ಹಿಂದೂಗಳೇ, ವಿಜಯೋಪಾಸನೆಯನ್ನು ಆರಂಭಿಸಿ !

ವಿಜಯ ದಶಮಿ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ
ಶುಂಭ, ನಿಶುಂಭ, ಮಹಿಷಾಸುರ ಮುಂತಾದ ಬಲಿಷ್ಠ ದೈತ್ಯರ ಮೇಲೆ ಮಹಾ ದುರ್ಗೆಯು ಮತ್ತು ಅಹಂಕಾರಿ ರಾವಣನ ಮೇಲೆ ಶ್ರೀರಾಮಚಂದ್ರನು ಜಯಗಳಿಸಿದ ದಿನವೆಂದರೆ, ವಿಜಯದಶಮಿ ! ದಸರಾವೆಂದರೆ, ಕೇವಲ ಹಿಂದೂ ದೇವತೆಗಳ ವಿಜಯವನ್ನು ಸ್ಮರಿಸುವ ಹಬ್ಬವಲ್ಲ, ಅದು ಗೆಲ್ಲಬೇಕೆಂಬ ಇಚ್ಛೆಯುಳ್ಳ ವೃತ್ತಿಯನ್ನು ಸಂವರ್ಧನೆ ಮಾಡುವ ದಿನವಾಗಿದೆ; ಆದ್ದರಿಂದಲೇ ಈ ದಿನ ರಾಕ್ಷಸೀ ಪ್ರವೃತ್ತಿಯ ಮೇಲೆ ಜಯಗಳಿಲು ಹಿಂದೂ ಧರ್ಮದಲ್ಲಿ ವಿಜಯೋಪಾಸನೆಯನ್ನು ಹೇಳಲಾಗಿದೆ. ಶತ್ರುವಿನಿಂದಅಜೇಯನಾಗಿರಲು ‘ಅಪರಾಜಿತಾ ದೇವಿ’ಯ ಪೂಜೆ, ಶಸ್ತ್ರಗಳು ಶತ್ರುಗಳನ್ನು ಸಂಹಾರ ಮಾಡುತ್ತವೆ, ಶಸ್ತ್ರಪೂಜೆ, ನಂತರ ಶತ್ರುವಿನ ಪ್ರತ್ಯಕ್ಷ ಪರಾಭವಕ್ಕಾಗಿ ಸೀಮೋಲ್ಲಂಘನ ಮಾಡುವುದರಿಂದ ಈ ಕೃತಿಗಳನ್ನು ವಿಜಯ ದಶಮಿಯಂದು ಮಾಡಲಾಗುತ್ತದೆ.
ಇಂದು ಈ ವಿಜಯೋಪಾಸನೆಯ ವಿಸ್ಮರಣೆಯಾಗಿರುವುದರಿಂದ ಎಲ್ಲೆಡೆ ಹಿಂದೂಗಳು ಪರಾಜಯಗೊಳ್ಳುತ್ತಿದ್ದಾರೆ. ಯುದ್ಧದ ಒಂದೇ ಉದ್ದೇಶವಿರುತ್ತದೆ, ಅದೆಂದರೆ ವಿಜಯ ! ವಿಶ್ವದಲ್ಲಿ ಪರಾಜಯಕ್ಕಾಗಿ ಒಂದೂ ಯುದ್ಧ ನಡೆಯುವುದಿಲ್ಲ.
ಹಿಂದೂಗಳೇ, ವಿಜಯದ ಈ ಮಹಾತ್ಮೆ ಮತ್ತು ವಿಜಯದಶಮಿಯ ವಿಜಯೋಪಾಸನೆಯ ಮಹತ್ವವನ್ನು ಗಮನ
ದಲ್ಲಿಡಿ ! ಕೇವಲ ಕರ್ಮಕಾಂಡವೆಂದು ಈ ದಿನದಂದು ವಿಜಯೋಪಾಸನೆ ಮಾಡಬೇಡಿ, ವರ್ಷದಿಂದ ಸಾಮಾಜಿಕ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರಿ ದುಷ್ಪ್ರವೃತ್ತಿಗಳ ನಿವಾರಣೆಗಾಗಿ ನಿಜವಾದ ವಿಜಯೋಪಾಸನೆ ಯನ್ನು ಆರಂಭಿಸಿ !’ - (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹಿಂದೂಗಳೇ, ವಿಜಯೋಪಾಸನೆಯನ್ನು ಆರಂಭಿಸಿ !