ಮಾನವತೆಯ ಮುಖವಾಡ ತೊಟ್ಟು ಒಳಗಿನಿಂದ ಹಿಂದೂಸ್ಥಾನವನ್ನು ಕ್ರಿಸ್ತಿಸ್ಥಾನ ಮಾಡುವ ದೇಶವಿರೋಧಿ ಮದರ ತೆರೆಸಾ ಇವರ ಸಂಸ್ಥೆಯ ನಿಜಸ್ವರೂಪ !

೧. ಮದರ ತೆರೆಸಾರವರ ಮೃತ್ಯುವಿನ ನಂತರ ರಾಷ್ಟ್ರೀಯ ಶೋಕ ವ್ಯಕ್ತವ್ಯಕ್ತಪಡಿಸುವುದು
‘ಆಗಸ್ಟ್ ೧೯೯೭ ರಲ್ಲಿ ಮೃತ್ಯುಹೊಂದಿದ ಮದರ ತೆರೆಸಾರ ಕುರಿತು ರಾಷ್ಟ್ರೀಯ ಶೋಕ ವ್ಯಕ್ತ ಪಡಿಸಲಾಯಿತು. ಸೇನಾಧಿಕಾರಿಗಳು ಅವರ ಶವಪೆಟ್ಟಿಗೆಗೆ ಹೆಗಲು ಕೊಟ್ಟರು. ಶೋಕ ಸಂಚಲನ ಮಾಡಿದರು ಮತ್ತು ಸೇನಾ ಪದ್ಧತಿಯಿಂದ ಗೌರವವಂದನೆ ಸಲ್ಲಿಸಿದರು. ಬಂಗಾಲ ಸರಕಾರವು ಶೋಕಾಚರಣೆ ಪಾಲಿಸಿತು, ಧ್ವಜವನ್ನು ಅರ್ಧಕ್ಕೆ ಇಳಿಸಿತು ಹಾಗೂ ತೋಫುಗಳ ಗಾಡಿಯಿಂದ ಶವವನ್ನು ಮೆರವಣಿಗೆಯ ಮೂಲಕ ಒಯ್ದರು. ರಾಷ್ಟ್ರಪತಿ ಅಥವಾ ಪ್ರಧಾನಿಯವರಿಗೆ ಮೃತ್ಯುವಿನ ನಂತರ ನೀಡುವಂತಹ ಸನ್ಮಾನವನ್ನು ಮದರ ತೆರೆಸಾರವರಿಗೂ ನೀಡಲಾಯಿತು. ಇದು ಯೋಗ್ಯವೇ ?

೨. ಸುಮಾರು ಐವತ್ತು ವರ್ಷಗಳ ವರೆಗೆ ‘ಮಿಶನರಿಸ್ ಆಫ್ ಚಾರಿಟಿ’ ಸಂಸ್ಥೆಯ ಮುಖ್ಯಹುದ್ದೆಯಲ್ಲಿದ್ದ ತೆರೆಸಾ !
ಬಹುರಾಷ್ಟ್ರೀಯ ಉದ್ಯಮ ಜಗತ್ತಿನಲ್ಲಿ ಎಲ್ಲೆಡೆ ಆರ್ಥಿಕ ಸಾಮ್ರಾಜ್ಯವಿರುವಂತೆಯೇ ಮದರ ತೆರೆಸಾರವರ ಮಿಶನರಿಸ್ ಆಫ್ ಚಾರಿಟಿ ಸಂಸ್ಥೆಯ ಸಾಮ್ರಾಜ್ಯವಿದೆ. ಈ ಸಂಸ್ಥೆಯ ಪ್ರಕಾರ ಅದರ ಮುಖ್ಯ ಹುದ್ದೆಯಲ್ಲಿ ಯಾವುದೇ ವ್ಯಕ್ತಿಯು ಎರಡುಸಲ ಕೇವಲ ಆರು ವರ್ಷಗಳ ವರೆಗೆ ಇರಬಹುದು; ಆದರೆ ಮದರ ತೆರೆಸಾ ಪೋಪ್ ಆಶೀರ್ವಾದದಿಂದ ಐವತ್ತು ವರ್ಷಗಳ ಕಾಲ ಅದರ ಮುಖ್ಯ ಹುದ್ದೆಯಲ್ಲಿದ್ದರು.
