ಹಿಂದುತ್ವನಿಷ್ಠರೇ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಹಿಂದುತ್ವವನ್ನು, ಅಂದರೆ ಸನಾತನವನ್ನು ಹತ್ತಿಕ್ಕುವ ತನಿಖಾ ದಳದಿಂದ ಎಚ್ಚರ !

ಸನಾತನದ ಸಾಧಕ ಡಾ. ವಿರೇಂದ್ರಸಿಂಹ ತಾವಡೆಯವರ ಬಂಧನ ಹಾಗೂ ಅನಂತರದ ತನಿಖೆಯ ವಾರ್ತೆಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಇದರಲ್ಲಿ ವರಿಷ್ಠರು ಪ್ರೊಜೆಕ್ಟ್ ದಾಬೋಲಕರ್ ಉಪಕ್ರಮಕ್ಕೆ ಡಾ. ತಾವಡೆಯವ ರನ್ನು ನೇಮಿಸಿದ್ದರು, ಡಾ. ತಾವಡೆ ಶಸ್ತ್ರಾಸ್ತ್ರಗಳನ್ನು ಪಡೆಯಲು ಕೆಲವರನ್ನು ಭೇಟಿಯಾಗಿದ್ದರು, ಡಾ. ತಾವಡೆಯವರು ಡಾ. ದಾಬೋಲಕರ್ ವಿರುದ್ಧ ಮಾತನಾಡುತ್ತಿದ್ದರು, ಡಾ. ತಾವಡೆಯಿಂದ ಹಿಂದೂ ರಾಷ್ಟ್ರಕ್ಕಾಗಿ ೧೫೦೦೦ ಜನರ ಸೇನೆ ಸಿದ್ಧಗೊಳಿಸಲಿಕ್ಕಿತ್ತು ಮುಂತಾದ ಮಾಹಿತಿಯು ತನಿಖಾ ದಳದವರಿಗೆ ದೊರೆತಿತ್ತು ಎಂದು ಮಾಧ್ಯಮಗಳು ಹೇಳುತ್ತಿವೆ. ನಿಜವಾದ ಅಪರಾಧಿಯ ತನಕ ತಲುಪಲು ಆಗದಿದ್ದರೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನಿರಪರಾಧಿ ಜನರನ್ನು ಸಿಲುಕಿಸಲು ತನಿಖಾ ದಳಗಳು ಪ್ರಯತ್ನಿಸುತ್ತಿರುತ್ತವೆ ಎಂಬುದು ಇಂದಿನ ವರೆಗಿನ ಅನೇಕ ಘಟನೆಗಳಿಂದ ಸಿದ್ಧವಾಗಿದೆ. ಈ ಪ್ರಕರಣದಲ್ಲಿಯೂ ಅದೇ ರೀತಿ ಆದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಪ್ರಕಟಿಸಲಾಗುವ ವಾರ್ತೆಗಳಿಂದ ಸನಾತನದ ಹೆಚ್ಚೆಚ್ಚು ಅಮಾಯಕ ಸಾಧಕರನ್ನು ಸಿಲುಕಿಸುವ ತನಿಖಾ ದಳದ ಉದ್ದೇಶ ಸ್ಪಷ್ಟವಾಗುತ್ತದೆ. ಅದಕ್ಕಾಗಿ -

೧. ವಿ-ಅಂಚೆಯ ವಿಷಯ ಹಸ್ತಾಕ್ಷರದಂತೆ ಇರುವುದಿಲ್ಲ. ತನಿಖಾ ದಳದವರ ಬಳಿ ಇರುವ ವ್ಯವಸ್ಥೆಯಿಂದ ಅವರು ಯಾರ ವಿ-ಅಂಚೆಯನ್ನು ಎಲ್ಲಿಯೂ ತೆರೆಯಬಹುದು. ಅದನ್ನು ಬಳಸಿ ಬೇಕಾದಂತೆ ದಾಖಲೆಗಳನ್ನು ಸೃಷ್ಟಿಸಬಹುದು. ಅಲ್ಲದೇ ನಿರಪರಾಧಿತನ ಸಿದ್ಧಪಡಿಸುವ ವಿ-ಅಂಚೆ ನಾಶ ಮಾಡಬಹುದು.
