ಇತಿಹಾಸದಲ್ಲಿ ಕ್ರಮದಂತೆ ರೂಢಿಯಲ್ಲಿ ಬಂದ ಶ್ರಾದ್ಧದ ಮೂರು ಪ್ರಕಾರಗಳು ಮತ್ತು ಪ್ರಸ್ತುತ ಕಾಲದ ಶ್ರಾದ್ಧ

ಅ. ಅಗ್ನೌಕರಣ : ಋಗ್ವೇದದ ಕಾಲ ದಲ್ಲಿ ಸಮಿತ್ತು (ಸಮಿಧೆ) ಮತ್ತು ಪಿಂಡವನ್ನು ಅಗ್ನಿಗೆ ಆಹುತಿ ಕೊಟ್ಟು ಪಿತೃ ಪೂಜೆಯನ್ನು (ಶ್ರಾದ್ಧ) ಮಾಡಲಾಗುತ್ತಿತ್ತು.
ಆ. ಪಿಂಡದಾನ (ಪಿಂಡಪೂಜೆ) : ಯಜುರ್ವೇದ, ಬ್ರಾಹ್ಮಣೇ ಮತ್ತು ಶ್ರೌತ ಹಾಗೂ ಗೃಹ್ಯಸೂತ್ರಗಳಲ್ಲಿ ಪಿಂಡದಾನದ ವಿಧಾನವನ್ನು ಹೇಳಲಾಗಿದೆ. ಗೃಹ್ಯಸೂತ್ರಗಳ ಕಾಲದಲ್ಲಿ ಪಿಂಡ ದಾನವು ಆಚರಣೆಗೆ ಬಂದಿತು. ‘ಪಿಂಡಪೂಜೆಯು ಯಾವಾಗ ಪ್ರಾರಂಭವಾಯಿತು ಎಂಬುದರ ಬಗ್ಗೆ ಮಹಾಭಾರತದಲ್ಲಿ (ಪರ್ವ ೧೨,ಅಧ್ಯಾಯ ೩, ಶ್ಲೋಕ ೩೪೫) ಮುಂದಿನಂತೆ ಹೇಳ ಲಾಗಿದೆ. - ವಿಷ್ಣುವಿನ ಅವತಾರವಾದ ವರಾಹ ದೇವನು ಶ್ರಾದ್ಧದ ಸಂಪೂರ್ಣ ಕಲ್ಪನೆಯನ್ನು ವಿಶ್ವಕ್ಕೆ ನೀಡಿದನು.
ಆತನು ತನ್ನ ದವಡೆ ಹಲ್ಲುಗಳಿಂದ ಮೂರು ಪಿಂಡಗಳನ್ನು ತೆಗೆದು ದಕ್ಷಿಣ ದಿಕ್ಕಿನಲ್ಲಿ ದರ್ಭೆಯ ಮೇಲೆ ಇಟ್ಟನು. ಆ ಮೂರು ಪಿಂಡಗಳನ್ನು ತಂದೆ, ತಂದೆಯ ತಂದೆ (ತಾತ) ಮತ್ತು ತಂದೆಯ ತಂದೆಯ ತಂದೆ (ಮುತ್ತಾತ)ಯ ಸ್ವರೂಪವೆಂದು ತಿಳಿಯಬೇಕು ಮತ್ತು ಎಳ್ಳಿನಿಂದ ಈ ಮೂರು ಪಿಂಡ ಗಳನ್ನು ಶಾಸ್ತ್ರೋಕ್ತವಾಗಿ ಪೂಜಿಸಬೇಕೆಂದು ಹೇಳಿ ವರಾಹದೇವನು ಅಂತರ್ಧಾನನಾದನು. ಈ ರೀತಿ ವರಾಹದೇವರು ಹೇಳಿದಂತೆ ಪಿತೃಗಳ ಪಿಂಡಪೂಜೆಯು ಪ್ರಾರಂಭವಾಯಿತು.’
ಇ. ಬ್ರಾಹ್ಮಣ ಭೋಜನ : ಗೃಹ್ಯಸೂತ್ರಗಳು, ಶೃತಿ-ಸ್ಮೃತಿ ಇವುಗಳ ನಂತರದ ಕಾಲದಲ್ಲಿ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಭೋಜನವನ್ನು ಕೊಡುವುದು ಆವಶ್ಯಕವೆಂದು ಪರಿಗಣಿಸಲಾಯಿತು ಮತ್ತು ಅದು ಶ್ರಾದ್ಧವಿಧಿಯ ಒಂದು ಪ್ರಮುಖ ಅಂಗವಾಯಿತು.
ಈ. ಮೇಲಿನ ಮೂರೂ ಪ್ರಕಾರಗಳು ಒಂದಾಗುವುದು : ಈಗಿನ ಕಾಲದ ‘ಪಾರ್ವಣ’ ಶ್ರಾದ್ಧದಲ್ಲಿ ಮೇಲಿನ ಮೂರೂ ಪ್ರಕಾರಗಳು ಒಂದಾಗಿವೆ. ಧರ್ಮಶಾಸ್ತ್ರದಲ್ಲಿ ಗೃಹಸ್ಥಾಶ್ರಮಿಗಳಿಗೆ ಈ ಶ್ರಾದ್ಧವು ಕರ್ತವ್ಯವಾಗಿದೆ ಎಂದು ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇತಿಹಾಸದಲ್ಲಿ ಕ್ರಮದಂತೆ ರೂಢಿಯಲ್ಲಿ ಬಂದ ಶ್ರಾದ್ಧದ ಮೂರು ಪ್ರಕಾರಗಳು ಮತ್ತು ಪ್ರಸ್ತುತ ಕಾಲದ ಶ್ರಾದ್ಧ