ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯಪದ್ಧತಿ ಮತ್ತು ಅವುಗಳ ಹಿಂದಿನ ಸೂಕಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ಹಲ್ಲುಗಳನ್ನು ಉಜ್ಜುವ (ತಿಕ್ಕುವ) ಕ್ರಿಯೆ
೧. ಒಂದು ಜಾಗದಲ್ಲಿ ಕುಳಿತುಕೊಂಡು ಅಥವಾ ನಿಂತುಕೊಂಡು ಹಲ್ಲುಗಳನ್ನು ಉಜ್ಜಬೇಕು : ಒಂದು ಜಾಗದಲ್ಲಿ ಕುಳಿತುಕೊಂಡು ಅಥವಾ ನಿಂತುಕೊಂಡು ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳು ಯೋಗ್ಯ ರೀತಿಯಲ್ಲಿ ಉಜ್ಜಲ್ಪಡುತ್ತವೆ. ಆದುದರಿಂದ ತಿರು ಗಾಡುತ್ತಾ ಹಲ್ಲುಗಳನ್ನು ಉಜ್ಜಬಾರದು.
೨. ಬ್ರಶ್‌ಅನ್ನು ಉಪಯೋಗಿಸುವುದಕ್ಕಿಂತ ಬೆರಳುಗಳಿಂದ ಹಲ್ಲುಗಳನ್ನು ಉಜ್ಜಬೇಕು !
೨ ಅ. ನಿರ್ಜೀವ ಬ್ರಶ್‌ಗಿಂತ ಸಜೀವ ಬೆರಳು ಶರೀರಕ್ಕೆ ಹೆಚ್ಚು ಸಮೀಪದ್ದಾಗಿರುತ್ತದೆ.
೨ ಆ. ಬ್ರಶ್‌ನಿಂದ ಪೃಥ್ವಿತತ್ತ್ವಪ್ರಧಾನವಾಗಿರುವ ಹಲ್ಲುಗಳ ಕಾಳಜಿಯನ್ನು ತೆಗೆದುಕೊಳ್ಳುವುದಕ್ಕಿಂತ ಬೆರಳುಗಳಿಂದ ಆಪತತ್ತ್ವಪ್ರಧಾನವಾಗಿರುವ ಒಸಡುಗಳ ಕಾಳಜಿಯನ್ನು ತೆಗೆದುಕೊಳ್ಳುವುದು ಹೆಚ್ಚು ಉಪಯುಕ್ತವಾಗಿರುವುದು : ಬ್ರಶ್‌ನಿಂದ ಕೇವಲ ಹಲ್ಲುಗಳು ಸ್ವಚ್ಛವಾಗುತ್ತವೆ ಮತ್ತು ಎರಡು ಹಲ್ಲುಗಳ ನಡುವಿರುವ ಅನ್ನದ ಕಣಗಳು ಹೊರಗೆ ಬರುತ್ತವೆ. ಆದರೆ ಬ್ರಶ್‌ನಿಂದ ಹಲ್ಲುಗಳ ಉಗಮ ಸ್ಥಾನವಾಗಿರುವ ಒಸಡುಗಳ ಮೇಲೆ ಏನೂ ಪರಿಣಾಮವಾಗುವುದಿಲ್ಲ. ಒಸಡುಗಳು ಚೆನ್ನಾಗಿದ್ದರೆ ಹಲ್ಲುಗಳು ಚೆನ್ನಾಗಿ ರುತ್ತವೆ. ಬೆರಳುಗಳಿಂದ ಹಲ್ಲುಜ್ಜುವಾಗ ಹಲ್ಲುಗಳು ಸ್ವಚ್ಛವಾಗುವುದರೊಂದಿಗೆ ಒಸಡುಗಳಿಗೆ ತನ್ನಿಂದ ತಾನೇ ಮಾಲೀಶಾಗಿ ಅವುಗಳಿಗೆ ಆರೋಗ್ಯವು ಲಭಿಸುತ್ತದೆ. ಪೃಥ್ವಿತತ್ತ್ವಕ್ಕಿಂತ ಆಪತತ್ತ್ವವು ಹೆಚ್ಚುಸೂಕ್ಷ್ಮವಾಗಿರುವುದರಿಂದ ಅದು ಹೆಚ್ಚು ಪ್ರಭಾವಶಾಲಿ ಯಾಗಿರುತ್ತದೆ. ಪೃಥ್ವಿತತ್ತ್ವ ಪ್ರಧಾನ ಹಲ್ಲುಗಳಿಗಿಂತ ಆಪತತ್ತ್ವಪ್ರಧಾನ ಒಸಡುಗಳ ಕಾಳಜಿ ವಹಿಸುವುದು ಹೆಚ್ಚು ಮಹತ್ವದ್ದಾಗಿದೆ.
