ಸರಕಾರಿ ಶಾಲೆಗಳಲ್ಲಿ ೭೬ ಹುಡುಗರಿಗೆ ೧ ಹಾಗೂ ೬೬ ಹುಡುಗಿಯರಿಗಾಗಿ ೧ ಶೌಚಾಲಯ !

ಸ್ವಾತಂತ್ರ್ಯದೊರೆತು ೬೯ ವರ್ಷಗಳಲ್ಲಿ ಆದ ಅಭಿವೃದ್ಧಿ !
ಸರಕಾರಿ ಶಾಲೆಗಳಲ್ಲಿ ಸಾಧನಸೌಕರ್ಯಗಳ ಕೊರತೆ !
ನವ ದೆಹಲಿ : ದೇಶದ ೯ ರಾಜ್ಯಗಳಲ್ಲಿ ೪೫೦ ಸರಕಾರಿ ಶಾಲೆಗಳಲ್ಲಿ ಮಾಡಿದ ಸಮೀಕ್ಷೆಯಿಂದ ಸರಾಸರಿ ಪ್ರತಿ ೭೬ ಹುಡುಗರಿಗೆ ೧, ಹಾಗೂ ೬೬ ಹುಡುಗಿಯರಿಗೆ ೧ ಶೌಚಾಲಯವಿರುವುದು ಕಂಡುಬಂದಿದೆ. ಭಾರತ ಸರಕಾರದ ಮುನುಷ್ಯಬಲ ವಿಕಾಸ ಸಚಿವಾಲಯವು ಶಾಲೆಗಳಲ್ಲಿ ಹುಡುಗರಿಗೆ ಮತ್ತು ಹುಡುಗಿಯರಿಗೆ ಬೇರೆ ಬೇರೆ ಶೌಚಾಲಯಗಳನ್ನು ಒದಗಿಸಲು ಸ್ವಚ್ಛ ವಿದ್ಯಾಲಯ ಅಭಿಯಾನವನ್ನು ಕೈಗೆತ್ತಿಕೊಂಡಿತ್ತು.
ಈ ಆಂದೋಲನವನ್ನು ಅನುಷ್ಠಾನಗೊಳಿಸಿ ೨ ವರ್ಷಗಳ ನಂತರ ‘ವಾಟರ್ ಎಡ್’ ಈ ಅಂತರರಾಷ್ಟ್ರೀಯ ಸೇವಾಭಾವೀ ಸಂಘಟನೆಯು ಈ ಸಮೀಕ್ಷೆಯನ್ನು ನಡೆಸಿತ್ತು. ಆಗಸ್ಟ್ ೨೦೧೫ ರಲ್ಲಿ ಭಾರತ ಸರಕಾರವು ಸ್ವಚ್ಛ ವಿದ್ಯಾಲಯ ಆಂದೋಲನದ ಮೂಲಕ ದೇಶಾದ್ಯಂತದ ೨ ಲಕ್ಷ ೬೧ಸಾವಿರ ಶಾಲೆಗಳಲ್ಲಿ ೪ ಲಕ್ಷ ೧೭ ಸಾವಿರ ಶೌಚಾಲಯಗಳನ್ನು ನಿರ್ಮಿಸುವುದಾಗಿ ಘೋಷಿಸಿತ್ತು. ಈ ಯೋಜನೆಯಗನುಸಾರ ಪ್ರತಿ ೪೦ ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಇರಬೇಕಿತ್ತು. ಈ ಸಮೀಕ್ಷೆಯ ಮೂಲಕ ೪ ಸಾವಿರದ ೮೦೦ ವಿದ್ಯಾರ್ಥಿಗಳು ಮತ್ತು ೮೦೦ ಕ್ಕಿಂತಲೂ ಹೆಚ್ಚು ಶಿಕ್ಷಕರ ಸಂದರ್ಶನ ತೆಗೆದುಕೊಳ್ಳಲಾಗಿತ್ತು. ಕೇವಲ ಶೇ. ೭೬ ರಷ್ಟು ಶಾಲೆಗಳಲ್ಲಿ ಹುಡುಗರಿಗೆ ಮತ್ತು ಹುಡುಗಿಯರಿಗೆ ಬೇರೆಬೇರೆ ಶೌಚಾಲಯಗಳಿರುವುದು ಕಂಡುಬಂದಿದೆ.
೯ ರಾಜ್ಯಗಳಲ್ಲಿ ಕರ್ನಾಟಕ ಮತ್ತು ಒಡಿಶಾ ರಾಜ್ಯ ಗಳಲ್ಲಿ ಸ್ಥಿತಿ ಬಹಳ ಹದಗೆಟ್ಟಿರುವುದು ಕಂಡುಬಂದಿದೆ. ಶೇ. ೧೯.೪ ರಷ್ಟು ಮಕ್ಕಳು ಬಯಲು ಶೌಚಾಲಯಕ್ಕೆ ಕುಳಿತುಕೊಳ್ಳುತ್ತಾರೆಂದು ಈ ಸಮೀಕ್ಷೆಯಲ್ಲಿ ಹೇಳಲಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸರಕಾರಿ ಶಾಲೆಗಳಲ್ಲಿ ೭೬ ಹುಡುಗರಿಗೆ ೧ ಹಾಗೂ ೬೬ ಹುಡುಗಿಯರಿಗಾಗಿ ೧ ಶೌಚಾಲಯ !