ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕ ವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮ ಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ಬಾಯಿ ಮುಕ್ಕಳಿಸುವುದು
೧. ಬಾಯಿ ಮುಕ್ಕಳಿಸುವುದರಿಂದ ತಮೋ ಗುಣೀ ವಾಯುವಿನ ಘನೀಕೃತ ಪ್ರವಾಹವು ಬಾಯಿ ಯಿಂದ ಹೊರಬೀಳುವುದು : ‘ಕೈಕಾಲುಗಳನ್ನು ತೊಳೆದುಕೊಂಡ ಮೇಲೆ ಕೂಡಲೇ ಬಗ್ಗಿ ಬಲಗೈಯಿಂದ ಬಾಯಿಯಲ್ಲಿ ನೀರನ್ನು ಹಾಕಿಕೊಂಡು ಮೂರು ಸಲ ಮುಕ್ಕಳಿಸಿ ಹೊರಗೆ ಉಗುಳಬೇಕು.
‘ಕರಾಗ್ರೇ ವಸತೇ ಲಕ್ಷ್ಮೀ...’ ಈ ಶ್ಲೋಕವನ್ನು ಹೇಳುವುದರಿಂದ ಬೊಗಸೆಯಲ್ಲಿ ಬಂದಿರುವ ದೇವತ್ವವು ಬೊಗಸೆಯಲ್ಲಿನ ನೀರಿನಲ್ಲಿ ಸಂಕ್ರಮಿತವಾಗುತ್ತದೆ. ನೀರು ಸರ್ವ ಸಮಾವೇಶಕವಾಗಿರುವುದರಿಂದ ದೇವತ್ವದ ಲಹರಿ ಗಳನ್ನು ಅದು ಕೂಡಲೇ ಗ್ರಹಿಸಿಕೊಳ್ಳುತ್ತದೆ. ಈ ದೇವತ್ವ ರೂಪೀ ದೈವೀಗುಣಗಳಿಂದ ಸಂಪನ್ನವಾದ ನೀರನ್ನು ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ ರಾತ್ರಿಯಿಡೀ ದೇಹದಿಂದ ಹೊರಬೀಳುವ ತಮೋಗುಣೀ ವಾಯುವಿ ನಿಂದ ಬಾಯಿಯಲ್ಲಿ ಘನೀಕೃತವಾದ ಪ್ರವಾಹವನ್ನು ನೀರಿನ ಪ್ರವಾಹದೊಂದಿಗೆ ನೀರನ್ನು ಮುಕ್ಕಳಿಸಿ ಉಗುಳುವ ಕ್ರಿಯೆಯಿಂದ ಹೊರಗೆ ಹಾಕುತ್ತದೆ.
೨. ಬಗ್ಗಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಮತ್ತು ದೇಹದಲ್ಲಿನ ಟೊಳ್ಳುಗಳು ಸ್ವಚ್ಛ ವಾಗಿ ಚೈತನ್ಯಮಯವಾಗುತ್ತವೆ : ಬಗ್ಗಿ ಬಾಯಿ ಮುಕ್ಕಳಿಸುವುದರಿಂದ ದೇಹದ ಟೊಳ್ಳುಗಳಲ್ಲಿರುವ ಊರ್ಧ್ವ (ಮೇಲಿನ) ದಿಕ್ಕಿನಲ್ಲಿ ಪ್ರವಹಿಸುವ ಸೂಕ್ಷ್ಮ ವಾಯುವು ಕಾರ್ಯನಿರತವಾಗುತ್ತದೆ. ಈ ವಾಯುವು ದೇಹದ ಟೊಳ್ಳುಗಳಲ್ಲಿ ಘನೀಕೃತವಾದ ಇತರ ನಿರುಪಯುಕ್ತ ವಾಯುವನ್ನು ಊರ್ಧ್ವಗಾಮಿ ಪದ್ಧತಿ ಯಿಂದ ಹೊರದೂಡಲು ಸಹಾಯ ಮಾಡುತ್ತದೆ. ಇದರಿಂದ ಬಾಯಿಯ ಮತ್ತು ದೇಹದಲ್ಲಿನ ಟೊಳ್ಳುಗಳು
ಸ್ವಚ್ಛವಾಗಿ ಚೈತನ್ಯಮಯವಾಗಲು ಪ್ರಾರಂಭವಾಗುತ್ತವೆ.
