ಪರಂಪರೆಯಿಂದ ನಡೆಯುತ್ತಿರುವ ಗಣೇಶಮೂರ್ತಿಯ ವಿಸರ್ಜನೆಗಾಗಿ ಸಾತಾರಾದಲ್ಲಿ ಆಡಳಿತದಿಂದ ಸ್ವಯಂಘೋಷಿತ ನಿಷೇಧಾಜ್ಞೆ !

ಈ ಸಂದರ್ಭದಲ್ಲಿ ಗೃಹಇಲಾಖೆ ಏನು ಮಾಡಲಿದೆ ?
  • ಶ್ರೀ ಗಣೇಶಮೂರ್ತಿಯ ವಿಸರ್ಜನೆಯ ಕಾರಣದಿಂದ ಒಬ್ಬ ಭಾವಿಕನ ಬಟ್ಟೆ ಹರಿಯುವ ವರೆಗೆ ಅವನನ್ನು ಎಳೆದಾಡಿದ ಪೊಲೀಸರು !
  • ಇಬ್ಬರ ಮೇಲೆ ಅಪರಾಧ ದಾಖಲಿಸುವುದಾಗಿ ಬೆದರಿಕೆ !
  • ಸನಾತನ ಪ್ರಭಾತದ ಪತ್ರಕರ್ತ ರಾಹುಲ ಕೊಲ್ಹಾಪುರೆಯವರಿಗೆ ಹೆದರಿಸಿ ಅವರ ಮೇಲೆ ಕಾರ್ಯಾಚರಣೆ ಮಾಡುವ ಪ್ರಯತ್ನ !

೧. ಪೊಲೀಸ್ ಉಪನಿರೀಕ್ಷಕ ಚಂದ್ರಕಾಂತ ಬೇಂದ್ರೆ ೨. ಶ್ರೀ. ರಾಹುಲ ಕೊಲ್ಹಾಪುರೆ
ಸಾತಾರಾ : ಐದು ದಿನಗಳ ನಂತರ ಶ್ರೀಗಣೇಶಮೂರ್ತಿಯ ವಿಸರ್ಜನೆ ಮಾಡಲು ಇಲ್ಲಿಯ ಖಾಸಗಿ ಮಂಗಳವಾರ ಕೆರೆಯಲ್ಲಿ ಭಾವಿಕರ ಜನಸಂದಣಿಯಿತ್ತು. ಈ ಸಮಯದಲ್ಲಿ ಸ್ಥಳೀಯ ಪೊಲೀಸ್ ಆಡಳಿತವು ಶ್ರೀ ಗಣೇಶಮೂರ್ತಿಯನ್ನು ಪರಂಪರೆಯಿಂದ ನಡೆದುಬಂದ ಪದ್ಧತಿಯಂತೆ ವಿಸರ್ಜನೆ ಮಾಡಲು ನಿಷೇಧಿಸಲಾಗಿದೆ ಎಂದು ಹೇಳುತ್ತಾ ಶ್ರೀಗಣೇಶಮೂರ್ತಿಯ ವಿಸರ್ಜನೆ ಮಾಡಲು ಹೋದ ಭಾವಿಕರನ್ನು ತಡೆಯಿತು. (ಪೊಲೀಸರು ಹಿಂದೂಗಳಿಗೆ ಅವರ ಧಾರ್ಮಿಕ ಪರಂಪರೆಗಳ ಪಾಲನೆ ಮಾಡಲು ಮಾಲಿನ್ಯದ ಕಾರಣವನ್ನು ಮುಂದೆ ಮಾಡುತ್ತಾ ತಡೆಯುತ್ತಾರೆ, ಅದೇರೀತಿ ಅವರು ಇತರ ಧರ್ಮೀಯರ ಧಾರ್ಮಿಕ ವಿಷಯಗಳು ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೂ ಅವರನ್ನು ತಡೆಯುವುದಿಲ್ಲ, ಎನ್ನುವ ನಿಜಸಂಗತಿಯನ್ನು ತಿಳಿದುಕೊಳ್ಳಬೇಕು. ಹಿಂದೂಗಳು ಶಾಸ್ತ್ರೀಯ ಪರಂಪರೆಗಳ ಪಾಲನೆ ಮಾಡಬೇಕು ! - ಸಂಪಾದಕರು)
ಪೊಲೀಸರು ಮಂಗಳವಾರ ಕೆರೆಯ ನೀರಿನಲ್ಲಿ ಶ್ರೀ ಗಣೇಶಮೂರ್ತಿಯ ವಿಸರ್ಜನೆ ಮಾಡಲು ಬಿಡಲಿಲ್ಲ. ಈ ಸಮಯದಲ್ಲಿ ಅಲ್ಲಿ ಮೂರ್ತಿವಿಸರ್ಜನೆ ಮಾಡಲು ಹೋಗಿದ್ದ ದೈನಿಕ ಸನಾತನ ಪ್ರಭಾತದ ಪರ್ತಕರ್ತ ಶ್ರೀ. ರಾಹುಲ ಕೊಲ್ಹಾಪುರೆಯವರು ಪೊಲೀಸರಿಗೆ ತಿಳಿಸಿ ಹೇಳಿದರು ಮತ್ತು ವಿವಿಧ ರೀತಿಯ ಕಾನೂನುಪ್ರಕಾರದ ಕಾಗದಪತ್ರಗಳನ್ನು ತೋರಿಸಿದರು. ಆದರೂ ತಿರುಗಿ ಅವರಿಗೇ ಜೋರು ಮಾಡುತ್ತ ಪೊಲೀಸರು ಅವರನ್ನು ವಶಪಡಿಸಿಕೊಂಡರು. (ರಝಾಕಾರಿ ಪೊಲೀಸರು ! ಪ್ರಗತಿಪರರ ಒತ್ತಡದಿಂದಾಗಿ ಪೊಲೀಸರು ಹಿಂದುತ್ವನಿಷ್ಠರಿಗೆ ಹೀಗೆ ಹಿಂಸೆ ನೀಡುತ್ತಿದ್ದರೆ, ಅಲ್ಲಿ ಸಾಮಾನ್ಯ ಜನರ ಸ್ಥಿತಿ ಹೇಗಿರಬಹುದು, ಎಂಬುದರ ಕಲ್ಪನೆ ಮಾಡಬಹುದು ! - ಸಂಪಾದಕರು) ಈ ಸಮಯದಲ್ಲಿ ಓರ್ವ ಭಾವಿಕನು ಪೊಲೀಸರೊಂದಿಗೆ ವಾದವಿವಾದ ಮಾಡಿದನು. ಯಾವುದೇ ವಿಚಾರವನ್ನು ಮಾಡದೇ ಪೊಲೀಸರು ಅವನ ಬಟ್ಟೆ ಹರಿಯುವ ವರೆಗೆ ಅವನನ್ನು ಎಳೆದಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪರಂಪರೆಯಿಂದ ನಡೆಯುತ್ತಿರುವ ಗಣೇಶಮೂರ್ತಿಯ ವಿಸರ್ಜನೆಗಾಗಿ ಸಾತಾರಾದಲ್ಲಿ ಆಡಳಿತದಿಂದ ಸ್ವಯಂಘೋಷಿತ ನಿಷೇಧಾಜ್ಞೆ !