ಇವರು ಮುಲಾಯಂ ಸಿಂಗ್ ಅಲ್ಲ ಕ್ರೂರಸಿಂಗ್ !

ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದಾಗ ಮುಲಾಯಂ ಸಿಂಗ್ ಯಾದವ್ ಇವರು ಕರಸೇವಕರ ಮೇಲೆ ಗೋಲಿಬಾರ್ ಮಾಡಿರುವುದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಅವರು ಈ ಮೊದಲು ಕೆಲವು ತಿಂಗಳ ಹಿಂದೆ ತಮ್ಮ ಈ ಕ್ರಮವನ್ನು ಸಮರ್ಥಿಸಿ ಹೇಳಿಕೆಯನ್ನು ನೀಡಿದ್ದರು. ಆದರೂ ಈಗ ಪುನಃ ಅದೇ ವಿಷಯವನ್ನು ಚರ್ಚೆಗೊಳಪಡಿಸಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ದುಷ್ಕೃತ್ಯವನ್ನು ಬಹಳ ಚೆನ್ನಾಗಿ ಮಾಡಿದ್ದಾರೆ. ಈ ವಿಷಯ ಪುನಃ ಕೆದಕಿ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಗಲಭೆಯಾಗಲು ಒಂದು ರೀತಿಯಲ್ಲಿ ಪ್ರಚೋದಿಸಿದ್ದಾರೆ. ಕರಸೇವಕರು ಪ್ರಾಣವನ್ನು ಕಳೆದುಕೊಳ್ಳಬೇಕಾದಂತಹ ಆದೇಶದ ಬಗ್ಗೆ ಮುಲಾಯಂ ಸಿಂಗ್‌ರಿಗೆ ಅಭಿಮಾನವಿರುವುದು ಇದರಿಂದ ಕಂಡುಬರುತ್ತದೆ. ಕರಸೇವಕರ ಸಂಬಂಧಿಕರ ಗಾಯದ ಮೇಲೆ ಬರೆ ಎಳೆಯುವಂತಹ ಹೇಳಿಕೆಗಳು ಸದ್ಯ ನಿಲ್ಲಿಸುವುದು ಕಂಡುಬರುತ್ತಿಲ್ಲ. ಏಕೆಂದರೆ, ಪ್ರತಿಯೊಂದು ಕಾರ್ಯದಿಂದಲೂ ಮುಸಲ್ಮಾನರ ಬಗ್ಗೆ ನಿಷ್ಠೆ ತೋರಿಸದಿದ್ದರೆ ಅವರಿಗೆ ಏನು ಅನ್ನಿಸಬಹುದು ಎನ್ನುವ ಚಿಂತೆಯೇ ಮುಲಾಯಂ ಸಿಂಗ್‌ರಿಗೆ ನಿರಂತರವಾಗಿ ಕಾಡುತ್ತಿದೆಯೆಂದು ಅನಿಸುತ್ತಿದೆ.

ಉತ್ತರಪ್ರದೇಶದಲ್ಲಿ ಕೋಮುಸೌಹಾರ್ದ ಪೂರ್ಣ ಹದಗೆಟ್ಟಿದೆ. ಯಾವುದೇ ಕ್ಷಣ ಕ್ಷುಲ್ಲಕ ಕಾರಣದಿಂದ ಆ ರಾಜ್ಯದಲ್ಲಿ ಮತಾಂಧರು ಗಲಭೆ ನಡೆಸುವರು ಎಂಬಂತಹ ಪರಿಸ್ಥಿತಿಯಿದೆ. ಸಮಾಜವಾದಿ ಪಕ್ಷದ ಸರಕಾರವು ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಳಿಕವಂತೂ ಅಲ್ಲಿಯ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದು ಅಲ್ಲಿ ಪೊಲೀಸರ ತನಿಖಾ ವರದಿಗಳೇ ತಿಳಿಸುತ್ತವೆ. ಜನಪ್ರತಿನಿಧಿಗಳೆಂದು ಆಯ್ಕೆಗೊಂಡಿರುವವರು ನಿರ್ಮಾಣವಾಗಿರುವ ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿದ್ದು ನಿಷ್ಪಕ್ಷಪಾತವಾಗಿ ಇಂತಹ ಸೂಕ್ಷ ವಿಷಯಗಳ ಮೇಲೆ ಒಂದು ಮಾರ್ಗವನ್ನು ಕಂಡುಹಿಡಿಯ ಬೇಕಾಗಿರುತ್ತದೆ. ಅಂತಹವರನ್ನೇ ಜನಹಿತಕಾರಿ ಜನಪ್ರತಿನಿಧಿಯೆಂದು ಹೇಳಬಹುದು. ಆದರೆ ಉತ್ತರಪ್ರದೇಶದ ಆಡಳಿತಾರೂಢ ಪಕ್ಷದ ಪ್ರಮುಖರಲ್ಲಿಯೇ ಇಂತಹ ಪ್ರತಿನಿಧಿಗಳ ಅಭಾವವಿರುವುದರಿಂದ, ತಮ್ಮ ರಾಜ್ಯದಲ್ಲಿರುವ ಮತಾಂಧರ ಸೊಕ್ಕು ಮುರಿಯುವ ಬದಲು ಅವರಿಗೆ ಉತ್ತೇಜನ ನೀಡಿ, ಹಿಂದೂಗಳನ್ನು ಕುಗ್ಗಿಸಲು ಆಡಳಿತದ ವತಿಯಿಂದ ಎಲ್ಲ ರೀತಿಯಿಂದಲೂ ಕ್ರಮ ಜರುಗಿಸಲಾಗುತ್ತಿದೆ. ಮತಾಂಧರನ್ನು ತಮ್ಮೆಡೆಗೆ ಸೆಳೆಯಲು ಹಿಂದೂಗಳನ್ನು ಗಾಳಿಗೆ ತೂರುವ ಅವರ ನಿಲುವು ನಿರಂತರವಾಗಿ ನಡೆಯುತ್ತಿದೆ. ಮತಾಂಧರಿಗಾಗಿ ಮೃದು ಮತ್ತು ಹಿಂದೂಗಳಿಗಾಗಿ ಕ್ರೂರರಾಗಿರುವ ಮುಲಾಯಂ ಸಿಂಗ್ ಇವರ ಕ್ರೂರತೆಯ ವಿಷಯದಲ್ಲಿ ಪ್ರಗತಿಪರರು ಏಕೆ ಸುಮ್ಮನಿದ್ದಾರೆ ?
ದೇಶದ ಐಕ್ಯತೆ ಕಾಪಾಡಲು ೩೦ ಜನರ ಬಲಿಯಾಗಿದ್ದರೂ, ಅದರಿಂದ ನಮಗೇನೂ ಅನಿಸುತ್ತಿರಲಿಲ್ಲವೆಂದು ಹೇಳುವ ಮುಲಾಯಂ ಸಿಂಗ್ ಹೇಳಿಕೆಯೆಂದರೆ ಅವರು ಹಿಂದೂಗಳ ಕಟ್ಟಾ ಶತ್ರುಗಳೆಂದು ಸ್ಪಷ್ಟವಾಗುತ್ತದೆ. ಉತ್ತರಪ್ರದೇಶದಲ್ಲಿ ಹಿಂದೂಗಳ ಪರಿಸ್ಥಿತಿಯೇಕೆ ಅಷ್ಟು ಹೀನಾಯವಾಗಿದೆಯೆನ್ನುವುದು ಈಗಲಾದರೂ ಅಲ್ಲಿರುವ ಹಿಂದೂಗಳ ಗಮನಕ್ಕೆ ಬರಬೇಕು ಇಲ್ಲದಿದ್ದಲ್ಲಿ ಅವರು ಹೆಜ್ಜೆಹೆಜ್ಜೆಗೂ ಪೆಟ್ಟು ಸಹಿಸಿಕೊಂಡು ಒಂದು ದಿನ ಉತ್ತರಪ್ರದೇಶದಿಂದ ಓಡಿ ಹೋಗ ಬೇಕಾಗಬಹುದು.
- ಶ್ರೀ. ಜಯೇಶ ರಾಣೆ, ಭಾಂಡುಪ್, ಮುಂಬಯಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇವರು ಮುಲಾಯಂ ಸಿಂಗ್ ಅಲ್ಲ ಕ್ರೂರಸಿಂಗ್ !