ಶಸ್ತ್ರ ಮತ್ತು ಉಪಕರಣಗಳ ಪೂಜೆ

ದಸರಾದಂದು ರಾಜರು, ಸಾಮಂತರು, ಸರದಾರರು ತಮ್ಮತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲಕರ್ಮಿಗಳು ತಮ್ಮ ತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ. ಲೇಖನಿ ಮತ್ತು ಪುಸ್ತಕವು ವಿದ್ಯಾರ್ಥಿಗಳ ಶಸ್ತ್ರಗಳಾಗಿವೆ; ಆದುದರಿಂದ ವಿದ್ಯಾರ್ಥಿಗಳು ಅವುಗಳ ಪೂಜೆ ಮಾಡುತ್ತಾರೆ. ಈ ಪೂಜೆಯ ಹಿಂದಿರುವ ಉದ್ದೇಶವೇನೆಂದರೆ, ಆಯಾ ವಸ್ತುಗಳಲ್ಲಿ ಈಶ್ವರನ ರೂಪ ಕಾಣುವುದು, ಅಂದರೆ ಈಶ್ವರನೊಂದಿಗೆ ಏಕರೂಪವಾಗಲು ಪ್ರಯತ್ನಿಸುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಸ್ತ್ರ ಮತ್ತು ಉಪಕರಣಗಳ ಪೂಜೆ