ಪಾಕಿಸ್ತಾನದಲ್ಲಿ ದೇವಸ್ಥಾನಗಳ ಮೇಲ್ವಿಚಾರಣೆ ಮಾಡುವ ಮಂಡಳಿಯಲ್ಲಿ ಕೇವಲ ೮ ಪುರೋಹಿತರು ! ಭಾರತ ಸರಕಾರ ಇದನ್ನು ಗಮನಿಸುವುದೇ ?

ಇಸ್ಲಾಮಾಬಾದ್ : ಪಾಕಿಸ್ತಾನದ ಹಿಂದೂಗಳು ಕಿರುಕುಳದಿಂದ ಕಂಗೆಟ್ಟು ಪಾಕಿಸ್ತಾನದಿಂದ ಪಲಾಯನ ಗೈಯ್ಯುತ್ತಿರುವುದರಿಂದ ಅಲ್ಲಿನ ಹಿಂದೂಗಳ ದೇವಸ್ಥಾನ ಗಳಿಗೆ ಪುರೋಹಿತರು ಸಿಗುವುದೇ ದುರ್ಲಭವಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರದ ಎಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ಪುರೋಹಿತರ ವೇತನವನ್ನು ಹೆಚ್ಚಿಸಿದೆ. ಈಗ ಅವರ ವೇತನ ೮ ಸಾವಿರದಿಂದ ೧೦ ಸಾವಿರ ಆಗಲಿದೆ. ಅಲ್ಪಸಂಖ್ಯಾತರ ಧಾರ್ಮಿಕ ಸಂಪತ್ತನ್ನು ಮೇಲ್ವಿಚಾರಣೆ ಮಾಡುವ ಈ ಬೋರ್ಡ್‌ನ ಅಧ್ಯಕ್ಷ ಫಾರೂಕ್ ಉಲ್ ಸಿದ್ಧಿಕ್ ಇವರು ಪಾಕಿಸ್ತಾನದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಬೋರ್ಡ್‌ನಲ್ಲಿ ಕೇವಲ ೮ ಮಂದಿ ಪುರೋಹಿತರಿದ್ದಾರೆ, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಲ್ಲಿ ದೇವಸ್ಥಾನಗಳ ಮೇಲ್ವಿಚಾರಣೆ ಮಾಡುವ ಮಂಡಳಿಯಲ್ಲಿ ಕೇವಲ ೮ ಪುರೋಹಿತರು ! ಭಾರತ ಸರಕಾರ ಇದನ್ನು ಗಮನಿಸುವುದೇ ?