‘ಹಿಂದೂ ರಾಷ್ಟ್ರ ’ ಶಬ್ದದ ಬದಲು ‘ಸನಾತನ ಧರ್ಮ ರಾಜ್ಯ’ ಈ ಶಬ್ದವನ್ನು ಉಪಯೋಗಿಸುವ ವಿಷಯದಲ್ಲಿ ಪ.ಪೂ. ಪಾಂಡೆ ಮಹಾರಾಜರು ಹೇಳಿದ ರಹಸ್ಯ ಜ್ಞಾನ !

ಪ.ಪೂ. ಪಾಂಡೆ ಮಹಾರಾಜ
ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದಲ್ಲಿ ಮಹರ್ಷಿಗಳು ೧೮/೨೬ ರಲ್ಲಿ ಜೀವನಾಡಿಪಟ್ಟಿ ಕ. ೮೨ ರಲ್ಲಿ ‘ಹಿಂದೂ ರಾಷ್ಟ್ರ’ ಈ ಶಬ್ದದ ಬದಲು ‘ಸನಾತನ ಧರ್ಮರಾಜ್ಯ’ ಈ ಶಬ್ದವನ್ನು ಉಪಯೋಗಿಸಬೇಕು, ಎಂಬ ಅರ್ಥದ ಚೌಕಟ್ಟು ಮುದ್ರಣವಾಗಿತ್ತು.
ಚೌಕಟ್ಟಿನಲ್ಲಿ ಮುಂದೆ ಹೀಗೆ ಸಹ ಬರೆದಿತ್ತು, ಸನಾತನವು ಮೂಲ ಧರ್ಮವಾಗಿದೆ. ಕಾಲದ ಪ್ರವಾಹದಲ್ಲಿ ಅದಕ್ಕೆ ಹಿಂದೂ ಎಂಬ ಹೆಸರು ರೂಢಿಯಾಯಿತು. ‘ಸಿಂಧೂ ನದಿಯ ತೀರದಲ್ಲಿ ವಾಸಿಸುವವರು ಹಿಂದೂ’, ಎಂದು ಹಿಂದೂ ಶಬ್ದದ ಉತ್ಪತ್ತಿಯ ಬಗ್ಗೆ ಹೇಳಲಾಗುತ್ತದೆ. ಈ ವಿಷಯದ ಬಗ್ಗೆ ಕೆಲವು ವರ್ಷಗಳ ಹಿಂದೆ ಮಾತನಾಡುವಾಗ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನಂತೆ ಹೇಳಿದ್ದರು, ‘ಸದ್ಯ ಹಿಂದೂ ಧರ್ಮ ಎಂಬ ಹೆಸರು ರೂಢಿಯಲ್ಲಿದ್ದರೂ ಅದರ ಮೂಲ ಹೆಸರು ಸನಾತನ ಧರ್ಮ ಎಂದೇ ಆಗಿದೆ. ನಾವು ಸದ್ಯ ರೂಢಿಯಲ್ಲಿದೆಯೆಂದು ಹಿಂದೂ ಧರ್ಮ ಎಂದು ಉಲ್ಲೇಖಿಸೋಣ; ಆದರೆ ಮುಂದೆ ಹಿಂದೂ ರಾಷ್ಟ್ರದಲ್ಲಿ ‘ಸನಾತನ ಧರ್ಮ’ ಎಂದೇ ಉಲ್ಲೇಖಿಸೋಣ. ಈಗ ಮಹರ್ಷಿಗಳು ನೀಡಿದ ಸಂದೇಶವೂ ಅದೇ ಅರ್ಥದ್ದಾಗಿದೆ. ಮಹಷಿಗಳು ಸಾವಿರಾರು ವರ್ಷಗಳ ಹಿಂದೆ ನಾಡಿಪಟ್ಟಿಯಲ್ಲಿ ಭವಿಷ್ಯಕಥನ ಸ್ವರೂಪದಲ್ಲಿ ಮಾಡಿದ ಲೇಖನ ಮತ್ತು ಪ.ಪೂ. ಡಾಕ್ಟರರು ವ್ಯಕ್ತಪಡಿಸಿದ ಈ ಮೇಲಿನ ವಿಚಾರದಲ್ಲಿನ ಸಾಮ್ಯತೆಯನ್ನು ನೋಡುವಾಗ ಅವರ ತ್ರಿಕಾಲಜ್ಞಾನದ ಅರಿವಾಗುತ್ತದೆ. ‘ಸನಾತನ ಧರ್ಮವೆಂದರೇನು ?’, ‘ಸನಾತನ ಧರ್ಮ ರಾಜ್ಯವೆಂದರೇನು ?’, ಈ ವಿಷಯದಲ್ಲಿ ಪ.ಪೂ. ಪಾಂಡೆ ಮಹಾರಾಜರು ಮಾಡಿದ ವಿವೇಚನೆಯನ್ನು ಮುಂದೆ ನೀಡುತ್ತಿದ್ದೇವೆ.

೧. ಮಹರ್ಷಿಗಳು ‘ಹಿಂದೂ ರಾಷ್ಟ್ರ’ ಶಬ್ದವನ್ನು
ಬದಲಾಯಿಸಿ ‘ಸನಾತನ ಧರ್ಮ ರಾಜ್ಯ’ ಈ ಶಬ್ದವನ್ನು ಪ್ರಚಲಿತಗೊಳಿಸಲು ಏಕೆ ಹೇಳಿರಬಹುದು ?
ಪ.ಪೂ. ಡಾಕ್ಟರರು ಆರಂಭದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗೆ ಸಂಬಂಧಿಸಿ ‘ಹಿಂದೂ ರಾಷ್ಟ್ರ’ ಎಂಬ ಶಬ್ದವನ್ನು ಬಳಸಿದರು. ಈಗ ಮಹರ್ಷಿಗಳು ‘ಸನಾತನ ಧರ್ಮ ರಾಜ್ಯ’ ಈ ಮೂಲ ಶಬ್ದವನ್ನು ಪುನಃ ಬಳಸಲು ಹಿಂದೂ ರಾಷ್ಟ್ರವೆಂದು ಹೇಳದೆ ಸನಾತನ ಧರ್ಮ ರಾಜ್ಯ ಶಬ್ದವನ್ನೇ ಬಳಸಲು ಹೇಳಿದ್ದಾರೆ. ಅವರು ಹೀಗೇಕೆ ಹೇಳಿರಬಹುದು ?, ಎಂದು ವಿಚಾರ ಮಾಡಿದರೆ, ಇದು ಅರಿವಾಗಬಹುದು. ಅಂದರೆ ಧರ್ಮದ ಮೂಲ ಸ್ವರೂಪವಾಗಿರುವ, ಅವಿನಾಶಿಯಾಗಿರುವ, ಸನಾತನ ಧರ್ಮ ರಾಜದ ಪುನರ್‌ಸ್ಥಾಪನೆಗೆ ಯಾರು ಸಹಾಯ ಮಾಡುವರೋ, ಅವರು ನಿಜವಾದ ಕರ್ಮಹಿಂದೂಗಳು. ಯಾರಿಗೆ ನಿಜವಾಗಿಯೂ ಈ ರಾಷ್ಟ್ರ ನಿರಂತರ ಅಖಂಡ ಹಿಂದೂ ರಾಷ್ಟ್ರವಾಗಿರಬೇಕೆಂದು ಅನಿಸುತ್ತದೆಯೋ, ಅವರು ಸನಾತನ ಧರ್ಮ ರಾಜ್ಯ ನಿರ್ಮಾಣದ ಕಾರ್ಯದಲ್ಲಿ ಸಹಾಯ ಮಾಡುವರು.
೧ ಅ. ಸನಾತನ ಎಂದರೇನು ? : ಸನಾತನವೆಂದರೆ ವೇದಪುರಸ್ಕೃತ, ಪುರಾತನ, ನಿತ್ಯನೂತನ, ಆನಂದದಾಯಕ, ಚೈತನ್ಯಯುಕ್ತ, ನಿರಂತರ ಅರಳಿರುವ, ಅನಾದಿ ಕಾಲದಿಂದ ನಡೆಯುತ್ತಾ ಬಂದಿರುವ, ಆದಿ-ಅನಾದಿ, ಎಲ್ಲ ಜೀವ-ಪ್ರಾಣಿಮಾತ್ರರಿಗೆ ಸುಖದಾಯಕವಾಗಿರುವಂತದ್ದು !
೧ ಆ. ಹಿಂದೂ ಎಂದು ಯಾರಿಗೆ ಹೇಳಬೇಕು ? : ಹಿಂದೂ ಎಂದರೆ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂಅನ್ನು ನಿರ್ಮೂಲನೆ ಮಾಡುವವ, ಸತ್‌ವೃತ್ತಿ ಮತ್ತು ಸದಾಚಾರಿ ಆಗಿರುವವನು; ಏಕೆಂದರೆ ಸ್ವಭಾವದೋಷ ನಿರ್ಮೂಲನೆಯಾಗದೇ ಸದಾಚಾರ ನಮ್ಮಲ್ಲಿ ಬರುವುದಿಲ್ಲ. ಇಂದಿನ ಹಿಂದೂ ಅಧರ್ಮಾಚರಣಿಯಾಗಿರುವುದರಿಂದ ಕೇವಲ ಜನ್ಮಹಿಂದೂ ಆಗಿದ್ದಾನೆ. ಅವನನ್ನು ಪುನಃ ಧರ್ಮಾಚರಣಿಯನ್ನಾಗಿ ಮಾಡಿ ಕರ್ಮ ಹಿಂದೂ ಮಾಡಲಿಕ್ಕಿದೆ.
೧ ಇ. ಸನಾತನವು ಮೂಲಧರ್ಮವಾಗಿರುವುದು : ‘ಸನಾತನ’ ಈ ಮೂಲಧರ್ಮವನ್ನು ಭಗವಂತನೇ ನಿರ್ಮಿಸಿದ್ದಾನೆ. ಅದು ಅಪೌರುಷೇಯವಾಗಿದೆ. ಈ ಸೃಷ್ಟಿಯನ್ನು ಅವನೇ ನಿರ್ಮಿಸಿದ್ದಾನೆ ಹಾಗೂ ಅದರ ನಿಯೋಜನೆಯನ್ನೂ ಅವನೇ ಮಾಡಿದ್ದಾನೆ. ಅದು ಸೃಷ್ಟಿಯ ನಿರ್ಮಾಣದಿಂದಲೂ ಅಸ್ತಿತ್ವದಲ್ಲಿದೆ; ಆದ್ದರಿಂದ ಸನಾತನ ಆಗಿದೆ.
೧ ಈ. ಧರ್ಮವೆಂದರೇನು ? : ‘ಧೃ ಧಾರಯತಿ ಇತಿ ಧರ್ಮ’ ಅಂದರೆ, ಒಳ್ಳೆಯ ವಿಚಾರ ಇರುವಂತಹದ್ದು. ಭೌತಿಕ ಮತ್ತು ಪಾರಮಾರ್ಥಿಕ ಕಲ್ಯಾಣ ಮಾಡುವಂತಹದ್ದು, ಸಮೃದ್ಧ ಮಾಡುವಂತಹದ್ದು ಧರ್ಮ. ಯಾವುದು ಅತ್ಯಾಚಾರಿ, ಭಯವನ್ನುಂಟು ಮಾಡುತ್ತದೆಯೋ ಮತ್ತು ದುಷ್ಕೃತ್ಯಗಳನ್ನು ಒಳಗೊಂಡಿರುತ್ತದೆಯೋ, ಅದು ಅಧರ್ಮ.
೧ ಉ. ಸನಾತನ ಧರ್ಮ ಎಂದರೇನು ? : ಯಾವುದು ಸದಾಚಾರದಿಂದ ನಿರಂತರ ಚೈತನ್ಯಮಯವಾಗಿರುತ್ತದೆಯೋ, ಅದು ಸನಾತನ ಧರ್ಮ. ಇಲ್ಲಿ ಯಾವುದೇ ರೀತಿಯ ಚಿಂತೆಯಿಲ್ಲ, ನಿರಂತರ ಆನಂದದಿಂದ ಜೀವಿಸುವ ಶಕ್ತಿ ಯಾವುದರಿಂದ ನಿರ್ಮಾಣವಾಗುವುದೋ, ಅದುವೇ ಸನಾತನ ಧರ್ಮ.
೨. ಸನಾತನ ಧರ್ಮದ ಉತ್ಪತ್ತಿ ಮತ್ತು ಅದರ ಮಹತ್ವ
೨ ಅ. ಕಾಮನೆಯುಕ್ತ, ಸುಖಿಯಾಗಿ ಕಾಣಿಸುವ ಮಾಯೆಯ ಚಿಂತನೆಯನ್ನು ಬಿಟ್ಟು ಕೇವಲ ನಿತ್ಯ ಸನಾತನವಾಗಿರುವ ಪರಮೇಶ್ವರನ ಚಿಂತನೆ ಮಾಡುವುದು, ಇದೇ ಸನಾತನ ಧರ್ಮದ ಕಾರ್ಯವಾಗಿರುವುದು.
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ॥
- ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೫ , ಶ್ಲೋಕ ೧
ಅರ್ಥ : ಭಗವಾನ್ ಶ್ರೀಕೃಷ್ಣನು ಹೀಗೆಂದಿದ್ದಾನೆ, ಆದಿಪುರುಷ ಪರಮೇಶ್ವರರೂಪಿ ಮೂಲವಿರುವ, ಬ್ರಹ್ಮದೇವರೂಪಿ ಮುಖ್ಯ ರೆಂಬೆ ಯಾಗಿರುವ, ಸಂಸಾರರೂಪಿ ಅಶ್ವತ್ಥವೃಕ್ಷವನ್ನು ಅವಿನಾಶಿಯೆಂದು ಹೇಳುತ್ತಾರೆ, ಅದೇ ರೀತಿ ವೇದವನ್ನು ಅದರ ಎಲೆಗಳೆಂದು ಹೇಳಲಾಗುತ್ತದೆ. ಆ ಸಂಸಾರರೂಪಿ ವೃಕ್ಷವನ್ನು ಯಾರು ಮೂಲದಿಂದ ಸಂಪೂರ್ಣ ತಿಳಿದುಕೊಳ್ಳುತ್ತಾರೆಯೋ, ಅವರು ವೇದಗಳ ತಾತ್ಪರ್ಯವನ್ನು ತಿಳಿದಿರುವವ ರಾಗಿರುತ್ತಾರೆ.
ವಿವರಣೆ : ಮೂಲಸ್ವರೂಪದೊಂದಿಗೆ ಅನುಸಂಧಾನದಲ್ಲಿರುವ ಆ ಊರ್ಧ್ವಭಾಗವು ಆದಿ-ಅನಾದಿ ಕೃಷ್ಣರೂಪದಲ್ಲಿ ಕಾರ್ಯ ಮಾಡುತ್ತದೆ. ಯಾವುದು ಪ್ರಳಯದ ನಂತರವೂ ಚೈತನ್ಯರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆಯೋ, ಅದೇ ಸರ್ವಶಕ್ತಿಮಾನ ಸಂಸಾರರೂಪಿ ವೃಕ್ಷದ
ಕಾರಣವಾಗಿದೆ; ಆದ್ದರಿಂದಲೇ ಇದಕ್ಕೆ ಊರ್ಧ್ವಮೂಲ, ಅಂದರೆ ಮೂಲ
ಮೇಲಿನ ದಿಕ್ಕಿಗಿರುವ ವೃಕ್ಷವೆಂದು ಹೇಳುತ್ತಾರೆ. ಆ ಆದಿಪುರುಷ ಪರಮೇಶ್ವರ ನಿಂದ ಉತ್ಪನ್ನವಾದ ಈ ಸಂಸಾರರೂಪಿ ವೃಕ್ಷವು ಹಿರಣ್ಯಗರ್ಭರೂಪದ ಬ್ರಹ್ಮದೇವರಿಂದ ಪ್ರಕಟವಾಗಿದೆ. ಅವರಿಂದಲೇ ಇವೆಲ್ಲ ವಿಸ್ತಾರವಾಗಿದೆ; ಆದ್ದರಿಂದ ಅಧಃಶಾಖೆ ಎಂದು ಹೇಳಲಾಗಿದೆ; ಆದರೆ ಈ ವೃಕ್ಷದ ಮೂಲವು ಅವಿನಾಶಿಯಾಗಿದೆ. ಅನಾದಿ ಕಾಲದಿಂದ ಇದರ ಪರಂಪರೆ ನಡೆದು ಬಂದಿದೆ; ಆದ್ದರಿಂದಲೇ ಇದಕ್ಕೆ ಅವಿನಾಶಿಯೆಂದು ಹೇಳುತ್ತಾರೆ.
ಭಗವಂತನ ಯೋಗಮಾಯೆಯಿಂದ ಉತ್ಪನ್ನವಾದ ಈ ಸಂಸಾರವು ಕ್ಷಣಿಕ, ವಿನಾಶಕಾರಿ ಹಾಗೂ ದುಃಖಸ್ವರೂಪಿಯಾಗಿದೆ. ಅದಕ್ಕಾಗಿ ಇಂತಹ ಕಾಮನೆಯುಕ್ತ, ಸುಖದಾಯಕವೆಂದು ಕಾಣಿಸುವ ಮಾಯೆಯ ಚಿಂತನೆಯನ್ನು ಬಿಟ್ಟು ಕೇವಲ ನಿತ್ಯ ಸನಾತನ ಪರಮೇಶ್ವರನ ಚಿಂತನೆಯನ್ನು ಮಾಡುವುದೇ, ಸನಾತನ ಧರ್ಮದ ಕಾರ್ಯವಾಗಿದೆ.
೨ ಆ. ಶುದ್ಧ ಅಂತಃಕರಣದಿಂದ ಚೈತನ್ಯಶಕ್ತಿ ಪ್ರಕಟವಾಗಿ ಅದರ ಮೂಲಕ ಶ್ರೇಷ್ಠ ಕಾರ್ಯಗಳನ್ನು ಮಾಡಿ ನಮ್ಮ ಆಯುಷ್ಯವನ್ನು ೧೦೦ ವರ್ಷ ಆನಂದದಿಂದ ಕಳೆಯಬೇಕೆಂಬುದು ಸನಾತನ ಧರ್ಮದ ಬೋಧನೆಯಾಗಿರುವುದು
ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಮ್ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಙ್ಗೆಸ್ತುಷ್ಟುವಾಂಸಸ್ತನೂಭಿಃ ವ್ಯಶೇಮ ದೇವಾಹಿತಂ ಯದಾಯುಃ ॥
- ಯಜುರ್ವೇದ, ಅಧ್ಯಾಯ ೨೫, ಶ್ಲೋಕ ೨೧
ಅರ್ಥ : ಓ ದೇವರೇ, ನಾವು ಕಿವಿಗಳಿಂದ ಕಲ್ಯಾಣಕಾರಿ ವಚನಗಳನ್ನು ಕೇಳಬೇಕು. ಹೇ ಯಜ್ಞವನ್ನು ರಕ್ಷಿಸುವ ದೇವರೇ, ಕಣ್ಣುಗಳಿಂದ ನಾವು ಕಲ್ಯಾಣಕಾರಿ ವಸ್ತುಗಳನ್ನು ನೋಡಬೇಕು. ಗಟ್ಟಿಮುಟ್ಟಾದ ಅವಯವಗಳುಳ್ಳ ಶರೀರದಿಂದ ಭಗವಂತನನ್ನು ಸ್ತುತಿಸುತ್ತಾ ಲಭಿಸಿದ ಆಯುಷ್ಯವನ್ನು ದೇವರ ಕಾರ್ಯದಲ್ಲಿ ಸದ್ವಿನಿಯೋಗ ಮಾಡಬೇಕು.
