ಶ್ರಾದ್ಧವನ್ನು ಮಾಡಲು ಆಗದಿರುವವರು ತಳಮಳದಿಂದ ಮತ್ತು ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಿದರೆ ಅವರಿಗೆ ಶ್ರಾದ್ಧದ ಫಲವು ಸಿಗುತ್ತದೆ

ಸಂಕಲನಕಾರರು : ಯಾವುದೇ ಶ್ರಾದ್ಧವನ್ನು ಮಾಡಲು ಆಗದಿರುವ ಶ್ರಾದ್ಧ ಕರ್ತನು ನಿರ್ಜನ ಅರಣ್ಯಕ್ಕೆ ಹೋಗಿ ಕೈಗಳನ್ನು ಮೇಲೆ ಮಾಡಿ ‘ನಾನು ಬಡವ ಮತ್ತು ಅನ್ನವಿರಹಿತನಾಗಿದ್ದೇನೆ; ನನ್ನನ್ನು ಪಿತೃಋಣದಿಂದ ಮುಕ್ತಗೊಳಿಸಿರಿ’ ಎಂದು ಬೇಡಿಕೊಳ್ಳಬೇಕು ಎಂದು ಶಾಸ್ತ್ರದಲ್ಲಿ ಹೇಳ ಲಾಗಿದೆ. ಕೇವಲ ಹೀಗೆ ಬೇಡಿಕೊಳ್ಳುವುದರಿಂದ ಪಿತೃಗಳಿಗೆ ಶ್ರಾದ್ಧದ ಫಲವು ಹೇಗೆ ಸಿಗುತ್ತದೆ ?
ಓರ್ವ ವಿದ್ವಾಂಸ : ಮೇಲೆ ಹೇಳಿದ ವಾಕ್ಯವನ್ನು ಆಂತರ್ಯದ ತಳಮಳದಿಂದ ಹೇಳಿದರೆ ವಿಶ್ವೇದೇವತೆಯ ಕೃಪೆಯಾಗಿ ಪಿತೃಗಳು ಆಯಾ ಯೋನಿಯಿಂದ ಮುಕ್ತರಾಗಿ ಮುಂದಿನ ಗತಿಯನ್ನು ಪಡೆಯುತ್ತಾರೆ. ಇದರಿಂದ ಕಳಕಳಿಯಿಂದ ಮಾಡಿದ ಪ್ರಾರ್ಥನೆಯ ಮಹತ್ವವು ಗಮನಕ್ಕೆ ಬರುತ್ತದೆ. ಪ್ರತ್ಯಕ್ಷ ಕರ್ಮಕಾಂಡವನ್ನು ಮಾಡುವುದಕ್ಕಿಂತ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡುವುದಕ್ಕೆ ಹೆಚ್ಚು ಮಹತ್ವವಿದೆ. ಭಾವಪೂರ್ಣ ಪ್ರಾರ್ಥನೆಯನ್ನು ಮಾಡುವುದರಿಂದ ಪಿತೃಗಳು, ಕನಿಷ್ಠ ದೇವತೆಗಳು ಮತ್ತು ಇತರ ದೇವತೆಗಳು ಪ್ರಸನ್ನರಾಗಿ ಪ್ರಾರ್ಥನೆಯನ್ನು ಮಾಡುವವರ ಕಡೆಗೆ ಆಕರ್ಷಿತರಾಗುತ್ತಾರೆ. ಇದರಿಂದ ಅವರ ಆಶೀರ್ವಾದವು ಪ್ರಾಪ್ತವಾಗಿ ಪಿತೃಗಳಿಗೆ ಕಡಿಮೆ ಕಾಲಾವಧಿಯಲ್ಲಿ ಗತಿಯು ಪ್ರಾಪ್ತವಾಗುತ್ತದೆ ಮತ್ತು ಪ್ರಾರ್ಥನೆಯನ್ನು ಮಾಡಿದ ಜೀವಕ್ಕೆ ಶ್ರಾದ್ಧಕರ್ಮಗಳನ್ನು ಮಾಡಿದ ಫಲವು ಪ್ರಾಪ್ತವಾಗುತ್ತದೆ.
ಆದುದರಿಂದ ದೇವರ ಮುಂದೆ ನಿರ್ಗತಿಕ ಯಾಚಕನಾಗುವುದು ತುಂಬಾ ಮಹತ್ವದ್ದಾಗಿದೆ. ಕೈಗಳನ್ನು ಮೇಲೆ ಮಾಡಿ ದೇವತೆಗಳನ್ನು ಆಹ್ವಾನಿಸಿ ಪಿತೃಗಳನ್ನು ಉದ್ದೇಶಿಸಿ ಪ್ರಾರ್ಥನೆ ಮಾಡುವುದು ಯಾಚಕನ ಅಸಹಾಯಕತೆಯಿಂದ ನಿರ್ಮಾಣವಾದ ಭಾವದ ಪ್ರತೀಕವಾಗಿದೆ.
- ಓರ್ವ ವಿದ್ವಾಂಸ ((ಪೂ.) ಸೌ. ಅಂಜಲಿ ಗಾಡಗೀಳರ ಮಾಧ್ಯಮ ದಿಂದ, ೧೩.೮.೨೦೦೬, ಮಧ್ಯಾಹ್ನ ೨.೧೯)
(ಕಳಕಳಿಯಿಂದ ಅಂದರೆ ಭಾವಪೂರ್ಣ ಪ್ರಾರ್ಥನೆಯಾಗಲು ವ್ಯಕ್ತಿಯಲ್ಲಿ ಭಾವವಿರುವುದು ಆವಶ್ಯಕವಾಗಿದೆ. ಸಾಮಾನ್ಯ ವ್ಯಕ್ತಿಗಳಲ್ಲಿ ಇಷ್ಟೊಂದು ಭಾವವಿರುವುದಿಲ್ಲ. ಆದುದರಿಂದಲೇ ಶಾಸ್ತ್ರದಲ್ಲಿ ಶ್ರಾದ್ಧವಿಧಿಗಳನ್ನು ಮಾಡುವುದರ ಆವಶ್ಯಕತೆಯನ್ನು ಹೇಳಲಾಗಿದೆ. - ಸಂಕಲನಕಾರರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧವನ್ನು ಮಾಡಲು ಆಗದಿರುವವರು ತಳಮಳದಿಂದ ಮತ್ತು ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಿದರೆ ಅವರಿಗೆ ಶ್ರಾದ್ಧದ ಫಲವು ಸಿಗುತ್ತದೆ