ಪ್ರಯೋಗ : ‘ಛಾಯಾಚಿತ್ರ ಕ. ೧ ಹಾಗೂ ೨ ಅನ್ನು ೨ ನಿಮಿಷ ನೋಡಿದ ಬಳಿಕ ಏನು ಅನಿಸುತ್ತದೆ ?’ ಎಂಬುದನ್ನು ಅನುಭವಿಸಿ.

ವಸ್ತ್ರವನ್ನು ತೊಡಿಸಿದ ದೇವಿಯ ಛಾಯಾಚಿತ್
ವಸ್ತ್ರ ತೊಡಿಸದಿರುವ ದೇವಿಯ ಛಾಯಾಚಿತ್ರ
 ಎರಡು ಛಾಯಾಚಿತ್ರಗಳು ರಾಮನಾಥಿ ಆಶ್ರಮದ ಧ್ಯಾನಮಂದಿರದಲ್ಲಿ ಇಟ್ಟಿರುವ ದೇವಿಯ ಮೂರ್ತಿಯದ್ದಾ ಗಿದ್ದು ಛಾಯಾಚಿತ್ರ ಕ. ೧ ಕ್ಕೆ ಹೋಲಿಸಿ ದರೆ ಛಾಯಾಚಿತ್ರ ಕ್ರ. ೨ ಅನ್ನು ನೋಡಿದ ಬಳಿಕ ಚೈತನ್ಯದ ಅರಿವಾಗುತ್ತದೆ ಮತ್ತು ಭಾವಜಾಗೃತಿಯಾಗುತ್ತದೆ.

ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಪ್ರತಿಯೊಂದು ದೇವತೆಯೂ ಒಂದು ವಿಶಿಷ್ಟ ತತ್ತ್ವವಾಗಿದೆ. ಶಬ, ಸ್ಪರ್ಶ, ರೂಪ, ರಸ, ಗಂಧ ಹಾಗೂ ಅದಕ್ಕೆ ಸಂಬಂಧಿಸಿದ ಶಕ್ತಿ ಒಟ್ಟಾಗಿರುತ್ತದೆ. ಋಷಿಮುನಿಗಳು ಮತ್ತು ಸಂತರು ತಮಗೆ ದೇವರ ಸಾಕ್ಷಾತ್ಕಾರ ವಾದಂತೆಯೇ ಅವರು ದೇವರನ್ನು ವರ್ಣಿಸಿದ್ದಾರೆ. ಸ್ವಯಂಭೂ ಮೂರ್ತಿ, ಸಂತರು ಪ್ರತಿಷ್ಠಾಪಿಸಿದ ಮೂರ್ತಿ ಹಾಗೂ ಶಾಸ್ತ್ರಕ್ಕನುಸಾರವಾಗಿ ತಯಾರಿಸಿ ರುವ ಮೂರ್ತಿ ಇವುಗಳಲ್ಲಿ ದೇವರ ತತ್ತ್ವವನ್ನು ಆಕರ್ಷಿಸುವ ಹಾಗೂ ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಾಗಿರುತ್ತದೆ. ಇಂತಹ ಸಾತ್ತ್ವಿಕ ಮೂರ್ತಿಗಳನ್ನು ನೋಡುವಾಗ ನೋಡುವವರ ಹಾಗೂ ಭಾವಿಕರ ಭಾವಜಾಗೃತಿ ಯಾಗುತ್ತದೆ. ಮೂರ್ತಿ ಸಾತ್ತ್ವಿಕ, ಅಂದರೆಧರ್ಮಶಾಸ್ತ್ರಕ್ಕನುಸಾರವಾಗಿದ್ದರೆ ಆ ದೇವತೆಯ ತತ್ತ್ವ, ಮೂರ್ತಿಯಲ್ಲಿನ ದೇವತ್ವವು ಸಮಷ್ಟಿಗೆ (ಸಮಾಜಕ್ಕೆ) ಲಾಭ ದಾಯಕವಾಗುತ್ತದೆ. ಅವಳ ಅಸ್ತಿತ್ವದಿಂದ ಸಂಪೂರ್ಣ ವಾಯುಮಂಡಳದ ಶುದ್ಧಿ ಯಾಗುತ್ತದೆ.ವಿವಿಧ ತೀರ್ಥಕ್ಷೇತ್ರಗಳಲ್ಲಿರುವ ಮೂರ್ತಿ ಗಳು ಹೆಚ್ಚಾಗಿ ಸ್ವಯಂಭೂ ಹಾಗೂ ಸಂತರು ಪ್ರತಿಷ್ಠಾಪಿಸಿರುತ್ತಾರೆ. ಇಂತಹ ಮೂರ್ತಿಗಳಿಗೆ ಅಧಿಕ ಕಾಲದಿಂದಲೂ ಷೋಡಶೋಪಚಾರ ಪೂಜೆಯಾಗಿ ರುವುದರಿಂದ ಅದರಲ್ಲಿ ಹೆಚ್ಚು ಪ್ರಮಾಣದಲ್ಲಿ ದೇವತಾತತ್ತ್ವವು ಆಕರ್ಷಿತವಾಗಿರುತ್ತದೆ. ಆದ್ದರಿಂದ ದೇವತೆಯನ್ನು ನೋಡಿದಾಗ ಭಕ್ತರಿಗೆ ಚೈತನ್ಯ ಹಾಗೂ ಸಾತ್ತ್ವಿಕತೆಯ ಲಾಭವಾಗುವ ಪ್ರಮಾಣ ಹೆಚ್ಚಾಗಿ ರುತ್ತದೆ.