ಗೋವಾದ ರಾಮನಾಥಿಯ ಸನಾತನದ ಆಶ್ರಮದಿಂದ ಗೋ-ಕಿಂಕರ ಯಾತ್ರೆಯ ಪ್ರಾರಂಭ !

ಎಡದಿಂದ ಸನಾತನದ ಸಂತರಾದ ಪೂ. ಸೀತಾರಾಮ ದೇಸಾಯಿ,
ಗೋಪೂಜೆ ಮಾಡುತ್ತಿರುವ ಪೂ. (ಸೌ.) ಮಾಲಿನಿ ದೇಸಾಯಿ,
ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಇತರರು, ಸದ್ಗುರು (ಸೌ.) ಬಿಂದಾ ಸಿಂಗಬಾಳ ಹಾಗೂ ಇತರರು

ಗೋಸಂವರ್ಧನೆಗಾಗಿ ಪ್ರತಿಜ್ಞೆ ಸ್ವೀಕರಿಸುತ್ತಿರುವ ಗಣ್ಯವ್ಯಕ್ತಿಗಳು
ರಾಮನಾಥಿ : ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗೋವಾದಲ್ಲಿ ಸೆಪ್ಟೆಂಬರ್ ೧೬ ರಂದು ರಾಮನಾಥಿಯಿಂದ ಲೋಲಯೆ ವರೆಗೆ ಗೋ-ಕಿಂಕರ ಯಾತ್ರೆಯನ್ನು ನೆರವೇರಿಸಲಾಯಿತು. ಗೋ ರಕ್ಷಣೆಯ ಕುರಿತು ಜಾಗೃತಿಗೊಳಿಸಲು ಈ ಯಾತ್ರೆಯು ಸೆಪ್ಟೆಂಬರ್ ೧೬ ರಂದು ಬೆಳಗ್ಗೆ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಅನೇಕ ಸಂತರ ಉಪಸ್ಥಿತಿಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಜರುಗಿತು.
ರಾಮನಾಥಿಯ ಸನಾತನ ಆಶ್ರಮದಲ್ಲಿ ಸಂತರ ಉಪಸ್ಥಿತಿಯಲ್ಲಿ ಬೆಳಗ್ಗೆ ಸವತ್ಸ ಧೇನುವಿನ ಭಾವಪೂರ್ಣ ಪೂಜೆ ಮತ್ತು ಧ್ವಜವಂದನೆ ಜರುಗಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಗೋಪ್ರೇಮಿಗಳ ಉತ್ಸಾಹಪೂರ್ಣ ಭಾಷಣಗಳು ನೆರವೇರಿದವು. ಸನಾತನದ ಸಾಧಕ ದಂಪತಿಗಳಾದ ಶ್ರೀ. ಘನಶ್ಯಾಮ ಗಾವಡೆ ಮತ್ತು ಸೌ. ರಾಧಾ ಗಾವಡೆ ಇವರು ಗೋಪೂಜೆ ಮಾಡಿದರು. ಸನಾತನದ ಸಾಧಕ-ಪುರೋಹಿತ ಪಾಠಶಾಲೆಯ ವಿದ್ಯಾರ್ಥಿಗಳು ಪೌರೋಹಿತ್ಯವನ್ನು ವಹಿಸಿದ್ದರು. ತದನಂತರ ಸನಾತನ ಸಂಸ್ಥೆಯ ವಕ್ತಾರರಾದ
