ಕಾಗದದ ತಪರಾಕಿ ಮತ್ತು ನಿಜವಾದ ತಪರಾಕಿ !

ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ೧೮ ಸೈನಿಕರು ವೀರಮರಣವನ್ನಪ್ಪಿದರು. ಅನಂತರ ಮುಂದೇನು ?, ಎನ್ನುವ ದಿನನಿತ್ಯದ ಪ್ರಶ್ನೆ ಉದ್ಭವಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದನಂತರ ಅವರು ಮೊಟ್ಟಮೊದಲು ಪಾಕಿಸ್ತಾನದೊಂದಿಗೆ ಮೈತ್ರಿಪೂರ್ಣ ಸಂಬಂಧವನ್ನು ಸ್ಥಾಪಿಸುವ ನಿಲುವು ಅವಲಂಬಿಸಿದರು. ಆದರೂ ಪಾಕಿಸ್ತಾನ ಕುತಂತ್ರವನ್ನು ಮುಂದುವರಿಸಿತು. ಅನಂತರ ಪಾಕಿಸ್ತಾನವನ್ನು ಜಾಗತಿಕ ಮಟ್ಟದಲ್ಲಿ ಒಬ್ಬಂಟಿ ಮಾಡಿ ಅದರ ಉಗ್ರವಾದಿ ಮುಖವಾಡವನ್ನು ಜಗತ್ತಿನ ಮುಂದೆ ತರುವ ಕೂಟನೀತಿಯನ್ನು ಪ್ರಧಾನಿ ಮೋದಿಯವರು ಅವಲಂಬಿಸಿದರು.
ಪಾಕಿಸ್ತಾನ ಕಾಶ್ಮೀರದ ಪ್ರಶ್ನೆಯನ್ನೆತ್ತಿ ದಾಗ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಲೂಚಿಸ್ತಾನದ ವಿಷಯವನ್ನೆತ್ತಿದರು. ಭಾರತವು ವಿಶ್ವಸಂಸ್ಥೆ, ಜಿ-೨೦ ಮುಂತಾದ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿತು. ಅಂತರರಾಷ್ಟ್ರೀಯ ಸ್ತರದಲ್ಲಿಯೂ ಪಾಕಿಸ್ತಾನದ ವಿರುದ್ಧ ವಾತಾವರಣ ನಿರ್ಮಾಣವಾಗುತ್ತಿರುವುದು ಅರಿವಾಗುತ್ತಿದೆ; ಏಕೆಂದರೆ ಅಮೇರಿಕಾ ಸಹ ಪಾಕಿಸ್ತಾನಕ್ಕೆ ತೀವ್ರ ಶಬ್ದಗಳಲ್ಲಿ ಗದರಿಸಿದೆ. ಇವೆಲ್ಲವೂ ಭ್ರಮೆಯಾಗಿತ್ತೆಂಬುದನ್ನು ಪಾಕಿಸ್ತಾನ ಮತ್ತೊಮ್ಮೆ ತೋರಿಸಿದೆ. ಭಾರತ ಈ ಹಿಂದೆಯೂ ಪಾಕಿಸ್ತಾನದ ವಿರುದ್ಧ ಒತ್ತಡ ಹೇರಲು ಪ್ರಯತ್ನಿಸಿದಾಗ ಪಾಕಿಸ್ತಾನವು ಭಾರತದಲ್ಲಿ ದೇಶವಿಘಾತಕ ಕೃತ್ಯಗಳನ್ನು ಮಾಡಿ ಅದಕ್ಕೆ ಪ್ರತ್ಯುತ್ತರ ನೀಡಿದೆ. ಇದರಿಂದ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ, ಒಂದು