ಇಲ್ಲಿ ನೀಡಿರುವ ಸೀರೆ ಉಡಿಸಿರುವ ಛಾಯಾಚಿತ್ರ ಕ್ಕಿಂತ ಆಕೆಯ ಮೂಲ ಮೂರ್ತಿಯ ರೂಪವನ್ನು ನೋಡಿದಾಗ ಇನ್ನೂ ಒಳ್ಳೆಯದೆನಿಸುತ್ತದೆ; ಏಕೆಂದರೆ ಮೂಲ ವಿಗ್ರಹದಲ್ಲಿ ದೇವಿಯು ಅಸುರನನ್ನು ಸಂಹರಿ ಸಿದ ರೂಪವಿದೆ, ಅದನ್ನು ನೋಡಿದಾಗ ಭಕ್ತರಲ್ಲಿ ಮಾರಕತತ್ತ್ವವು ಜಾಗೃತವಾಗುತ್ತದೆ. ಮೂರ್ತಿಗೆ ವಸ್ತ್ರವನ್ನು ಉಡಿಸಿದ ಬಳಿಕ ಅವಳನ್ನು ನೋಡಿದಾಗ ಮೂರ್ತಿಯ ಮೂಲ ರೂಪವು ಮುಚ್ಚಿದಂತಾಗಿ ಮೂರ್ತಿಯ ಅಂಶಾತ್ಮಕ ಭಾಗವನ್ನು ನಾವು ಕಾಣ ಬಹುದು. ಆದ್ದರಿಂದ ಛಾಯಾಚಿತ್ರ ಕ. ೧ ಕ್ಕೆ ಹೋಲಿಸಿ ದರೆ ಛಾಯಾಚಿತ್ರ ಕ. . ಅಂದರೆ ವಸ್ತ್ರವನ್ನು ಉಡಿಸದಿರುವ ಮೂರ್ತಿಯನ್ನು ನೋಡಿದಾಗ ಹೆಚ್ಚು ಚೈತನ್ಯದ ಅರಿವಾಗಿ ಭಾವಜಾಗೃತಿಯಾಗುತ್ತದೆ.
ದೇವತೆಗಳಿಗೆ ವಸ್ತ್ರ ತೊಡಿಸುವುದು ಒಂದು ರೂಢಿ ಯಾಗಿದೆ, ಎಂಬುದು ಹಲವರ ಅಭಿಪ್ರಾಯವಾಗಿದೆ. ಈ ರೂಢಿಗೆ ಅಧ್ಯಾತ್ಮಶಾಸ್ತ್ರದ ಆಧಾರವಿಲ್ಲ. ಆದರೆ ಯಾರಾದರೂ ಸಂತರು ಅಥವಾ ಉನ್ನತರು ದೇವತೆಗೆ ವಸ್ತ್ರವನ್ನು ತೊಡಿಸಲು ಹೇಳಿದ್ದರೆ ಅದರ ಹಿಂದೆ ಅವರ ಸಂಕಲ್ಪವಿರುವುದರಿಂದ ಅದರಿಂದ ಭಕ್ತರಿಗೆ ಲಾಭವಾಗಬಹುದು. ಆ ರೀತಿಯಿಲ್ಲದಿದ್ದರೆ ತಮ್ಮ ಮನಸ್ಸಿಗೆ ಬಂದಂತೆ ರೂಢಿ ಮಾಡಿಕೊಳ್ಳಬಾರದು.’
(ರಾಮನಾಥಿ ಆಶ್ರಮದಲ್ಲಿರುವ ಶ್ರೀ ಭವಾನಿ ದೇವಿಯ ಮೂರ್ತಿಗೆ ಸೀರೆ ಉಡಿಸಲಾಗುತ್ತದೆ. ಏಕೆಂದರೆ, ಆ ಮೂರ್ತಿಯನ್ನು ದಾನ ಮಾಡಿದ ಭಕ್ತರು ಹಲವಾರು ವರ್ಷಗಳಿಂದ ದೇವಿಗೆ ಪ್ರತಿದಿನ ಸೀರೆ ಉಡಿಸಿ ಭಕ್ತಿಭಾವದಿಂದ ಪೂಜೆ ಮಾಡಿದ್ದರು ಹಾಗೂ ಆ ಮೂರ್ತಿಯನ್ನು ದಾನ ಮಾಡುವಾಗ ಸೀರೆ ಉಡಿಸುವ ಉಪಚಾರ ಮಾಡಿ ಮುಂದೆ ಅದನ್ನು ನಡೆಸಿಕೊಂಡು ಹೋಗಲು ಹೇಳಿದ್ದರು. ಇಲ್ಲಿ ಗಮನದಲ್ಲಿಡುವ ಅಂಶವೆಂದರೆ ಅವರ ಭಾವದಿಂದ ದೇವಿಯ ಮೂರ್ತಿಯಲ್ಲಿರುವ ಸಾತ್ತ್ವಿಕತೆ ಕಡಿಮೆಯಾಗುವುದಿಲ್ಲ.)
- ಕು. ಪ್ರಿಯಾಂಕಾ ಲೋಟಲೀಕರ, ಅಧ್ಯಾತ್ಮ ವಿಶ್ವವಿದ್ಯಾಲಯ (೧೧..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪ್ರಯೋಗ : ‘ಛಾಯಾಚಿತ್ರ ಕ. ೧ ಹಾಗೂ ೨ ಅನ್ನು ೨ ನಿಮಿಷ ನೋಡಿದ ಬಳಿಕ ಏನು ಅನಿಸುತ್ತದೆ ?’ ಎಂಬುದನ್ನು ಅನುಭವಿಸಿ.