ಸನಾತನ ಸಂಸ್ಥೆಯ ವಿರುದ್ಧ ಅಪಪ್ರಚಾರ ನಿಲ್ಲಿಸಿ ! - ಹಿಂದುತ್ವವಾದಿಗಳು

ಧಾರವಾಡದಲ್ಲಿ ಸನಾತನ ಸಂಸ್ಥೆಯನ್ನು ಬೆಂಬಲಿಸಿ ಹಿಂದುತ್ವನಿಷ್ಠರಿಂದ ಮೆರವಣಿಗೆ !

ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿವಿಧ ಹಿಂದುತ್ವವಾದಿ ಸಂಘಟನೆಗಳು
ಧಾರವಾಡ : ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಡಾ. ನರೇಂದ್ರ ದಾಭೋಲಕರ ಹಾಗೂ ಕಾ. ಗೋವಿಂದ ಪಾನ್ಸಾರೆಯವರ ಹತ್ಯೆಪ್ರಕರಣದಲ್ಲಿ ಬಂಧಿಸಲಾದ ಸನಾತನದ ಸಾಧಕರನ್ನು ಬಿಡುಗಡೆಗೊಳಿಸಬೇಕು ಮತ್ತು ಸನಾತನ ಸಂಸ್ಥೆಯ ವಿರುದ್ಧ ನಡೆಯುವ ಅಪಪ್ರಚಾರ ನಿಲ್ಲಿಸಬೇಕು, ಎಂಬುದಕ್ಕಾಗಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್‌ರವರ ನೇತೃತ್ವದಲ್ಲಿ ಆಗಸ್ಟ್ ೩೦ ರಂದು ಇಲ್ಲಿ ಹಿಂದುತ್ವನಿಷ್ಠ ಸಂಘಟನೆ ಗಳು ಮೆರವಣಿಗೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದವು.
ಈ ಮೆರವಣಿಗೆಯಲ್ಲಿ ಶ್ರೀರಾಮ ಸೇನೆ, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಸಹಭಾಗಿಯಾಗಿದ್ದರು. ಈ ಸಮಯದಲ್ಲಿ ಶ್ರೀ. ಪ್ರಮೋದ ಮುತಾಲಿಕ್ ರವರು ಮಾತನಾಡುತ್ತಾ, ‘ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದ್ದು ಇದು ಹಿಂದೂ ಸಂಘಟನೆಗಳ ಘನತೆಯನ್ನು ಮಲಿನಗೊಳಿಸುವ ಪುರೋ(ಅಧೋ)ಗಾಮಿಗಳ ಒಂದು ಸಂಚಾಗಿದೆ’ ಎಂದರು. ಶ್ರೀರಾಮ ಸೇನೆಯ ಸಂಘಟಕರಾದ ಶ್ರೀ. ಗಂಗಾಧರ ಕುಲಕರ್ಣಿಯವರು ಮಾತನಾಡುತ್ತಾ, ‘ಭಾರತದಲ್ಲಿ ಉತ್ತಮ ಕಾರ್ಯ ಮಾಡುವ ಸಂಘಟನೆಯವರ ಧ್ವನಿಯನ್ನು ಹತ್ತಿಕ್ಕುವ ಷಡ್ಯಂತ್ರ ನಡೆಯುತ್ತಿದೆ. ಸನಾತನ ಸಂಸ್ಥೆ ಶ್ರೇಷ್ಠ ಕಾರ್ಯ ಮಾಡುತ್ತಿರು ವಾಗಲೂ ಅದರ ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಸನಾತನ ಸಂಸ್ಥೆಯನ್ನು ವಕ್ರ ದೃಷ್ಟಿಯಿಂದ ನೋಡಬೇಡಿ. ಇನ್ನು ಮುಂದೆ ಬೃಹತ್ ಆಂದೋಲನ ನಡೆಸಲಾಗುವುದು’ ಎಂದರು. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್‌ರವರು ಮಾತನಾಡುತ್ತಾ, ‘ಸನಾತನ ಸಂಸ್ಥೆಯ ಮಾನಹಾನಿ ಮಾಡಲು ಸಂಸ್ಥೆಯ ಮೇಲೆ ವಿನಾಕಾರಣ ಸುಳ್ಳು ಆರೋಪ ಮಾಡಲಾಗುತ್ತಿದೆ, ಇದನ್ನು ಧಾರವಾಡ ಜಿಲ್ಲೆಯ ಸಮಸ್ತ ಹಿಂದುತ್ವವಾದಿ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತಿವೆ’ ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ವಿರುದ್ಧ ಅಪಪ್ರಚಾರ ನಿಲ್ಲಿಸಿ ! - ಹಿಂದುತ್ವವಾದಿಗಳು