ಅದರ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೇರಿದರೆ ಅದು ಸುಧಾರಿಸುವುದು, ಎಂದು ತಿಳಿಯುವುದು ದೊಡ್ಡ ತಪ್ಪು. ಇನ್ನೊಂದು ವಿಷಯವೆಂದರೆ, ಈ ವಿಷಯವು ಪದೇ ಪದೇ ಎದುರಾದರೂ ಅದರತ್ತ ದುರ್ಲಕ್ಷಿಸಿ ನಮ್ಮ ಸೈನಿಕರನ್ನು ಬಲಿ ಕೊಡುವುದು ಗಂಭೀರ ತಪ್ಪು. ಕಾಂಗ್ರೆಸ್ಸಿನ ಕಾಲದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಹೀಗೆಯೇ ದುರ್ಲಕ್ಷವಾಗಿತ್ತು. ಜನರು ಅದರಿಂದ ಬೇಸತ್ತಿದ್ದರು. ಆದ್ದರಿಂದ ಭಾರತೀಯರು ಅತ್ಯಂತ ವಿಶ್ವಾಸದಿಂದ ಅಧಿಕಾರದ ಮಾಲೆಯನ್ನು ಭಾಜಪದ ಕೊರಳಿಗೆ ಹಾಕಿದರು; ಆದರೆ ಭಾಜಪವೂ ಅದನ್ನೇ ಅನುಸರಿಸಿದರೆ, ಇದು ಕಳವಳಕಾರಿಯಾಗುತ್ತದೆ. ಭಾರತದ ೧೮ ಸೈನಿಕರು ಹುತಾತ್ಮರಾಗಿದ್ದಾರೆ. ಈ ಸಂಖ್ಯೆಯೇನೂ ಕಡಿಮೆಯಲ್ಲ. ಇದು ದೇಶದ ವಿರುದ್ಧ ಸಾರಿದ ನೇರ ಸಮರವಾಗಿದೆ.
ಕಾಗದದ ಕುದುರೆಯನ್ನು ಕುಣಿಸುವುದರಲ್ಲಿಯೇ ಧನ್ಯರೆನಿಸಿಕೊಳ್ಳುವುದು ತಪ್ಪಾಗುತ್ತದೆ !
ಇತ್ತೀಚೆಗೆ ಒಂದು ಖ್ಯಾತ ಆಂಗ್ಲ ನಿಯತಕಾಲಿಕೆಯು ತನ್ನ ಸಂಚಿಕೆಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕಠೋರವಾದ ಭೂಮಿಕೆಯ ವಿಷಯದಲ್ಲಿ ಲೇಖನ ಬರೆದಿತ್ತು. ಅದಕ್ಕನುಸಾರ ಈ ನಿಯತಕಾಲಿಕೆಯ ಮುಖಪುಟದಲ್ಲಿ ಭಾರತವು ಪಾಕಿಸ್ತಾನದ ಸೇನಾ ಮುಖ್ಯಸ್ಥ ರಾಹಿಲ್ ಶರೀಫ್ ಕೆನ್ನೆಗೆ ಹೊಡೆದ ಛಾಯಾಚಿತ್ರವನ್ನು ಸಹ ಮುದ್ರಿಸಿತ್ತು. ಅದನ್ನು ನೋಡಿ ನಮ್ಮ ಭಾರತದ ರಾಜಕಾರಣಿಗಳು ಸಹ ನೆಮ್ಮದಿಯ ಉಸಿರು ಬಿಟ್ಟಿರಬಹುದು; ಏಕೆಂದರೆ, ಕಾಗದದ ಕುದುರೆ ಮತ್ತು ಕಾಗದದ ಮೂಲಕ ಕ್ರಮತೆಗೆದುಕೊಳ್ಳುವುದರಲ್ಲಿ ಅವರು ಧನ್ಯರೆನಿಸಿಕೊಳ್ಳುತ್ತಾರೆ. ಅಂತರರಾಷ್ಟ್ರೀಯ ಸ್ತರದಲ್ಲಿ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿ ಶಾಂತಿ ಚರ್ಚೆಯನ್ನು ರದ್ದುಪಡಿಸಿ, ಅಂತರರಾಷ್ಟ್ರೀಯ ಸ್ತರದಲ್ಲಿ ಅದರ ವಿರುದ್ಧ ವಿಷಯವನ್ನೆತ್ತಿ ಅದಕ್ಕೆ ಕಾಗದದ ತಪರಾಕಿ ನೀಡಿತು. ಆ ಅವಧಿಯಲ್ಲಿ ರಾಹಿಲ್ ಶರೀಫ್ ಮತ್ತು ಅವರ ಗುಂಪು ಭಾರತಕ್ಕೆ ನಿಜವಾದ ತಪರಾಕಿ ನೀಡುವ ಆಯೋಜನೆ ಮಾಡುತ್ತಿತ್ತು. ಉರಿಯ ಆಕ್ರಮಣವು ಅದರ ಪರಿಣಾಮವಾಗಿದೆ. ಪಾಕಿಸ್ತಾನದ ವಿರುದ್ಧ ನಾವು ಕಾಗದದ ಮೇಲಿನ ಯುದ್ಧವನ್ನು ಗೆದ್ದೆವು; ಆದರೆ ಪ್ರತ್ಯಕ್ಷ ಯುದ್ಧದಲ್ಲಿ ನಾವು ಸೋತೆವು. ಕೂಟನೀತಿಯೂ ಯುದ್ಧದ ಭಾಗವಾಗಿದೆ, ಎಂಬುದು ಸತ; ಆದರೆ ಅದರ ಪರಿಣಾಮವು ಶತ್ರುರಾಷ್ಟ್ರದ ಮೇಲೆ ಕಾಣಿಸದಿದ್ದರೆ, ಇತರ ಪರ್ಯಾಯವನ್ನು ಅವಲಂಬಿಸಿಬೇಕಾಗುತ್ತದೆ. ಸರಕಾರ ಇದನ್ನು ಸ್ವೀಕರಿಸಲು ಸಿದ್ಧವಿಲ್ಲ.
ಉರಿಯಲ್ಲಿ ಉಗ್ರವಾದಿ ದಾಳಿಯ ನಂತರ ಭಾರತ ಬೇರೆ ಏನಾದರೂ ಕೃತಿ ಮಾಡುವುದೆಂಬುದರ ಚಿಹ್ನೆ ಸದ್ಯವಂತೂ ಕಾಣಿಸುವುದಿಲ್ಲ. ಉಗ್ರವಾದಿಗಳಿಂದ ಪಾಕಿಸ್ತಾನ ನಿರ್ಮಿತ ಶಸ್ತ್ರಗಳು ಸಿಕ್ಕಿದವು, ಎಂಬರ್ಥದ ವಾರ್ತೆಗಳು ಮುಂದೆ ಬರುತ್ತಿವೆ. ಈಗ ಈ ಉಗ್ರವಾದಿಗಳ ಬೂಟ್ಸ್, ಚಪ್ಪಲಿ, ಅವರ ಬ್ಯಾಗ್, ಬಟೆ, ಅವರ ಗುರುತುಪತ್ರ ಇತ್ಯಾದಿ ಪಂಚನಾಮೆ ಮಾಡಿ ತಪಾಸಣೆ ಮಾಡಿ ಇವೆಲ್ಲ ಸಾಹಿತ್ಯಗಳು ಮತ್ತು ಉಗ್ರವಾದಿಗಳು ಪಾಕಿಸ್ತಾನದವರಾಗಿದ್ದಾರೆ, ಎಂಬ ಸಾಕ್ಷಿಯನ್ನು ಭಾರತೀಯ ತನಿಖಾದಳ ದವರು ಸಂಗ್ರಹಿಸುವರು. ನಂತರ ದೊಡ್ಡದೇನಾದರೂ ವಶಪಡಿಸಿಕೊಂಡೆವು ಎಂಬ ಹಾವಭಾವದಲ್ಲಿ ಭಾರತದ ರಾಜಕಾರಣಿಗಳು ಈ ಸಾಕ್ಷಿಯನ್ನು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಂಡಿಸುವರು ಹಾಗೂ ಪುನಃ ಅದೇ ಗೋಳಾಟ ಮುಂದುವರಿಯುವುದು ! ಈ ಸರಪಳಿ ಯಾವಾಗ ಕೊನೆಗೊಳ್ಳುವುದು ?
