ಅಂಗದಾನದ ಕುರಿತು ಆಧ್ಯಾತ್ಮಿಕ ದೃಷ್ಟಿಕೋನ !

ಅವಯವಗಳು ನಿಷ್ಕ್ರಿಯಗೊಂಡಿರುವ ರೋಗಿಗಳಿಗೆ ನವಜೀವನ ದೊರೆಯಬೇಕು ಹಾಗೂ ಸಮಾಜದಲ್ಲಿ ಅಂಗದಾನದ ಕುರಿತು ಜನಜಾಗೃತಿ ಯಾಗಬೇಕೆಂದು ಕೆಲವೆಡೆ ಆಂದೋಲನ ನಡೆಸಲಾಗುತ್ತಿರುತ್ತದೆ. ಅಂಗ ದಾನದ ವಿಷಯದಲ್ಲಿ ಮುಂದಿನ ಅಂಶಗಳನ್ನು ಪರಿಗಣಿಸಬೇಕಾಗಿದೆ..
ಕೆಲವು ಜನರು ಮೃತ್ಯುವಿನ ಬಳಿಕ ಶರೀರದ ಯಾವುದಾದರೊಂದು ಅವಯವವನ್ನು ಅಥವಾ ಸಂಪೂರ್ಣ ಶರೀರವನ್ನು ಯಾವುದಾದರೊಂದು ಆಸ್ಪತ್ರೆಗೆ ದಾನ ಮಾಡುವಂತೆ ಮೃತ್ಯುಪತ್ರದಲ್ಲಿ ಬರೆಯುತ್ತಾರೆ. ಕೆಲವು ಸಲ ಮೃತ ವ್ಯಕ್ತಿಯ ಸಂಬಂಧಿಕರು, ಮಿತ್ರರು ಅಥವಾ ಆಸ್ಪತ್ರೆಯ ನೌಕರರು ಹಾಗೆ ಮಾಡುವಂತೆ ಮೃತ ವ್ಯಕ್ತಿಯ ಕುಟುಂಬದವರಿಗೆ ತಿಳಿಸುತ್ತಾರೆ. ಆ ಸಂದರ್ಭದ ದುಃಖದ ಸನ್ನಿವೇಶದಲ್ಲಿ ಏನು ಮಾಡಬೇಕೆಂದು ಕುಟುಂಬದ ಸದಸ್ಯರಿಗೆ ಅರಿವಾಗುವುದಿಲ್ಲ. ಆದುದರಿಂದ ಕೆಲವೊಮ್ಮೆ ಒತ್ತಡದಿಂದ ಅವರು ಅದಕ್ಕೆ ಒಪ್ಪಿಗೆಯನ್ನು ಕೊಡಬಹುದು.
ಈ ಸಂದರ್ಭದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನವನ್ನು ಅರಿತುಕೊಳ್ಳುವುದು ಆವಶ್ಯಕವಾಗಿದೆ. ಅಂಗದಾನ ಮಾಡುವುದು, ಅಧ್ಯಾತ್ಮಶಾಸ್ತ್ರಕ್ಕನುಸಾರ ತಪ್ಪಾಗಿದೆ. ನಮ್ಮ ಸಂಬಂಧಿಕ ರಿಗೆ ಆ ಅವಯವಗಳ ಆವಶ್ಯಕತೆಯಿದ್ದಲ್ಲಿ, ಕರ್ತವ್ಯಕರ್ಮವೆಂದು ಆ ಅಂಗದಾನ ಮಾಡುವುದು ಯೋಗ್ಯವಾಗಿದೆ. ಆದರೆ ಭಾವನೆಗೊಳಗಾಗಿ, ಯಾವುದಾದರೊಂದು ಆಸ್ಪತ್ರೆಗೆ ದೇಹದಾನ ಮಾಡಿದರೆ, ಅದು ಈ ಮುಂದೆ ತಿಳಿಸಿರುವ ಕಾರಣಗಳಿಂದ ಅಯೋಗ್ಯವಾಗುವುದು.
೧. ವ್ಯಕ್ತಿಯು ಮರಣ ಹೊಂದಿದ ಬಳಿಕ ಅವನ ಲಿಂಗದೇಹವು ತನ್ನ ದೇಹದ ಮತ್ತು ಇಷ್ಟವಾಗುವ ವಸ್ತುವಿನ ಮೇಲಿನ ಆಸಕ್ತಿಯಿಂದ ಬೇಗ ಬಿಡುಗಡೆಯಾಗುವುದಿಲ್ಲ ಮತ್ತು ಅವನು ಒಂದು ವರ್ಷದವರೆಗೆ ಆ ಸ್ಥಳದಲ್ಲಿಯೇ ಸುಳಿದಾಡುತ್ತಿರುತ್ತಾನೆ. ಅವನ ಆಸಕ್ತಿ ಹೋಗಬೇಕು ಮತ್ತು ಅವನಿಗೆ ಆದಷ್ಟು ಬೇಗನೆ ಮುಕ್ತಿ ದೊರೆಯಬೇಕೆಂಬ ಕಾರಣದಿಂದಲೇ ಹಿಂದೂ ಧರ್ಮದಲ್ಲಿ ಅಗ್ನಿಸಂಸ್ಕಾರ ಮತ್ತು ಶ್ರಾದ್ಧವಿಧಿಗಳನ್ನು ಮಾಡುವ ಪದ್ಧತಿಯಿದೆ. ದೇಹದಾನವನ್ನು ಮಾಡಿದರೆ ವ್ಯಕ್ತಿಯ ಲಿಂಗದೇಹವು ಆಯಾ ಅವಯವಗಳ ಸುತ್ತಲೂ ಸುಳಿದಾಡುತ್ತಿರುತ್ತದೆ.