ವಿವರಣೆ : ಜೀವನದಲ್ಲಿ ಆನಂದ ಪಡೆಯಲು ಸದೃಢ ದೇಹದ ಆವಶ್ಯಕತೆ ಎಷ್ಟಿದೆ, ಎಂಬುದು ಈ ಶ್ಲೋಕದಿಂದ ತಿಳಿಯುತ್ತದೆ. ಸದೃಢ ದೇಹದಿಂದ ಭಗವಂತನನ್ನು ಸ್ತುತಿಸಿ (ಸಾಧನೆ ಮಾಡಿ) ಈಶ್ವರಪ್ರಾಪ್ತಿ ಮಾಡುವುದು ಜೀವನದ ಧ್ಯೇಯವಾಗಿದೆ. ಅದಕ್ಕಾಗಿ ಒಳ್ಳೆಯ ವಿಚಾರ ಮಾಡುವುದು, ಉದಾ. ಕಿವಿಯಿಂದ ಒಳ್ಳೆಯದನ್ನು ಕೇಳುವುದು, ಕಲ್ಯಾಣಕಾರಿ ಶಬ್ದಗಳನ್ನು ಕೇಳುವುದು, ಸತ್ಕರ್ಮ ಮಾಡುವುದು, ಕಣ್ಣಿನಿಂದ ಒಳ್ಳೆಯ ದೃಶ್ಯಗಳನ್ನು ನೋಡುವುದು, ಹೀಗೆ ಮಾಡಿದರೆ ಒಳ್ಳೆಯ ಸಂಸ್ಕಾರ ನಿರ್ಮಾಣವಾಗುತ್ತವೆ. ಅದರ ಮೂಲಕ ಅಂತಃಕರಣ ಶುದ್ಧವಾಗುತ್ತದೆ ಮತ್ತು ಚೈತನ್ಯಶಕ್ತಿ ಪ್ರಕಟವಾಗಿ ಅದರ ಮೂಲಕ ಮಹಾನ್ ಕಾರ್ಯಗಳಾಗುತ್ತವೆ. ಈ ರೀತಿ ನಮ್ಮ ಜೀವನ ‘ಜೀವೇತ್ ಶರದಃ ಶತಮ್’ ಎಂಬಂತೆ ೧೦೦ ವರ್ಷ ಆನಂದದಲ್ಲಿ ಕಳೆಯುತ್ತದೆ. ಇದು ಧರ್ಮವಾಗಿದೆ.
೨ ಇ. ಸೃಷ್ಟಿಯ ಎಲ್ಲ ಪ್ರಾಣಿಮಾತ್ರರು ಸುಖವಾಗಿರಬೇಕು, ಹೀಗೆ ಸನಾತನ ಧರ್ಮದ ವ್ಯಾಪಕ ವಿಚಾರವಿರುವುದು
ಸರ್ವೇತ್ರ ಸುಖಿನಃ ಸಂತು ಸರ್ವೇ ಸಂತು ನಿರಾಮಯಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ ದುಃಖಮಾಪ್ನುಯಾತ್ ॥
ಅರ್ಥ : ಎಲ್ಲ ಪ್ರಾಣಿಮಾತ್ರರು ಸುಖವಾಗಿರಲಿ. ಎಲ್ಲರಿಗೂ ಒಳ್ಳೆಯ ಆರೋಗ್ಯ ಲಭಿಸಲಿ. ಎಲ್ಲ ಜನರು ಪರಸ್ಪರರ ಒಳಿತನ್ನು ನೋಡಿಕೊಳ್ಳಲಿ. ಯಾರಿಗೂ ಎಂದಿಗೂ ದುಃಖ ಬಾರದಿರಲಿ. ಈ ರೀತಿಯ ವಿಚಾರ ವನ್ನಿಟ್ಟುಕೊಂಡಿರುವುದರಿಂದ ಇದರಲ್ಲಿ ಎಲ್ಲ ಪ್ರಾಣಿಮಾತ್ರರ ಕಲ್ಯಾಣವೇ ಆಗಲಿದೆ. ಇಂತಹ ಧರ್ಮದಿಂದಲೇ ರಾಮರಾಜ್ಯ ಸ್ಥಾಪನೆಯಾಗಿತ್ತು.
ವಿವರಣೆ : ಸನಾತನ ಧರ್ಮದ ವಿಚಾರಧಾರೆಯು ಕೇವಲ ಕೆಲವೇ ಸಮೂಹಗಳ ಕಲ್ಯಾಣವಾಗಬೇಕೆಂದು ಇರದೆ ವಿಶ್ವದ ಎಲ್ಲ ಜೀವರಾಶಿಗಳು ಸುಖವಾಗಿರಬೇಕೆಂದಿದೆ. ಈ ವಿಚಾರಕ್ಕನುಸಾರ ನಿಯೋಜನೆ ಮಾಡಿ ಕಾರ್ಯ ಮಾಡುವ ಧ್ಯೇಯವಿರಬೇಕು. ಅದೇ ರೀತಿ ಹಿಂದಿನ ಕಾಲದಲ್ಲಿ ನಿಸರ್ಗಕ್ಕನುಸಾರ ವರ್ತಿಸುವವರನ್ನು ಆರ್ಯರೆಂದು ಹೇಳುತ್ತಿದ್ದರು. ಇಂತಹ ಸದಾಚಾರಿ, ಸುಸಂಸ್ಕೃತ ಆರ್ಯರು ವಿಶ್ವದಾದ್ಯಂತ ಆಗಬೇಕು. ಅವರಿಂದ ವಿಶ್ವದ ಎಲ್ಲ ಜೀವರಾಶಿಗಳು ಸುಖ ಹಾಗೂ ಆನಂದಿಂದ ಇರುವವು. ಅದಕ್ಕಾಗಿಯೇ ‘ಕೃಣ್ವಂತೋ ವಿಶ್ವಮಾರ್ಯಮ್’ ಎಂದು ವೇದಗಳಲ್ಲಿ ಹೇಳಲಾಗಿದೆ.
