ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
. ಈಗ ಮತಾಂಧತೆ ವಿಷಯದಲ್ಲಿ ಎಲ್ಲರೂ ಏಕೆ ಸುಮ್ಮನಿದ್ದಾರೆ ?
ಈದ್ ದಿನದಂದು ಕಾಶ್ಮೀರದಲ್ಲಿ ಮಸೀದಿ ಮತ್ತು ಪವಿತ್ರ ಧಾರ್ಮಿಕ ಸ್ಥಳಗಳನ್ನು ಮುಚ್ಚಿದ್ದರಿಂದಾಗಿ ಮಾಜಿ ಮುಖ್ಯಮಂತ್ರಿ ಓಮರ ಅಬ್ದುಲ್ಲಾ ಅವರು ಕೇಂದ್ರ ಸರಕಾರವನ್ನು ಎಚ್ಚರಿಸುತ್ತಾ, ಕಾಶ್ಮೀರದ ಇದು ವರೆಗಿನ ಇತಿಹಾಸದಲ್ಲಿ ಹೀಗೆ ಎಂದೂ ಸಂಭವಿಸಿರಲಿಲ್ಲ. ಇದರಿಂದ ಗಂಭೀರವಾದ ಪರಿಣಾಮಗಳಾಗುವವು ಎಂದು ಹೇಳಿದ್ದಾರೆ.

. ‘ಇಕೊ- ಫ್ರೆಂಡ್ಲಿ ಗಣೇಶೋತ್ಸವ’ದ ಡಂಗುರ ಸಾರುವವರು ಈಗೆಲ್ಲಿದ್ದಾರೆ ?
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬಕ್ರಿ ಈದ್ ದಿನದಂದು ರಸ್ತೆ ಮತ್ತು ಕಾಲುವೆಗಳಲ್ಲಿ ರಕ್ತದ ಕೋಡಿ ಹರಿಯುತ್ತಿರುವ ಛಾಯಾಚಿತ್ರಗಳು ಜಾಲತಾಣದಲ್ಲಿ ಜಗತ್ತಿನಾದ್ಯಂತ ಪ್ರಸಾರವಾದವು. ಇಲ್ಲಿ ಕುರಿಗಳನ್ನು ಕೊಯ್ದನಂತರ ದೊಡ್ಡ ಪ್ರಮಾಣದಲ್ಲಿ ಮಳೆ ಬಿದ್ದುದರಿಂದ ಆ ರಕ್ತವು ರಸ್ತೆಯ ಮೇಲೆ ನೀರಿನಲ್ಲಿ ಸೇರಿ ಹರಿಯತೊಡಗಿತು.
. ಕೇರಳದ ಇಸ್ಲಾಮಿ ಧರ್ಮಗುರುಗಳ ಕ್ರೈಸ್ತ ಮತ್ತು ಹಿಂದೂದ್ವೇಷ !
ಮುಸಲ್ಮಾನರು ಪರಧರ್ಮಿಯರೊಂದಿಗೆ ಸಂಬಂಧವಿಡಬಾರದು ಮತ್ತು ಅವರಿಗೆ ಗೌರವ ನೀಡಬಾರದು ಎಂದು ಕೇರಳದ ಕಾಸರಗೋಡ್ ನಲ್ಲಿ ಇಸ್ಲಾಮಿ ಧರ್ಮಗುರು ಶಮ್ಸುದ್ದೀನ ಫರೀದ್ ಕರೆ ನೀಡಿದ್ದಾರೆ. ಹಾಗೆಯೇ ಓಣಂ ಮತ್ತು ಕ್ರಿಸ್‌ಮಸ್ ಇವು ಮುಸಲ್ಮಾನರಿಗೆ ಹರಾಮ್ ಆಗಿರುವುದಾಗಿ ಘೋಷಿಸಿದ್ದಾರೆ.
. ಹಿಂದೂಗಳ ಮೆರವಣಿಗೆಯ ಮೇಲೆ ಕಲ್ಲು ತೂರಾಟವಾಗಲು ಇದೇನು ಪಾಕಿಸ್ತಾನವೇ ?