೩. ಜಗತ್ತಿನ ಅನೇಕ ಠಕ್ಕರು ಹಾಗೂ ಮಾಫಿಯಾ ಇವರಿಂದ ಅಪಾರ ಹಣ ತಂದ ಮದರ ತೆರೆಸಾ !
ಮದರ ತೆರೆಸಾ ಇವರ ಸಂಸ್ಥೆಗಳಿಗೆ ಎಲ್ಲಿಂದ ಅಪಾರ ಹಣ ಬರುತ್ತದೆ ? ಎನ್ನುವುದು ಒಂದು ರಹಸ್ಯವಿದೆ. ಅದರ ಮೇಲೆ ಉಕ್ಕಿನ ಹೊದಿಕೆ ಇದೆ; ಆದರೆ ಇದರಿಂದಲೂ ಕೆಲವು ವಾರ್ತೆಗಳು ಹೊರಬಂದವು. ವರ್ಷಕ್ಕೆ ಐದು ಕೋಟಿ ಡಾಲರ್ ಎಂದರೆ ೨೫೦ ಕೋಟಿ ರೂಪಾಯಿಗಳು ವಿದೇಶದಿಂದ ಬರುತ್ತದೆ. ಜಗತ್ತಿನ ಅನೇಕ ಠಕ್ಕರು ಹಾಗೂ ಮಾಫಿಯಾ ಇವರು ಮಾಡಿದ ಪಾಪದಿಂದ ಮುಕ್ತವಾಗಲು ಈ ಸಂಸ್ಥೆಗಳಿಗೆ ಸಹಾಯ ಮಾಡುತ್ತಾರೆ. ಕ್ಯಾಲಿಫೋರ್ನಿಯಾದ ಒಬ್ಬ ಮಾಫಿಯಾ ಚಾರ್ಲ್ಸ್ ಕಿಟಿಂಗ್ ಈತನು ಮದರ ತೆರೆಸಾರಿಗೆ ಹತ್ತು ಲಕ್ಷ ಇಪ್ಪತ್ತೈದು ಸಾವಿರ ಡಾಲರ ಕೊಟ್ಟಿದ್ದನು. ಮದರ ತೆರೆಸಾ ಜಗತ್ತಿನ ಪುಂಡರಿಂದ ಅಪಾರ ಹಣ ತಂದರು. ‘ಹೈತಿ’ ದೇಶದ ಕ್ರೂರ ನರಾಧಮ ಹುಕುಂಶಹಾ ದುಬಲಿಯರ, ರೂಮಾನಿಯಾದ ಕ್ರೂರ ಅನಾಗರಿಕ ಶಾಸಕ ನಿಕೊಲಾಯಿ ಚಾಸೆಸ್ಕ್ಯು, ಮಾದಕ ದ್ರವ್ಯದ ವ್ಯಾಪಾರ ಮಾಡುವ ವಾಶಿಂಗ್ಟನ್‌ನ ಮಹಾಪೌರ ಮೆರಿಯನ್ ಬೇರಿ, ಇವರೆಲ್ಲರಿಂದ ಕೋಟ್ಯಾಂತರ ರೂಪಾಯಿಗಳನ್ನು ತಂದರು.
೪. ಬ್ರಿಟಿಷ್ ಡಾಕ್ಟರ ಜ್ಯಾಕ್ ಫ್ರೇಗರ್ ಇವರು ಮದರ 
ತೆರೆಸಾರವರ ಸಂಸ್ಥೆಯ ಕಾರ್ಯದ ಬಗ್ಗೆ ಕೊಟ್ಟ ಬೆರಗುಗೊಳಿಸುವ ಅಭಿಪ್ರಾಯ !
