ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಸುಳ್ಳು ಅಪರಾಧದಲ್ಲಿ ‘ಸನಾತನ ಪ್ರಭಾತ’ದ ವಿತರಣೆ ಮಾಡುವ ಮೂವರು ಸಾಧಕರನ್ನು ಬಂಧಿಸುವ ಮೀರಜ್ ಪೊಲೀಸರು !

೨ ಸೆಪ್ಟೆಂಬರ್ ೨೦೦೯ ರಂದು ಮೀರಜ್ ನಗರ ದಲ್ಲಿ ಅಫ್ಝಲಖಾನನ ವಧೆಯ ಚಿತ್ರದಿಂದ ಗಲಭೆ ಯಾಯಿತು. ಮತಾಂಧರು ಈ ಸಮಯದಲ್ಲಿ ಪೊಲೀಸರ ಎದುರಿನಲ್ಲಿಯೇ ಶ್ರೀ ಗಣೇಶನ ವಿಗ್ರಹದ ಮೇಲೆ ಕಲ್ಲುತೂರಾಟ ಮಾಡಿದರು. ವಿಗ್ರಹದ ವಿಡಂಬನೆ ಮಾಡಲಾಯಿತು. ಈ ಘಟನೆಯ ಬಗ್ಗೆ ದೈನಿಕ ಸನಾತನ ಪ್ರಭಾತವು ಗಂಭೀರವಾಗಿ ಪರಿಗಣಿಸಿ ಗಲಭೆಯ ಸತ್ಯಘಟನೆಯನ್ನು ಜನತೆಯ ಎದುರಿಗೆ ಮಂಡಿಸಿತು; ಆದರೆ ಇದು ಪೊಲೀಸರಿಗೆ ಸಹಿಸಲಾಗಲಿಲ್ಲ. ೫ ಸೆಪ್ಟೆಂಬರ್ ೨೦೦೯ ರಂದು ಬೆಳಗ್ಗೆ ದೈನಿಕ ಸನಾತನ ಪ್ರಭಾತದ ಸಾಂಗ್ಲಿ, ಕೊಲ್ಹಾಪುರ, ಸಾತಾರಾ, ಸೋಲಾಪೂರ’ ಈ ಆವೃತ್ತಿಯ ಮುದ್ರಣ ಕ್ಕಾಗಿ ಸನಾತನ ಪ್ರಭಾತದ ಕಾರ್ಯಾಲಯದಲ್ಲಿ ಸರ್ವಶ್ರೀ ಮಹೇಂದ್ರ ಯಶವಂತ ಸಹಸ್ರಬುದೆ ಮತ್ತು ಅವರೊಡನೆ ಇತರ ಇಬ್ಬರು ವಿತರಕರು ದ್ವಿಚಕ್ರ ವಾಹನದಿಂದ ನಿತ್ಯದಂತೆ ಮೀರಜ್‌ನಿಂದ ಸಾಂಗ್ಲಿಗೆ ಹೋಗಿದ್ದರು.
ಅನಂತರ ರಾತ್ರಿ ೧೨.೩೦ ಗಂಟೆಗೆ ಮೀರಜ್ ನಗರದಲ್ಲಿ ಪ್ರತಿಬಂಧಾತ್ಮಕ ಆಜ್ಞೆ ಯನ್ನು ಜಾರಿಗೊಳಿಸಲಾಗಿದೆ ಎಂದು ಆಡಳಿತವು ಘೋಷಿಸಿತು. ಈ ವಿಷಯದ ಕುರಿತು ಯಾವುದೇ ಪೂರ್ವಕಲ್ಪನೆ ಇಲ್ಲದಿರುವುದರಿಂದ ನಿತ್ಯದಂತೆ ಮುದ್ರಣಾಲಯದಿಂದ ದೈನಿಕದ ಸಂಚಿಕೆಗಳನ್ನು ತೆಗೆದುಕೊಂಡು ವಿತರಣೆಯ ಸಲುವಾಗಿ ಹೋಗಿದ್ದ ೬ ಸಾಧಕರು ೬ ಸೆಪ್ಟೆಂಬರ್ ೨೦೦೯ ರಂದು ಬೆಳಗ್ಗೆ ೫.೪೫ ರ ಸುಮಾರಿಗೆ ಸಾಂಗ್ಲಿಯಿಂದ ಮೀರಜ್ ಕಡೆಗೆ ವಾಹನದಲ್ಲಿ ಬರುತ್ತಿದ್ದರು. ಮೀರಜ್ ಪೊಲೀಸರು ಈ ಸಾಧಕರನ್ನು ವಾಹನ ಮತ್ತು ದೈನಿಕದ ಕಟ್ಟುಗಳೊಂದಿಗೆ ವಶಪಡಿಸಿಕೊಂಡರು. ‘ಇವರನ್ನು ಸ್ವಲ್ಪ ಹೊತ್ತಿನ ನಂತರ ಬಿಟ್ಟುಬಿಡುವೆವು ಎಂದು ಪೊಲೀಸರು ದೈನಿಕ ಕಾರ್ಯಾಲಯಕ್ಕೆ ತಿಳಿಸಿದರು; ಆದರೆ ಮಧ್ಯಾಹ್ನದ ನಂತರ ವಾಹನ, ಸಾಧಕರು ಮತ್ತು ದೈನಿಕದ ಕಟ್ಟು ಬಿಟ್ಟುಬಿಡಲು ಅವರು ನಿರಾಕರಿಸಿದರು. ಪೊಲೀಸರು ಈ ವಿತರಕರಿಂದ ಸಂಚಾರಿವಾಣಿಯನ್ನೂ ಸ್ವಾಧೀನ ಪಡಿಸಿದರು. (ಹೀಗೆ ವಿಶ್ವಾಸಘಾತ ಮಾಡುವ ಪೊಲೀಸ
ರನ್ನು ಅವಲಂಬಿಸಿರಬಹುದೇ ? - ಸಂಪಾದಕರು) ಪೊಲೀಸರು ಇಷ್ಟಕ್ಕೆ ಸುಮ್ಮನಾಗದೇ, ಈ ಸಾಧಕರ ಮೇಲೆ ‘ಅವರು ವಾಹನದಲ್ಲಿ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡಿ ದ್ದರು’ ಎಂದು ಸುಳ್ಳು ಆರೋಪ ಹೊರಿಸಿ ಪೊಲೀಸ್ ಕಸ್ಟಡಿಗೆ ನೂಕಿದರು. ಅಪರಾಧ ದಾಖಲಿಸದೆಯೇ ವಿತರಕರನ್ನು ೩೬ ಗಂಟೆಯ ಕಾಲ ಕಸ್ಟಡಿಯಲ್ಲಿರಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಸುಳ್ಳು ಅಪರಾಧದಲ್ಲಿ ‘ಸನಾತನ ಪ್ರಭಾತ’ದ ವಿತರಣೆ ಮಾಡುವ ಮೂವರು ಸಾಧಕರನ್ನು ಬಂಧಿಸುವ ಮೀರಜ್ ಪೊಲೀಸರು !