೨ ಈ. ದೇಹದಲ್ಲಿ ನೆಲೆಸಿರುವ ಜೀವಾತ್ಮನಿಗೆ ಭಗವಂತನು ಸನಾತನ ಅಂಶವೆಂದು ಹೇಳುವುದು ಹಾಗೂ ಎಲ್ಲ ಚರಾಚರ ಭೂತಸಮುದಾಯವೂ ಅದರ ಅವ್ಯಕ್ತ ಸ್ವರೂಪದಿಂದ ಉತ್ಪನ್ನವಾಗಿರುವುದು
ಮಮೈವಾಂಶೋ ಜೀವಲೋಕೆ ಜೀವಭೂತಃ ಸನಾತನಃ
ಮನಃಷಷ್ಠಾನೀಂದ್ರಿಯಾಣಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥
- ಶ್ರೀಮದ್ಭಗವದ್ಗೀತೆ, ಅಧ್ಯಾಯ ೧೫, ಶ್ಲೋಕ ೭
ಅರ್ಥ : ಈ ದೇಹದಲ್ಲಿರುವ ಈ ಸನಾತನ ಜೀವಾತ್ಮ ನನ್ನದೇ ಅಂಶವಾಗಿದೆ ಹಾಗೂ ಅದೇ ಪ್ರಕೃತಿಯಲ್ಲಿರುವ ಮನಸ್ಸನ್ನು ಮತ್ತು ೫ ಇಂದ್ರಿಯಗಳನ್ನು ಆಕರ್ಷಿಸುತ್ತದೆ.
ವಿವರಣೆ : ಇಲ್ಲಿ ಜೀವಕ್ಕೆ ಸನಾತನ ಅಂಶವೆಂದು ಹೇಳಲಾಗಿದೆ; ಏಕೆಂದರೆ ಹೇಗೆ ಆಕಾಶವು ಅಖಂಡವಾಗಿದ್ದರೂ, ಬೇರೆ ಬೇರೆ ಕಾಣಿಸು ತ್ತದೆಯೋ, ಅದೇ ರೀತಿ ಎಲ್ಲ ಭೂತಗಳಲ್ಲಿ ಏಕರೂಪವಾಗಿ ನೆಲೆಸಿದ್ದರೂ ಪರಮಾತ್ಮನು ಬೇರೆ ಬೇರೆ ಕಾಣಿಸುತ್ತಾನೆ; ಆದ್ದರಿಂದ ಭಗವಂತನು ದೇಹ ದಲ್ಲಿ ನೆಲೆಸಿರುವ ಜೀವಾತ್ಮಕ್ಕೆ ತನ್ನ ಅಂಶ ಅಂದರೆ ಸನಾತನ ಅಂಶವೆಂದು ಹೇಳಿದ್ದಾನೆ. ಎಲ್ಲ ಚರಾಚರ ಭೂತಸಮೂಹಗಳು ಸಹ ಅವನ ಅವ್ಯಕ್ತ ಸ್ವರೂಪದಿಂದ (ಬ್ರಹ್ಮದೇವನಿಂದ) ಉತ್ಪನ್ನವಾಗಿವೆ.
೨ ಉ. ಕಾಲಾತೀತವಾಗಿ ಭಗವಂತನ ಚಿಂತನೆ ಮಾಡುವ ಜೀವಗಳ ಯೋಗಕ್ಷೇಮವನ್ನು ಭಗವಂತನೇ ನೋಡಿಕೊಳ್ಳುವುದು ಹಾಗೂ ಇಂತಹ ಜೀವಗಳಿಗೆ ಪುನರ್ಜನ್ಮ ಇಲ್ಲದಿರುವುದು
ಯಾಂತಿ ದೇವವೃತಾ ದೇವಾನ್ಪಿತ್ ಯಾಂತೀ ಪಿತೃವೃತಾಃ
ಭೂತಾನಿ ಯಾಂತಿ ಭೂತೇಜ್ಯಾ ಯಾಂತಿ ಮದ್ಯಾಜಿನೋಪಿ ಮಾಮ್ ॥
- ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೨೫
ಅರ್ಥ : ದೇವರ ಪೂಜೆ ಮಾಡುವವರು ದೇವರನ್ನು ಭೇಟಿಯಾಗು
ತ್ತಾರೆ. ಪಿತೃಗಳ ಪೂಜೆ ಮಾಡುವವರು ಪಿತೃಗಳಿಗೆ ಸಿಗುತ್ತಾರೆ. ಭೂತ
ಗಳ ಪೂಜೆ ಮಾಡುವವರು ಭೂತಗಳಿಗೆ ಪ್ರಾಪ್ತಿಯಾಗುತ್ತಾರೆ ಮತ್ತು ನನ್ನ ಪೂಜೆ ಮಾಡುವ ಭಕ್ತರು ನನ್ನನ್ನು ಭೇಟಿಯಾಗುತ್ತಾರೆ. ಆದ್ದರಿಂದ ನನ್ನ ಭಕ್ತರಿಗೆ ಪುನರ್ಜನ್ಮವಿಲ್ಲ.
ವಿವರಣೆ : ಇತರ ಪಂಥ, ಸಂಪ್ರದಾಯಗಳು ತಮ್ಮ ಕಾಮನೆಗಳು ಪೂರ್ಣವಾಗುವ ಸಲುವಾಗಿ ದೇವರ ಪೂಜೆ ಮಾಡುತ್ತವೆ; ಏಕೆಂದರೆ ಅವರಿಗೆ ಕರ್ಮದಿಂದ ಉತ್ಪನ್ನವಾಗುವ ಸಿದ್ಧಿ ಶೀಘ್ರವಾಗಿ ಪ್ರಾಪ್ತಿಯಾಗುತ್ತದೆ.
