ಉತ್ತರಪ್ರದೇಶ ಸರಕಾರದಿಂದ ಅಲ್ಪಾಹಾರಕ್ಕಾಗಿ ೪ ವರ್ಷಗಳಲ್ಲಿ ಎಂಟು ಮುಕ್ಕಾಲು ಕೋಟಿ ರೂಪಾಯಿ ಖರ್ಚು !

ದೇಶದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು ಅರೆಹೊಟ್ಟೆಯಲ್ಲಿ ಜೀವಿಸುತ್ತಿರುವಾಗ
ಆ ಜನರ ಹಣವನ್ನೇ ಹೀಗೆ ಚೆಲ್ಲುವವರಿಂದ ಆ ಹಣದ ವಸೂಲು ಮಾಡಬೇಕು !
ಲಕಣಪುರಿ : ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಸರಕಾರವು ಕಳೆದ ೪ ವರ್ಷಗಳಲ್ಲಿ ಅತಿಥಿಗಳಿಗೆ ಚಹಾ, ಸಮೋಸಾ ಮತ್ತು ಗುಲಾಬ್‌ಜಾಮೂನ್ ನೀಡಲು ೮ ಕೋಟಿ ೭೮ ಲಕ್ಷ ೧೨ ಸಾವಿರದ ೪೭೪ ರೂಪಾಯಿಗಳನ್ನು ಖರ್ಚು ಮಾಡಿದೆ, ಎಂಬ ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಅಖಿಲೇಶ ಯಾದವ್ ಇವರು ವಿಧಾನಸಭೆಯಲ್ಲಿ ನೀಡಿದರು. ಮಂತ್ರಿಗಳು ಪ್ರತಿದಿನ ಅಲ್ಪಾಹಾರಕ್ಕಾಗಿ ೨ ಸಾವಿರದ ೫೦೦ ರೂಪಾಯಿ ಖರ್ಚು ಮಾಡಬಹುದು, ಎಂದು ಮುಖ್ಯಮಂತ್ರಿ ಅಖಿಲೇಶ ಯಾದವ್ ಇವರು ಸ್ಪಷ್ಟಪಡಿಸಿದ್ದಾರೆ. ಸಮಾಜವಾದಿ ಪಕ್ಷದ ವಕ್ತಾರರಾದ ರಾಜೇಂದ್ರ ಚೌಧರಿಯವರು, ಈ ಹಣ ಕೇವಲ ಬೈಠಕ್‌ನ ಸಮಯದಲ್ಲಿ ಮಂತ್ರಿಗಳಿಗೆ ಭೇಟಿಯಾಗಲು ಬರುವ ನಾಗರಿಕರಿಗಾಗಿ ಒಂದು ಶಿಷ್ಟಾಚಾರವೆಂದು ಮಂತ್ರಿಗಳು ಮತ್ತು ಅವರ ಸಿಬ್ಬಂದಿಗಳು ಖರ್ಚು ಮಾಡುತ್ತಾರೆ, ಎಂದರು. ಭಾಜಪದ ವಕ್ತಾರರಾದ ಹರಿಶ್ಚಂದ್ರ ಶ್ರೀವಾಸ್ತವ ಇವರು, ಇದು ಕೇವಲ ನಾಗರಿಕರ ಹಣ ವ್ಯರ್ಥಗೊಳಿಸುವುದಾಗಿದೆ, ಎಂದಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉತ್ತರಪ್ರದೇಶ ಸರಕಾರದಿಂದ ಅಲ್ಪಾಹಾರಕ್ಕಾಗಿ ೪ ವರ್ಷಗಳಲ್ಲಿ ಎಂಟು ಮುಕ್ಕಾಲು ಕೋಟಿ ರೂಪಾಯಿ ಖರ್ಚು !