ಬಾಂಗ್ಲಾದೇಶದಲ್ಲಿ ಮತಾಂಧರಿಂದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ !

ಢಾಕಾ : ಬಾಂಗ್ಲಾದೇಶದ ಸಿಲಹಟ ಜಿಲ್ಲೆಯ ಕಾಜೋಲಶಾಹದಲ್ಲಿ ಶುಕ್ರವಾರದ ನಮಾಜಿನ ಸಮಯದಲ್ಲಿ ಇಸ್ಕಾನ್ ದೇವಸ್ಥಾನದಲ್ಲಿ ಕೀರ್ತನೆ ನಡೆಯುತ್ತಿರುವಾಗ ಮೃದಂಗ-ಡೋಲು ಬಾರಿಸಿದ್ದ ರಿಂದ ಮತಾಂಧರು ದೇವಸ್ಥಾನದ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಎರಡೂ ಕಡೆಗಳಿಂದಲೂ ಕಲ್ಲು ತೂರಾಟ ನಡೆಸಲಾಯಿತು; ಆದರೆ ಆ ಸಮಯದಲ್ಲಿ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರಿಂದ ಹಾಗೂ ದೇವಸ್ಥಾನದ ಬಾಗಿಲು ಮುಚ್ಚಿದ್ದರಿಂದ ಮುಂದಾಗಬಹುದಾಗಿದ್ದ ದೊಡ್ಡ ಹಾನಿ ತಪ್ಪಿತು. ಇದರಲ್ಲಿ ೭ ಜನರು ಗಾಯಗೊಂಡಿದ್ದಾರೆ. ಇದರಲ್ಲಿ ೬ ಜನರಿಗೆ ಪೊಲೀಸರ ರಬ್ಬರಿನ ಗುಂಡು ತಗುಲಿದ್ದರಿಂದ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ೧೫ ಜನರನ್ನು ಬಂಧಿಸಿದ್ದಾರೆ. (ಭಾರತದಲ್ಲಿ ಪ್ರತಿದಿನ ೫ ಸಲ ಕಾನೂನು ಬಾಹಿರವಾಗಿ ಮತ್ತು ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಆವಶ್ಯಕವಿಲ್ಲದಿರುವಾಗ ಮಸೀದಿಯ ಧ್ವನಿವರ್ಧಕ ದಿಂದ ಅಜಾನ್ ಕೇಳಿಸಲಾಗುತ್ತದೆ. ಈ ಕುರಿತು ಯಾರೂ ಏನೂ ಮಾತನಾಡುವುದಿಲ್ಲ ! ಸರ್ವೋಚ್ಚ ನ್ಯಾಯಾಲಯವು ಧ್ವನಿವರ್ಧಕವನ್ನು ನಿಲ್ಲಿಸುವಂತೆ ಆದೇಶ ನೀಡಿದ್ದರೂ ಪೊಲೀಸರು ಇದರ ಮೇಲೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಾಂಗ್ಲಾದೇಶದಲ್ಲಿ ಮತಾಂಧರಿಂದ ಇಸ್ಕಾನ್ ದೇವಸ್ಥಾನದ ಮೇಲೆ ದಾಳಿ !