ಬ್ರಿಟಿಷ್ ಡಾಕ್ಟರ ಜ್ಯಾಕ್ ಫ್ರೇಗರ್ ಎನ್ನುತ್ತಾರೆ, ‘ಈ ಸಂಸ್ಥೆಯ ಕಾರುಭಾರವನ್ನು ನೋಡಿದಾಗ ನನಗನಿಸುತ್ತದೆ, ಈ ಸಂಸ್ಥೆಯು ಸಾಯುವ ಮನುಷ್ಯರ ಸೇವೆ ಮಾಡುತ್ತದೆ. ಜೀವಂತ ಮನುಷ್ಯರ ಸೇವೆ ಮಾಡುವುದಿಲ್ಲ. ಸರಿ, ಸಾಯುವ ಸ್ಥಿತಿಯಲ್ಲಿರುವ ಮನುಷ್ಯನಿಗಾದರೂ ತೆರೆಸಾರವರ ಸಂಸ್ಥೆಯಲ್ಲಿ ಸರಿಯಾಗಿ ಸೇವೆ ಸಿಗುತ್ತದೆಯೇ ? ಅವರ ಆಸ್ಪತ್ರೆಯಲ್ಲಿ ಸಾಧಾರಣವಾದ ನೋವುನಿವಾರಕ ಔಷಧಗಳೂ ಇರುವುದಿಲ್ಲ. ಇಂಜೆಕ್ಶನ್ನಿನ ಸೂಜಿಗಳನ್ನು ತಣ್ಣೀರಿನಲ್ಲಿ ತೊಳೆಯುತ್ತಾರೆ. ರೋಗಿಗಳಿಗೆ ಅತ್ಯಂತ ಕನಿಷ್ಠ ಮಟ್ಟದ ಭೋಜನ ಕೊಡಲಾಗುತ್ತದೆ. ಅವರ ಮರಣದ ಬಂಡವಾಳ ಮಾಡಲಾಗುತ್ತದೆ. ಧರ್ಮಪ್ರಚಾರವು ಅವರ ಪ್ರಮುಖ ಉದ್ದೇಶವಾಗಿದೆಯೇ ಹೊರತು ಸೇವೆ ಮಾಡುವುದಲ್ಲ. ಅಲ್ಲಿಯ ಶವಾಗಾರದ ಮೇಲೆ, ‘ಈಗ ನಾನು ಸ್ವರ್ಗಕ್ಕೆ ಹೋಗುವೆನು’ ಎಂಬ ವಾಕ್ಯ ಬರೆಯಲಾಗಿದೆ. ಅಂದರೆ ಅವರ ಗಮನವೆಲ್ಲ ಜೀವಂತ ಮನುಷ್ಯನಿಗಿಂತ ಸಾಯುವ ಸ್ಥಿತಿಯಲ್ಲಿರುವ ಮನುಷ್ಯನ ಕಡೆಗೆ ಅಧಿಕವಿರುತ್ತದೆ. ಅವರು ಮರಣದ ದಲ್ಲಾಳಿಗಳಾಗಿದ್ದಾರೆ.
೫. ಮದರ ತೆರೆಸಾರವರು ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡಬೇಕು, ಎಂಬುದೇ ಪೋಪರ ಇಚ್ಛೆ !
ಕೈಸ್ತ ಧರ್ಮಪ್ರಚಾರಕರಾದ ಹಾರ್ಡನ್ ಎನ್ನುತ್ತಾರೆ, ಮದರ ತೆರೆಸಾರವರು ಭಾರತದಲ್ಲಿ ಅಧಿಕ ಸಕ್ರಿಯಗೊಳ್ಳುತ್ತಿರುವ ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡಬೇಕು’ ಎಂಬುದೇ ಪೋಪರ ಇಚ್ಚೆಯಾಗಿದೆ. ಮದರ ತೆರೆಸಾರ ಸಂಸ್ಥೆಯು ಮಾನವತೆಯ ಮುಖವಾಡ ತೊಟ್ಟು ಒಳಗಿನಿಂದ ಹಿಂದೂಸ್ಥಾನವನ್ನು ಕ್ರಿಸ್ಥಿಸ್ಥಾನವನ್ನಾಗಿಸುವ ಒಂದು ನಿಯೋಜನಾಬದ್ಧವಾದ ಸಂಚು ಹೂಡಿದೆ.