ಭೂತ, ಪ್ರೇತ ಮತ್ತು ಪಿಶಾಚ ಭೂತ, ಪ್ರೇತ ಮತ್ತು ಪಿಶಾಚಿಗಳ ಪೂಜೆ ಮಾಡುವವರು ಭೂತಗಳಿಗೆ ಪ್ರಾಪ್ತಿಯಾಗುತ್ತಾರೆ; ಆದರೆ ಇಂತಹವರು ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕುತ್ತಾರೆ. ತದ್ವಿರುದ್ಧ ಕಾಲಾತೀತವಾಗಿ ಭಗವಂತನ ಚಿಂತನೆ ಮಾಡುವವರ ಯೋಗಕ್ಷೇಮವನ್ನು ಭಗವಂತನೇ ನೋಡಿಕೊಳ್ಳುತ್ತಾನೆ ಹಾಗೂ ಅವರಿಗೆ ಪುನರ್ಜನ್ಮವಿರುವುದಿಲ್ಲ. ವಿಶೇಷವೆಂದರೆ, ಹೀಗೆ
ನಿರಂತರ ಭಗವಂತನ ಅನುಸಂಧಾನದಲ್ಲಿರುವವರು ಮಾಯೆಯಿಂದ ಬಹಳ ದೂರ ಹೋಗುತ್ತಾರೆ. ದುಷ್ಕೃತ್ಯ ಮಾಡಿ ಸ್ವರ್ಗಪ್ರಾಪ್ತಿಯನ್ನು ಇಚ್ಚಿಸುವ ಪಂಥದ ಜನರಿಗೆ ಅವರ ದುಷ್ಕೃತ್ಯಗಳಿಂದಾಗಿ ಸ್ವರ್ಗಪ್ರಾಪ್ತಿ ಯಂತೂ ದೂರದ ಮಾತು; ಆದರೆ ಅವರು ಯಮಯಾತನೆಯನ್ನು ಅನುಭವಿಸಬೇಕಾಗುತ್ತದೆ; ಏಕೆಂದರೆ ಸ್ವರ್ಗಪ್ರಾಪ್ತಿಗೂ ಪುಣ್ಯ ಸಂಚಯ ವಿರಬೇಕು. ಸ್ವರ್ಗಪ್ರಾಪ್ತಿ ಆದನಂತರ ಅವನು ಪುನಃ ಮರ್ತ್ಯಲೋಕಕ್ಕೆ ಬರಬೇಕಾಗುತ್ತದೆ. ಅದಕ್ಕಿಂತ ಸನಾತನ ಧರ್ಮಕ್ಕನುಸಾರ ಆಚರಣೆ ಮಾಡಿದರೆ ಅವನಿಗೆ ಭೌತಿಕ ಹಾಗೂ ಪಾರಮಾರ್ಥಿಕ ಸುಖ ಲಭಿಸಿ ಅವನು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತನಾಗುತ್ತಾನೆ.
೨ ಊ. ಕರ್ಮಯೋಗಸ್ವರೂಪದ ಧರ್ಮಕ್ಕನುಸಾರ ಸ್ವಲ್ಪವಾದರೂ ಸಾಧನೆ ಮಾಡಿದರೆ ದೊಡ್ಡ ಭಯದಿಂದ ರಕ್ಷಣೆಯಾಗುವುದು
ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ॥
- ಶ್ರೀಮದ್ಭಗವದ್ಗೀತಾ, ಅಧ್ಯಾಯ ೩, ಶ್ಲೋಕ ೩೫
ಅರ್ಥ : ಒಳ್ಳೆಯ ರೀತಿಯಲ್ಲಿ ಆಚರಣೆ ಮಾಡಿದ ಇತರರ ಧರ್ಮಕ್ಕಿಂತ ಗುಣರಹಿತವಾಗಿದ್ದರೂ, ತಮ್ಮ ಧರ್ಮವು ಅತ್ಯಂತ ಉತ್ತಮವಾಗಿದೆ. ನಮ್ಮ ಧರ್ಮದಲ್ಲಿ ಸಾಯುವುದಾದರೂ ಕಲ್ಯಾಣಕಾರಿಯಾಗಿದೆ; ಆದರೆ ಇತರರ ಧರ್ಮವು ಭಯ ನೀಡುವಂತಹದ್ದಾಗಿದೆ.
ವಿವರಣೆ : ಸದ್ಯದ ಭೌತಿಕ ಸುಖವನ್ನೇ ನಿಜವಾದ ಸುಖವೆಂದು ತಿಳಿದು ವರ್ತಿಸುವ ಭೋಗವಾದಿ, ವಿಜ್ಞಾನವಾದಿ ಮತ್ತು ಬುದ್ಧಿಪ್ರಾಮಾಣ್ಯವಾದಿ ಜನರ ರಜ-ತಮಾತ್ಮಕ ಆಚರಣೆಯಿಂದ ಎಲ್ಲೆಡೆ ವಿಕೃತಿಜನ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಜನರ ಹಿಂದೆ ಹೋದರೆ ಆ ಆಚರಣೆಯು ವಿಕೃತಿಜನ್ಯ ಹಾಗೂ ಭಯಾನಕವಾಗಿದೆಯೆಂದು ಕಂಡುಬರುತ್ತದೆ. ಯಾವುದು ಕಲ್ಯಾಣಕಾರಿ ಧರ್ಮ ಆಗಿದೆಯೋ, ಅದನ್ನು ಅನುಸರಿಸುವಾಗ ಮರಣ ಬಂದರೂ ಅದಕ್ಕನುಸಾರ ವರ್ತಿಸುವುದೇ ಶ್ರೇಯಸ್ಕರವಾಗಿದೆ; ಏಕೆಂದರೆ ಈ ಕರ್ಮಯೋಗಸ್ವರೂಪಿ ಧರ್ಮವನ್ನು ಸ್ವಲ್ಪ ಆಚರಿಸಿದರೂ ಜನ್ಮ-ಮೃತ್ಯುವಿನಂತಹ ದೊಡ್ಡ ಭಯದಿಂದ ರಕ್ಷಣೆಯಾಗುತ್ತದೆ. ಅಷ್ಟೇ ಅಲ್ಲ, ಅದು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತದೆ.
