ಭಾರತದಲ್ಲಿರುವ ಮುಸಲ್ಮಾನ ಯುವಕರಿಗೆ ಜಿಹಾದಿ ಭಯೋತ್ಪಾದನೆಯಿಂದ ಪರಾವೃತ್ತಗೊಳಿಸಲು ಮಲೇಷ್ಯಾದ ಸಹಾಯ ಕೋರಿದ ಭಾರತ !

ಇಸ್ಲಾಮಿ ಶಿಕ್ಷಣದ ಹೆಸರಿನಲ್ಲಿ ಅನೇಕ ಮದರಸಾಗಳಿಂದ ಜಿಹಾದಿ
ಶಿಕ್ಷಣ ನೀಡುತ್ತಿರುವುದು ಈ ಮೊದಲೇ ಬಯಲಾಗಿದೆ. ಅದರ ಮೇಲೆ ನಿಷೇಧ ಹೇರುವ
ಬದಲಾಗಿ ಆ ಶಿಕ್ಷಣದಆಧುನೀಕರಣಗೊಳಿಸುವ ಕುರಿತು ತಿಳಿದುಕೊಳ್ಳುವುದು ಆತ್ಮಘಾತಕವಲ್ಲವೇ ?
ಮಲೇಷ್ಯಾದಿಂದ ಇಸ್ಲಾಮಿ ಶಿಕ್ಷಣದ ಆಧುನೀಕರಣದ ಕುರಿತು ಪಾಠ
ನವ ದೆಹಲಿ : ಭಾರತದಲ್ಲಿರುವ ಮುಸಲ್ಮಾನ ಯುವಕರನ್ನು ಜಿಹಾದಿ ಭಯೋತ್ಪಾದನೆಯಿಂದ ವಿಮುಖಗೊಳಿಸಲು ಭಾರತವು ಮಲೇಷ್ಯಾದ ನೆರವು ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರವು ಇಸ್ಲಾಮೀ ಶಿಕ್ಷಣದ ಆಧುನೀಕರಣದ ಕುರಿತು ಮಲೇಷ್ಯಾದ ಅನುಭವವನ್ನು ತಿಳಿದುಕೊಳ್ಳಲಿದೆ ಎನ್ನುವ ವಿಷಯವನ್ನು ಇಂಟರನ್ಯಾಶನಲ್ ಬಿಝಿನೆಸ್ ಟೈಮ್ಸ್ ಪ್ರಕಟಿಸಿದೆ.
ಈ ವಾರ್ತೆಗನುಸಾರ ಕಳೆದ ವಾರದಲ್ಲಿ ಮಲೇಷ್ಯಾದ ಉಪಪ್ರಧಾನ ಮಂತ್ರಿಗಳಾದ ಅಹಮದ್ ಝಹೀದ ಆಮಿದಿ ಇವರು ಭಾರತಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರಲ್ಲಿ ಮೇಲಿನ ಮನವಿ ಮಾಡಲಾಗಿದೆ. ಈ ಕುರಿತು ಜರುಗಿದ ಒಂದು ಸಭೆಯಲ್ಲಿ ಮಲೇಷ್ಯಾದಲ್ಲಿ ಇಸ್ಲಾಮಿ ಶಿಕ್ಷಣದ ಆಧುನೀಕರಣದ ವಿಷಯದಲ್ಲಿ ಕೈಕೊಂಡ ಉಪಾಯ ಯೋಜನೆಗಳನ್ನು ಪರಿಶೀಲಿಸಲು ಭಾರತದಿಂದ ಒಂದು ನಿಯೋಗವನ್ನು ಮಲೇಷ್ಯಾಗೆ ಕಳುಹಿಸಲು ನಿರ್ಧರಿಸಲಾಯಿತು. ಈ ನಿಯೋಗದಲ್ಲಿ ದೇಶದ ರಕ್ಷಣಾ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ ಹಾಗೂ ಮುಸಲ್ಮಾನ ಸಂಘಟನೆಗಳ ಪ್ರತಿನಿಧಿಗಳು ಒಳಗೊಂಡಿದ್ದಾರೆ. ಧಾರ್ಮಿಕ ಶಿಕ್ಷಣದಲ್ಲಿ ಸುಧಾರಣೆ ತರಲು ಮಲೇಷ್ಯಾ ಸರಕಾರವು ಒಂದು ಅಂತರರಾಷ್ಟ್ರೀಯ ಪರಿಷತ್ತಿನ ಆಯೋಜನೆಯನ್ನು ಮಾಡಬೇಕೆಂದು ಸಹ ಈ ಸಭೆಯಲ್ಲಿ ಸೂಚಿಸಲಾಯಿತು. ಈ ಪರಿಷತ್ತಿನಿಂದ ಮಲೇಷ್ಯಾದ ಅನುಭವವನ್ನು ಇತರ ದೇಶಗಳಿಗೆ ಲಾಭದಾಯಕವಾಗುವುದು ಎನ್ನುವ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಲಾಯಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿರುವ ಮುಸಲ್ಮಾನ ಯುವಕರಿಗೆ ಜಿಹಾದಿ ಭಯೋತ್ಪಾದನೆಯಿಂದ ಪರಾವೃತ್ತಗೊಳಿಸಲು ಮಲೇಷ್ಯಾದ ಸಹಾಯ ಕೋರಿದ ಭಾರತ !