೨. ತನಿಖಾ ದಳಗಳು ಯಾರೋ ಅಪರಿಚಿತ ವ್ಯಕ್ತಿಗಳನ್ನು ನಿಲ್ಲಿಸಿ ಅವರ ಮೇಲೆ ಒತ್ತಡ ತಂದು ಅಥವಾ ಹಣ ಕೊಟ್ಟು ಡಾ. ತಾವಡೆ ನನ್ನಲ್ಲಿ ಬಂದಿದ್ದರು. ಅವರು ನನ್ನಲ್ಲಿ ಶಸ್ತ್ರಗಳನ್ನು ಕೇಳಿದ್ದರು, ಅವರು ಹಿಂಸಾತ್ಮಕ ಚಟುವಟಿಕೆಗಳ ಆಯೋಜನೆ ಮಾಡುತ್ತಿರುವಾಗ ನಾನು ನೋಡಿದೆ, ಅವರು ಆ ದಿನ ಆ ಪಟ್ಟಣದಲ್ಲಿದ್ದರು ಮುಂತಾದ ಘಟಿಸದ ಪ್ರಸಂಗಗಳನ್ನು ಅವರಿಂದ ಹೇಳಿಸಿಕೊಂಡು ಸಾಕ್ಷಿ ಗಳನ್ನು ನಿರ್ಮಿಸಬಹುದು.
೩. ವಿ-ಅಂಚೆಯಲ್ಲಿರುವ ಒಂದು ಸಾಮಾನ್ಯ ಸಂಭಾಷಣೆಯನ್ನು ತಮಗೆ ಬೇಕಾದಂತೆ ಅರ್ಥೈಸಿ ನ್ಯಾಯಾಲಯದೆದುರು ಮಂಡಿಸಬಹುದು. ಉದಾ. ಸನಾತನದ ವರಿಷ್ಠರು ಪ್ರೊಜೆಕ್ಟ್ ದಾಭೋಲಕರ್ ಉಪಕ್ರಮಕ್ಕೆ ಡಾ. ತಾವಡೆಯವರನ್ನು ನೇಮಿಸಿದ್ದರು.
೪. ಮನೆಯಲ್ಲಿ ಆಕ್ಷೇಪಾರ್ಹ ವಸ್ತುಗಳನ್ನಿಟ್ಟು ಅದನ್ನು ಜಪ್ತಿ ಮಾಡಿರುವ ತೋರಿಕೆಯನ್ನು ಮಾಡ ಬಹುದು. (ಮಾಲೆಗಾಂವ್ ಪ್ರಕರಣದಲ್ಲಿ ಎಟಿಎಸ್ ಅಧಿಕಾರಿಗಳೇ ಇಬ್ಬರ ಮನೆಯಲ್ಲಿ ಆರ್‌ಡಿಎಕ್ಸ್ ಇಟ್ಟಿರುವುದಾಗಿ ಎನ್‌ಐಎ ನ್ಯಾಯಾಲಯದಲ್ಲಿ ಲಿಖಿತ ಹೇಳಿಕೆ ನೀಡಿದೆ.)
೫. ಡಾ. ತಾವಡೆ ದಾಬೋಲಕರರನ್ನು ಕೊಲೆ ಮಾಡಲು ನನಗೆ ಸುಪಾರಿ ಕೊಟ್ಟಿದ್ದರು, ಎಂದು ಯಾರಾದರೊಬ್ಬ ಗೂಂಡಾನಿಂದ ಹೇಳಿಸಿಕೊಳ್ಳಬಹುದು. ಸ್ವಲ್ಪದರಲ್ಲಿ, ತಮ್ಮನ್ನು ರಕ್ಷಿಸಿಕೊಳ್ಳಲು ಅಥವಾ ದೊಡ್ಡಸ್ತಿಕೆಯನ್ನು ಪಡೆಯಲು ಅಮಾಯಕರನ್ನು ಬಲಿಕೊಡಲು ತನಿಖಾ ದಳಗಳಿಗೆ ಏನೂ ಅನಿಸುವುದಿಲ್ಲ. ಹಾಗಾಗಿ ಈ ರೀತಿ ಪ್ರಕಟವಾಗುವ ವಾರ್ತೆಗಳನ್ನು ನಂಬಬೇಡಿ. ಕೊನೆಗೆ ಮಡಗಾವ್ ಬಾಂಬ್‌ಸ್ಫೋಟ ಖಟ್ಲೆಯಂತೆ ಡಾ. ದಾಬೋಲಕರ್ ಮತ್ತು ಕಾ. ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಸನಾತನದ ಸಾಧಕರು ಈಶ್ವರನ ಕೃಪೆಯಿಂದ ನಿರಪರಾಧಿ ಯೆಂದು ಮುಕ್ತರಾಗುವರು, ಎಂಬ ಶ್ರದ್ಧೆಯನ್ನಿಡಿ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದುತ್ವನಿಷ್ಠರೇ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಹಿಂದುತ್ವವನ್ನು, ಅಂದರೆ ಸನಾತನವನ್ನು ಹತ್ತಿಕ್ಕುವ ತನಿಖಾ ದಳದಿಂದ ಎಚ್ಚರ !