ಹಿಂದುತ್ವರಕ್ಷಕ ಭಾಜಪ ಸಂಸದರಿಂದ ಅಮೇರಿಕಾದಲ್ಲಿ ೭ ದಿನಗಳ ಸಂಸ್ಕೃತ, ಸಂಸ್ಕೃತಿ ಮತ್ತು ಸನಾತನ ಧರ್ಮದ ಐಕ್ಯತೆಗಾಗಿ ಪರಿಷತ್ತಿನ ಆಯೋಜನೆ !

ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಭಾಜಪದ ಸಂಸದರಿಗೆ ಅಭಿನಂದನೆ !
ನವ ದೆಹಲಿ : ಭಾಜಪದ ಕೆಲವು ಹಿಂದುತ್ವರಕ್ಷಕ ನಾಯಕರು ಹಿಂದೂ ಐಕ್ಯತೆಯನ್ನು ಜಗತ್ತಿನಾದ್ಯಂತ ಪ್ರಚಾರ ಮಾಡುವ ಸಲುವಾಗಿ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅದಕ್ಕಾಗಿ ಅಮೇರಿಕಾದಲ್ಲಿ ಒಂದು ಪರಿಷತ್ತನ್ನು ಆಯೋಜಿಸಲಾಗುತ್ತದೆ. ಸಪ್ಟೆಂಬರ್ ೧೧ ರಿಂದ ನ್ಯೂ ಜರ್ಸಿಯಲ್ಲಿ ಈ ಪರಿಷತ್ತು ಆರಂಭವಾಗಲಿದೆ. ಈ ಪರಿಷತ್ತು ೭ ದಿನ ನಡೆಯು ವುದು. ಈ ಯೋಜನೆಗೆ ಭಾಜಪದ ಸಂಸದ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಇವರು ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಸಂಸದ ಹುಕುಮ್ ಸಿಂಹ ಮತ್ತು ಭಾಜಪದ ಬಂಗಾಲ ಪ್ರದೇಶಾಧ್ಯಕ್ಷ ದಿಲೀಪ್ ಘೋಷ್ ಇದ್ದಾರೆ. ಈ ಪರಿಷತ್ತಿನ ಹೆಸರು ‘ಸಂಸ್ಕೃತ, ಸಂಸ್ಕೃತಿ ಮತ್ತು ಸನಾತನ ಧರ್ಮದ ಐಕ್ಯತೆ’ ಎಂದು ಇಡಲಾಗಿದೆ.

ಈ ಪರಿಷತ್ತಿನಲ್ಲಿ ಹುಕುಮ್ ಸಿಂಹ ಇವರು ಉತ್ತರ ಪ್ರದೇಶದ ಕೈರಾನಾದಲ್ಲಿ ಹಿಂದೂಗಳು ಪಲಾಯನ ಗೈದ ವಿಷಯದಲ್ಲಿ ಮಾತನಾಡಲಿದ್ದಾರೆ. ಘೋಷ್ ಇವರು ಬಂಗಾಲದಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡುವರು. ಘೋಷ್ ಹಿಂದಿ ಮತ್ತು ಬಂಗಾಲಿ ಭಾಷೆಯಲ್ಲಿ ಮಾತನಾಡುವರು. (ಕೇಂದ್ರ ದಲ್ಲಿ ಅಧಿಕಾರವಿದ್ದರೂ ಸರಕಾರದ ಸ್ತರದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದಂತಹ ಘಟನೆಗಳನ್ನು ತಡೆ ಯಲು ಪ್ರಯತ್ನವಾಗುವುದಿಲ್ಲ, ಇದು ಹಿಂದೂಗಳಿಗೆ ಲಜ್ಜಾಸ್ಪದ ! - ಸಂಪಾದಕರು) ಕೈರಾನಾ ಸಮಸ್ಯೆಯನ್ನು ಮೊತ್ತಮೊದಲು ಹುಕುಮ್ ಸಿಂಹ ಇವರೇ ಎತ್ತಿ ಹಿಡಿದಿ ದ್ದರು. ಇಲ್ಲಿ ಮುಸಲ್ಮಾನರಿಂದಾಗುವ ದೌರ್ಜನ್ಯದಿಂದ ಕಳೆದ ೧೦ ವರ್ಷಗಳಲ್ಲಿ ಶೇ. ೩೦ ರಷ್ಟು ಹಿಂದೂಗಳು ಮನೆಗಳನ್ನು ಮಾರಾಟ ಮಾಡಿ ಪಲಾಯನಗೈದಿದ್ದಾರೆ. ಹಿಂದೆ ಇಲ್ಲಿ ಶೇ. ೫೦ ರಷ್ಟು ಮುಸಲ್ಮಾನರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದುತ್ವರಕ್ಷಕ ಭಾಜಪ ಸಂಸದರಿಂದ ಅಮೇರಿಕಾದಲ್ಲಿ ೭ ದಿನಗಳ ಸಂಸ್ಕೃತ, ಸಂಸ್ಕೃತಿ ಮತ್ತು ಸನಾತನ ಧರ್ಮದ ಐಕ್ಯತೆಗಾಗಿ ಪರಿಷತ್ತಿನ ಆಯೋಜನೆ !