ಹಿಂದೂ ಆಗಿರುವುದರಿಂದ ಕ್ರಿಕೇಟ್ ಆಟಗಾರ ದಾನಿಶ ಕನೇರಿಯಾಗೆ ಪಾಕಿಸ್ತಾನದ ಕ್ರಿಕೇಟ್ ಮಂಡಳಿಯು ಸಹಾಯ ಮಾಡುವುದಿಲ್ಲ ! - ಪಾಕಿಸ್ತಾನದ ಹಿಂದೂ ಸಂಸದ ರಮೇಶಕುಮಾರ ವಂಕವಾನಿ ಆರೋಪ

ಹೀಗೆ ಭಾರತದಲ್ಲಿ ಮುಸಲ್ಮಾನ ಅಥವಾ ಕ್ರೈಸ್ತ ಆಟಗಾರರ ವಿಷಯದಲ್ಲಿ ಆಗುತ್ತಿದ್ದರೆ,
ಇಷ್ಟರವರೆಗೆ ಪುರೋಗಾಮಿ, ಸಾಮ್ಯವಾದಿ, ನಿಧರ್ಮಿ ಮುಂತಾದವರು ಇದನ್ನು ದೊಡ್ಡ
ರಾಷ್ಟ್ರೀಯ ಸಮಸ್ಯೆ ಉದ್ಭವಿಸಿದಂತೆ ಮಾಡಿ ದೇಶದಲ್ಲಿ ಕೋಲಾಹಲವೆಬ್ಬಿಸುತ್ತಿದ್ದರು !
ಈಗ ಮಾತ್ರ ಇವರು ಒಂದು ಶಬ್ದವನ್ನೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಪಾಕಿಸ್ತಾನದಲ್ಲಿ ಕ್ರಿಕೇಟ್‌ಪಟು ದಾನಿಶ ಕನೇರಿಯಾರೊಂದಿಗೆ ಕೋಮು ತಾರತಮ್ಯ
ಭಾರತದಲ್ಲಿ ಅಲ್ಪಸಂಖ್ಯಾತ ಸಮಾಜದ ಆಟಗಾರರ ಮೇಲೆ ಕೋಟಿಗಟ್ಟಲೆ ರೂಪಾಯಿಗಳನ್ನು ಚೆಲ್ಲಲಾಗುತ್ತದೆ, ಆದರೆ ಇಸ್ಲಾಮೀ ರಾಷ್ಟ್ರಗಳಲ್ಲಿ ಹಿಂದೂ ಆಟಗಾರರಿಗೆ ಸಹಾಯ ಮಾಡುವುದು ದೂರದ ಮಾತು, ಅವರಿಗೆ ಅಲ್ಲಿ ಬದುಕಲೂ ಕಷ್ಟವಾಗುತ್ತಿದೆ ! ದಾನಿಶ ಕನೇರಿಯಾ ಮೇಲಿನ ಅತ್ಯಾಚಾರದ ವಿರುದ್ಧ ಸರಕಾರ ಸುಮ್ಮನಿರುವುದೇಕೆ? ಸಂಕಟದಲ್ಲಿರುವ ಜಗತ್ತಿನಾದ್ಯಂತದ ಭಾರತೀಯ ನಾಗರಿಕರಿಗೆ ಸಹಾಯ ಮಾಡುವ ಸರಕಾರ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂದೂಗಳ ದುಃಖವನ್ನೂ ಅರಿತು ಅವರಿಗೆ ಸಹಾಯ ಮಾಡಬೇಕೆಂಬುದೇ ಅಪೇಕ್ಷೆ !
ಇಸ್ಲಾಮಾಬಾದ್ : ಜೀವಮಾನವಿಡೀ ಬಂಧನ ವನ್ನು ಎದುರಿಸುತ್ತಿರುವ ಪಾಕಿಸ್ತಾನದ ಕ್ರಿಕೇಟ್ ಪಟು ದಾನಿಶ ಕನೇರಿಯಾ ಇವರು ಹಿಂದೂ ಆಗಿರುವು ದರಿಂದಲೇ ಪಾಕಿಸ್ತಾನ ಸರಕಾರ ಅವರಿಗೆ ಆರ್ಥಿಕ ಹಾಗೂ ಕಾನೂನು ಸಹಾಯ ಮಾಡಲು ನಿರಾಕರಿಸಿದೆ, ಎಂದು ಪಾಕ್‌ನ ಸಂಸದೀಯ ಸಮಿತಿಯ ಸದಸ್ಯ ಹಾಗೂ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್) ಪಕ್ಷದ ಸಂಸದ ರಮೇಶಕುಮಾರ ವಂಕವಾನಿ ಇವರು ಆರೋಪಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂ ಆಗಿರುವುದರಿಂದ ಕ್ರಿಕೇಟ್ ಆಟಗಾರ ದಾನಿಶ ಕನೇರಿಯಾಗೆ ಪಾಕಿಸ್ತಾನದ ಕ್ರಿಕೇಟ್ ಮಂಡಳಿಯು ಸಹಾಯ ಮಾಡುವುದಿಲ್ಲ ! - ಪಾಕಿಸ್ತಾನದ ಹಿಂದೂ ಸಂಸದ ರಮೇಶಕುಮಾರ ವಂಕವಾನಿ ಆರೋಪ