ಕುಂಕುಮಾರ್ಚನೆ

ದೇವಿಯ ಉಪಾಸನೆಯಲ್ಲಿ ಕುಂಕುಮಾರ್ಚನೆಗೆ ಮಹತ್ವಪೂರ್ಣ ಸ್ಥಾನವಿದೆ. ಅನೇಕ ಸ್ಥಳಗಳಲ್ಲಿ ನವರಾತ್ರಿಯಲ್ಲಿಯೂ ವಿಶೇಷ ರೂಪದಲ್ಲಿ ಈ ವಿಧಿಯನ್ನು ಮಾಡಲಾಗುತ್ತದೆ. ದೇವಿ ಸಹಸ್ರನಾಮದಲ್ಲಿ ದೇವಿಯ ಒಂದೊಂದು ಹೆಸರನ್ನು ಹೇಳುತ್ತಾ ಅಥವಾ ದೇವಿಯ ನಾಮ ಜಪ ಮಾಡುತ್ತಾ ಒಂದು ಚಿಟಿಕೆ ಕುಂಕುಮವನ್ನು ಅರ್ಪಿಸುವ ಕೃತಿಗೆ ‘ಕುಂಕುಮಾರ್ಚನೆ’ ಎನ್ನುತ್ತಾರೆ.

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ.
ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.
ದೇವಿಯ ಚರಣಗಳಿಂದ ಆರಂಭಿಸಿ ಶಿರದ ವರೆಗೆ ಏರಿಸಿ, ಅವರನ್ನು ಕುಂಕುಮದಿಂದ ಆಚ್ಛಾದಿಸುತ್ತಾರೆ.
ಕುಂಕುಮಾರ್ಚನೆಯು ಪೂರ್ಣವಾದ ನಂತರ ದೇವಿಗೆ ಆರತಿಯನ್ನು ಬೆಳಗುತ್ತಾರೆ.
ಎಲ್ಲರ ಕಲ್ಯಾಣಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕುಂಕುಮಾರ್ಚನೆ