕ್ಷಕನು ತಾನೇ ಹಾಡು ಹೇಳಿ ಸಾಧಕನಿಗೆ ಕುಣಿಯಲು ಹೇಳುವುದು, ಒಬ್ಬ ಸಾಧಕಿಯ ಎದುರಿಗೆ ಸಾಷ್ಟಾಂಗ ನಮಸ್ಕಾರ ಮಾಡಲು ಹೇಳುವುದು ಮತ್ತು ಸಾಧನೆಯಿಂದಲೇ ಇದನ್ನೆಲ್ಲ ಸಹಿಸಲು ಸಾಧ್ಯವಾಗುವುದು : ೨೮.೧೦.೨೦೦೯ ರಂದು ನಮ್ಮನ್ನು ಕಾನೂನಿನ ವಿರುದ್ಧ ಬಂಧಿಸಿದ್ದರು. ಶ್ರೀ. ವಿನಾಯಕ ಪಾಟೀಲ್ ಮತ್ತು ನನ್ನನ್ನು ೫೦ ದಿನಗಳ ಪೊಲೀಸ್ ಕಸ್ಟಡಿಯಲ್ಲಿಟ್ಟಿದ್ದರು. ಪ್ರಾರಂಭದಲ್ಲಿ ನಮಗೆ ಶಾರೀರಿಕ ತೊಂದರೆ ನೀಡಿದರು. ಅದರ ಪರಿಣಾಮವೇನೂ ಆಗದ ಕಾರಣ ಅವರು ಮಾನಸಿಕ ತೊಂದರೆ ಕೊಡಲು ಪ್ರಾರಂಭಿಸಿದರು. ಒಬ್ಬ ಪೊಲೀಸ್ ಅಧಿಕಾರಿಯು ಹಾಡು ಹೇಳುತ್ತಿದ್ದನು ಮತ್ತು ನಮಗೆ ಕುಣಿಯಲು ಹೇಳುತ್ತಿದ್ದನು. ಒಬ್ಬ ಸಾಧಕನನ್ನು ದಿನವಿಡೀ ಕುಣಿಸಿದ್ದನು. ಒಮ್ಮೆ ನಮ್ಮ ಒಬ್ಬ ಸಾಧಕಿ ಅಲ್ಲಿಗೆ ಬಂದಿದ್ದರು. ಅವರೆದುರಿಗೆ ಪೊಲೀಸ್ ನಿರೀಕ್ಷಕನು ನನಗೆ ‘ನನಗೆ ಸಾಷ್ಟಾಂಗ ನಮಸ್ಕಾರ ಮಾಡು’ ಎಂದು ಹೇಳಿದನು ಮತ್ತು ಮಾಡದಿದ್ದರೆ ಥಳಿಸುವುದಾಗಿ ಹೇಳಿದನು. ಪ್ರಾರಂಭದಲ್ಲಿ ನಾನು ಸಾಷ್ಟಾಂಗ ನಮಸ್ಕಾರ ಮಾಡಲಿಲ್ಲವೆಂದು ನನಗೆ ಅವನು ಹೊಡೆದನು. ನಂತರ ನಾನು ನಮಸ್ಕಾರ ಮಾಡಲೇಬೇಕಾಯಿತು. ಭಗವಾನ್ ಶ್ರೀಕೃಷ್ಣ ಮತ್ತು ಪ.ಪೂ. ಗುರುದೇವರ ಆಶೀರ್ವಾದ ಮತ್ತು ಸಾಧನೆಯಿಂದಾಗಿಯೇ ನಾವು ಇದನ್ನೆಲ್ಲ ಸಹಿಸಲು ಸಾಧ್ಯವಾಯಿತು. - ಶ್ರೀ. ವಿನಯ ತಳೇಕರ

ಪೀಡಿಸುವ ಪೊಲೀಸರಿಗೆ ಸಹಕರಿಸುವ ಡಾಕ್ಟರ್ !
ನಾಸಿಕಕ್ಕೆ ಹೋದ ಬಳಿಕ ಏನನ್ನೂ ಮಾತನಾಡದಂತೆ ಬೆದರಿಕೆ ಯನ್ನೊಡ್ಡಿ ನನ್ನನ್ನು ವೈದ್ಯರ ಬಳಿಗೆ ಕರೆದೊಯ್ಯುವುದು; ಆದರೆ ವೈದ್ಯರು ನನ್ನನ್ನು ತಪಾಸಣೆ ಮಾಡದೆಯೇ ಮರಳಿ ಕಳುಹಿಸುವುದು : ನಾವು ಧುಳೆಯಿಂದ ನಾಸಿಕದಲ್ಲಿರುವ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಕಛೇರಿಗೆ ತಲುಪಿದ್ದೆವು. ಬಳಿಕ ನನ್ನನ್ನು ಅವರು ಮೊದಲು ವೈದ್ಯರ ಬಳಿಗೆ ಕರೆದೊಯ್ದರು. ಕರೆದೊಯ್ಯುವ ಮೊದಲು ಅವರು ನನಗೆ, ‘ನೀನು ಏನೂ ಮಾತನಾಡಬಾರದು. ಕೇವಲ ನನಗೆ ಜ್ವರ ಬರುತ್ತಿದೆಯೆಂದಷ್ಟೇ ಹೇಳಬೇಕು’ ಎಂದು ಹೇಳಿದರು. ಆದರೆ ನನಗೆ, ತಲೆ ಸುತ್ತಿದಂತಾಗುತ್ತದೆ. ಕಣ್ಣುಕತ್ತಲೆ ಬರುತ್ತದೆ, ರಕ್ತದೊತ್ತಡ ಕಡಿಮೆಯಾಗಿದೆ, ಎಂದು ಹೇಳಬೇಕೆಂದೆನಿಸುತ್ತಿತ್ತು. ಆದರೆ ವೈದ್ಯರು ನನ್ನ ತಪಾಸಣೆಯನ್ನು ಮಾಡದೆಯೇ ‘ಇವನಿಗೆ ಏನೂ ಆಗಿಲ್ಲ’ ಎಂದು ಹೇಳಿದರು. - ಶ್ರೀ. ಪ್ರಶಾಂತ ಜುವೇಕರ್ (ಈ ಉದಾಹರಣೆಯನ್ನು ನೋಡಿದರೆ ಡಾ. ವೀರೇಂದ್ರಸಿಂಹ ತಾವಡೆಯವರ ವೈದ್ಯಕೀಯ ತಪಾಸಣೆಯ ಬಗ್ಗೆ ಆಸ್ಪತ್ರೆಯವರು ನೀಡಿರುವ ವರದಿಯ ಮೇಲೆ ಹೇಗೆ ವಿಶ್ವಾಸವಿಡುವುದು ? - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ನಿರಪರಾಧಿ ಸಾಧಕರಿಗೆ ನೀಡಿದ ಅಮಾನವೀಯ ಹಿಂಸೆ !