ಅನಂತಚತುರ್ದಶಿಯಂದು ಯವತಮಾಳ ಜಿಲ್ಲೆಯ ಉಮರಖೇಡದ ಛಾವಾ ಗಣೇಶೋತ್ಸವ ಮಂಡಳದ ಗಣೇಶಮೂರ್ತಿಯ ವಿಸರ್ಜನೆ ಮೆರವಣಿಗೆಯ ಮೇಲೆ ಮತಾಂಧರು ಕಲ್ಲು ತೂರಾಟ ಮಾಡಿದರು. ಇದರಲ್ಲಿ ಮೂವರು ಪೊಲೀಸರೊಂದಿಗೆ ೧೫ ಭಕ್ತರು ಗಾಯಗೊಂಡರು. ಇದು ಗೊತ್ತಾಗುತ್ತಿದ್ದಂತೆ ನಗರದ ಇತರ ಗಣೇಶೋತ್ಸವ ಮಂಡಳಗಳು ಕೆಲವು ಸಮಯ ಮೆರವಣಿಗೆಯನ್ನು ನಿಲ್ಲಿಸಿದ್ದರು.
. ಜವಾಬ್ದಾರಿಯಿಂದ ನುಣುಚಿಕೊಂಡು ಹಾಸ್ಯಾಸ್ಪದ 
 ನಿರ್ಣಯ ತೆಗೆದುಕೊಳ್ಳುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರ !
ಹಿಮಾಚಲ ಪ್ರದೇಶದಲ್ಲಿ ರಾಜ್ಯ ಸರಕಾರವು ಅರ್ಚಕರಿಗೆ ಬಂದೂಕು ಇಟ್ಟುಕೊಳ್ಳಲು ಅನುಜ್ಞಪ್ತಿ (ಲೈಸನ್ಸ್) ಕೊಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ದೇವಸ್ಥಾನಗಳ ಅರ್ಚಕರ ಹತ್ಯೆ ಮಾಡಿ ಪ್ರಾಚೀನ ಮೂರ್ತಿ ಮತ್ತು ಬೆಲೆಬಾಳುವ ವಸ್ತುಗಳ ಕಳ್ಳತನವಾಗಿದ್ದರಿಂದ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
. ಉಗ್ರವಾದವನ್ನು ನಾಶಗೊಳಿಸಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ !
ಜಮ್ಮು-ಕಾಶ್ಮೀರದ ಉರಿ ಎಂಬಲ್ಲಿರುವ ಸೇನಾ ನೆಲೆಯ ಮೇಲೆ ಸೆಪ್ಟೆಂಬರ್ ೧೮ ರಂದು ಬೆಳಗ್ಗೆ ಐದೂವರೆಗೆ ಜೈಶ್--ಮಹಮ್ಮದನ ೪ ಜಿಹಾದಿ ಉಗ್ರರು ಮಾಡಿದ ಆಕ್ರಮಣದಲ್ಲಿ ೧೮ ಸೈನಿಕರು ಹುತಾತ್ಮ ರಾದರು ಮತ್ತು ೮ ಜನ ಸೈನಿಕರು ಗಾಯಗೊಂಡರು.
. ಪಾಕ್‌ನೊಡನೆ ಯುದ್ಧ ಮಾಡಲು ನಿರ್ಭೀತ ರಾಜಕಾರಣಿಗಳು ಬೇಕು !
ಕಾಶ್ಮೀರದ ಉರಿ ಎಂಬಲ್ಲಿಯ ಸೇನಾನೆಲೆಯ ಮೇಲಾದ ಉಗ್ರಗಾಮಿ ದಾಳಿಯ ವಿಷಯದಲ್ಲಿ ತೆಗೆದುಕೊಂಡ ಉನ್ನತಮಟ್ಟದ ಸಭೆಯಲ್ಲಿ ಪಾಕ್‌ನೊಡನೆ ಯುದ್ಧ ಮಾಡುವ ಬದಲು ನಿತ್ಯದಂತೆ ಅದಕ್ಕೆ ಅಂತರರಾಷ್ಟ್ರೀಯ ಸ್ತರದಲ್ಲಿ ಒಬ್ಬಂಟಿಗನಾಗಿಸಲು ಪ್ರಯತ್ನಿಸುವುದಾಗಿ ಒಮ್ಮತವಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !