ದೇವಿಯಲ್ಲಿ ಜೋಗವಾ (ಭಿಕ್ಷೆ) ಬೇಡುವುದು’ ಈ ಕೃತಿಯ ಹಿಂದಿನ ಶಾಸ್ತ್ರವೇನು?

. ಅರ್ಥ :ಜೋಗವಾ’ ಇದರ ಅರ್ಥವೇ ದೇವಿಯನ್ನು ಅಂತರ್ಮನದಿಂದ, ಆರ್ತಭಾವದಿಂದ ಕರೆದು ಅವಳನ್ನು ಕಾರ್ಯಮಾಡಲು ಜಾಗೃತಗೊಳಿಸುವುದು. ‘ಜೋಗವಾ’ ಇದು ದೇವಿಯ ಚರಣಗಳಲ್ಲಿ ಮಾಡಿದ ಆರ್ತ ಯಾಚನಾತ್ಮಕ ಪ್ರಕ್ರಿಯೆಯಾಗಿದೆ. ಈ ಯಾಚನೆಯು ಜೀವದ ಅಹಂಭಾವವನ್ನು ಕಡಿಮೆಗೊಳಿಸುವುದರ ಪ್ರತೀಕವಾಗಿದ್ದು ತನ್ನನ್ನು ದೇವಿತತ್ತ್ವದಲ್ಲಿ ಒಂದಾಗಲು ಅಂತಃಸ್ಫೂರ್ತಿ ಯಿಂದ ದೇವಿಯ ಚರಣಗಳಲ್ಲಿ ಮಾಡಿದ ಪ್ರಾರ್ಥನೆಯಾಗಿದೆ.

. ದಾಸ್ಯಭಕ್ತಿಯ ಒಂದು ವಿಧ : ಜೋಗವಾ ಬೇಡುವುದು ದಾಸ್ಯಭಕ್ತಿಯ ಒಂದು ವಿಧವಾಗಿದೆ. ದೇವಿಯ ಚರಣಗಳಲ್ಲಿ ದಾಸಿ ಯಾಗಲು ಐದು ಮನೆಗಳಲ್ಲಿ ಹಿಟ್ಟು ಮತ್ತು ಉಪ್ಪನ್ನು ಭಿಕ್ಷೆ ಬೇಡಿ ಅದರಿಂದ ತಯಾರಿಸಿದ ಪದಾರ್ಥವನ್ನು ಪ್ರಸಾದವೆಂದು ಸ್ವೀಕರಿಸಿ, ಈ ಕೃತಿಯಿಂದ ತನ್ನ ಅಹಂಭಾವವನ್ನು ಕಡಿಮೆ ಮಾಡಿಕೊಂಡು ತನ್ನಲ್ಲಿ ವೈರಾಗ್ಯಭಾವವನ್ನು ನಿರ್ಮಿಸಿಕೊಳ್ಳುವುದು, ‘ಜೋಗವಾ’ ಬೇಡು ವುದರ ನಿಜವಾದ ಉಪಾಸನೆಯ ಸ್ವರೂಪವಾಗಿದೆ.
. ಮಹತ್ವ : ಜೋಗವಾ (ಭಿಕ್ಷೆ) ಬೇಡುವ ಪ್ರಕ್ರಿಯೆಯಿಂದ ಕ್ರಮೇಣವಾಗಿ ಮಾಯೆಯ ಮೇಲೆಯೇ ವಿಜಯ ಪಡೆಯುವುದು ಸುಲಭವಾಗಿ ಶಕ್ತಿತತ್ತ್ವದ ದಾಸ್ಯತ್ವವನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯೆಂದರೆ ಪ್ರತ್ಯಕ್ಷ ಕೃತಿಸ್ವರೂಪ ಸಗುಣದ ಆಧಾರದಲ್ಲಿ ಅಹಂಭಾವವನ್ನು ಕಡಿಮೆ ಮಾಡಿಕೊಂಡು ಅದರಲ್ಲಿಯೇ ನಿರ್ಗುಣ ಸ್ವರೂಪದ ವೈರಾಗ್ಯವನ್ನು ನೋಡುವುದಾಗಿದೆ.
- ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ
ಮಾಧ್ಯಮದಿಂದ ೮..೨೦೦೬, ಸಂಜೆ ೬.೪೯ ರಿಂದ ೭.೪೪)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಿಯಲ್ಲಿ ಜೋಗವಾ (ಭಿಕ್ಷೆ) ಬೇಡುವುದು’ ಈ ಕೃತಿಯ ಹಿಂದಿನ ಶಾಸ್ತ್ರವೇನು?