೬. ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ತೆರೆಸಾಗೆ ಭಾರತರತ್ನ ಹಾಗೂ ದೇಶಕ್ಕಾಗಿ ಹಗಲು ರಾತ್ರಿ ಹೋರಾಡಿದ ಸ್ವಾತಂತ್ರ್ಯವೀರ ಸಾವರಕರರಿಗೆ ಮಾತ್ರ ಲೋಕಸಭೆಯಲ್ಲಿ ಶ್ರದ್ಧಾಂಜಲಿಯನ್ನೂ ಅರ್ಪಿಸದಿರುವುದು
ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವ ತೆರೆಸಾಗೆ ಭಾರತರತ್ನ ಈ ಪ್ರಶಸ್ತಿ ಕೊಟ್ಟಿರುವುದಕ್ಕೆ ಏನನ್ನು ವುದು ? ಈ ದೇಶದಲ್ಲಿ ಆಗಿಹೋದ ಮಹಾ ಪುರುಷರ ಮೃತ್ಯುವಿನ ನಂತರ ಹೀಗೆ ಶೋಕ ವ್ಯಕ್ತಪಡಿಸಿತ್ತೇ ?
ಸ್ವಾತಂತ್ರ್ಯವೀರ ಸಾವರಕರ ಇವರಂತಹ ಮಹಾನ ದೇಶಭಕ್ತನ ಮೃತ್ಯುವಾಯಿತು. ಆಗ ಅವರ ಅಂತಿಮ ಯಾತ್ರೆಗಾಗಿ ಸೈನ್ಯದ ತೋಫಿನ ವಾಹನ ಕೇಳಿದರೆ, ಸರಕಾರವು ಅದನ್ನು ಕೊಡಲಿಲ್ಲ. ಈ ಮಹಾನ ಕ್ರಾಂತಿವೀರನಿಗೆ ಲೋಕಸಭೆಯಲ್ಲಿ ಸಾಮಾನ್ಯ ಶ್ರದ್ಧಾಂಜಲಿಯನ್ನೂ ಅರ್ಪಿಸಲಿಲ್ಲ. ಮದರ ತೆರೆಸಾ ಮೇಲೆ ಮಾತ್ರ ಮಾನಸನ್ಮಾನದ ಮಳೆಗರೆದರು, ಸೈನ್ಯದ ಪದ್ಧತಿಯಿಂದ ಅಂತಿಮಯಾತ್ರೆ ತೆಗೆಯಲಾಯಿತು; ಆದರೆ ಸ್ವಾತಂತ್ರ್ಯವೀರ ಸಾವರಕರರು ಜೀವನಾದ್ಯಂತ ಕ್ರಾಂತಿಯುದ್ಧದ ನೇತೃತ್ವ ಮಾಡಿದರು, ಆ ನಿಜವಾದ ಸೇನಾಪತಿಯ ಅಂತ್ಯವಿಧಿಗೆ ಸಾಮಾನ್ಯ ತೋಫಿನ ಗಾಡಿಯನ್ನೂ ಕೊಡಲಿಲ್ಲ ಅಥವಾ ಗೌರವವಂದನೆ ಕೊಡಲಿಲ್ಲ. ಕೈಸ್ತರಿಗೆ ಹಾಗೂ ಮುಸಲ್ಮಾನರಿಗೆ ತಲೆಬಾಗುವುದು, ಎಂದರೆ ದೇಶಕಾರ್ಯ ಎನ್ನುವುದು ಇಂದಿನ ರಾಜಕಾರಣಿಗಳ ನಿಲುವಾಗಿದೆ.
(ಆಧಾರ : ಮಾಸಿಕ ‘ಪ್ರಜ್ವಲಂತ’, ದೀಪಾವಳಿ ವಿಶೇಷಾಂಕ ೧೯೯೭)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಾನವತೆಯ ಮುಖವಾಡ ತೊಟ್ಟು ಒಳಗಿನಿಂದ ಹಿಂದೂಸ್ಥಾನವನ್ನು ಕ್ರಿಸ್ತಿಸ್ಥಾನ ಮಾಡುವ ದೇಶವಿರೋಧಿ ಮದರ ತೆರೆಸಾ ಇವರ ಸಂಸ್ಥೆಯ ನಿಜಸ್ವರೂಪ !