೨ ಇ. ಬ್ರಶ್‌ನಿಂದ ಹಲ್ಲುಜ್ಜುವುದಕ್ಕಿಂತ ಬೆರಳುಗಳಿಂದ ಅಥವಾ ಕಡ್ಡಿಯಿಂದ ಹಲ್ಲುಗಳನ್ನು 
ಸ್ವಚ್ಛ ಗೊಳಿಸುವುದರಿಂದ ಶಾರೀರಿಕ ಮತ್ತು ಮಾನಸಿಕ ಹೀಗೆ ಎರಡೂ ಸ್ತರಗಳಲ್ಲಿ ಲಾಭವಾಗುವುದು
೧. ಬ್ರಶ್‌ನ ಕೂದಲುಗಳು ಕೃತಕವಾಗಿರುವುರಿಂದ ಅವುಗಳಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗು ತ್ತವೆ. ಬ್ರಶ್‌ನ ಕೂದಲುಗಳ ಸ್ಪರ್ಶದಿಂದ ಒಸಡು ಮತ್ತು ಹಲ್ಲುಗಳ ಮೇಲೆ ರಜ-ತಮ ಲಹರಿಗಳ ಆವರಣವು ನಿರ್ಮಾಣವಾಗಿ ಹಲ್ಲುಗಳು ಕೇವಲ ಸ್ಥೂಲದಲ್ಲಿ ಮಾತ್ರ ಸ್ವಚ್ಛವಾಗುತ್ತವೆ; ಆದರೆ ಸೂಕ್ಷ ್ಮದಲ್ಲಿ ಅವು ಅಸ್ವಚ್ಛವಾಗಿಯೇ ಇರುತ್ತವೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಂದ ಹಲ್ಲುಗಳನ್ನು ತಿಕ್ಕುವುದರಿಂದ ದೇಹದಲ್ಲಿನ ಶಕ್ತಿಯು ಬೆರಳುಗಳಿಂದ ಪ್ರಕ್ಷೇಪಿಸಲ್ಪಟ್ಟು ಒಸಡುಗಳಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಒಸಡು ಮತ್ತು ಹಲ್ಲುಗಳಿಗೆ ಸಾತ್ತ್ವಿಕತೆಯ ಲಾಭವಾಗಿ ಅವು ಸ್ಥೂಲದಲ್ಲಿ ಮತ್ತು ಸೂಕ್ಷ ್ಮದಲ್ಲಿ ಸ್ವಚ್ಛವಾಗುತ್ತವೆ.
೨. ಬೆರಳುಗಳಿಂದ ಒಸಡುಗಳ ಮೇಲೆ ಒತ್ತಡ ಬರುವುದರಿಂದ ಒಸಡುಗಳಿಗೆ ಮಾಲೀಶ್ ಮಾಡಿದು ದರ ಪರಿಣಾಮವಾಗುತ್ತದೆ. ಇದರಿಂದ ಒಸಡುಗಳು ಶಕ್ತಿಶಾಲಿಯಾಗುತ್ತವೆ.
೩. ಕಹಿಬೇವಿನ ಕಡ್ಡಿಯನ್ನು ಹಲ್ಲುಜ್ಜಲು ಉಪಯೋಗಿಸಿದರೆ ಹಲ್ಲುಗಳು ಒಳ್ಳೆಯ ರೀತಿಯಲ್ಲಿ ಸ್ವಚ್ಛವಾಗುವುದರೊಂದಿಗೆ ಕಹಿಬೇವಿನ ರಸ ಮತ್ತು ಚೈತನ್ಯಗಳ ಲಾಭವು ಒಸಡುಗಳಿಗೆ ಮತ್ತು ಹಲ್ಲುಗಳಿಗೆ ದೊರಕಿ ಅವು ಶಕ್ತಿಶಾಲಿಯಾಗುತ್ತವೆ. - ಈಶ್ವರ (ಕು. ಮಧುರಾ ಭೋಸಲೆಯವರು ಈಶ್ವರ ಈ ಅಂಕಿತನಾಮದಿಂದ ಬರೆಯುತ್ತಾರೆ. ೨೮.೧೧.೨೦೦೭)
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !