ಅಪರಾಧ ಸಾಬೀತಾಗುವವರೆಗೆ ಆರೋಪಿಯನ್ನು ನಿರಪರಾಧಿಯೆಂದು ಪರಿಗಣಿಸಬೇಕು ! - ಕೇಂದ್ರೀಯ ತನಿಖಾ ದಳ

ದಾಭೋಲಕರ್ ಹತ್ಯೆ ಪ್ರಕರಣದಲ್ಲಿ ಡಾ. ತಾವಡೆಯವರ ಮೇಲೆ ಆರೋಪಪತ್ರ
ನವ ದೆಹಲಿ : ಡಾ.ದಾಭೋಲಕರ್ ಹತ್ಯೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಸೆಪ್ಟೆಂಬರ್ ೬ ರಂದು ಪುಣೆಯ ಶಿವಾಜಿನಗರ ನ್ಯಾಯಾಲಯದಲ್ಲಿ ಡಾ. ವೀರೇಂದ್ರ ತಾವಡೆಯವರ ಮೇಲೆ ಆರೋಪಪತ್ರವನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಸಿಬಿಐ ತಮ್ಮ ಜಾಲತಾಣದಲ್ಲಿ ಒಂದು ಪ್ರಕಟಣೆಯನ್ನು ಪ್ರಕಟಿಸಿದ್ದು, ಅದರಲ್ಲಿ ಇನ್ನೂ ವಿಚಾರಣೆಯು ಮುಂದುವರಿದಿದ್ದು, ಹತ್ಯೆಯ ಸಂಚು ಮತ್ತು ಅದರಲ್ಲಿ ಶಾಮೀಲಾಗಿರುವ ಅಜ್ಞಾತ ಮತ್ತು ಜ್ಞಾತ ವ್ಯಕ್ತಿಗಳ ಗುರುತು ಇದುವರೆಗೂ ಪತ್ತೆಯಾಗಿಲ್ಲ. ದಾಭೋಲಕರ ಹತ್ಯೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ನಡೆಸಿರುವ ತಪಾಸಣೆ ಮತ್ತು ಕ್ರೋಢೀಕರಿಸಿರುವ ಮಾಹಿತಿಯ ಆಧಾರದಲ್ಲಿ ತನಿಖೆ ಕೈಕೊಂಡಿದ್ದು, ಭಾರತೀಯ ಕಾನೂನಿನನ್ವಯ ಎಲ್ಲಿಯವರೆಗೆ ಅಪರಾಧವು ನ್ಯಾಯಾಲಯದಲ್ಲಿ ನಿಷ್ಪಕ್ಷ ಆಲಿಕೆಯ ನಂತರ ಸಾಬೀತಾಗುವುದಿಲ್ಲವೋ, ಅಲ್ಲಿಯವರೆಗೆ ಆರೋಪಿಯು ನಿರಪರಾಧಿಯೆಂದು ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.

ಈ ಪ್ರಕಟಣೆಯಲ್ಲಿ ಡಾ. ದಾಭೋಲಕರ ಇವರ ಹತ್ಯೆಯು ಎರಡು ಖಾಸಗಿ ಸಂಘಟನೆ ಗಳ ದೀರ್ಘಕಾಲದ ವೈಷಮ್ಯ ಮತ್ತು ದ್ವೇಷಪೂರ್ಣ ವ್ಯವಹಾರದಿಂದ ಆಗಿರಬೇಕು ಎನ್ನುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಖಾಸಗಿ ಸಂಘಟನೆಗಳ ಉಲ್ಲೆೀಖದಲ್ಲಿ ಸನಾತನ ಸಂಸ್ಥೆಯ ಉಲ್ಲೆೀಖವನ್ನು ಮಾಡಿಲ್ಲ. ಡಾ. ದಾಭೋಲಕರ ಇವರು ಸಾತಾರಾದ ಒಂದು ಸಂಘಟನೆಯ ಸಂಸ್ಥಾಪಕರಾಗಿದ್ದು ಮತ್ತೊಂದು ಖಾಸಗಿ ಸಂಘಟನೆಯು ಕೊಲ್ಹಾಪುರದಲ್ಲಿ ಅಸ್ತಿತ್ವದಲ್ಲಿದೆಯೆಂದು ತಿಳಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಪರಾಧ ಸಾಬೀತಾಗುವವರೆಗೆ ಆರೋಪಿಯನ್ನು ನಿರಪರಾಧಿಯೆಂದು ಪರಿಗಣಿಸಬೇಕು ! - ಕೇಂದ್ರೀಯ ತನಿಖಾ ದಳ