೨ ಎ. ಸನಾತನ ಧರ್ಮಕ್ಕನುಸಾರ ಆಚರಣೆ ಮಾಡಿದರೆ ಸಾಧಕರ ಆಧ್ಯಾತ್ಮಿಕ ಉನ್ನತಿಯ ವೇಗವು ಮಧ್ಯದಲ್ಲಿ ಕುಂಠಿತವಾಗುವುದಿಲ್ಲ
ನೇಹಾಭಿಕ್ರಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥
- ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೪೦
ಅರ್ಥ : ಈ ಕರ್ಮಯೋಗದಲ್ಲಿ ಆರಂಭದ, ಅಂದರೆ ಬೀಜದ ನಾಶವಿಲ್ಲ, ತದ್ವಿರುದ್ಧ ಫಲಸ್ವರೂಪಿ ದೋಷವೂ ಇಲ್ಲ. ಇಷ್ಟೇ ಅಲ್ಲ ಈ ಕರ್ಮಯೋಗಸ್ವರೂಪಿ ಧರ್ಮದ ಸ್ವಲ್ಪ ಸಾಧನವೂ ಜನ್ಮ-ಮೃತ್ಯುವಿನ ದೊಡ್ಡ ಭಯದಿಂದ ರಕ್ಷಿಸುತ್ತದೆ.
ವಿವರಣೆ : ಸನಾತನ ಧರ್ಮಕ್ಕನುಸಾರ ಆಚರಣೆ ಮಾಡಿದರೆ ಸಾಧಕನ ಆಧ್ಯಾತ್ಮಿಕ ಉನ್ನತಿಯ ವೇಗ ಮಧ್ಯದಲ್ಲಿಯೇ ಕುಂಠಿತವಾಗದೆ, ಅಂದರೆ ಈಶ್ವರಪ್ರಾಪ್ತಿಯ ಆಸಕ್ತಿ ಕಡಿಮೆಯಾಗದೆ ಹೆಚ್ಚುತ್ತಾ ಹೋಗುತ್ತದೆ. ಇದರಲ್ಲಿ ಕೊನೆಗೆ ಫಲಪ್ರಾಪ್ತಿ (ಈಶ್ವರಪ್ರಾಪ್ತಿ) ಆಗುತ್ತದೆ, ಎಂಬುದು ಖಚಿತ. ಇದರಲ್ಲಿ ಕರ್ಮಫಲದಲ್ಲಿಯೂ ದೋಷವಿರುವುದಿಲ್ಲ. ಪರಿಪಕ್ವತೆಯ ಕಡೆಗೆ ಇದರ ಬೆಳವಣಿಗೆಯಾಗುತ್ತದೆ, ಅಂದರೆ ಧ್ಯೇಯ ಪರಿಪೂರ್ಣವಾಗುತ್ತದೆ. ಅಷ್ಟೇ ಅಲ್ಲದೇ, ಇಂತಹ ಪ್ರಯಾಣದಲ್ಲಿ ಸ್ವಲ್ಪ ಒಳ್ಳೆಯ ಕರ್ಮವಾದರೂ, ಅವರು ಜನ್ಮ-ಮೃತ್ಯುವಿನ ಚಕ್ರವನ್ನು ತಡೆಯಬಹುದು. ಸಾಧನೆ ಮಾಡುವಾಗ ಜೀವವು ಈ ಜನ್ಮದಲ್ಲಿ ಶೇ. ೧೦೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪ ದಿದ್ದರೂ, ಅವನು ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರೂ ಜನ್ಮ-ಮೃತ್ಯುವಿನ ದೊಡ್ಡ ಭಯದಿಂದ ಮುಕ್ತನಾಗುತ್ತಾನೆ, ಎಂದು ಭಗವಂತನೇ ಆಶ್ವಾಸನೆ ನೀಡಿದ್ದಾನೆ.
೩. ಸನಾತನ ಧರ್ಮವು ಮಾನವನ ಉತ್ಕರ್ಷಕ್ಕಾಗಿ ಅಂದರೆ ಜೀವದ ಕಲ್ಯಾಣಕ್ಕಾಗಿ ನಿರ್ಮಾಣವಾಗಿದೆ. ಅದಕ್ಕಾಗಿ ಮಾನವನು ಭಗವಂತನ ಶ್ರೇಷ್ಠ ವಿಚಾರದೊಂದಿಗೆ ಮಗ್ನವಾಗುವ ಅವಶ್ಯಕತೆಯಿದೆ. ಇದರಿಂದಾಗಿ, ನಾವು ನಿರಂತರ ಮೂಲ ಶಕ್ತಿಯೊಂದಿಗೆ ಅನುಸಂಧಾನದಲ್ಲಿದ್ದು ಕಾರ್ಯ ಮಾಡಿದರೆ ನಮ್ಮಲ್ಲಿ ಶ್ರೇಷ್ಠವಾದ ಶಕ್ತಿ ನಿರ್ಮಾಣವಾಗುವುದು, ಎಂಬುದು ತಿಳಿಯುತ್ತದೆ. ನಮ್ಮ ಸಂಕಲ್ಪ (ವಿಚಾರಧಾರೆ) ಎಷ್ಟು ಶ್ರೇಷ್ಠ ಹಾಗೂ ಉಚ್ಚಮಟ್ಟದ್ದಾಗಿರುವುದೋ, ಅಷ್ಟು ನಾವು ಶ್ರೇಷ್ಠರಾಗಬಹುದು. ಭಗವಂತನ ಶ್ರೇಷ್ಠ ಸಂಕಲ್ಪದಿಂದಲೇ ಈ ಸೃಷ್ಟಿ ನಿರ್ಮಾಣವಾಗಿದೆ. ಇದು ಅವನ ನಿಯೋಜನೆಯಾಗಿದೆ. ಅವನೇ ವೇದದ ನಿರ್ಮಾಣ ಮಾಡಿದನು. ಅವನೇ ಅದಕ್ಕಾಗಿ ಧರ್ಮಶಾಸ್ತ್ರ ನಿರ್ಮಾಣ ಮಾಡಿದನು; ಆದ್ದರಿಂದ ಸನಾತನ ಧರ್ಮವು ಮಾನವನ ಉತ್ಕರ್ಷಕ್ಕಾಗಿ ಅಂದರೆ ಜೀವದ ಕಲ್ಯಾಣಕ್ಕಾಗಿ ನಿರ್ಮಾಣವಾಗಿದೆ. ಅದಕ್ಕಾಗಿ ಮಾನವನು ಭಗವಂತನ ಶ್ರೇಷ್ಠ ವಿಚಾರದೊಂದಿಗೆ ಮಗ್ನವಾಗುವುದು ಆವಶ್ಯಕವಾಗಿದೆ.
೪. ಪೂಜಾವಿಧಿಯಲ್ಲಿ ಹೇಳಿದ ಶ್ರೇಷ್ಠ ಶಕ್ತಿಯೊಂದಿಗೆ ಜೋಡಿಸುವ ಸಂಕಲ್ಪ
ಪೂಜೆಯ ಸಮಯದಲ್ಲಿ ವೈಯಕ್ತಿಕ ಸಂಕಲ್ಪ ಮಾಡುವಾಗ ಕಲ್ಪದಿಂದ (ಬ್ರಹ್ಮನ ದಿನ ರಾತ್ರಿ) ವರ್ತಮಾನ ಹೀಗೆ ಜೋಡಿಸಲ್ಪಡುತ್ತದೆ. ಅದರಿಂದ ಪೂಜೆ ಮಾಡುವವರಲ್ಲಿ ಭಗವಂತನ ಶ್ರೇಷ್ಠವಾದ ವಿರಾಟ ಶಕ್ತಿ ಪ್ರಕಟವಾಗಲು ಹಾಗೂ ಅದಕ್ಕೆ ಮೂರ್ತಿಯಲ್ಲಿನ ಚೈತನ್ಯವನ್ನು ಪಡೆಯಲು ಪೂಜೆ ಮಾಡುವಾಗ ಸಂಕಲ್ಪ ಮಾಡಲಾಗುತ್ತದೆ. ಅಂದರೆ ಪೂಜೆಯಲ್ಲಿ ಯಜಮಾನರನ್ನು ಕಲ್ಪದಿಂದ ಅವರ ಪೂಜೆಯ ಸ್ಥಾನದವರೆಗೆ ಜೋಡಿಸಲಾಗುತ್ತದೆ.. ಅದು ಹೀಗೆ - ..ಕಲ್ಪೆ, ..ಮನ್ವಂತರೆ, ..ಯುಗೆ, ..ಸಂವತ್ಸರೆ, ..ಅಯನೆ, ..ಋತೌ, ..ಮಾಸೆ, ..ಪಕ್ಷೆ, ..ವಾಸರೆ (ದಿವಸೆ), ..ತಿಥೌ (ಆ ದಿನದ ತಿಥಿ), ..ಚಂದ್ರಯೋಗೆ, ..ಕರಣೆ, ..ರವಿಸ್ಥಾನೆ (ರಾಶಿ), ಪೂಜೆ ಮಾಡುವವರ ..ಗೋತ, ..ಪಿತೃನಾಮ, ..ಜನ್ಮನಾಮ, ಎಲ್ಲಿ ಪೂಜೆ ನಡೆಯುತ್ತಿದೆಯೋ, ..ಆ ಸ್ಥಾನ, ಹೀಗೆ ಉಚ್ಚಾರ ಮಾಡಿ ಈ ಶುಭತಿಥಿಯಲ್ಲಿ ನಾನು ನನ್ನ ಆತ್ಮಶುದ್ಧಿಗಾಗಿ ಶ್ರುತಿ-ಸ್ಮೃತಿಯರನ್ನು ಸ್ಮರಿಸಿ ಧ್ಯಾನಾವಾಹನಾದಿ (ಧ್ಯಾನ, ಆವಾಹನಾದಿ) ಷೋಡಶೋಪಚಾರಗಳಿಂದ ನಿನ್ನ ಪೂಜೆ ಮಾಡುತ್ತಿದ್ದೇನೆ - ಅಹಂ ಕರಿಷ್ಯೆ
ಪೂಜೆ ಪೂರ್ಣವಾಗುವಾಗ ಕೊನೆಗೆ ‘ಶ್ರೀಕೃಷ್ಣಾರ್ಪಣಮಸ್ತು’ ಎಂದು ಹೇಳಿ ‘ಇದಂ ನ ಮಮ’ ಎಂದು ಹೇಳುತ್ತಾ ಅವನದ್ದನ್ನು ಅವನಿಗೇ ಅರ್ಪಿಸಲಿಕ್ಕಿರುತ್ತದೆ.
ವಿವರಣೆ : ಕಲ್ಪ ಆಗಿ ಇಂದು ಸಾವಿರಾರು ವರ್ಷಗಳಾದವು. ಆದರೂ ಆ ಸಮಯದ ಭಗವಂತನ ಸಂಕಲ್ಪಶಕ್ತಿಯ ಆ ಕ್ಷಣವನ್ನು ನಾವು ಸತ್ಯಸ್ಥಿತಿಗೆ ಜೋಡಿಸಿದರೆ ಇಷ್ಟರವರೆಗೆ ಆಗಿರುವ ಕಾಲದ ಪರಿಚಯವಾಗಿ ನಡುವಿನ ಎಲ್ಲ ಅಡಚಣೆಗಳನ್ನು ದೂರಗೊಳಿಸಲಾಗುತ್ತದೆ ಹಾಗೂ ಆ ಜೀವದ ಸಂಬಂಧ ಭಗವಂತನ ಅಮೋಘ ಶಕ್ತಿಯೊಂದಿಗೆ ಜೋಡಿಸಲ್ಪಡುತ್ತದೆ. ಇಷ್ಟು ಶ್ರೇಷ್ಠ ಸಾಮರ್ಥ್ಯವು ಈ ಪೂಜಾವಿಧಿಗೆ ಇದೆ, ಎಂಬುದು ಇದರಿಂದ ಅರಿವಾಗುತ್ತದೆ.
- ಪ.ಪೂ. ಪರಶರಾಮ ಪಾಂಡೆ, ಸನಾತನ ಆಶ್ರಮ, ದೇವದ ಪನವೇಲ್. (೧೭.೬.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಹಿಂದೂ ರಾಷ್ಟ್ರ ’ ಶಬ್ದದ ಬದಲು ‘ಸನಾತನ ಧರ್ಮ ರಾಜ್ಯ’ ಈ ಶಬ್ದವನ್ನು ಉಪಯೋಗಿಸುವ ವಿಷಯದಲ್ಲಿ ಪ.ಪೂ. ಪಾಂಡೆ ಮಹಾರಾಜರು ಹೇಳಿದ ರಹಸ್ಯ ಜ್ಞಾನ !