ಕೈಯಲ್ಲಿನ ದೈವೀಗುಣಸಂಪನ್ನ ನೀರನ್ನು ಕಣ್ಣುಗಳಿಗೆ ತಗಲಿಸುವುದರಿಂದ ಮಸ್ತಿಷ್ಕ ಟೊಳ್ಳು ಶುದ್ಧವಾಗುವುದು : ಬೊಗಸೆಯಲ್ಲಿನ ದೈವಿಗುಣ ಸಂಪನ್ನ ನೀರನ್ನು ಕಣ್ಣುಗಳಿಗೆ ತಗಲಿಸುವುದರಿಂದ ಅದು ಕಣ್ಣುಗಳಲ್ಲಿರುವ ಛಿದ್ರಗಳಿಗೆ ಚೈತನ್ಯವನ್ನು ನೀಡಿ ಆಜ್ಞಾಚಕ್ರವನ್ನು ಜಾಗೃತಗೊಳಿಸುತ್ತದೆ. ಇದರಿಂದ ಮಸ್ತಿಷ್ಕಟೊಳ್ಳು ಶುದ್ಧವಾಗಲು ಪ್ರಾರಂಭವಾಗುತ್ತದೆ. ಆಜ್ಞಾಚಕ್ರವು ಜಾಗೃತವಾಗುವುದು, ಇದು ಕ್ರಿಯೆಯ ಸ್ತರದಲ್ಲಿ ದೇಹಕ್ಕೆ ಜಾಗೃತಿಯನ್ನು ನೀಡುವುದರ ಪ್ರತೀಕವಾಗಿದೆ. ಇದರಿಂದ ದಿನವಿಡೀ ನಮ್ಮಿಂದಾಗುವ ಕರ್ಮಗಳು ಯೋಗ್ಯ ರೀತಿಯಿಂದ ಮತ್ತು ಆಚಾರ ಸಹಿತ ಆಗುತ್ತವೆ. - ಓರ್ವ ವಿದ್ವಾಂಸ ((ಸದ್ಗುರು) ಸೌ. ಅಂಜಲಿ ಗಾಡಗೀಳರವರು ‘ಓರ್ವ ವಿದ್ವಾಂಸ’ ಈ ಅಂಕಿತನಾಮದಿಂದ ಬರೆಯುತ್ತಾರೆ. ೨೯.೧೦.೨೦೦೭, ಬೆಳಗ್ಗೆ ೯.೪೬)
ಆಚಮನ ಮಾಡುವುದು : ಆಚಮನವನ್ನು ಮಾಡುವಾಗ ಮಂತ್ರಸಹಿತ ಶುದ್ಧೋದಕವನ್ನು ಸೇವಿಸು ವುದರಿಂದ ದೇಹದಲ್ಲಿನ ಆಂತರಿಕ ಟೊಳ್ಳುಗಳಲ್ಲಿರುವ ರಜ-ತಮಾತ್ಮಕ ಲಹರಿಗಳ ವಿಘಟನೆಯಾಗುತ್ತದೆ ಮತ್ತು ದೇಹದ ಆಂತರಿಕ ಶುದ್ಧಿಯಾಗುತ್ತದೆ.
ವಿಷ್ಣುಸ್ಮರಣೆ ಮಾಡುವುದು : ‘ಭಾವಪೂರ್ಣ ವಾಗಿ ವಿಷ್ಣುಸ್ಮರಣೆಯನ್ನು ಮಾಡುವುದರಿಂದ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲು ಸಹಾಯವಾಗುವುದರಿಂದ ಜೀವವು ಮುಂದಿನ ಕರ್ಮಗಳನ್ನು ಮಾಡಲು ಶುದ್ಧವಾಗುತ್ತದೆ.’ - ಓರ್ವ ವಿದ್ವಾಂಸ ((ಸದ್ಗುರು) ಸೌ. ಅಂಜಲಿ ಗಾಡಗೀಳರವರ ಮಾಧ್ಯಮ ದಿಂದ ೧೧.೧೨.೨೦೦೭, ಮಧ್ಯಾಹ್ನ ೨.೩೪) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !