ಕುಟುಂಬದಲ್ಲಿ ಯಾರಾದರೂ ಮೃತರಾದರೆ ಆ ವರ್ಷ ಮಹಾಲಯ ಶ್ರಾದ್ಧವನ್ನು ಮಾಡಬಾರದು

ಕುಟುಂಬದಲ್ಲಿನ ಯಾವ ವ್ಯಕ್ತಿಯ ತಂದೆ ಅಥವಾ ತಾಯಿಯು ಮೃತರಾಗಿದ್ದಾ ರೆಯೋ, ಆ ಶ್ರಾದ್ಧಕರ್ತನು ಅವರಿಗಾಗಿ ಅವರು ಮರಣ ಹೊಂದಿದ ಒಂದು ವರ್ಷದ ವರೆಗೆ ಮಹಾಲಯ ಶ್ರಾದ್ಧ ಮಾಡುವ ಆವಶ್ಯಕತೆಯಿರುವುದಿಲ್ಲ; ಏಕೆಂದರೆ ಅವರಿಗಾಗಿ ವರ್ಷವಿಡೀ ಶ್ರಾದ್ಧವಿಧಿಗಳನ್ನು ಮಾಡುತ್ತಾರೆ. ಶ್ರಾದ್ಧಕರ್ತ ಪುತ್ರನನ್ನು ಹೊರತುಪಡಿಸಿ ಇತರರು ಉದಾ. ಶ್ರಾದ್ಧಕರ್ತನ ಚಿಕ್ಕಪ್ಪನ ಅಥವಾ ದೊಡ್ಡಪ್ಪನ ಮಗ ಮತ್ತು ಯಾರಿಗೆ ಸೂತಕವಿರುತ್ತದೆಯೋ ಅವರು ಅವರ ತಂದೆಗಾಗಿ ಪ್ರತಿವರ್ಷದಂತೆಯೇ ಮಹಾಲಯ ಶ್ರಾದ್ಧ ಮಾಡಬೇಕು. ಆದರೆ ಸೂತಕದ ದಿನಗಳಲ್ಲಿ ಮಹಾಲಯವು ಬಂದರೆ ಶ್ರಾದ್ಧ ಮಾಡಬಾರದು. ಅದನ್ನು ಸೂತಕ ಮುಗಿದ ನಂತರ ಬರುವ ಅಮಾವಾಸ್ಯೆಯಂದು ಮಾಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕುಟುಂಬದಲ್ಲಿ ಯಾರಾದರೂ ಮೃತರಾದರೆ ಆ ವರ್ಷ ಮಹಾಲಯ ಶ್ರಾದ್ಧವನ್ನು ಮಾಡಬಾರದು