ಪಿತೃಋಣ ತೀರಿಸಲು ‘ಶ್ರಾದ್ಧ ಕರ್ಮ’ ಆವಶ್ಯಕವಾಗಿದೆ !

ಹಿಂದೂಧರ್ಮದಲ್ಲಿ ಹೇಳಿದ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣ ತೀರಿಸುವುದು’ ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣ ತೀರಿಸಲು ‘ಶ್ರಾದ್ಧ ಕರ್ಮ’ ಆವಶ್ಯಕವಾಗಿದೆ. ತಂದೆ ತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣ ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ’ ಎನ್ನುತ್ತಾರೆ. ಶ್ರಾದ್ಧಕರ್ಮಗಳಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃ ಗಳಿಗೆ ಗತಿ ನೀಡುವ ಸೂಕಶಕ್ತಿ ಇದೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳಿಗೆ ಹವಿರ್ಭಾಗಕೊಡುವುದರಿಂದ ಅವರು ಸಂತುಷ್ಟರಾಗುತ್ತಾರೆ. ಶ್ರಾದ್ಧ ಮಾಡದಿದ್ದರೆ ಪಿತೃಗಳ ಆಸೆಗಳು ಅತೃಪ್ತವಾಗಿ ಉಳಿಯುತ್ತವೆ ಮತ್ತು ಈ ವಾಸನಾಯುಕ್ತ ಪಿತೃಗಳು ದುಷ್ಟಶಕ್ತಿಗಳ ಅಧೀನಕ್ಕೊಳ ಪಟ್ಟು ಕುಟುಂಬದವರಿಗೆ ತೊಂದರೆ ಕೊಡಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಿತೃಋಣ ತೀರಿಸಲು ‘ಶ್ರಾದ್ಧ ಕರ್ಮ’ ಆವಶ್ಯಕವಾಗಿದೆ !