 ಶ್ರೀ. ಚೇತನ ರಾಜಹಂಸ, ಗೋವಂಶ ರಕ್ಷಾ ಆಂದೋಲನದ ಅಧ್ಯಕ್ಷರಾದ ಶ್ರೀ. ಹನುಮಂತ ಪರಬ, ಭಾರತ ಸ್ವಾಭಿಮಾನ ಸಂಘದ ಗೋವಾದ ಪ್ರತಿನಿಧಿಗಳಾದ ಶ್ರೀ. ಕಮಲೇಶ ಬಾಂದೇಕರ ಇವರು ಮಾರ್ಗದರ್ಶನ ಮಾಡಿದರು. ಸನಾತನದ ಸಂತರಾದ ಪೂ. ಅಶೋಕ ಪಾತ್ರೀಕರ್ ಇವರು ಸಂವರ್ಧನೆಗಾಗಿ ಪ್ರತಿಜ್ಞಾ ವಿಧಿಯನ್ನು ಮಾಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತ ಗಣ್ಯವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಕು. ಶಾಂಭವಿ ವಝೆ ಇವರು ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ನಿರ್ವಹಿಸಿದರು. ಗೋಮಾತೆಗಾಗಿ ಆತ್ಮಬಲಿದಾನ ಮಾಡಿದ ಮಂಗಲಪಾಂಡೆಯವರ ಪ್ರೇರಣೆಯಿಂದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮೀಜಿಯವರು ಮಂಗಲ ಗೋಯಾತ್ರೆಯ ಸಂಕಲ್ಪವನ್ನು ಮಾಡಿದ್ದಾರೆ. ಈ ಮಂಗಲ ಗೋಯಾತ್ರೆಯ ಪ್ರಸಾರ ಮಾಡಲು ೫ ರಾಜ್ಯಗಳ; ಶ್ರೀಕ್ಷೇತ್ರ ಪಂಢರಾಪುರ (ಮಹಾರಾಷ್ಟ್ರ), ದೊಡ್ಡಬಸವ ಸನ್ನಿಧಿ, ಬೆಂಗಳೂರು (ಕರ್ನಾಟಕ), ಮಂತ್ರಾಲಯ (ಆಂಧ್ರಪ್ರದೇಶ), ಮಧೂರು (ಕೇರಳ) ಹಾಗೂ ರಾಮನಾಥಿ (ಗೋವಾ) ಈ ಸ್ಥಳಗಳಿಂದ ಗೋ-ಕಿಂಕರ ಯಾತ್ರೆಯನ್ನು ಆಯೋಜಿಸಲಾಗಿದೆ.
ಗಣ್ಯರ ಅಭಿಪ್ರಾಯಗಳು : 
ಶ್ರೀಚೇತನ ರಾಜಹಂಸ ಇವರು ಮಾತನಾಡುತ್ತಾ, ಗೋಮಾತೆಯ ಹತ್ಯೆಯನ್ನು ಮಾಡುವವರೊಂದಿಗೆ ನಾವು ಸಹೋದರತ್ವವನ್ನು ಹೊಂದಲು ಸಾಧ್ಯವಿಲ್ಲ. ದೇಶಿ ಗೋವಂಶವನ್ನು ರಕ್ಷಿಸುವುದು ನಮ್ಮ ಕರ್ತವ್ಯವೇ ಆಗಿದೆ. ಮುಂಬರುವ ಆಪತ್ಕಾಲದಲ್ಲಿ ಅಲೋಪಥಿ ಔಷಧಿಗಳು ದೊರೆಯಲಾರವು. ಆಗ ಪಂಚಗವ್ಯದಿಂದ ತಯಾರಿಸಲಾಗುವ ಔಷಧಿಗಳೇ ನಮ್ಮ ರಕ್ಷಣೆ ಮಾಡುತ್ತವೆ. ಸದ್ಯ ಗೋವಂಶಗಳ ಹತ್ಯೆಯಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು, ಹಿಂದೂಗಳಿಗೆ ಗೌರವದ ಸ್ಥಾನವಾಗಿರುವ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಅವಶ್ಯಕವಾಗಿದೆ. ಇದಕ್ಕಾಗಿ ಹಿಂದೂಗಳು ಪ್ರಯತ್ನಿಸಬೇಕು ಎಂದರು.
ಶ್ರೀ. ಹನುಮಂತ ಪರಬ ಇವರು ಮಾತನಾಡುತ್ತಾ, ‘ಗೋಮಾತೆಯ ವಿಷಯದಲ್ಲಿ ಎಲ್ಲ ಗೋಪ್ರೇಮಿಗಳು ಸಂಘಟಿತರಾಗಿ ಕಾರ್ಯವನ್ನು ಮಾಡಬೇಕು. ಮುಂದಿನ ಕಾಲದಲ್ಲಿ ಗೋಮಾತೆಯ ರಕ್ಷಣೆಯನ್ನು ಮಾಡುವ ಸರಕಾರವೇ ಆಡಳಿತದಲ್ಲಿರಬೇಕು’ ಎಂದು ನುಡಿದರು.
ಶ್ರೀ. ಕಮಲೇಶ ಬಾಂದೇಕರ ಇವರು ಮಾತನಾಡುತ್ತಾ, ‘ಸತ್ತ್ವಗುಣ ವೃದ್ಧಿಸುವ ದೃಷ್ಟಿಯಿಂದ ಗೋವಿನ ಮಹತ್ವ ಬಹಳ ಅಮೂಲ್ಯವಾಗಿದೆ. ಗೋಪಾಲನೆಯಲ್ಲಿ ಪ್ರತಿಯೊಬ್ಬ ಹಿಂದೂವಿನ ಸಹಭಾಗ ಇರಬೇಕು. ಗೋಮಾತೆಗೆ ನಾವು ನಮ್ಮ ಹೃದಯದಲ್ಲಿ ಸ್ಥಾನ ನೀಡಬೇಕು’ ಎಂದು ಹೇಳಿದರು.
ಉಪಸ್ಥಿತ ಸಂತರು ಹಾಗೂ ಗಣ್ಯ ವ್ಯಕ್ತಿಗಳು
ಈ ಸಂದರ್ಭದಲ್ಲಿ ಸನಾತನದ ಸಂತರಾದ ಸದ್ಗುರು (ಸೌ.) ಬಿಂದಾ ಸಿಂಗಬಾಳ, ಪೂ. ಸೀತಾರಾಮ ದೇಸಾಯಿ, ಪೂ. (ಸೌ.) ಮಾಲಿನಿ ದೇಸಾಯಿ, ಅದೇ ರೀತಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಸ್ಥಾನ ಗೋಕರ್ಣ, ಶ್ರೀ.ರಾಮಚಂದ್ರಾಪುರ ಮಠದ ಉಪಾಧ್ಯಕ್ಷರಾದ ಶ್ರೀ. ಸುಬ್ರಾಯ ಭಟ್, ವಾಳಪಯಿಯ ಅಖಿಲ ವಿಶ್ವ ಜೈ ಶ್ರೀರಾಮ ಗೋಶಾಲೆಯ ಶ್ರೀ. ಲಕ್ಷಣ ಜೋಶಿ, ಗೋಪ್ರೇಮಿ ಶ್ರೀ. ರೋಹಿತ ಲೋಧಿಯಾ ಮತ್ತು ಗೋಪ್ರೇಮಿಗಳು ಹಾಗೂ ಶ್ರೀ ರಾಮಚಂದ್ರಾಪುರ ಮಠದ ಸಾಧಕರು ಉಪಸ್ಥಿತರಿದ್ದರು.
ಗಮನಾರ್ಹ ಅಂಶಗಳು : ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ಶ್ರೀಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಾಪುರ ಮಠದ ಗೋವಾದ ಸಮನ್ವಯಕರಾದ ಶ್ರೀ. ಕುಮಾರಜಿ ಇವರು, ಸನಾತನ ಸಂಸ್ಥೆ, ಸನಾತನ ಆಶ್ರಮ ಹಾಗೂ ಸನಾತನದ ಸಾಧಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆಂದು ಆಭಾರಮನ್ನಣೆ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋವಾದ ರಾಮನಾಥಿಯ ಸನಾತನದ ಆಶ್ರಮದಿಂದ ಗೋ-ಕಿಂಕರ ಯಾತ್ರೆಯ ಪ್ರಾರಂಭ !