೨. ಒಬ್ಬನಿಗೆ ಕಲ್ಪನೆ ನೀಡದೇ ಆ ವ್ಯಕ್ತಿಯ ಮರಣದ ಬಳಿಕ ಅವನ ದೇಹವನ್ನು ದಾನ ಮಾಡಿದರೆ ಮತ್ತು ಅದು ಅವನಿಗೆ ಇಷ್ಟವಾಗಿರದಿದ್ದಲ್ಲಿ, ಆ ಅವಯವದ ಸುತ್ತಲೂ ಅವನ ಲಿಂಗದೇಹವು ಸುಳಿದಾಡುತ್ತಿರುತ್ತದೆ. ಅಲ್ಲದೇ ಆ ಲಿಂಗದೇಹದಿಂದ ಅವನ ಅವಯವವನ್ನು ತೆಗೆಯಲು ಒಪ್ಪಿಗೆ ನೀಡಿದವನಿಗೆ, ತೆಗೆದವನಿಗೆ ಮತ್ತು ಅದನ್ನು ಉಪಯೋಗಿಸುವ ವ್ಯಕ್ತಿಗೂ ತೊಂದರೆಯಾಗಬಹುದು.
೩. ಯಾವುದಾದರೂ ವ್ಯಕ್ತಿಯ ಮರಣದ ಬಳಿಕ ಅವನ ಯಾವು ದಾದರೂ ಅವಯವವನ್ನು ಆಸ್ಪತ್ರೆಯವರು ಯಾವುದಾದರೂ ದುಷ್ಟ ವ್ಯಕ್ತಿಗೆ ಕಸಿ ಮಾಡಿದರೆ, ಆ ವ್ಯಕ್ತಿಯ ಕೆಟ್ಟ ಕಾರ್ಯಗಳಿಂದಾಗಿ ಲಿಂಗದೇಹವೂ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಧರ್ಮಶಾಸ್ತ್ರದಲ್ಲಿ ‘ಸತ್ಪಾತ್ರೇ ದಾನಮ್’ ಎಂದರೆ ಒಳ್ಳೆಯ ವ್ಯಕ್ತಿಗೆ ದಾನ ಕೊಡಬೇಕು ಅಥವಾ ಅರ್ಪಣೆಯನ್ನು ಮಾಡಬೇಕೆಂದು ತಿಳಿಸಲಾಗಿದೆ; ಆದ್ದರಿಂದಲೇ ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ವ್ಯಕ್ತಿಗೆ ಅಂಗಾಂಗ ಕಸಿ ಮಾಡಿದರೆ ಅದರಿಂದ ಲಾಭವೂ ಆಗಬಹುದು. ಅಯೋಗ್ಯ ವ್ಯಕ್ತಿಗೆ ದಾನ ಮಾಡುವುದು ಪಾಪವಾಗಿದೆ. ಪಾಪ-ಪುಣ್ಯದಾಚೆಗೆ ಹೋದ ದಧೀಚಿ ಋಷಿಯು ಸ್ವತಃ ತನ್ನ ಎಲುಬುಗಳನ್ನು ವಜ್ರಾಯುಧ ಮಾಡಲು ನೀಡಿದರು. ಆ ವಜ್ರಾಯುಧವನ್ನು ಸತ್ಕರ್ಮಕ್ಕಾಗಿಯೇ ಉಪಯೋಗಿಸಲಾಗುತ್ತಿತ್ತು.
೪. ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತ ವ್ಯಕ್ತಿಗಳು ಯಾವ ವ್ಯಕ್ತಿಗಾದರೂ ಅಂಗಾಂಗಗಳನ್ನು ದಾನ ಮಾಡಿದರೆ ಆ ವ್ಯಕ್ತಿಗೆ ಲಾಭವಾಗಬಹುದು.
೫. ಅಯೋಗ್ಯ ದಾನದಿಂದ ಕೊಡು-ಕೊಳ್ಳುವಿಕೆಯ ಲೆಕ್ಕ ನಿರ್ಮಾಣ ವಾಗುವುದಲ್ಲದೇ, ದಾನ ಮಾಡುವ ಜೀವಕ್ಕೆ ಆಧ್ಯಾತ್ಮಿಕ ಲಾಭವಂತೂ ಆಗ ಲಾರದು, ಬದಲಿಗೆ ಅವನು ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಂಗದಾನದ ಕುರಿತು ಆಧ್ಯಾತ್ಮಿಕ ದೃಷ್ಟಿಕೋನ !