ಭಾರತ ಇಸ್ರೈಲ್‌ನಂತಹ ನಿಲುವನ್ನು ಯಾವಾಗ ತೆಗೆದುಕೊಳ್ಳುವುದು ?
ಕೆಲವು ತಿಂಗಳ ಹಿಂದೆ ಕೇಂದ್ರ ಗೃಹಸಚಿವ ರಾಜನಾಥ ಸಿಂಗ್‌ರವರು ಕಾಶ್ಮೀರದಲ್ಲಿ ನಡೆದ ಉಗ್ರವಾದಿಗಳ ದಾಳಿಯಲ್ಲಿ ವೀರಮರಣವನ್ನಪ್ಪಿದ ಒಬ್ಬ ಸೈನಿಕನ ಕುಟುಂಬದವರನ್ನು ಭೇಟಿಯಾಗಲು ಹೋಗಿದ್ದರು. ಆಗ ಹುತಾತ್ಮ ಸೈನಿಕನ ಮಗಳು ಯಾವಾಗಲೂ ಸೈನಿಕರೇ ಏಕೆ ಪ್ರಾಣದ ಆಹುತಿ ಕೊಡಬೇಕಾಗುತ್ತದೆ ?, ಎಂದು ಅವರಿಗೆ ಪ್ರಶ್ನೆ ಕೇಳಿದಳು. ಈ ಪ್ರಶ್ನೆಗೆ ರಾಜನಾಥ ಸಿಂಗ್ ಉತ್ತರ ಕೊಡಲು ಅಸಮರ್ಥರಾದರು. ಆ ಸಮಯದಲ್ಲಿಯೂ ರಾಜನಾಥ ಸಿಂಗ್‌ರಲ್ಲಿ ಆ ಪ್ರಶ್ನೆಗೆ ಉತ್ತರವಿರಲಿಲ್ಲ, ಇಂದು ಸಹ ಇಲ್ಲ. ರಾಜನಾಥ ಸಿಂಗ್‌ರವರು ಈ ಪ್ರಶ್ನೆಯ ಉತ್ತರವನ್ನು ಆ ಸಮಯದಲ್ಲಿ ಹುಡುಕುತ್ತಿದ್ದರೆ ಹಾಗೂ ಅದರ ನಿವಾರಣೆಯ ನಿಯೋಜನೆ ಮಾಡುತ್ತಿದ್ದರೆ, ಉರಿಯಲ್ಲಿ ಆಕ್ರಮಣವಾಗುತ್ತಿರಲಿಲ್ಲ. ವೀರಮರಣವನ್ನಪ್ಪಿದ ಸೈನಿಕರ ಕುಟುಂಬದವರು ಕೇವಲ ಆಕ್ರಂದನ ಮಾಡಬೇಕೇ ? /೧೧ ರ ದಾಳಿಯ ನಂತರ ಅಮೇರಿಕಾದ ಅಂದಿನ ರಾಷ್ಟ್ರಾಧ್ಯಕ್ಷ ಜಾರ್ಜ್ ಬುಶ್ ಇವರು ನಾವು ಯುದ್ಧಕ್ಕಾಗಿ ಸಿದ್ಧರಿದ್ದೇವೆ, ಎಂದು ಕೇವಲ ಹೇಳಿಕೆ ನೀಡಿ ಸುಮ್ಮನಿರಲಿಲ್ಲ, ಅವರು ಅಲ್-ಕಾಯದಾವನ್ನು ಸಂಪೂರ್ಣ ವಿನಾಶ ಮಾಡಿ ಆ ಆಂದೋಲನಕ್ಕೆ ಪೂರ್ಣ ವಿರಾಮವನ್ನು ಹಾಕಿದರು. ಮೋದಿಯವರಿಂದಲೂ ಇದೇ ಅಪೇಕ್ಷೆಯಿದೆ.
ಇಸ್ರೈಲ್ ನೀತಿಯನ್ನು ಅವಲಂಬಿಸಲು ಭಾರತ ಸರಕಾರ ಏಕೆ ಹಿಂದೇಟು ಹಾಕುತ್ತಿದೆ ?
ಇಸ್ರೈಲ್‌ನ ಒಬ್ಬ ಸೈನಿಕನಿಗೆ ಉಗ್ರವಾದಿಗಳು ಗುರಿಯಿಡುತ್ತಿದ್ದರೆ ಏನಾಗುತ್ತಿತ್ತು ? ಹಾಗೇನಾದರೂ ಆದರೆ ಇಸ್ರೈಲ್ ಆ ಉಗ್ರವಾದಿಗಳನ್ನು ಹತ್ಯೆಗೊಳಿಸುತ್ತದೆ; ಅಷ್ಟೇ ಅಲ್ಲ, ಅವರ ಮನೆ ಮತ್ತು ಕುಟುಂಬದವರನ್ನೂ ಮುಗಿಸಿಬಿಡುತ್ತದೆ. ಅನಂತರ ಉಗ್ರವಾದಿಗಳ ನಿರ್ಮಾಣ ಮಾಡುವ ಪ್ಯಾಲೆಸೈನ್ ಮೇಲೆ ದಾಳಿ ಮಾಡಿ ಅದನ್ನು ಮೇಲೆಕೆಳಗೆ ಮಾಡಿ ಬಿಡುತ್ತದೆ. ಇಸ್ರೈಲ್‌ನ ಈ ನೀತಿಯನ್ನು ಭಾರತ ಅವಲಂಬಿಸಿದರೆ ಮಾತ್ರ ಪಾಕಿಸ್ತಾನ ಸರಿದಾರಿಗೆ ಬರುವುದು. ಪ್ರಧಾನಮಂತ್ರಿ ಅಂತರರಾಷ್ಟ್ರೀಯ ಸ್ತರದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಲು ಚಡಪಡಿಸುತ್ತಿದ್ದಾರೆ. ಈ ಪ್ರತಿಷ್ಠೆ ವಿಕಾಸಕಾರ್ಯ ಮಾಡಿ ಅಲ್ಲ, ಶತ್ರು ರಾಷ್ಟ್ರದ ವಿರುದ್ಧ ಪ್ರಖರ ನಿಲುವನ್ನು ಅವಲಂಬಿಸಿ, ಪ್ರಸಂಗಾನುಸಾರ ಆಕ್ರಮಕ ಕಾರ್ಯಾಚರಣೆ ಮಾಡಿ ಹಾಗೂ ಹೋರಾಟದ ವೃತ್ತಿಯನ್ನು ಆಂಗೀಕರಿಸಿಯೇ ಜೋಪಾನ ಮಾಡಲು ಸಾಧ್ಯವಿದೆ.ಜಗತ್ತಿನಲ್ಲಿ ಇಸ್ರೈಲ್‌ನ ವರ್ಚಸ್ಸು ವಿಕಾಸಕ್ಕಿಂತ ಅದು ಉಗ್ರವಾದದ ವಿರುದ್ಧ ಅವಲಂಬಿಸಿದ ಭೂಮಿಕೆಯಿಂದ ನಿರ್ಮಾಣ ವಾಗಿದೆ, ಎಂಬುದು ಭಾರತೀಯ ರಾಜಕಾರಣಿಗಳು ತಿಳಿದು ಕೊಳ್ಳಬೇಕು. ಉರಿಯ ಘಟನೆಯ ನಂತರವಾದರೂ ಆಡಳಿತದವರು ಇಂತಹ ಆಕ್ರಮಕ ಭೂಮಿಕೆಯನ್ನು ಅವಲಂಬಿಸುವರು, ಎಂಬ ಆಶಾಭಾವನೆ ಇದೆ, ಇಲ್ಲದಿದ್ದರೆ, ಭಾರತಕ್ಕೆ ಇಸ್ರೈಲ್‌ನಿಂದ ಪ್ರಖರ ರಾಜಕಾರಣಿಗಳನ್ನು ಆಮದು ಮಾಡಿರಿ, ಎಂದು ಹೇಳುವ ಪ್ರಸಂಗ ನಿರ್ಮಾಣವಾಗುವುದು !

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಗದದ ತಪರಾಕಿ ಮತ್ತು ನಿಜವಾದ ತಪರಾಕಿ !